ಜಗದ್ಗುರು XIVನೇ ಲಿಯೋರವರು ಡೌಲಾದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ: ಆಫ್ರಿಕಾ ಯುವಕರು ಹಿಂಸಾಚಾರ ಮತ್ತು ಭ್ರಷ್ಟಾಚಾರವನ್ನು ತಿರಸ್ಕರಿಸಬೇಕು.
ವ್ಯಾಟಿಕನ್ ವರದಿ
ಶುಕ್ರವಾರ ಬೆಳಿಗ್ಗೆ ಕ್ಯಾಮಾರೂನ್ ದೇಶದ ದಕ್ಷಿಣ-ಪಶ್ಚಿಮ ಭಾಗದಲ್ಲಿರುವ ಡೌಲಾ ನಗರಕ್ಕೆ ವಿಮಾನದಲ್ಲಿ ಆಗಮಿಸಿದ ನಂತರ, ಜಗದ್ಗುರು ಲಿಯೋ ರವರು ಜಪೋಮಾ ಕ್ರೀಡಾಂಗಣದಲ್ಲಿ ನಡೆದ ಪವಿತ್ರ ಬಲಿಪೂಜೆಗೆ ಅಧ್ಯಕ್ಷತೆ ವಹಿಸಿದರು. ಸುಮಾರು 6 ಲಕ್ಷ ಭಕ್ತರು ಭಾಗವಹಿಸಿದ್ದರು.
ತಮ್ಮ ಪ್ರವಚನದಲ್ಲಿ, ಮಹಾ ಜನಸಮೂಹಕ್ಕೆ ಯೇಸು ಮಾಡಿದ ರೊಟ್ಟಿಗಳು ಮತ್ತು ಮೀನುಗಳ ಅದ್ಭುತವನ್ನು ಜಗದ್ಗುರುಗಳು ಚಿಂತಿಸಿದರು.
ಯೇಸುವಿನ ಕಾಲದಲ್ಲಿದ್ದಂತೆ, ಇಂದಿಗೂ ಜನರು ಅನ್ನಕ್ಕಾಗಿ ಹಸಿದಿದ್ದಾರೆ ಮತ್ತು ಜನರ ಹಸಿವಿನ ಎದುರು ದೇವರು ಎಲ್ಲಿದ್ದಾನೆ? ಎಂದು ಪ್ರಶ್ನಿಸುತ್ತಾರೆ ಎಂದು ಅವರು ಹೇಳಿದರು.
ಈ ಪ್ರಶ್ನೆಗೆ ಯೇಸು ನೀಡಿದ ಉತ್ತರವೆಂದರೆ, ತನ್ನಲ್ಲಿದ್ದುದನ್ನು ಮತ್ತು ತನ್ನ ಸುತ್ತಲಿನವರಲ್ಲಿದ್ದುದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು.
ಒಂದು ಗಂಭೀರ ಸಮಸ್ಯೆ, ಇದ್ದ ಸ್ವಲ್ಪ ಆಹಾರವನ್ನು ಆಶೀರ್ವದಿಸಿ ಹಸಿದಿದ್ದ ಎಲ್ಲರೊಂದಿಗೆ ಹಂಚಿಕೊಳ್ಳುವುದರಿಂದ ಪರಿಹಾರವಾಯಿತು, ಎಂದು ಅವರು ಹೇಳಿದರು. “ರೊಟ್ಟಿಗಳು ಮತ್ತು ಮೀನುಗಳ ಗುಣಾಕಾರವು ಹಂಚಿಕೊಳ್ಳುವ ಕ್ರಿಯೆಯಲ್ಲಿ ಸಂಭವಿಸಿತು: ಅದೇ ಅದ್ಭುತ!” ಎಂದು ಹೇಳಿದರು.
ಜಗಳಗಳಿಂದ ರೊಟ್ಟಿ ಕದಿಯದವರೆಗೆ, ಸಂಗ್ರಹಿಸಿಡದವರೆಗೆ, ಅಥವಾ ಕೆಲವರು ಅತಿಯಾಗಿ ಉಪಯೋಗಿಸಿ ವ್ಯರ್ಥ ಮಾಡದವರೆಗೆ, ಎಲ್ಲರಿಗೂ ಆಹಾರ ಸಾಕಷ್ಟಿದೆ ಎಂದು ಜಗದ್ಗುರುಗಳು ಹೇಳಿದರು.
