ಹುಡುಕಿ

++ Il Papa, il Mediterraneo e il Sahara non diventino cimiteri ++

"ಅಲ್ಜೀರಿಯಾದಲ್ಲಿ ಜಗದ್ಗುರುಗಳು: “ಮರಳುಭೂಮಿಗಳು ಮತ್ತು ಸಮುದ್ರಗಳು ಶಾಂತಿಯ ಹಾಗೂ ಪರಸ್ಪರ ಸಮೃದ್ಧಿಯ ಒಯಾಸಿಸ್‌ಗಳಾಗಬೇಕು.”

ಅಲ್ಜೀರಿಯಾದ ನಾಗರಿಕ ಅಧಿಕಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಸಮಾಜಗಳು ಮಾನವ ಜೀವನ ಮತ್ತು ಗೌರವವನ್ನು ಆಲಂಘನೀಯವೆಂದು ಗುರುತಿಸಿ, ಯಾವತ್ತೂ ದುರುಪಯೋಗಪಡಿಸದಂತೆ ಶಾಂತಿಯ ಒಯಾಸಿಸ್‌ಗಳನ್ನು ಬೆಳೆಸಬೇಕೆಂದು ಕೋರಿದರು.

ವ್ಯಾಟಿಕನ್ ವರದಿ

ಅಲ್ಜೀರಿಯಾದ ಮೂರು ದಿನಗಳ ಪ್ರೇಷಿತರ ಪ್ರವಾಸದ ಮೊದಲ ದಿನ, ಜಗದ್ಗುರು XIVನೇ ಲಿಯೋರವರು ಅಲ್ಜಿಯರ್ಸ್‌ನಲ್ಲಿ ಸರ್ಕಾರದ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕ ವಲಯದವರನ್ನು ಭೇಟಿಯಾದರು.

ರಾಷ್ಟ್ರಪತಿ ಅಬ್ದೆಲ್ಮಜೀದ್ ತೆಬ್ಬೂನ್ ರವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದ ನಂತರ, ಜಗದ್ಗುರುಗಳು ಡ್ಜಾಮಾ ಎಲ್ ಜಜೈರ್ ಸಮಾವೇಶ ಕೇಂದ್ರದಲ್ಲಿ ಸುಮಾರು 1,400 ನಾಗರಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ತಮ್ಮ ಪೇತ್ರನ ಸೇವೆಯ ಮೊದಲ ವರ್ಷದಲ್ಲೇ ಅಲ್ಜೀರಿಯಾಗೆ ಭೇಟಿ ನೀಡಲು ಆಹ್ವಾನಿಸಿದಕ್ಕಾಗಿ ಅವರು ರಾಷ್ಟ್ರಪತಿಗೆ ಧನ್ಯವಾದಗಳನ್ನು ತಿಳಿಸಿದರು. 2001 ಮತ್ತು 2013ರಲ್ಲಿ “ಸಂತ ಆಗಸ್ಟಿನರ ಆಧ್ಯಾತ್ಮಿಕ ಮಗನಾಗಿ ಅನಾಬಾ—ಪ್ರಾಚೀನ ಹಿಪ್ಪೋಗೆ ಭೇಟಿ ನೀಡಿದ್ದನ್ನು ಅವರು ನೆನಪಿಸಿದರು.

ಜಗದ್ಗುರು XIVನೇ ಲಿಯೋರವರು “ಶಾಂತಿಯ ತೀರ್ಥಯಾತ್ರಿಕನಾಗಿ” ಬಂದಿದ್ದೇನೆ ಎಂದು ಹೇಳಿ, “ನಾವು ಸಹೋದರರು ಮತ್ತು ಸಹೋದರಿಯರು, ಏಕೆಂದರೆ ನಮ್ಮೆಲ್ಲರಿಗೂ ಒಂದೇ ಪರಲೋಕದ ತಂದೆ ಇದ್ದಾನೆ” ಎಂದು ಹೇಳಿದರು.

ಅಲ್ಜೀರಿಯಾದ ಜನರ ಭೇಟಿಯ ಸಂಸ್ಕೃತಿ ಮತ್ತು ಸೌಹಾರ್ದತೆಯನ್ನು ಅವರು ಶ್ಲಾಘಿಸಿದರು, ಹಾಗೆಯೇ ಅವರ ಐಕ್ಯತೆ, ಆತಿಥ್ಯ ಮತ್ತು ಸಮುದಾಯದ ಮನೋಭಾವವನ್ನೂ ಮೆಚ್ಚಿದರು.

