Papa Leone in preghiera al Monumento delle vittime dell�esplosione del 7 marzo 2021

ಜಗದ್ಗುರುಗಳು 7 ಮಾರ್ಚ್ 2021 ಸ್ಫೋಟಗಳ ಬಲಿಪಶುಗಳ ಸ್ಮಾರಕದಲ್ಲಿ ಪ್ರಾರ್ಥಿಸಿದರು.

ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯ ಕರಾವಳಿ ನಗರವಾದ ಬಾಟಾಗೆ ಮಾಡಿದ ತಮ್ಮ ಭೇಟಿಯ ವೇಳೆ, 2021ರಲ್ಲಿ ಸೈನಿಕ ತಾಣದಲ್ಲಿ ಸಂಭವಿಸಿದ ದುರಂತ ಸ್ಫೋಟದ ಬಲಿಪಶುಗಳನ್ನು ಸ್ಮರಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಬುಧವಾರ ಮಧ್ಯಾಹ್ನ ಇಕ್ವೇಟೋರಿಯಲ್ ಗಿನಿಯ ಬಾಟಾ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಐದು ವರ್ಷಗಳ ಹಿಂದೆ ನಗರದ ಸೈನಿಕ ತಾಣವನ್ನು ನಡುಗಿಸಿದ ದುರಂತ ಸ್ಫೋಟಗಳ ಬಲಿಪಶುಗಳಿಗೆ ಗೌರವ ಸಲ್ಲಿಸಲು ಸಮಯ ತೆಗೆದುಕೊಂಡರು.

ಕಾರಾಗೃಹಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮತ್ತು ಕೈದಿಗಳೊಂದಿಗೆ ಸಂಭಾಷಣೆ ನಡೆಸಿ, ಶಿಕ್ಷೆಯನ್ನು ಅನುಭವಿಸುತ್ತಿರುವವರಿಗೆ ಸಮಾಧಾನದ ಮಾತುಗಳನ್ನು ಹೇಳಿದ ನಂತರ, ಜಗದ್ಗುರುಗಳು “2021 ಮಾರ್ಚ್ 7ರ ಸ್ಫೋಟಗಳ ಬಲಿಪಶುಗಳ ಸ್ಮಾರಕ ಸ್ತಂಭ” ಇರುವ ಸ್ಥಳದಲ್ಲಿ ನಿಂತರು.

ಅಲ್ಲಿ, ಸ್ಫೋಟಗಳ ಸರಣಿಯಲ್ಲಿ ಮೃತಪಟ್ಟ 107 ಜನರ ಹೆಸರುಗಳನ್ನು ಹೊಂದಿದ ಫಲಕಗಳಿಂದ ಅಲಂಕರಿಸಲ್ಪಟ್ಟ ಗಂಭೀರ ಇಟ್ಟಿಗೆಯ ಕಟ್ಟಡದ ಮುಂದೆ, ಜಗದ್ಗುರುಗಳು ಕಾರಿನಿಂದ ಇಳಿದು ಭಾರೀ ಮಳೆಯ ನಡುವೆಯೇ ಮೌನ ಪ್ರಾರ್ಥನೆಯಲ್ಲಿ ನಿಂತು ಬಲಿಪಶುಗಳಿಗೆ ಗೌರವ ಸಲ್ಲಿಸಿದರು.

ಬಲಿಪಶುವನ್ನು ಕರುಣೆಯಿಂದ ಅಪ್ಪಿಕೊಳ್ಳುತ್ತಿರುವ ಶಿಲ್ಪದ ಮುಂದೆ ಬಿಳಿ ಗುಲಾಬಿಗಳ ಹಾರವನ್ನು ಇಡಲಾಯಿತು.

