ಹುಡುಕಿ

ಜಗದ್ಗುರುಗಳು ವಿಮಾನದಲ್ಲಿ ಜಗದ್ಗುರುಗಳು ವಿಮಾನದಲ್ಲಿ  (ANSA)

ಜಗದ್ಗುರುಗಳು: ಅಲ್ಜೀರಿಯಾ ಭೇಟಿಯು ವಿಶೇಷ ಆಶೀರ್ವಾದವಾಗಿದ್ದು, ಸಂವಾದವನ್ನು ಉತ್ತೇಜಿಸುವ ಅವಕಾಶವಾಗಿದೆ.

ಕ್ಯಾಮರೂನ್‌ಗೆ ತೆರಳುತ್ತಿದ್ದ ಜಗದ್ಗುರುಗಳ ವಿಮಾನದಲ್ಲಿ, ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾದ ತಮ್ಮ ಪ್ರೇಷಿತರ ಪ್ರವಾಸವನ್ನು ನೆನಪಿಸಿಕೊಂಡು, ಅದನ್ನು ನನ್ನ ವೈಯಕ್ತಿಕವಾಗಿ ವಿಶೇಷ ಆಶೀರ್ವಾದ ಎಂದು ಹಾಗೂ ಸೇತುವೆಗಳನ್ನು ನಿರ್ಮಿಸಲು ಮತ್ತು ಸಂವಾದವನ್ನು ಉತ್ತೇಜಿಸಲು ಅದ್ಭುತವಾದ ಅವಕಾಶ ಎಂದು ವಿವರಿಸಿದರು.

ವ್ಯಾಟಿಕನ್ ವರದಿ

ಅಲ್ಜೀರಿಯಾದಿಂದ ಯೌಂಡೇಗೆ ಬುಧವಾರ ಪ್ರಯಾಣಿಸುತ್ತಿದ್ದ ವೇಳೆ, ಜಗದ್ಗುರು XIVನೇ ಲಿಯೋರವರು ತಮ್ಮೊಂದಿಗೆ  ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 70 ಪತ್ರಕರ್ತರಿಗೆ ಇತ್ತೀಚೆಗೆ ಮುಕ್ತಾಯವಾದ ಅಲ್ಜೀರಿಯಾದ ಪ್ರೇಷಿತರ ಪ್ರವಾಸದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಅವರು ಆರಂಭದಲ್ಲೇ ಅಲ್ಜೀರಿಯಾದ ನಾಗರಿಕ ಅಧಿಕಾರಿಗಳಿಗೆ ಅವರ ಹೃತ್ಪೂರ್ವಕ ಸ್ವಾಗತ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳವು ನೀಡಿದ ಗೌರವಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಅಲ್ಜೀರಿಯಾದ ವಾಯುಪ್ರದೇಶದಲ್ಲಿ ಜಗದ್ಗುರುಗಳ ವಿಮಾನಕ್ಕೆ ನೀಡಲಾದ ಸೈನಿಕ ಎಸ್ಕೋರ್ಟ್ “ಅಲ್ಜೀರಿಯಾದ ಜನರು ಮತ್ತು ಸರ್ಕಾರವು ಜಗದ್ಗುರುಗ ಅಧಿಕಾರ ಸ್ಥಳ, ನನಗೆ ತೋರಿಸಿದ ಸದ್ಭಾವನೆ, ಉದಾರತೆ ಮತ್ತು ಗೌರವದ ಸಂಕೇತವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಅವರು ಅಲ್ಜೀರಿಯಾದಲ್ಲಿ ಇರುವ “ಅತ್ಯಂತ ಚಿಕ್ಕದಾದರೂ ಅತ್ಯಂತ ಮಹತ್ವದ” ಕಥೋಲಿಕ ಧರ್ಮ ಸಭೆಯ ಉಪಸ್ಥಿತಿಗೆ ಸಹ ಅವರ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.

ಅಲ್ಜಿಯದಲ್ಲಿರುವ ‘ಆವರ್ ಲೇಡಿ ಆಫ್ ಆಫ್ರಿಕಾ’ ಬಸಿಲಿಕಾ ಮತ್ತು ಅನ್ನಾಬಾದಲ್ಲಿರುವ ಸಂತ ಅಗಸ್ಟಿನ್ ಬಸಿಲಿಕಾಗೆ ನೀಡಿದ ಭೇಟಿಗಳನ್ನು ಸ್ಮರಿಸಿಕೊಂಡು, ಜಗದ್ಗುರು ಲಿಯೋರವರು 5ನೇ ಶತಮಾನದ ಸಂತ ಅಗಸ್ಟಿನ್ ರವರ ಪರಂಪರೆಯನ್ನು ಎತ್ತಿಹಿಡಿದರು.