ಭೌತಿಕ ಅಗತ್ಯಗಳ ಜೊತೆಗೆ, ನಾವು ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯದಲ್ಲಿ ಜೀವದ ಅನ್ನಕ್ಕಾಗಿ ಕೂಡ ಹಸಿದಿದ್ದೇವೆ. ನಮ್ಮ ಪ್ರತಿಯೊಂದು ಐಕ್ಯತೆ ಮತ್ತು ಕ್ಷಮೆಯ ಕ್ರಿಯೆಯು ಆರೈಕೆಗೆ ಬಯಸುವ ಮಾನವಕುಲಕ್ಕೆ ಒಂದು ಅನ್ನದ ತುಂಡಾಗುತ್ತದೆ ಎಂದು ಅವರು ಹೇಳಿದರು.
ಆದರೆ ಇದೊಂದೇ ಸಾಕಾಗುವುದಿಲ್ಲ, ಎಂದು ಜಗದ್ಗುರು ಲಿಯೋರವರು ಹೇಳಿದರು. ದೇಹವನ್ನು ಉಳಿಸುವ ಆಹಾರಕ್ಕೆ ಸಮಾನವಾದ ಪ್ರೀತಿಯೊಂದಿಗೆ ಆತ್ಮವನ್ನು ಪೋಷಿಸುವ ಆಹಾರವೂ ಅಗತ್ಯ ಅದು ನಮ್ಮ ಮನಸ್ಸನ್ನು ಬಲಪಡಿಸಿ ಭಯದ ಕತ್ತಲೆಯಲ್ಲಿಯೂ ದುಃಖದ ನೆರಳಲ್ಲಿಯೂ ನಮ್ಮನ್ನು ಸ್ಥಿರಗೊಳಿಸುತ್ತದೆ.
ಕ್ರಿಸ್ತನು ಬಲಿ ಪೂಜೆಯಲ್ಲಿ ತನ್ನನ್ನೇ ನಮಗೆ ನೀಡುತ್ತಾನೆ ಇದರಿಂದ ಧರ್ಮ ಸಭೆ ಬಲಗೊಳ್ಳುತ್ತದೆ ಮತ್ತು ನಮ್ಮ ಜೀವನಯಾತ್ರೆಯಲ್ಲಿ ನಮಗೆ ಶಕ್ತಿ ದೊರೆಯುತ್ತದೆ ಎಂದು ಅವರು ಹೇಳಿದರು.
ಪೋಪ್, ಬಲಿ ಪೂಜೆಯನ್ನು ದೇವರ ಪ್ರೀತಿಯ ಸಂಕೇತವಾಗಿ ಸ್ವೀಕರಿಸಲು ಕಥೋಲಿಕ ಭಕ್ತರನ್ನು ಪ್ರೇರೇಪಿಸಿದರು. ತಂದೆಯಾದ ದೇವರು ಕ್ರಿಸ್ತನಲ್ಲಿ ನಮಗೆ ನೀಡಿರುವುದನ್ನು ಹಂಚಿಕೊಳ್ಳಲು ಆಹ್ವಾನಿಸುತ್ತಾನೆ, ಅದರಿಂದ ಅದು ಧರ್ಮ ಸಭೆಯ ಸೇವೆಯಲ್ಲಿ ಹೆಚ್ಚಾಗುತ್ತದೆ.
ಜಗದ್ಗುರು ಲಿಯೋರವರು ಮುಂದುವರೆದು, ದೇವರು ನಮ್ಮ ಜೀವನದ ಎಲ್ಲಾ ಪರಿಸ್ಥಿತಿಗಳನ್ನು, ನಮ್ಮ ಸಂತೋಷ ಮತ್ತು ದುಃಖಗಳನ್ನು ತಿಳಿದಿದ್ದಾನೆ ಎಂದು ಸ್ಮರಿಸಿದರು. ಆಫ್ರಿಕಾ ಯುವಕರಿಗೆ ನಿಮ್ಮ ಪ್ರತಿಭೆಗಳನ್ನು ನಂಬಿಕೆ, ಸಹನೆ ಮತ್ತು ಸ್ನೇಹದ ಮೂಲಕ ಹೆಚ್ಚಿಸಿರಿ ಎಂದು ಉತ್ತೇಜಿಸಿದರು.
ನಿಮ್ಮ ನೆರೆಹೊರೆಯವರಿಗೆ ಜೀವದ ಅನ್ನವನ್ನು ತರುವ ಮೊದಲ ಮುಖಗಳು ಮತ್ತು ಕೈಗಳು ಆಗಿರಿ ಜ್ಞಾನ ಮತ್ತು ವಿಮೋಚನೆಯ ಆಹಾರವನ್ನು ನೀಡಿ, ಅವರ ಒಳ್ಳೆಯ ಭರವಸೆಗಳನ್ನು ಮಸುಕಾಗಿಸಿ ಅವರ ಗೌರವವನ್ನು ಕಸಿದುಕೊಳ್ಳುವ ಎಲ್ಲದರಿಂದ ಅವರನ್ನು ಮುಕ್ತಗೊಳಿಸಿರಿ, ಎಂದು ಅವರು ಮನವಿ ಮಾಡಿದರು.
