ಆಗಸ್ಟಿನಿಯನ್ ಮಿಷನರಿ ಸಿಸ್ಟರ್ಸ್ ನಡೆಸುತ್ತಿರುವ ಅಲ್ಜಿಯರ್ಸ್‌ನಲ್ಲಿರುವ ಸೆಂಟರ್ ಫಾರ್ ವೆಲ್ಕಮ್ ಅಂಡ್ ಫ್ರೆಂಡ್‌ಶಿಪ್‌ಗೆ ಜಗದ್ಗುರು ಲಿಯೋರವರು ಭೇಟಿ ನೀಡಿದರು ಆಗಸ್ಟಿನಿಯನ್ ಮಿಷನರಿ ಸಿಸ್ಟರ್ಸ್ ನಡೆಸುತ್ತಿರುವ ಅಲ್ಜಿಯರ್ಸ್‌ನಲ್ಲಿರುವ ಸೆಂಟರ್ ಫಾರ್ ವೆಲ್ಕಮ್ ಅಂಡ್ ಫ್ರೆಂಡ್‌ಶಿಪ್‌ಗೆ ಜಗದ್ಗುರು ಲಿಯೋರವರು ಭೇಟಿ ನೀಡಿದರು  (ANSA)

ಜಗದ್ಗುರುಗಳು ಆಗಸ್ಟಿನಿಯನ್ ಸಹೋದರಿಯರನ್ನು ಭೇಟಿ ಮಾಡಿ, ಹುತಾತ್ಮರ ಶಾಶ್ವತ ಸಾಕ್ಷಿಯನ್ನು ಸ್ಮರಿಸಿದರು.

ಅಲ್ಜಿಯರ್ಸ್‌ನಲ್ಲಿ ಮಿಷನರಿ ಆಗಸ್ಟಿನಿಯನ್ ಸಹೋದರಿಯರು ನಡೆಸುತ್ತಿರುವ ಸಮುದಾಯಕ್ಕೆ ಖಾಸಗಿ ಭೇಟಿ ನೀಡಿದ ಜಗದ್ಗುರು XIVನೇ ಲಿಯೋರವರು, ಹುತಾತ್ಮರ ಶಾಶ್ವತ ಸಾಕ್ಷಿಯನ್ನು ಒತ್ತಿಹೇಳಿ, ಶಾಂತಿ, ಮಾನವ ಗೌರವ ಮತ್ತು ಭಿನ್ನತೆಗಳ ಗೌರವದತ್ತ ಹೊಸ ಬದ್ಧತೆಯನ್ನು ಉತ್ತೇಜಿಸಿದರು.

ವ್ಯಾಟಿಕನ್ ವರದಿ

ಸೋಮವಾರ ಮಧ್ಯಾಹ್ನ ಅಲ್ಜಿಯರ್ಸ್‌ನ ಮಸೀದಿಗೆ ಭೇಟಿ ನೀಡಿದ ಬಳಿಕ, ಜಗದ್ಗುರು XIVನೇ ಲಿಯೋರವರು ಮಿಷನರಿ ಆಗಸ್ಟಿನಿಯನ್ ಸಹೋದರಿಯರ  ಸ್ವಾಗತ ಮತ್ತು ಸ್ನೇಹ ಕೇಂದ್ರಕ್ಕೆ ಖಾಸಗಿ ಭೇಟಿ ನೀಡಿ, ಅಲ್ಜೀರಿಯಾದ ನಾಗರಿಕ ಯುದ್ಧದ ಸಮಯದಲ್ಲಿ ಹತ್ಯೆಗೀಡಾದ ಧಾರ್ಮಿಕ ಸಹೋದರಿಯರ ಸ್ಮರಣೆಗೆ ಗೌರವ ಸಲ್ಲಿಸಿದರು ಮತ್ತು ಅವರ ದಾನಧರ್ಮದ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ಅಲ್ಜಿಯರ್ಸ್ ನಗರದಿಂದ ಸುಮಾರು 16 ಕಿಮೀ ದೂರದಲ್ಲಿರುವ ಬಾಬ್ ಎಲ್ ಓಯ್ಡ್ ಪ್ರದೇಶದಲ್ಲಿರುವ ಈ ಸಮುದಾಯವು ಜಗದ್ಗುರುಗಳನ್ನು ಆತ್ಮೀಯವಾಗಿ ಸ್ವಾಗತಿಸಿತು.

