ಯೌಂಡೆಯಲ್ಲಿರುವ ಮಧ್ಯ ಆಫ್ರಿಕಾದ ಕಥೋಲಿಕ್ ವಿಶ್ವವಿದ್ಯಾಲಯದಲ್ಲಿ ಜಗದ್ಗುರು XIVನೇ ಲಿಯೋರವರು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಭೇಟಿಯಾಗುತ್ತಾರೆ ಯೌಂಡೆಯಲ್ಲಿರುವ ಮಧ್ಯ ಆಫ್ರಿಕಾದ ಕಥೋಲಿಕ್ ವಿಶ್ವವಿದ್ಯಾಲಯದಲ್ಲಿ ಜಗದ್ಗುರು XIVನೇ ಲಿಯೋರವರು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಭೇಟಿಯಾಗುತ್ತಾರೆ 

"ಕ್ಯಾಮರೂನ್‌ನ ವಿದ್ಯಾರ್ಥಿಗಳಲ್ಲಿ ಭರವಸೆಯನ್ನು ಪುನರುಜ್ಜೀವಗೊಳಿಸುವುದು".

ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನ ಯೌಂಡೇದಲ್ಲಿರುವ ಮಧ್ಯ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಯುವಕರು ತಮ್ಮ ಭವಿಷ್ಯದ ಬಗ್ಗೆ ಇರುವ ಭರವಸೆಗಳನ್ನೂ ಹಂಚಿಕೊಂಡರು.

ವ್ಯಾಟಿಕನ್ ವರದಿ

ಕ್ಯಾಮರೂನ್‌ನಲ್ಲಿ ತನ್ನ ಕೊನೆಯ ಪೂರ್ಣ ದಿನದಂದು, ಯೌಂಡೇದಲ್ಲಿರುವ ಮಧ್ಯ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ಜಗದ್ಗುರು XIVನೇ ಲಿಯೋರವರಿಗೆ ಉತ್ಸಾಹಭರಿತ ಸ್ವಾಗತ ದೊರಕಿತು. ಜಗದ್ಗುರುಗಳು ಕಪ್ಪು (ಎಸ್ ಯು ವಿ )ವಾಹನದಲ್ಲಿ ಆಗಮಿಸಿದಾಗ ವಿದ್ಯಾರ್ಥಿಗಳು ನೃತ್ಯಮಾಡಿ, ಹರ್ಷೋದ್ಗಾರಗಳಿಂದ ಕೂಗಿ, ವ್ಯಾಟಿಕನ್ ಧ್ವಜಗಳನ್ನು ಬೀಸಿದರು. ಶುಕ್ರವಾರ, ಏಪ್ರಿಲ್ 17ರಂದು ನಡೆದ ಈ ಹಬ್ಬದ ಕಾರ್ಯಕ್ರಮಕ್ಕೆ ಪ್ರಾಧ್ಯಾಪಕರು, ಧಾರ್ಮಿಕರು ಸೇರಿದಂತೆ ಸುಮಾರು 8,000 ಜನರು ಹಾಜರಾಗಿದ್ದರು. ಪೆವಿಲಿಯನ್ ಸುತ್ತಲಿನ ಹಸಿರು ಮೈದಾನಗಳಲ್ಲಿ ವಿದ್ಯಾರ್ಥಿಗಳು ತುಂಬಿಕೊಂಡಿದ್ದು, ಒಂದೇ ಒಂದು ಕುರ್ಚಿಯೂ ಖಾಲಿಯಾಗಿರಲಿಲ್ಲ.

