ಹುಡುಕಿ

TOPSHOT-CAMEROON-VATICAN-DIPLOMACY

ಕ್ಯಾಮರೂನ್‌ನ ಅನಾಥಾಶ್ರಮದಲ್ಲಿ ಜಗದ್ಗುರುಗಳು: ಯಾರನ್ನೂ ಎಂದಿಗೂ ಮರೆತಿರುವುದಿಲ್ಲ

ಜಗದ್ಗುರು XIVನೇ ಲಿಯೋರವರು ಯೌಂಡೇಯ ಎಂಗುಲ್ ಜಾಂಬಾ ಅನಾಥಾಶ್ರಮಕ್ಕೆ ಭೇಟಿ ನೀಡಿ, ಸಂಕಷ್ಟಗಳನ್ನು ಅನುಭವಿಸಿದ ಮಕ್ಕಳಿಗೆ ತಾವು ಪ್ರೀತಿಯ ಕುಟುಂಬದ ಭಾಗವೆಂದು ತಿಳಿಯಲು ಉತ್ತೇಜಿಸಿದರು ಮತ್ತು ತ್ಯಾಗಭಾವದಿಂದ ಸೇವೆ ಸಲ್ಲಿಸುತ್ತಿರುವ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಮಂಗಳವಾರ, ಕ್ಯಾಮರೂನ್‌ನಲ್ಲಿ ತಮ್ಮ ಮೊದಲ ದಿನದಂದು, ಯೌಂಡೇಯ ಎಂಗುಲ್ ಜಾಂಬಾ ಅನಾಥಾಶ್ರಮದ ಮಕ್ಕಳನ್ನೂ ಸಿಬ್ಬಂದಿಯನ್ನೂ ಭೇಟಿ ಮಾಡಿದರು.

ಮೊದಲು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಅವರೊಂದಿಗೆ ಇರುವುದರಿಂದ ತಮಗೆ ಸಂತೋಷವಾಗಿದೆ ಎಂದು ಹೇಳಿದರು ಮತ್ತು ಈ ಅನಾಥಾಶ್ರಮವು ನಿಜವಾದ ಮನೆಯಾಗಿ ಮಾರ್ಪಟ್ಟ ಸ್ಥಳವಾಗಿದೆ ಎಂದು ವಿವರಿಸಿದರು. ಮುಖ್ಯವಾಗಿ, ದೇವರೇ ಅವರನ್ನು ತನ್ನ ಮಕ್ಕಳಾಗಿ ಸ್ವೀಕರಿಸಿ ಪ್ರೀತಿಯಿಂದ ತನ್ನತ್ತ ಸೆಳೆಯುತ್ತಾನೆ ಎಂದು ಅವರಿಗೆ ನೆನಪಿಸಿದರು.

ತಮ್ಮ ಭಾಷಣದಲ್ಲಿ, ಅನಾಥಾಶ್ರಮದೊಳಗಿನ ಕುಟುಂಬದ ಭಾವನೆಯನ್ನು ಜಗದ್ಗುರುಗಳು ಒತ್ತಿಹೇಳಿದರು. ಮಕ್ಕಳು ಜೀವನದ ಸಂಕಷ್ಟಗಳಂತಹ ಒಂದೇ ರೀತಿಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಎಂದು ಅವರು ಗಮನಿಸಿದರು.

“ನೀವು ಇಲ್ಲಿ ನಿಜವಾದ ಕುಟುಂಬವನ್ನು ರೂಪಿಸಿದ್ದೀರಿ,” ಎಂದು ಅವರು ಹೇಳಿದರು. ಕ್ರಿಸ್ತನ ಸುತ್ತ ಒಟ್ಟುಗೂಡಿದ ಸಹೋದರರು ಮತ್ತು ಸಹೋದರಿಯರಾಗಿ ನಿಮ್ಮ ಏಕತೆ ನಿಮಗೆ ಶಕ್ತಿ ನೀಡುತ್ತದೆ ಮತ್ತು ಜೀವನದ ಕಷ್ಟಗಳನ್ನು ಒಟ್ಟಾಗಿ ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಸೇರಿಸಿದರು.

ಬಹುತೇಕ ಮಕ್ಕಳು ಅನುಭವಿಸಿದ ನಷ್ಟ, ತ್ಯಜನೆ ಮತ್ತು ಅನಿಶ್ಚಿತತೆಗಳಂತಹ ಸವಾಲುಗಳನ್ನು ಜಗದ್ಗುರುಗಳು ಗುರುತಿಸಿದರು. ಆದರೆ ಈ ಅನುಭವಗಳು ಅವರ ಭವಿಷ್ಯವನ್ನು ನಿರ್ಧರಿಸಬಾರದು ಎಂದು ಅವರು ಉತ್ತೇಜಿಸಿದರು.

ನಿಮ್ಮ ಗಾಯಗಳಿಗಿಂತ ದೊಡ್ಡ ಭವಿಷ್ಯಕ್ಕೆ ನೀವು ಕರೆಯಲ್ಪಟ್ಟಿದ್ದೀರಿ, ಎಂದು ಅವರು ಹೇಳಿದರು. ದುಃಖಪಡುವವರೊಂದಿಗೆ ದೇವರು ಸಮೀಪದಲ್ಲಿದ್ದಾನೆ ಮತ್ತು ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಅರಿತಿದ್ದಾನೆ ಎಂದು ಅವರಿಗೆ ನೆನಪಿಸಿದರು.