ಭೇಟಿಯ ಸಂದರ್ಭದಲ್ಲಿ ಜಗದ್ಗುರುಗಳು ಸಹೋದರಿಯರೊಂದಿಗೆ ಪ್ರಾರ್ಥನೆ ಸಲ್ಲಿಸಿ, ಆತಿಥ್ಯ, ಶಿಕ್ಷಣ ಮತ್ತು ಸ್ನೇಹದ ಸೇವೆಯನ್ನು ಮುಂದುವರಿಸುತ್ತಿರುವವರನ್ನು ಭೇಟಿಯಾದರು. ಈ ಸೇವೆಗಳು ಸ್ಮರಣೆ ಮತ್ತು ಸೌಹಾರ್ದತೆಯ ಹಿನ್ನೆಲೆಯಲ್ಲಿಯೇ ನಡೆಯುತ್ತಿವೆ.

ಜಗದ್ಗುರು ಲಿಯೋರವರ ಈ ಭೇಟಿ ವಿಶೇಷವಾಗಿ 1994 ರಿಂದ 1996ರ ನಡುವೆ ಅಲ್ಜೀರಿಯಾದ ನಾಗರಿಕ ಯುದ್ಧದಲ್ಲಿ ಬಲಿಯಾದ 19 ಹುತಾತ್ಮರಲ್ಲೊಬ್ಬರಾದ ಈ ಸಮುದಾಯದ ಇಬ್ಬರು ಧಾರ್ಮಿಕ ಸಹೋದರಿಯರ ಸ್ಮರಣೆಗೆ ಅರ್ಪಿಸಲಾಯಿತು.

ಸರ್ ಎಸ್ಟರ್ ಪಾನಿಯಾಗ್ವಾ ಅಲೋನ್ಸೋ ಮತ್ತು ಸರ್ ಕರಿದಾದ್ ಆಲ್ವಾರೆಸ್ ಮಾರ್ಟಿನ್ ರವರನ್ನು 1994ರ ಅಕ್ಟೋಬರ್ 23ರಂದು “ಬ್ಲಾಕ್ ಡೆಕೆಡ್” ಎಂದೇ ಕರೆಯಲ್ಪಡುವ ಅವಧಿಯಲ್ಲಿ, ಬಲಿಪೂಜೆಗೆ ಹೋಗುವ ಮಾರ್ಗದಲ್ಲಿ ಹತ್ಯೆ ಮಾಡಲಾಯಿತು.

ಹುತಾತತ್ವದ ಮಟ್ಟದ ಸಾಕ್ಷಿ

ವ್ಯಾಟಿಕನ್ ಪ್ರಕಟಣೆಯ ಪ್ರಕಾರ, ಜಗದ್ಗುರುಗಳು ಈ ಸಹೋದರಿಯರ ಜೀವನವನ್ನು ವಿಶಾಲವಾದ ಅಲ್ಜೀರಿಯಾದ ಹುತಾತ್ಮರ ಸಾಕ್ಷ್ಯದ ಬೆಳಕಿನಲ್ಲಿ ಪರಿಗಣಿಸಿದರು. ಅವರ ಜೀವನವು ಆಗಸ್ಟಿನಿಯನ್ ಆತ್ಮೀಯತೆಯಲ್ಲಿ ಆಳವಾಗಿ ನೆಲೆಗೊಂಡಿರುವ ಸಾಕ್ಷಿಯ ಅಂಶವನ್ನು ಅದರಲ್ಲೂ ಹುತಾತತ್ವದ ಮಟ್ಟದವರೆಗೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ನಿಮ್ಮ ಉಪಸ್ಥಿತಿ ಬಹಳ ಮಹತ್ವದ್ದಾಗಿದೆ,ಎಂದು ಜಗದ್ಗುರುಗಳು ಹೇಳಿದರು. ಸಂತ ಆಗಸ್ಟಿನರು ಈ ಭಾಗದಲ್ಲಿ ನೀಡಿದ ಆತ್ಮೀಯ ಕೊಡುಗೆಯನ್ನು ಸ್ಮರಿಸಿ, ಪ್ರತಿ ವ್ಯಕ್ತಿಯ ಗೌರವವನ್ನು ಮಾನ್ಯಗೊಳಿಸುವುದು ಮತ್ತು ಭಿನ್ನತೆಗಳನ್ನು ಗೌರವಿಸುತ್ತಾ ಶಾಂತಿಯಲ್ಲಿ ಬದುಕುವುದು ಸಾಧ್ಯ ಎಂದು ಅವರು ಹೇಳಿದರು.

