ಅಂಗೋಲಾದಲ್ಲಿರುವ ಜಗದ್ಗುರುಗಳು: ನಾವು ಕ್ಷಮಿಸಿ ಒಟ್ಟಾಗಿ ಪ್ರಾರ್ಥಿಸುವಾಗ ಯೇಸು ನಮ್ಮೊಂದಿಗೆ ಇರುತ್ತಾರೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಸೋಮವಾರ ಬೆಳಿಗ್ಗೆ ಅಂಗೋಲಾದ ಈಶಾನ್ಯ ಭಾಗದಲ್ಲಿರುವ ಸೌರಿಮೊ ನಗರಕ್ಕೆ ವಿಮಾನದಲ್ಲಿ ತೆರಳಿದರು. ಇದರಿಂದ ಅವರ ಅಂಗೋಲಾದ ಪ್ರೇಷಿತರ ಪ್ರವಾಸದ ಮೂರನೇ ದಿನ ಆರಂಭವಾಯಿತು.
ವಿಮಾನ ಇಳಿದ ನಂತರ, ಜಗದ್ಗುರುಗಳು ಅಂಗೋಲಾ ಸರ್ಕಾರ ನಡೆಸುವ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು.
“ಲಾರ್” (ಅರ್ಥ: “ಮನೆ”) ಎಂದು ನಿವಾಸಿಗಳು ಕರೆಯುವ ಈ ಸಂಸ್ಥೆಯಲ್ಲಿ ಒಟ್ಟು 62 ಮಂದಿ ಹಿರಿಯರು ವಾಸಿಸುತ್ತಿದ್ದಾರೆ ಇವರಲ್ಲಿ 26 ಮಂದಿ ಪುರುಷರು ಮತ್ತು 36 ಮಂದಿ ಮಹಿಳೆಯರು ಇದ್ದಾರೆ.
ಹಿರಿಯ ನಿವಾಸಿಗಳೊಂದಿಗೆ ಮಾತನಾಡಿದ ಜಗದ್ಗುರು ಲಿಯೋರವರ “ನಂಬಿಕೆಯಿಂದ ತುಂಬಿದ ಸ್ವಾಗತ”ಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಈ ವೃದ್ಧಾಶ್ರಮದ ಹೆಸರಿಗೆ ತಕ್ಕಂತೆ ಅವರು ನಿಜವಾಗಿಯೂ ಕುಟುಂಬದ ವಾತಾವರಣದಲ್ಲಿ ಜೀವನ ನಡೆಸಲಿ ಎಂಬ ಭರವಸೆಯನ್ನು ಹಂಚಿಕೊಂಡರು.
ಯೇಸು ತನ್ನ ಸ್ನೇಹಿತರ ಮನೆಗಳಿಗೆ ಭೇಟಿ ನೀಡಲು ಇಷ್ಟಪಡುತ್ತಿದ್ದರು ಎಂದು ಅವರು ನೆನಪಿಸಿದರು ಪೇತ್ರನ ಅತ್ತೆಯೊಂದಿಗೆ ಸಮಯ ಕಳೆಯುತ್ತಿದ್ದರು ಮತ್ತು ಕಪೆರ್ನೌಮ್‌ನಲ್ಲಿ ಮೇರಿ, ಮಾರ್ಥಾ ಮತ್ತು ಲಾಜರಸ್ ರವರ ಮನೆಯನ್ನು ಆಗಾಗ ಭೇಟಿ ಮಾಡುತ್ತಿದ್ದರು.
ಈ ವೃದ್ಧಾಶ್ರಮದಲ್ಲಿಯೂ, ವಿಶೇಷವಾಗಿ ಅವರು ಪರಸ್ಪರ ಕ್ಷಮಿಸಿ ಸಣ್ಣ ತಪ್ಪುಗಳ ನಂತರ ಸಮಾಧಾನವನ್ನು ಹುಡುಕುವಾಗ, ಯೇಸು ಇಲ್ಲಿ ವಾಸಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು.
“ನೀವು ಸಹೋದರ-ಸಹೋದರಿಯರಂತೆ ಪರಸ್ಪರ ಪ್ರೀತಿಸಲು ಮತ್ತು ಸಹಾಯ ಮಾಡಲು ಪ್ರಯತ್ನಿಸುವಾಗ, ಆತನು ನಿಮ್ಮ ಮಧ್ಯೆ ವಾಸಿಸುತ್ತಾರೆ. ಎಂದು ಅವರು ಹೇಳಿದರು. “ನೀವು ಎಲ್ಲರೂ, ಅಥವಾ ನಿಮ್ಮಲ್ಲಿ ಕೆಲವರು ಸರಳತೆಯೊಂದಿಗೆ ಮತ್ತು ವಿನಯದಿಂದ ಒಟ್ಟಾಗಿ ಪ್ರಾರ್ಥಿಸುವಾಗ, ಆತನು ನಿಮ್ಮ ನಡುವೆ ಇರುತ್ತಾರೆ.”