ನಂತರ ಸುವಾರ್ತೆಯನ್ನು ಉಲ್ಲೇಖಿಸಿ, ಯೇಸು ಮಕ್ಕಳಿಗೆ ವಿಶೇಷ ಕಾಳಜಿಯನ್ನು ತೋರಿಸಿ ಅವರನ್ನು ತನ್ನ ಗಮನದ ಕೇಂದ್ರದಲ್ಲಿ ಇಟ್ಟನು ಎಂದು ಜಗದ್ಗುರು ಲಿಯೋರವರು ನೆನಪಿಸಿದರು. ಇಂದಿಗೂ ಕ್ರಿಸ್ತನು ಅದೇ ಕಾಳಜಿ ಮತ್ತು ಪ್ರೀತಿಯಿಂದ ಅವರನ್ನು ನೋಡುತ್ತಾನೆ ಎಂದು ಮಕ್ಕಳಿಗೆ ಹೇಳಿದರು.

ಯಾರನ್ನೂ ಎಂದಿಗೂ ಮರೆತಿರುವುದಿಲ್ಲ

ನಂತರ ಜಗದ್ಗುರುಗಳು ಸಮಾಜದ ವ್ಯಾಪಕ ಹೊಣೆಗಾರಿಕೆಯ ಕುರಿತು ಮಾತನಾಡಿದರು. ಅಲಕ್ಷ್ಯತೆಯಿಂದ ತುಂಬಿರುವ ಜಗತ್ತಿನಲ್ಲಿ, ಇಂತಹ ಅನಾಥಾಶ್ರಮಗಳು ಪರಸ್ಪರ ಕಾಳಜಿ ವಹಿಸುವಂತೆ ಮಾನವರು ಕರೆಯಲ್ಪಟ್ಟಿದ್ದಾರೆ ಎಂಬುದನ್ನು ನೆನಪಿಸುತ್ತವೆ ಎಂದು ಹೇಳಿದರು. ದೇವರ ಮಹಾ ಕುಟುಂಬದಲ್ಲಿ, ಯಾರೂ ಅಪರಿಚಿತರಾಗಿಯೂ ಅಥವಾ ಮರೆತವರಾಗಿಯೂ ಇರುವುದಿಲ್ಲ, ಎಂದು ಅವರು ಹೇಳಿದರು.

ಅವರು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿ, ಸ್ವಯಂಸೇವಕರು ಮತ್ತು ಧಾರ್ಮಿಕ ಸಹೋದರಿಯರಿಗೆ ಧನ್ಯವಾದಗಳನ್ನು ತಿಳಿಸಿದರು ಮತ್ತು ಅವರ ನಿಷ್ಠೆ ಹಾಗೂ ಸಮರ್ಪಣೆಯನ್ನು ಪ್ರಶಂಸಿಸಿದರು.

ಅವರ ಸೇವೆ ಪ್ರೀತಿಯ ಸ್ಪಷ್ಟ ಅಭಿವ್ಯಕ್ತಿಯಾಗಿದ್ದು, ದೇವರ ಕರುಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ಕೇವಲ ಭೌತಿಕ ಸಹಾಯವಷ್ಟೇ ಅಲ್ಲದೆ, ತಮ್ಮ ಸಾನ್ನಿಧ್ಯ ಮತ್ತು ಮಾರ್ಗದರ್ಶನದ ಮೂಲಕ ಅವರು ಮಕ್ಕಳಿಗೆ ಸ್ಥಿರತೆ ಮತ್ತು ಭವಿಷ್ಯದ ಭರವಸೆಯನ್ನು ನೀಡುತ್ತಾರೆ ಎಂದು ಹೇಳಿದರು.

ತಮ್ಮ ಸಂದೇಶವನ್ನು ಸಮಾಪ್ತಿಗೊಳಿಸುತ್ತಾ, ಜಗದ್ಗುರುಗಳು ಮತ್ತಾಯನ ಸುವಾರ್ತೆಯನ್ನು ಉಲ್ಲೇಖಿಸಿ, ಅತಿ ದುರ್ಬಲರ ಸೇವೆ ಮಾಡುವುದು ಕ್ರಿಸ್ತನ ಸೇವೆಯೇ ಆಗಿದೆ ಎಂದು ಹೇಳಿದರು. ಅನಾಥಾಶ್ರಮದಲ್ಲಿ ಸೇವೆ ಮಾಡುತ್ತಿರುವವರು ತಮ್ಮ ಕಾರ್ಯವನ್ನು ದೃಢತೆಯಿಂದ ಮುಂದುವರಿಸಬೇಕು ಎಂದು ಉತ್ತೇಜಿಸಿದರು.

ಕೊನೆಗೆ, ಜಗದ್ಗುರು XIVನೇ ಲಿಯೋರವರು ಮಕ್ಕಳನ್ನೂ ಸಿಬ್ಬಂದಿಯನ್ನೂ ಕನ್ಯಾ ಮರಿಯಮ್ಮನ ಆರೈಕೆಗೆ ಒಪ್ಪಿಸಿ, ವಿಶೇಷವಾಗಿ ಕಷ್ಟದ ಸಮಯಗಳಲ್ಲಿ ಅವರನ್ನು ರಕ್ಷಿಸಿ ಬೆಂಬಲಿಸಬೇಕೆಂದು ಪ್ರಾರ್ಥಿಸಿದರು।

15 ಏಪ್ರಿಲ್ 2026, 13:17