Pope Leo XIV visits Equatorial Guinea

“ಇಕ್ವೇಟೋರಿಯಲ್ ಗಿನಿಯಾದ ಆಸ್ಪತ್ರೆಯಲ್ಲಿ ಜಗದ್ಗುರುಗಳು: ಸಣ್ಣ ದಯೆಯ ಕೃತ್ಯಗಳು ಜೀವನದ ಮರೆವಿನಲ್ಲಿರುವ ದೈನಂದಿನ ಕವನಗಳಾಗಿವೆ.”

ಮಲಾಬೊದಲ್ಲಿರುವ ಜಾನ್ ಪಿಯರ್ ಒಲೀ ಮಾನಸಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಎಲ್ಲಾ ಆಸ್ಪತ್ರೆಗಳಿಗೂ—ವಿಶೇಷವಾಗಿ ಕ್ರೈಸ್ತ ಧ್ಯೇಯ ಹೊಂದಿರುವ ಆಸ್ಪತ್ರೆಗಳಿಗೂ “ಪ್ರತಿಯೊಬ್ಬ ವ್ಯಕ್ತಿಯನ್ನು ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ, ಅವರ ದುರ್ಬಲತೆಯಲ್ಲಿಯೂ ಗೌರವಿಸುವ ಪ್ರೀತಿಯ ನಾಗರಿಕತೆಯಾಗಬೇಕು” ಎಂಬ ಕರೆಯನ್ನು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಇಕ್ವೇಟೋರಿಯಲ್ ಗಿನಿಯಾದ ಮಲಾಬೊದಲ್ಲಿರುವ ಜಾನ್ ಪಿಯರ್ ಒಲೀ ಮಾನಸಿಕ ಆಸ್ಪತ್ರೆಗೆ ಜಗದ್ಗುರು XIVನೇ ಲಿಯೋರವರನ್ನು ನೃತ್ಯ ಮತ್ತು ಹಾಡಿನ ಉತ್ಸಾಹಭರಿತ ಸ್ವಾಗತ ಎದುರಿಸಿತು.

ಈ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಬಳಿಕ, ಜಗದ್ಗುರುಗಳು ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ತಮಗೆ ಉಂಟಾಗುವ “ಮಿಶ್ರ ಭಾವನೆಗಳನ್ನು” ಹಂಚಿಕೊಂಡರು. ಒಂದೆಡೆ, ರೋಗಿಗಳಿಗೂ ಅವರ ಕುಟುಂಬಗಳಿಗೂ ತಾನು ದುಃಖಪಡುವುದಾಗಿ ಹೇಳಿದರು. ಕೆಲವೊಮ್ಮೆ ಜನರು ಭಾರವಾದ ಹೊರೆ ಹೊತ್ತಿರುತ್ತಾರೆ ಕೆಲವೊಮ್ಮೆ ಕಾಣುವ ಗಾಯಗಳೊಂದಿಗೆ, ಮತ್ತೊಮ್ಮೆ ಯಾರಿಗೂ ಕಾಣದಿದ್ದರೂ ತಮ್ಮ ಹೃದಯದಲ್ಲಿಯೂ ಜೀವನದಲ್ಲಿಯೂ ಹೊತ್ತಿರುವ ಗಾಯಗಳೊಂದಿಗೆ ಬದುಕುತ್ತಾರೆ ಎಂದು ಅವರು ಸೂಚಿಸಿದರು.

ಆದರೆ ಮತ್ತೊಂದೆಡೆ, ಮಾನವ ಜೀವನಕ್ಕೆ ಸೇವೆ ಸಲ್ಲಿಸುವ ಎಲ್ಲಾ ಕಾರ್ಯಗಳನ್ನು ಅವರು ಮೆಚ್ಚುತ್ತಾರೆ ಮತ್ತು ಅದರಿಂದ ಧೈರ್ಯ ಹೊಂದುತ್ತಾರೆ.

ಮಲಾಬೊದಲ್ಲಿರುವ ಈ ಆಸ್ಪತ್ರೆಯಲ್ಲಿಯೂ ಅದೇ ಅನುಭವ ಕಂಡುಬಂತು. ಆದರೆ ಇಲ್ಲಿ ಸಂತೋಷವೇ ಮೇಲುಗೈ ಸಾಧಿಸಿದೆ ಎಂದು ಜಗದ್ಗುರುಗಳು ಗಮನಿಸಿದರು. ಈ ಸಂತೋಷವು ಪ್ರಭುವಿನ ನಾಮದಲ್ಲಿ ಒಟ್ಟುಗೂಡುವುದರಿಂದ ಮತ್ತು ಆರೋಗ್ಯ ದುರ್ಬಲವಾಗಿರುವವರನ್ನು ಕಾಳಜಿ ವಹಿಸುವುದರಿಂದ ಉಂಟಾಗುತ್ತದೆ.