ಸಂಪತ್ತಿನ ಬಗ್ಗೆ ನ್ಯಾಯದ ಭಾವನೆಗೆ ಮೂಲವಾಗಿರುವ ದಾನಧರ್ಮದ ಆಚರಣೆಯಲ್ಲಿ ಅಲ್ಜೀರಿಯಾದ ಜನರು ತೋರಿದ ಮಹಾನ್ ಉದಾರತೆಯನ್ನು ಜಗದ್ಗುರುಗಳು ಉಲ್ಲೇಖಿಸಿದರು.

ಈ ನ್ಯಾಯದ ದೃಷ್ಟಿಕೋನ ಸರಳವೂ ಆಳವಾದುದೂ ಆಗಿದೆ, ಏಕೆಂದರೆ ಅದು ಇತರರಲ್ಲಿ ದೇವರ ರೂಪವನ್ನು ಗುರುತಿಸುತ್ತದೆ,ಎಂದು ಅವರು ಹೇಳಿದರು. ನಿಜವಾಗಿ, ಕರುಣೆಯಿಲ್ಲದ ಧರ್ಮ ಮತ್ತು ಐಕ್ಯತೆಯಿಲ್ಲದ ಸಮಾಜ ದೇವರ ದೃಷ್ಟಿಯಲ್ಲಿ ಅಪಮಾನವಾಗಿದೆ.

ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾದ ನಾಗರಿಕ ನಾಯಕರಿಗೆ ಸಂವಾದ ಮತ್ತು ಐಕ್ಯತೆಯನ್ನು ಅಳವಡಿಸಿಕೊಳ್ಳಲು ಆಹ್ವಾನಿಸಿದರು, ಇದರಿಂದ ನಮ್ಮ ಜಗತ್ತಿಗೆ ಹೆಚ್ಚಿನ ನ್ಯಾಯವನ್ನು ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರ ಗೌರವವನ್ನು ಗೌರವಿಸಿ, ಇತರರ ನೋವಿನಿಂದ ಸ್ಪಂದಿಸುವ ಮೂಲಕ ತಪ್ಪುಅರ್ಥಗಳು ಮತ್ತು ಸಂಘರ್ಷಗಳನ್ನು ಹೆಚ್ಚಿಸುವ ಬದಲು ನೀವು ಇತಿಹಾಸದ ಹೊಸ ಅಧ್ಯಾಯದ ಪ್ರಮುಖ ಪಾತ್ರಧಾರರಾಗಬಹುದು,ಎಂದು ಅವರು ಹೇಳಿದರು.

ಜಾಗತೀಕರಣದ ಪ್ರಕ್ರಿಯೆಯನ್ನು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆಯ ಮಾದರಿಯ ಮೂಲಕ ಮಾರ್ಗದರ್ಶನ ಮಾಡಬೇಕೆಂಬ ತಮ್ಮ ಪೂರ್ವಸ್ಥರಾದ ಜಗದ್ಗುರು  XVIನೇ  ಬೆನೆಡಿಕ್ಟ್ ಮತ್ತು ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಅವರು ನೆನಪಿಸಿದರು, ಇದರಿಂದ ಎಲ್ಲಾ ಜನರು ಮತ್ತು ರಾಷ್ಟ್ರಗಳು ಜಾಗತಿಕ ಆರ್ಥಿಕ ಬೆಳವಣಿಗೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಆದ್ದರಿಂದ, ಈ ದೇಶದಲ್ಲಿ ಅಧಿಕಾರದಲ್ಲಿರುವ ನೀವು ಈ ದೃಷ್ಟಿಕೋನವನ್ನು ಭಯಪಡದೆ, ಉತ್ಸಾಹಭರಿತ, ಚೈತನ್ಯಮಯ ಮತ್ತು ಸ್ವತಂತ್ರ ನಾಗರಿಕ ಸಮಾಜವನ್ನು ಉತ್ತೇಜಿಸಬೇಕು,ವಿಶೇಷವಾಗಿ ಯುವಕರನ್ನು ಎಲ್ಲರಿಗೂ ಭರವಸೆಯ ವಿಸ್ತಾರವನ್ನು ಹೆಚ್ಚಿಸಲು ಸಮರ್ಥರಾಗಿದ್ದಾರೆಂದು ಗುರುತಿಸಬೇಕು, ಎಂದು ಅವರು ಹೇಳಿದರು.