‘ಭವಿಷ್ಯದ ನಾಯಕರು’

ವ್ಯಾಟಿಕನ್ ನ್ಯೂಸ್ ಜೊತೆ ಮಾತನಾಡಿದ ಹೌಲ್ಕಾವ್ ಇಕ್ಲಾಉ ನಿನಾ ಅಮಾಂಡಿನ್ ಲಾಡೂಸ್ ಎಂಬ ವಿದ್ಯಾರ್ಥಿನಿ, ಈ ವಿಶ್ವವಿದ್ಯಾಲಯದಲ್ಲಿ ನರ್ಸಿಂಗ್ ಸೈನ್ಸ್ (ಶೋಧನಾ ವಿಭಾಗ) ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸುತ್ತಿರುವರು, “ದೇವರಿಂದ ಕಳುಹಿಸಲ್ಪಟ್ಟ ಪ್ರತಿನಿಧಿಯನ್ನು ನೋಡುವುದು ಗೌರವದ ವಿಷಯ” ಎಂದು ಹೇಳಿದರು. ತಮ್ಮ ಸ್ನಾತಕೋತ್ತರ ಪದವಿಯ ನಂತರ ಪಿಎಚ್‌ಡಿ ಮುಂದುವರಿಸಿ ಸಂಶೋಧನೆ, ನಾಯಕತ್ವ ಕಾರ್ಯಕ್ರಮಗಳು ಮತ್ತು ಬೋಧನೆಗಳಲ್ಲಿ ತೊಡಗಿಸಿಕೊಳ್ಳುವ ಯೋಜನೆ ಹೊಂದಿದ್ದಾರೆ. ನರ್ಸಿಂಗ್ ಕ್ಷೇತ್ರದ ಅಭಿವೃದ್ಧಿಗೆ ತತ್ವಗಳು ಮತ್ತು ವಿಧಾನಗಳನ್ನು ರೂಪಿಸುವುದು ಅವರ ಉದ್ದೇಶವಾಗಿದೆ. ಭವಿಷ್ಯದಲ್ಲಿ ವಿದೇಶಕ್ಕೆ ಹೋಗುವ ಕನಸು ಇದ್ದರೂ, ತಮ್ಮ ದೇಶದಲ್ಲಿಯೇ ಭವಿಷ್ಯದ ನಾಯಕರಾಗಬೇಕೆಂಬ ಜಗದ್ಗುರುಗಳ ಕರೆಗೆ ಅವರು ಬೆಂಬಲ ವ್ಯಕ್ತಪಡಿಸಿದರು.ಹೊರಗೆ ಜ್ಞಾನವನ್ನು ಪಡೆದು, ನಂತರ ಅದನ್ನು ಕ್ಯಾಮರೂನ್‌ನಲ್ಲಿ ಜಾರಿಗೊಳಿಸುವುದು ಮುಖ್ಯ,ಎಂದು ಅವರು ಹೇಳಿದರು.

ಹೊಸ ಭರವಸೆ ಮತ್ತು ದೃಷ್ಟಿಕೋನ

ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯರಾದ ಬಮೆಂಡಾದ ಸಂತ ಫ್ರಾನ್ಸಿಸ್ ತೃತೀಯ ಸಂಘದ ಸಿಸ್ಟರ್ ಸೆರಾಫಿನ್ ಘೋಂಗ್ ನ್ಸೆನ್ ಕೂಡ ಭಾಗವಹಿಸಿದ್ದರು. ಮೂರು ವರ್ಷಗಳ ಹಿಂದೆ ಅವರು ಜೀವರಸಾಯನಶಾಸ್ತ್ರ ಮತ್ತು ಔಷಧಶಾಸ್ತ್ರವನ್ನು ಅಧ್ಯಯನ ಮಾಡಿದ್ದರು. ಜಗದ್ಗುರುಗಳ ಭೇಟಿಗೆ ಅವರು ಕೃತಜ್ಞತೆ ವ್ಯಕ್ತಪಡಿಸಿ, “