1990ರ ದಶಕದ ಆರಂಭದವರೆಗೆ, ಈ ಸಮುದಾಯವೇ ಮಿಷನರಿ ಆಗಸ್ಟಿನಿಯನ್ ಸಹೋದರಿಯರ ವಾಸಸ್ಥಳವಾಗಿತ್ತು. ಇದೇ ಸ್ಥಳದಿಂದ ಹುತಾತ್ಮರಾದ ಇಬ್ಬರು ಸಹೋದರಿಯರು ತಮ್ಮ ದಿನನಿತ್ಯದ ಸೇವೆಗೆ ತೆರಳುತ್ತಿದ್ದರು. ಅವರ ಸ್ಮರಣೆ ಇಂದಿಗೂ ಜೀವಂತವಾಗಿದ್ದು, ಕ್ರೈಸ್ತ ಸಾಕ್ಷ್ಯದ ಅರ್ಥವನ್ನು ಬೆಳಗಿಸುತ್ತಿದೆ ಎಂದು ಜಗದ್ಗುರುಗಳು ಹೇಳಿದರು.

ಭೇಟಿಯ ಅಂತ್ಯದಲ್ಲಿ, ಜಗದ್ಗುರುಗಳು ಸಹೋದರಿಯರ ಸೇವೆಗೆ ಕೃತಜ್ಞತೆ ಸಲ್ಲಿಸಿ, ತಮ್ಮ ಮಿಷನ್‌ನಲ್ಲಿ ದೃಢವಾಗಿ ಮುಂದುವರೆಯಲು ಪ್ರೋತ್ಸಾಹಿಸಿದರು. ಜೊತೆಗೆ, ಅಲ್ಜೀರಿಯಾದ 19 ಹುತಾತ್ಮರ ಸ್ಮರಣಾ ದಿನವನ್ನು ಮೇ 8ರಂದು ಆಚರಿಸಲಾಗುತ್ತದೆ ಎಂದು ಸ್ಮರಿಸಿ, ಅದು ಅವರ ಆಯ್ಕೆಯ ದಿನದೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಿದರು.

“ಸ್ವಾಗತ ಮತ್ತು ಸ್ನೇಹ ಕೇಂದ್ರ”

ಈ ಕೇಂದ್ರವನ್ನು ಪ್ರಸ್ತುತ ಅಲ್ಜಿಯರ್ಸ್‌ನ ನೋತ್ರ್-ಡೇಮ್ ದ ಆಫ್ರಿಕ್ ಪ್ರದೇಶದಲ್ಲಿ ವಾಸಿಸುವ ಮೂವರು ಸಹೋದರಿಯರಲ್ಲಿ ಇಬ್ಬರು ನಡೆಸುತ್ತಿದ್ದಾರೆ. ಇದು ಸ್ಥಳೀಯ ಜನರಿಗೆ ತೆರೆಯಲ್ಪಟ್ಟ ಸಂವಹನದ ಸ್ಥಳವಾಗಿದ್ದು, ವಿವಿಧ ದೇಶಗಳ ವೃತ್ತಿಪರ ಶಿಕ್ಷಕರ ಸಹಾಯದಿಂದ ದಿನನಿತ್ಯ ಚಟುವಟಿಕೆಗಳನ್ನು ನಡೆಸುತ್ತದೆ.

ಈ ಚಟುವಟಿಕೆಗಳಲ್ಲಿ ಮಕ್ಕಳಿಗೆ ಶಾಲೆಯ ನಂತರದ ಸಹಾಯ, ಯುವಕರು ಮತ್ತು ವಯಸ್ಕರಿಗೆ ಫ್ರೆಂಚ್ ಮತ್ತು ಸ್ಪ್ಯಾನಿಷ್ ಭಾಷಾ ತರಗತಿಗಳು, ಹಾಗೂ ಮಹಿಳೆಯರಿಗೆ ಹೊಲಿಗೆ, ಕ್ರೋಶ, ಚಿತ್ರಕಲೆ ಮತ್ತು ಆಭರಣ ತಯಾರಿಕೆ ತರಬೇತಿಗಳು ಸೇರಿವೆ.

13 ಏಪ್ರಿಲ್ 2026, 18:59