ಇಂದಿನ ಪ್ರೀತಿಯ ಸಂಕೇತ

ಈ ಭೇಟಿಯ ವೇಳೆ ನೀಡಲಾದ ಸಾಕ್ಷ್ಯಗಳಿಂದ ತಾವು ಆಳವಾಗಿ ಸ್ಪರ್ಶಿತರಾದೆವೆಂದು ಜಗದ್ಗುರುಗಳು ಹೇಳಿದರು. ಆಸ್ಪತ್ರೆಯ ನಿರ್ದೇಶಕರಾದ ಪ್ರೊಫೆಸರ್ ಬೆಶೀರ್ ಬೆನ್ ಹಾಜ್ ಅಲಿ ನೀಡಿದ ಸಾಕ್ಷ್ಯವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ನಿಜವಾದ ಮಹಾನ್ ಸಮಾಜವೆಂದರೆ ತನ್ನ ದುರ್ಬಲತೆಗಳನ್ನು ಮರೆಮಾಚುವ ಸಮಾಜವಲ್ಲ ಅವುಗಳನ್ನು ಪ್ರೀತಿಯಿಂದ ಸುತ್ತುವರಿಯುವ ಸಮಾಜವೇ ಆಗಿದೆ ಎಂದು ನಿರ್ದೇಶಕರು ಹೇಳಿದ ಮಾತುಗಳನ್ನು ಅವರು ಪುನರುಚ್ಚರಿಸಿದರು. ಇದು ಸತ್ಯವೆಂದು ಜಗದ್ಗುರುಗಳು ಒತ್ತಿ ಹೇಳಿದರು, ಏಕೆಂದರೆ ಇದು ಕ್ರೈಸ್ತ ಧರ್ಮದಲ್ಲಿ ನೆಲೆಗೊಂಡ ನಾಗರಿಕತೆಯ ಒಂದು ಮೂಲತತ್ವವಾಗಿದೆ.

ಯೇಸು ಕ್ರಿಸ್ತನು ಅಂಗವೈಕಲ್ಯ ಕಳಂಕದಿಂದ ಬಳಲುವವರಿಗೆ ಸಂಪೂರ್ಣ ಗೌರವವನ್ನು ಮರಳಿ ನೀಡಲು ಮತ್ತು ಅವರನ್ನು ವಿಮೋಚಿಸಲು ಲೋಕಕ್ಕೆ ಬಂದರು. ಆದರೆ ಇದನ್ನು ಸಾಧಿಸಲು ನಮ್ಮ ಸಹಕಾರ ಅಗತ್ಯ ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಎಂದು ಹೇಳಿದರು.

ಆದ್ದರಿಂದ ಯೇಸು ಎಲ್ಲರನ್ನು ತಮ್ಮ ಸಹೋದರ-ಸಹೋದರಿಯರನ್ನು ಮಾತುಗಳಲ್ಲಿಯೂ ಕೃತಿಗಳಲ್ಲಿಯೂ ಪ್ರೀತಿಸಲು ಕರೆಯುತ್ತಾರೆ. ಜಾನ್ ಪಿಯರ್ ಒಲೀ ಮಾನಸಿಕ ಆಸ್ಪತ್ರೆಯಂತಹ ಸಂಸ್ಥೆಗಳು ದೇವರ ಸಹಾಯ ಮತ್ತು ಎಲ್ಲರ ಬದ್ಧತೆಯೊಂದಿಗೆ ಈ ಪ್ರೀತಿಯ ನಾಗರಿಕತೆಯ ಸಂಕೇತವಾಗಬಹುದು.

ನಾವು ಹೇಗಿದ್ದೇವೋ ಹಾಗೆಯೇ ಪ್ರೀತಿ

ನಂತರ ಜಗದ್ಗುರುಗಳು ಆಸ್ಪತ್ರೆಯ ರೋಗಿಗಳಲ್ಲೊಬ್ಬರಾದ ಪೆಡ್ರೋ ಸೆಲೆಸ್ಟಿನೋರವರ ಮಾತುಗಳನ್ನು ಉಲ್ಲೇಖಿಸಿದರು. ಅವರು ತಮ್ಮ ಸಾಕ್ಷ್ಯವನ್ನು “ನಮ್ಮನ್ನು ನಾವು ಹೇಗಿದ್ದೇವೋ ಹಾಗೆಯೇ ಪ್ರೀತಿಸಿದ್ದಕ್ಕಾಗಿ” ಜಗದ್ಗುರು ಧನ್ಯವಾದ ತಿಳಿಸಿ ಮುಗಿಸಿದ್ದರು.