ದುರಂತ

2021ರ ಮಾರ್ಚ್ 7ರಂದು, ಎನ್‌ಕ್ವಾಂಟೊಮಾ ಜಾಂಡರ್ಮರಿ ಮತ್ತು ಸೈನಿಕ ಶಿಬಿರದಲ್ಲಿನ ಶಸ್ತ್ರಾಗಾರದಲ್ಲಿ ಸ್ಫೋಟಗಳ ಸರಣಿ ಸಂಭವಿಸಿತು. ಇದು ಇಕ್ವೇಟೋರಿಯಲ್ ಗಿನಿಯ ಆರ್ಥಿಕ ರಾಜಧಾನಿಯಾದ ಬಾಟಾದಲ್ಲಿದೆ.

ಅಧಿಕೃತ ದಾಖಲೆಗಳ ಪ್ರಕಾರ, ಈ ಸ್ಫೋಟಗಳಿಂದ 107 ಮಂದಿ ಮೃತಪಟ್ಟರು. ಅಲ್ಲದೆ, ವಸತಿ ಪ್ರದೇಶಗಳು ಮತ್ತು ಸೈನಿಕ ಸಂಕೀರ್ಣಕ್ಕೂ ವ್ಯಾಪಕ ಹಾನಿಯಾಯಿತು. 700ಕ್ಕೂ ಹೆಚ್ಚು ಜನರು ಗಾಯಗೊಂಡರು ಅವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಸೇರಿದ್ದರು ಸೈನಿಕ ಶಿಬಿರದಲ್ಲೂ ಹಾಗೂ ಅದರ ಸಮೀಪದ ವಸತಿ ಪ್ರದೇಶಗಳಲ್ಲೂ ವಾಸಿಸುತ್ತಿದ್ದರು.

ಸರ್ಕಾರ ಈ ಪರಿಸ್ಥಿತಿಯನ್ನು ವಿಪರೀತ ದುರಂತವೆಂದು ವಿವರಿಸಿ, ಮಾನವೀಯ ಅಗತ್ಯಗಳಿಗೆ ಪ್ರತಿಕ್ರಿಯಿಸಲು ಅಂತರರಾಷ್ಟ್ರೀಯ ಸಮುದಾಯದ ಸಹಾಯವನ್ನು ಕೋರಿತು.

ಈ ಮನವಿಗೆ ಪ್ರತಿಯಾಗಿ, ಸಂಯುಕ್ತ ರಾಷ್ಟ್ರ ಸಂಸ್ಥೆ ಎರಡು ಅಂತರರಾಷ್ಟ್ರೀಯ ತಂಡಗಳನ್ನು ನಿಯೋಜಿಸಿತು ಸ್ಫೋಟಿಸದ ಶಸ್ತ್ರಾಸ್ತ್ರಗಳ ಅಪಾಯವನ್ನು ಮೌಲ್ಯಮಾಪನ ಮಾಡಲು ಭದ್ರತಾ ತಂಡವೊಂದನ್ನು, ಮತ್ತು ತಕ್ಷಣದ ವೈದ್ಯಕೀಯ ನೆರವನ್ನು ನೀಡಲು ಮಾನವೀಯ ತಂಡವೊಂದನ್ನು ಆಯೋಜಿಸಿತ್ತು.

ಈ ಸ್ಫೋಟಗಳಿಂದ ಅನೇಕ ಜನರು ಸ್ಥಳಾಂತರಗೊಂಡರು, ಮತ್ತು ಕನಿಷ್ಠ 615 ಜನರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಯಿತು.

ದೇಶದ ಏಕೈಕ ವಿರೋಧ ಪಕ್ಷವಾದ ಸಿಪಿಡಿಎಸ್ ಈ ಸ್ಫೋಟಗಳನ್ನು “ಇಕ್ವೇಟೋರಿಯಲ್ ಗಿನಿಯ ಇತಿಹಾಸದಲ್ಲೇ ಅತಿದೊಡ್ಡ ಮಾನವೀಯ ದುರಂತ” ಎಂದು ವರ್ಣಿಸಿದೆ.

22 ಏಪ್ರಿಲ್ 2026, 21:48