ಇದು ಅನೇಕ ಯುವಕರಲ್ಲಿ ಭರವಸೆ ಮತ್ತು ದೃಷ್ಟಿಕೋನವನ್ನು ಪುನರುಜ್ಜೀವಗೊಳಿಸಿದೆ ಎಂದು ಹೇಳಿದರು. ಹಲವರು ಕೇವಲ ಓದಿಗಾಗಿ ಶಾಲೆಗೆ ಹೋಗುತ್ತಿದ್ದರೆ, ಈಗ ಅವರು ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದುವ ನಿರೀಕ್ಷೆ ವ್ಯಕ್ತಪಡಿಸಿದರು. “ನಮ್ಮ ದೇಶಕ್ಕೆ ಜಗದ್ಗುರುಗಳು ಭೇಟಿ ನೀಡುವ ಪ್ರತಿಯೊಂದು ಸಂದರ್ಭವೂ ಆಶೀರ್ವಾದವೇ,ಎಂದು ಅವರು ಹೇಳಿದರು. ಅವರು ತಂದೆಯಂತೆ ಮಾತನಾಡುತ್ತಾರೆ, ನೀವು ಮಾಡಬೇಕಾದುದನ್ನು ತೋರಿಸುತ್ತಾರೆ, ಉಳಿದದ್ದು ನಿಮ್ಮ ಕೈಯಲ್ಲಿದೆ ಎಂದರು.

ಯುವಕರ ನಿರುದ್ಯೋಗ

ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾತ್ರವಲ್ಲದೆ ಇತರರೂ ಹಾಜರಾಗಿದ್ದರು. ಮೆಕ್ಸಿಕೋ ನಗರದಿಂದ ಬಂದ ಸಂತ ಮರಿಯ ಫ್ರಾನ್ಸಿಸ್ಕನ್ ಮಿಷನರಿ ಸಿಸ್ಟರ್ ಮಾರಿಯಾ ದೆ ಲೂರ್ಡ್ಸ್ ಲೋಪೆಜ್ ಮುಂಗಿಯಾ, ವಿಶ್ವವಿದ್ಯಾಲಯದ ಸಮೀಪವಿರುವ ತಮ್ಮ ಸಂಘದ ನಿವಾಸದಿಂದ ಬಂದು ಜಗದ್ಗುರುಗಳ ಮಾತುಗಳನ್ನು ಕೇಳಲು ಆಸಕ್ತಿ ತೋರಿದರು. ಯೌಂಡೇಯಲ್ಲಿ ಎದುರಾಗುವ ಪ್ರಮುಖ ಸವಾಲುಗಳಲ್ಲಿ ಒಂದಾದ ನಿರುದ್ಯೋಗವನ್ನು ಅವರು ಉಲ್ಲೇಖಿಸಿದರು. “ಬಹಳಷ್ಟು ಯುವಕರು ಬೀದಿಗಳಲ್ಲಿದ್ದಾರೆ,” ಎಂದು ಅವರು ಹೇಳಿದರು, ಶಿಕ್ಷಣ ಪಡೆದವರಿಗೂ ಕೆಲಸ ಸಿಗದ ಪರಿಸ್ಥಿತಿ ಇದೆ. ಆದರೆ ನಮ್ಮ ಸಮುದಾಯದ ಬಾಗಿಲುಗಳು ಸದಾ ತೆರೆಯಲ್ಪಟ್ಟಿವೆ, ಎಂದು ಅವರು ಹೇಳಿದರು. ಜನರು ನಮ್ಮೊಂದಿಗೆ ಬರುತ್ತಾರೆ, ನಾವು ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗುತ್ತದೆ ಎಂದರು.

ಈ ಸವಾಲಿನ ಪರಿಸ್ಥಿತಿಯಲ್ಲಿ, ಜಗದ್ಗುರು ಲಿಯೋರವರ ಮಾತುಗಳು ಮಹತ್ವದ ಬದಲಾವಣೆಗೆ ಪ್ರೇರಕವಾಗಬಹುದು. ಅವರು ಹೇಳಿದಂತೆ, ಭರವಸೆಯನ್ನು ಹುಡುಕಲು ಹೋರಾಡುತ್ತಿರುವ ಮಾನವಕುಲದ ಸೀಮಿತ ದೃಷ್ಟಿಕೋನವನ್ನು ವಿಸ್ತರಿಸಲು ಆಫ್ರಿಕಾ ಮಹತ್ವದ ಕೊಡುಗೆ ನೀಡಬಲ್ಲದು ಎಂದು ಹೇಳಿದರು.

 

17 ಏಪ್ರಿಲ್ 2026, 11:28