ಇದೇ ರೀತಿಯಲ್ಲಿ ದೇವರು ಪ್ರತಿಯೊಬ್ಬನನ್ನೂ ಪ್ರೀತಿಸುತ್ತಾರೆ ಎಂದು ಜಗದ್ಗುರುಗಳು ನೆನಪಿಸಿದರು. ಆದರೆ ನಾವು ಹಾಗೆಯೇ ಉಳಿಯಬೇಕೆಂದು ದೇವರು ಬಯಸುವುದಿಲ್ಲ. ಇಲ್ಲ, ದೇವರು ನಾವು ಸದಾಕಾಲವೂ ರೋಗಿಗಳಾಗಿರಬೇಕೆಂದು ಬಯಸುವುದಿಲ್ಲ ಆತನು ನಮ್ಮನ್ನು ಗುಣಪಡಿಸಲು ಬಯಸುತ್ತಾನೆ. ಸುವಾರ್ತೆಯಲ್ಲಿ ಇದು ಅನೇಕ ಬಾರಿ ವ್ಯಕ್ತವಾಗುತ್ತದೆ.

ಒಂದು ಆಸ್ಪತ್ರೆ ವಿಶೇಷವಾಗಿ ಕ್ರೈಸ್ತ ಧ್ಯೇಯ ಹೊಂದಿರುವುದು ಪ್ರತಿಯೊಬ್ಬರನ್ನು ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ, ಅವರ ದುರ್ಬಲತೆಯಲ್ಲಿಯೂ ಗೌರವಿಸಿ, ಸಮಗ್ರ ದೃಷ್ಟಿಕೋನದ ಪ್ರಕಾರ ಅವರು ಉತ್ತಮವಾಗಲು ಸಹಾಯ ಮಾಡುವ ಸ್ಥಳವಾಗಿದೆ, ಎಂದು ಜಗದ್ಗುರುಗಳು ಹೇಳಿದರು. ಈ ಕಾರ್ಯದಲ್ಲಿ ಆಧ್ಯಾತ್ಮಿಕ ಅಂಶ ಅತ್ಯಗತ್ಯವೆಂದು ಅವರು ಸೂಚಿಸಿದರು.

ದೇವರಿಗೇ ಸಂಪೂರ್ಣವಾಗಿ ಓದಲು ಸಾಧ್ಯ

ಅಂತಿಮವಾಗಿ, ಟಾರ್ಸಿಸಿಯೋ ಬರೆದ ಕವನಕ್ಕಾಗಿ ಜಗದ್ಗುರುಗಳು ಕೃತಜ್ಞತೆ ವ್ಯಕ್ತಪಡಿಸಿದರು. ಪ್ರತಿದಿನವೂ ಎಷ್ಟೋ “ಮರೆವಿನಲ್ಲಿರುವ” ಕವನಗಳು ಬರೆಯಲ್ಪಡುತ್ತಿವೆ ಎಂದು ಜಗದ್ಗುರುಗಳು ಹೇಳಿದರು ಪದಗಳಿಂದಲ್ಲ, ಆದರೆ ಸಣ್ಣ ಸಣ್ಣ ಕೃತ್ಯಗಳಿಂದ, ಪರಸ್ಪರ ಸಂಬಂಧಗಳಲ್ಲಿ ಕಾಳಜಿ ಮತ್ತು ದಯೆಯಿಂದ.ಈ ಕವನವನ್ನು ಸಂಪೂರ್ಣವಾಗಿ ಓದಲು ದೇವರಿಗೇ ಸಾಧ್ಯ; ಅದು “ಕ್ರಿಸ್ತನ ಕರುಣೆಯ ಹೃದಯಕ್ಕೆ ಸಮಾಧಾನವನ್ನು ನೀಡುತ್ತದೆ" ಎಂದರು.

ಕೊನೆಯಲ್ಲಿ, ಜಗದ್ಗುರುಗಳು ಆಸ್ಪತ್ರೆಯ ಎಲ್ಲಾ ರೋಗಿಗಳೊಂದಿಗೆ ತಮ್ಮ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದರು ವಿಶೇಷವಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿರುವವರಿಗೂ ಏಕಾಂಗಿ ಇರುವವರಿಗೂ—ಮತ್ತು ಅಲ್ಲಿ ಇರುವ ಎಲ್ಲರಿಗೂ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

21 ಏಪ್ರಿಲ್ 2026, 21:11