ಕ್ಯಾಮರೂನ್ ದೇಶದ ಪ್ರಕೃತಿ ಸಂಪತ್ತಿನ ಶ್ರೀಮಂತಿಕೆಯನ್ನು ಜಗದ್ಗುರುಗಳು ಉಲ್ಲೇಖಿಸಿದರು, ಅದು ಅನೇಕ ಜನರು ಎದುರಿಸುತ್ತಿರುವ ದಾರಿದ್ರ್ಯದ ವಿರುದ್ಧವಾಗಿ ನಿಂತಿದೆ.
ಅವಿಶ್ವಾಸ ಮತ್ತು ನಿರುತ್ಸಾಹಕ್ಕೆ ಮಣಿಯಬೇಡಿ, ಎಂದು ಅವರು ಹೇಳಿದರು. ಸುಲಭ ಲಾಭದ ಭ್ರಮೆಯನ್ನು ನೀಡುವ, ಆದರೆ ಹೃದಯವನ್ನು ಕಠಿಣಗೊಳಿಸಿ ಸಂವೇದನಾಶೀಲತೆಯನ್ನು ಕಳೆದುಕೊಳ್ಳುವ ಎಲ್ಲಾ ರೀತಿಯ ದೌರ್ಜನ್ಯ ಮತ್ತು ಹಿಂಸೆಯನ್ನು ತಿರಸ್ಕರಿಸಿರಿ. ನಿಮ್ಮ ಜನರು ಈ ಭೂಮಿಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ ಎಂಬುದನ್ನು ಮರೆಯಬೇಡಿ ನಿಮ್ಮ ನಿಜವಾದ ಸಂಪತ್ತು ನಿಮ್ಮ ಮೌಲ್ಯಗಳಲ್ಲಿ ಇದೆ ನಂಬಿಕೆ, ಕುಟುಂಬ, ಆತಿಥ್ಯ ಮತ್ತು ಕೆಲಸದಲ್ಲಿದೆ ಎಂದು ಹೇಳಿದರು.
ಜಗದ್ಗುರು ಲಿಯೋರವರು, ದೇವರು ಪ್ರತಿಯೊಬ್ಬರಿಗೂ ನೀಡಿರುವ ಕರೆಯನ್ನು ಅನುಸರಿಸಲು ಆಫ್ರಿಕಾ ಯುವಕರನ್ನು ಆಹ್ವಾನಿಸಿದರು, ಇದರಿಂದ ಅವರು ತಮ್ಮ ಭವಿಷ್ಯದ ನಾಯಕರು ಆಗಬಹುದು.
ನಿಮ್ಮ ಶಕ್ತಿಯನ್ನು ವ್ಯರ್ಥಗೊಳಿಸುವ ಮತ್ತು ಸಮಾಜದ ಪ್ರಗತಿಗೆ ಸಹಾಯ ಮಾಡದ ಪ್ರಲೋಭನೆಗಳಿಗೆ ಒಳಗಾಗಬೇಡಿ, ಎಂದು ಅವರು ಹೇಳಿದರು.
ತಮ್ಮ ಪ್ರವಚನದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಎಲ್ಲಾ ಕ್ರೈಸ್ತರನ್ನು ಪಾಪ ಮತ್ತು ಮರಣದಿಂದ ಕ್ರಿಸ್ತ ನೀಡುವ ವಿಮೋಚನೆಯ ಸುವಾರ್ತೆಯನ್ನು ಪ್ರಕಟಿಸಲು ಆಹ್ವಾನಿಸಿದರು.
“ಪುನರುತ್ಥಾನಿ ಯೇಸುವನ್ನು ಪ್ರಕಟಿಸುವುದು ಎಂದರೆ, ನೋವು ಮತ್ತು ಹಿಂಸೆಯಿಂದ ಬಳಲುತ್ತಿರುವ ಭೂಮಿಯಲ್ಲಿ ನ್ಯಾಯದ ಗುರುತುಗಳನ್ನು ಬಿಡುವುದು. ಸ್ಪರ್ಧೆ ಮತ್ತು ಭ್ರಷ್ಟಾಚಾರದ ಮಧ್ಯೆ ಶಾಂತಿಯ ಗುರುತುಗಳನ್ನು ಸ್ಥಾಪಿಸುವುದು ಅಂಧನಂಬಿಕೆ ಮತ್ತು ನಿರ್ಲಕ್ಷ್ಯದಿಂದ ನಮ್ಮನ್ನು ಮುಕ್ತಗೊಳಿಸುವ ನಂಬಿಕೆಯ ಗುರುತುಗಳನ್ನು ತೋರಿಸುವುದಾಗಿದೆ ಎಂದು ಹೇಳಿದರು.
