ಜಗದ್ಗುರು ಲಿಯೋರವರು ಇಕ್ವೇಟೋರಿಯಲ್ ಗಿನಿಯಾಗೆ ವಿದಾಯ ಹೇಳಿ, ಅದರೊಂದಿಗೆ ಆಫ್ರಿಕಾಕ್ಕೂ ವಿದಾಯ ಕೋರುತ್ತಾರೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾದಿಂದ ಹೊರಟು, ಕಳೆದ ಹನ್ನೊಂದು ದಿನಗಳಿಂದ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡಿದ ಆಫ್ರಿಕಾ ಖಂಡಕ್ಕೆ ವಿದಾಯ ಹೇಳಿದರು.
ಸ್ಥಳೀಯ ಸಮಯದ ಪ್ರಕಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಇಕ್ವೇಟೋರಿಯಲ್ ಗಿನಿಯಾದಿಂದ ಹೊರಡುವಾಗ, ಮಾಲಾಬೊ ವಿಮಾನ ನಿಲ್ದಾಣದಲ್ಲಿ ದೇಶದ ಅಧಿಕಾರಿಗಳೊಂದಿಗೆ ಜಗದ್ಗುರುಗಳು ಕೈಕುಲುಕಿದರು ನಂತರ ಅವರನ್ನು ರೋಮಿಗೆ ಕರೆದೊಯ್ಯುವ ವಿಮಾನಕ್ಕೆ ಹತ್ತಿದರು.
ಏಪ್ರಿಲ್ 13ರಿಂದ ಆರಂಭವಾದ ಈ ಪ್ರಯಾಣವು ಜಗದ್ಗುರುಗಳ ಮೂರನೇ ವಿದೇಶಿ ಪ್ರೇಷಿತರ ಪ್ರಯಾಣವಾಗಿತ್ತು. ಅವರು ಆಫ್ರಿಕಾದ ನಾಲ್ಕು ರಾಷ್ಟ್ರಗಳನ್ನು ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾ ಭೇಟಿ ಮಾಡಿದರು. ಪ್ರತಿಯೊಂದು ದೇಶದಲ್ಲೂ ಶಾಂತಿಯ ಸಂದೇಶವಾಹಕರಾಗಿ, ಆ ದೇಶದ ಇತಿಹಾಸ, ವರ್ತಮಾನ ಮತ್ತು ಭವಿಷ್ಯವನ್ನು ಅವಲೋಕಿಸಿ, ನಾಗರಿಕರಿಗೆ ಉತ್ತೇಜನದ ಮಾತುಗಳನ್ನು ಹೇಳಿದರು ಮತ್ತು ನಾಯಕರನ್ನು ಉದ್ದೇಶಿಸಿ ಮಾತನಾಡುವಾಗ ನ್ಯಾಯದ ಅಗತ್ಯವನ್ನು ಒತ್ತಿಹೇಳಿದರು.
ಜಗದ್ಗುರು ಲಿಯೋರವರು ಸ್ಥಳೀಯ ಸಮಯದ ಪ್ರಕಾರ ರಾತ್ರಿ ಸುಮಾರು 8 ಗಂಟೆಗೆ ರೋಮಿಗೆ ತಲುಪುವ ನಿರೀಕ್ಷೆಯಿದ್ದು, ಜಗದ್ಗುರುಗಳು ವಿಮಾನದಲ್ಲೇ ಪತ್ರಕರ್ತರೊಂದಿಗೆ ನಡೆಯುವ ತನ್ನ ಸಾಮಾನ್ಯ ಪತ್ರಿಕಾಗೋಷ್ಠಿಯನ್ನು ನಡೆಸುವ ಸಾಧ್ಯತೆಯಿದೆ.