ಜಗದ್ಗುರು  ಲಿಯೋರವರು ಒಂದು ರಾಷ್ಟ್ರದ ನಿಜವಾದ ಶಕ್ತಿ ಅದರ ನಾಗರಿಕರ ನಡುವೆ ಸಹಕಾರವನ್ನು ಬೆಳೆಸುವ ಸಾಮರ್ಥ್ಯದಲ್ಲಿದೆ ಎಂದು ಹೇಳಿದರು—ಅಧಿಕಾರಿಗಳು ಆಳುವವರಾಗಿ ಅಲ್ಲ, ಸೇವಕರಾಗಿ ಎಲ್ಲರ ಅಭಿವೃದ್ಧಿಯನ್ನು ಉತ್ತೇಜಿಸುವವರಾಗಿರಬೇಕು।

ಅಲ್ಜೀರಿಯಾದ ಸಾಮಾನ್ಯ ಹಿತಕ್ಕಾಗಿ ಕಥೊಲಿಕ ಧರ್ಮ ಸಭೆ ತನ್ನ ಕೊಡುಗೆಯನ್ನು ನೀಡುವುದಾಗಿ ಮತ್ತು ಈ ದೇಶವನ್ನು ಎಲ್ಲಾ ಖಂಡಗಳ ರಾಷ್ಟ್ರಗಳ ನಡುವೆ ಸೇತುವೆಯಾಗಿ ಬಲಪಡಿಸುವುದಾಗಿ ಅವರು ಭರವಸೆ ನೀಡಿದರು.

ಮಧ್ಯಧರಾ ಸಮುದ್ರ ಮತ್ತು ಸಹಾರಾ ಮರಳುಭೂಮಿಯಿಂದ ಸುತ್ತುವರಿದ ಅಲ್ಜೀರಿಯಾದ ಭೌಗೋಳಿಕ ಸ್ಥಿತಿಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಇವು ಮಾನವತೆಯ ಅಪಾರ ಸಂಪತ್ತಿನಿಂದ ತುಂಬಿದ ಆತ್ಮೀಯ ಸಂಗಮ ಸ್ಥಳ ಎಂದು ಹೇಳಿದರು.

ಸಮುದ್ರ ಮತ್ತು ಮರಳುಭೂಮಿಗಳು ಸಾವಿರಾರು ವರ್ಷಗಳಿಂದ ಜನಾಂಗಗಳು ಮತ್ತು ಸಂಸ್ಕೃತಿಗಳ ನಡುವೆ ಪರಸ್ಪರ ಸಮೃದ್ಧಿಯ ಸ್ಥಳಗಳಾಗಿವೆ, ಎಂದು ಅವರು ಹೇಳಿದರು. “ನಾವು ಅವುಗಳನ್ನು ಸಮಾಧಿಗಳಾಗಿ ಮಾರ್ಪಡಿಸಿದರೆ ಅಲ್ಲಿ ಭರವಸೆಯೂ ಸಾಯುತ್ತದೆ ಅದು ನಮ್ಮ ದುರಂತವಾಗುತ್ತದೆ.

ಮರಳುಭೂಮಿಗಳು ಮತ್ತು ಸಮುದ್ರಗಳು ಅಪಾರ ಸೌಂದರ್ಯವನ್ನು ಹೊಂದಿವೆ ಎಂದು ಅವರು ಹೇಳಿದರು ಅವುಗಳ ವಿಶಾಲತೆ ಮಾನವನಿಗೆ ಆತ್ಮೀಯ ಚಿಂತನೆಗೆ ಸಹಾಯ ಮಾಡುತ್ತದೆ.