ಇಂದಿಗೂ ಅವರು ಬಹಳ ಮಹತ್ವದ ವ್ಯಕ್ತಿಯಾಗಿದ್ದಾರೆ, ಎಂದು ಜಗದ್ಗುರುಗಳು ಹೇಳಿದರು, ಏಕೆಂದರೆ ಅವರ ಬರಹಗಳು, ಉಪದೇಶಗಳು, ಆಧ್ಯಾತ್ಮಿಕತೆ, ದೇವರನ್ನು ಹುಡುಕುವ ಮತ್ತು ಸತ್ಯವನ್ನು ಅರಸುವ ಆಹ್ವಾನ ಇಂದಿನ ಕಾಲದಲ್ಲಿ ಅತ್ಯಂತ ಅಗತ್ಯವಾಗಿದೆ. ಇದು ಯೇಸು ಕ್ರಿಸ್ತನಲ್ಲಿ ನಂಬಿಕೆಯುಳ್ಳವರಿಗಷ್ಟೇ ಅಲ್ಲ, ಎಲ್ಲಾ ಜನರಿಗೂ ಅತ್ಯಂತ ಪ್ರಾಸಕ್ತಿಯ ಸಂದೇಶವಾಗಿದೆ.

ಅಲ್ಜೀರಿಯಾದ ಬಹುಪಾಲು ಜನರು ಕಥೋಲಿಕರಾಗಿರದಿದ್ದರೂ, ಅವರಲ್ಲಿ ಅನೇಕರಿಗೆ ಸಂತ ಅಗಸ್ಟಿನ್ ರವರ ಸ್ಮರಣೆ ತಮ್ಮ ನೆಲದ ಮಹಾನ್ ಪುತ್ರರಲ್ಲಿ ಒಬ್ಬರಾಗಿ ಅತ್ಯಂತ ಗೌರವಾನ್ವಿತವಾಗಿದೆ, ಎಂದು ಅವರು ಹೇಳಿದರು.

“ನಿನ್ನೆ ಮತ್ತೊಮ್ಮೆ ಅನ್ನಾಬಾಗೆ ಮರಳುವುದು ನನಗೆ ವೈಯಕ್ತಿಕವಾಗಿ ವಿಶೇಷ ಆಶೀರ್ವಾದವಾಗಿತ್ತು,” ಎಂದು ಜಗದ್ಗುರು ಲಿಯೋರವರು ಹೇಳಿದರು, ಆದರೆ ದೇವರನ್ನು ಹುಡುಕುವ ಪ್ರಯತ್ನ ಮತ್ತು ಸಮುದಾಯ ನಿರ್ಮಾಣದ ಹೋರಾಟ, ಎಲ್ಲಾ ಜನರ ನಡುವೆ ಏಕತೆಯನ್ನು ಹುಡುಕುವುದು ಮತ್ತು ಭಿನ್ನತೆಗಳ ನಡುವೆಯೂ ಪರಸ್ಪರ ಗೌರವವನ್ನು ಬೆಳೆಸುವ ದೃಷ್ಟಿಕೋನವನ್ನು ಸಂತ ಅಗಸ್ಟಿನ್ ನಮಗೆ ನೀಡುತ್ತಾರೆ ಎಂಬುದನ್ನು ಧರ್ಮ ಸಭೆ ಮತ್ತು ವಿಶ್ವಕ್ಕೆ ತೋರಿಸುವುದೂ ಮಹತ್ವವಾಗಿದೆ.

ಅಲ್ಜೀರಿಯಾದ ಕ್ರೈಸ್ತರು, ಸಾಂಸ್ಕೃತಿಕ ಅಥವಾ ಧಾರ್ಮಿಕ ಭಿನ್ನತೆಗಳಿದ್ದರೂ ಸಹ, ತಮ್ಮ ಮುಸ್ಲಿಂ ಸಹೋದರರು ಮತ್ತು ಸಹೋದರಿಯರೊಂದಿಗೆ ಶಾಂತಿಯುತವಾಗಿ ಹೇಗೆ ಬದುಕಬೇಕು ಎಂಬುದಕ್ಕೆ ಗಾಢ ಸಾಕ್ಷಿಯನ್ನು ನೀಡುತ್ತಾರೆ ಎಂದು ಜಗದ್ಗುರು  XIVನೇ ಲಿಯೋರವರು ಹೇಳಿದರು.

ಅಲ್ಜೀರಿಯಾದಲ್ಲಿ ಈ ಎರಡು ದಿನಗಳಲ್ಲಿ, ನಾವು ಸೇತುವೆಗಳನ್ನು ನಿರ್ಮಿಸಲು ಮತ್ತು ಸಂವಾದವನ್ನು ಉತ್ತೇಜಿಸಲು ಅತ್ಯುತ್ತಮ ಅವಕಾಶವನ್ನು ಪಡೆದಿದ್ದೇವೆ, ಎಂದು ಅವರು ಸಮಾಪಿಸಿದರು. ಮಸೀದಿಗೆ ನೀಡಿದ ಭೇಟಿ ವಿಶೇಷ ಮಹತ್ವದ್ದಾಗಿತ್ತು. ನಾವು ವಿಭಿನ್ನ ನಂಬಿಕೆಗಳು, ಪೂಜೆ ಮಾಡುವ ವಿಧಾನಗಳು ಮತ್ತು ಜೀವನ ಶೈಲಿಗಳನ್ನು ಹೊಂದಿದ್ದರೂ ಸಹ, ನಾವು ಶಾಂತಿಯುತವಾಗಿ ಒಟ್ಟಿಗೆ ಬದುಕಬಹುದು ಎಂಬುದನ್ನು ಹೇಳುತ್ತದೆ ಎಂದರು.

15 ಏಪ್ರಿಲ್ 2026, 13:00