ಜಗದ್ಗುರು XIVನೇ ಲಿಯೋರವರು ಲಾರ್ ವೃದ್ಧಾಶ್ರಮದಂತಹ ಯೋಜನೆಗಳಿಗೆ ಬೆಂಬಲ ನೀಡುತ್ತಿರುವ ಅಂಗೋಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಅತ್ಯಂತ ದುರ್ಬಲರ ಆರೈಕೆ ಒಂದು ದೇಶದ ಸಾಮಾಜಿಕ ಜೀವನದ ಗುಣಮಟ್ಟದ ಮಹತ್ವದ ಸಂಕೇತವಾಗಿದೆ, ಎಂದು ಅವರು ಹೇಳಿದರು. ಹಿರಿಯರು ಕೇವಲ ಸಹಾಯಕ್ಕೆ ಅಗತ್ಯವಿರುವವರಲ್ಲ ಮೊದಲನೆಯದಾಗಿ, ಅವರನ್ನು ಕೇಳುವುದು ಅತ್ಯಂತ ಮುಖ್ಯ, ಏಕೆಂದರೆ ಅವರು ಒಂದು ಜನಾಂಗದ ಜ್ಞಾನವನ್ನು ಉಳಿಸಿಕೊಂಡಿರುತ್ತಾರೆ.
ತಮ್ಮ ಸಂಕ್ಷಿಪ್ತ ಭಾಷಣದ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ಹಿರಿಯ ನಿವಾಸಿಗಳಿಗಾಗಿ ಪ್ರಾರ್ಥಿಸಿ, ಅವರನ್ನು ಧನ್ಯ ಮಾತೆ ಮರಿಯಮ್ಮನವರ ಆರೈಕೆಗೆ ಒಪ್ಪಿಸಿದರು.
ಸೌರಿಮೊ ವೃದ್ಧಾಶ್ರಮದೊಂದಿಗೆ ಧರ್ಮ ಸಭೆಯ ಹತ್ತಿರದ ಸಂಬಂಧ
ವೃದ್ಧಾಶ್ರಮದ ನಿರ್ದೇಶಕಿ ಜಾರ್ಜಿನಾ ಮ್ವಾಂಡುಂಬಾ ರವರ ಪ್ರಕಾರ, ಸ್ಥಳೀಯ ಕಥೋಲಿಕ ಧರ್ಮ ಸಭೆಯಲ್ಲಿರುವ ನಿವಾಸಿಗಳೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಪಾಡಿಕೊಂಡಿದ್ದು, ಅವರಿಗೆ ಆಧ್ಯಾತ್ಮಿಕ ಸಹಾಯ ಮತ್ತು ಆರ್ಥಿಕ ನೆರವನ್ನು ಒದಗಿಸುತ್ತದೆ.
ಬಹಳಷ್ಟು ನಿವಾಸಿಗಳು ತಮ್ಮ ಮನರಂಜನೆಗಾಗಿ ಹಾಗೂ ಸ್ವಯಂ ಪೋಷಣೆಗೆ ಸಣ್ಣ ತೋಟಗಳನ್ನು ಬೆಳೆಸುತ್ತಾರೆ ಎಂದು ಅವರು ವ್ಯಾಟಿಕನ್ ನ್ಯೂಸ್‌ನ ಡುಲ್ಸೆ ಅರೌಜೋ ರವರಿಗೆ ತಿಳಿಸಿದರು.
ಕೆಲವರು ಕಥೋಲಿಕರಾಗಿರದಿದ್ದರೂ ಸಹ, ಅವರು ಮನೆಯಲ್ಲಿಯೇ ಒಟ್ಟಾಗಿ ಬಲಿ ಪೂಜೆಯಲ್ಲಿ ಭಾಗವಹಿಸುತ್ತಾರೆ.
ಅಂಗೋಲಾದ ಹಿರಿಯರಿಗಾಗಿ ತನ್ನ ಅತ್ಯಂತ ದೊಡ್ಡ ಆಶಯವೇನು ಎಂದು ಕೇಳಿದಾಗ, ಮ್ವಾಂಡುಂಬಾ ರವರು “ಮಂತ್ರ-ತಂತ್ರದ ಅಸಂಬದ್ಧ ಪದ್ಧತಿ” ನಿವಾರಣೆಯಾಗಲಿ, ಹಾಗಾಗಿ ಮೂಢನಂಬಿಕೆಗಳ ಹೆಸರಿನಲ್ಲಿ ಕುಟುಂಬಗಳು ತಮ್ಮ ಹಿರಿಯ ಪೋಷಕರನ್ನು ತೊರೆಯುವುದನ್ನು ನಿಲ್ಲಿಸಲಿ ಎಂದು ಆಶಿಸಿದರು.