ಈ ಇತಿಹಾಸ ಮತ್ತು ಭವಿಷ್ಯದ ಮಹಾ ಸಂಪತ್ತನ್ನು ದುಷ್ಟತೆಯಿಂದ ಮುಕ್ತಗೊಳಿಸೋಣ ಎಂದು ಅವರು ಹೇಳಿದರು. “ಶಾಂತಿಯ ಒಯಾಸಿಸ್‌ಗಳನ್ನು ಹೆಚ್ಚಿಸೋಣ, ನಿರಾಶೆಯ ಕಾರಣಗಳನ್ನು ಬಹಿರಂಗಪಡಿಸಿ ದೂರಮಾಡೋಣ, ಇತರರ ದುಃಖದಿಂದ ಲಾಭ ಪಡೆಯುವವರನ್ನು ಎದುರಿಸೋಣ.

 ಜಗದ್ಗುರು ಲಿಯೋರವರು ಅಲ್ಜೀರಿಯಾದ ನಾಗರಿಕ ನಾಯಕರಿಗೆ ಆಧ್ಯಾತ್ಮಿಕ ಶಕ್ತಿ, ಬುದ್ಧಿಮತ್ತೆ ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಭೂಮಿಯನ್ನೂ ಸಮುದ್ರವನ್ನೂ ಜೀವನ, ಭೇಟಿಗಳು ಮತ್ತು ಆಶ್ಚರ್ಯದ ಸ್ಥಳಗಳನ್ನಾಗಿ ರೂಪಿಸಲು ಕರೆ ನೀಡಿದರು.

ಅಲ್ಜೀರಿಯಾದ ಸಮಾಜದಲ್ಲಿ ಮೂಲತತ್ವವಾದ ಮತ್ತು ಧರ್ಮನಿರಪೇಕ್ಷತೆಯ ಪ್ರಭಾವ ಕಂಡುಬಂದಿದ್ದು, ಧಾರ್ಮಿಕ ಭಾವನೆ ಮತ್ತು ಆಧುನಿಕ ಜೀವನದ ನಡುವೆ ಒತ್ತಡ ಉಂಟಾಗಿದೆ ಎಂದು ಜಗದ್ಗುರುಗಳು ಹೇಳಿದರು।

ಧಾರ್ಮಿಕ ಚಿಹ್ನೆಗಳು ಮತ್ತು ಪದಗಳು ಒಂದೆಡೆ ಹಿಂಸೆ ಮತ್ತು ದಮನದ ಅವಮಾನಕಾರಿ ಭಾಷೆಯಾಗಬಹುದು ಮತ್ತೊಂದೆಡೆ ತೃಪ್ತಿ ನೀಡದ ಉಪಭೋಗದ ದೊಡ್ಡ ಮಾರುಕಟ್ಟೆಯಲ್ಲಿ ಖಾಲಿ ಚಿಹ್ನೆಗಳಾಗಬಹುದು,ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು “ಅಸಂಬದ್ಧ ಧ್ರುವೀಕರಣಗಳು” ತಮ್ಮನ್ನು ನಿರುತ್ಸಾಹಗೊಳಿಸದಂತೆ ನೋಡಿಕೊಳ್ಳಿ ಎಂದು ನಾಗರಿಕ ಅಧಿಕಾರಿಗಳಿಗೆ ಪ್ರೋತ್ಸಾಹಿಸಿದರು ಅವುಗಳನ್ನು ಜ್ಞಾನದಿಂದ ಎದುರಿಸಬೇಕು ಎಂದು ಹೇಳಿದರು.

ಧ್ರುವೀಕರಣವು “ನಾವು ಮಹತ್ತರ ಪುನರುಜ್ಜೀವನದ ಅಸಾಮಾನ್ಯ ಕಾಲದಲ್ಲಿ ಬದುಕುತ್ತಿದ್ದೇವೆ ಎಂಬ ಸಂಕೇತವಾಗಿದೆ, ಹೃದಯವನ್ನು ಸ್ವತಂತ್ರವಾಗಿಟ್ಟುಕೊಂಡು, ಮನಸ್ಸನ್ನು ಎಚ್ಚರಿಕೆಯಿಂದ ಇಡುವವರು ಮಹಾನ್ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಯಿಂದ ಹೊಸ ದೃಷ್ಟಿಕೋನಗಳನ್ನು ಮತ್ತು ಅಚಲವಾದ ಜೀವನ ಗುರಿಯನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.

13 ಏಪ್ರಿಲ್ 2026, 18:01