ಜಗದ್ಗುರುಗಳು: ಅಂಗೋಲಾದಲ್ಲಿ ಧರ್ಮ ಸಭೆಯು ಬೆಳೆಯುತ್ತಿದೆ ಮತ್ತು ಸಾಮಾನ್ಯ ಮಾನವ ಹಕ್ಕುಗಳನ್ನು ಉತ್ತೇಜಿಸಲು ಸಹಾಯ ಮಾಡಬಹುದು.
ವ್ಯಾಟಿಕನ್ ವರದಿ
ಆಫ್ರಿಕಾ ಪ್ರವಾಸದ ವೇಳೆ ನಡೆದ ಹಿಂದಿನ ವಿಮಾನ ಪ್ರಯಾಣಗಳಂತೆ, ಅಂಗೋಲಾದ ಲುವಾಂಡಾದಿಂದ ಈಕ್ವಟೋರಿಯಲ್ ಗಿನಿಯಾದ ಮಲಾಬೊಗೆ ಸಾಗುವ ಪ್ರಯಾಣದ ಸಮಯದಲ್ಲೂ ಜಗದ್ಗುರು XIVನೇ ಲಿಯೋರವರು ಪತ್ರಕರ್ತರನ್ನು ಭೇಟಿ ಮಾಡಿ, ಸ್ಥಳೀಯ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರು ಮೂವರು ಅಂಗೋಲಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಆದರೆ ಅದಕ್ಕಿಂತ ಮೊದಲು, ವಿಮಾನದಲ್ಲೇ ಜನ್ಮದಿನವನ್ನು ಆಚರಿಸುತ್ತಿದ್ದ ಇಬ್ಬರು ಪತ್ರಕರ್ತರಿಗೆ ಜಗದ್ಗುರುಗಳು ಶುಭಾಶಯಗಳನ್ನು ತಿಳಿಸಿ,ಅವರಿಗೆ ನಾವು ಚಪ್ಪಾಳೆ ತಟ್ಟೋಣ ಎಂದು ಹೇಳಿದರು.
ಅಂಗೋಲಾದಲ್ಲಿ ಧರ್ಮ ಸಭೆ ರಾಜ್ಯ ಸಹಕಾರ ಆರೋಗ್ಯ ಮತ್ತು ಶಿಕ್ಷಣ
ಟೆಲಿವಿಸಾವೊ ಪಬ್ಲಿಕಾ ದಿ ಅಂಗೋಲಾ ಪ್ರತಿನಿಧಿಯೊಬ್ಬರು, ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಂಗೋಲಾ ಸರ್ಕಾರವನ್ನು ಸುಧಾರಿಸಲು ಧರ್ಮ ಸಭೆ ಹೇಗೆ ಸಹಾಯ ಮಾಡಬಹುದು ಎಂದು ಪ್ರಶ್ನಿಸಿದರು.
ಉತ್ತರವಾಗಿ, ಎಲ್ಲರ ಒಳಿತಿಗಾಗಿ ನಾವು ಈಗಾಗಲೇ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ, ಆದರೆ ವಿಭಿನ್ನ ದೃಷ್ಟಿಕೋನಗಳಿಂದ, ಎಂದು ಜಗದ್ಗುರುಗಳು ಹೇಳಿದರು.
ಈ ವಿಷಯಗಳನ್ನು ಅವರು ರಾಷ್ಟ್ರಪತಿಗಳೊಂದಿಗೆ ಚರ್ಚಿಸಿದ್ದು, ನಾವು ಹೇಗೆ ಒಟ್ಟಿಗೆ ಕೆಲಸ ಮಾಡಬಹುದು ಮತ್ತು ರಾಜ್ಯವು ಜನರಿಗೆ ಒದಗಿಸುವ ಸೇವೆಗಳನ್ನು ವಿಶೇಷವಾಗಿ ಹೊಸ ಆಸ್ಪತ್ರೆಗಳು ಮತ್ತು ಸೌಲಭ್ಯಗಳನ್ನು ನಿರ್ಮಿಸುವಲ್ಲಿ ಹೆಚ್ಚು ಉತ್ತಮಗೊಳಿಸಲು ಹೇಗೆ ಸಾಧ್ಯ, ಹಾಗೂ ಜನರ ಒಳಿತಿಗಾಗಿ ಬಲವಾದ ಬದ್ಧತೆಯನ್ನು ಹೇಗೆ ತೋರಬಹುದು ಎಂಬುದನ್ನು ಅರಿಯಲು, ಎಂದು ವಿವರಿಸಿದರು.
ಭವಿಷ್ಯದ ಕಾನ್ಸಿಸ್ಟರಿ
ಅಂಗೋಲಾ ನ್ಯೂಸ್ ಏಜೆನ್ಸಿಯ ವರದಿಗಾರರು ಭವಿಷ್ಯದ ಕಾನ್ಸಿಸ್ಟರಿ ಮತ್ತು ಅಂಗೋಲಾದ ಕಾರ್ಡಿನಲ್ ನೇಮಕಾತಿ ಕುರಿತು ಕೇಳಿದಾಗ, ಜಗದ್ಗುರು ಲಿಯೋರವರು ನಗುಮುಖದಿಂದ ಪ್ರತಿಕ್ರಿಯಿಸಿದರು.
ಇದು ಅನೇಕರು ಕೇಳಲು ಬಯಸುವ ಪ್ರಶ್ನೆ, ಎಂದು ಅವರು ಹೇಳಿ, “ಹೊಸ ಕಾರ್ಡಿನಲ್‌ಗಳ ನೇಮಕಾತಿ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಲ್ಪಟ್ಟಿಲ್ಲ. ಇದನ್ನು ಜಾಗತಿಕ ಮಟ್ಟದಲ್ಲಿ ಪರಿಗಣಿಸಬೇಕಾಗಿದೆ. ಆದರೆ ದೂರದ ಭವಿಷ್ಯವಲ್ಲದ ಸಮಯದಲ್ಲಿ ಆಫ್ರಿಕಾಕ್ಕೆ, ಬಹುಶಃ ಅಂಗೋಲಾಕ್ಕೂ, ಹೊಸ ಕಾರ್ಡಿನಲ್‌ಗಳ ನೇಮಕಾತಿಯನ್ನು—ಅಂಗೋಲಾದೊಬ್ಬರನ್ನು ಸೇರಿಸಿ ಪರಿಗಣಿಸಲು ಸಾಧ್ಯವಾಗುತ್ತದೆ ಎಂಬ ಆಶಯವಿದೆ, ಎಂದು ಹೇಳಿದರು.
ಧರ್ಮಪ್ರಚಾರಕ್ಕೆ ಕರೆ—ಮತಾಂತರ ಇಲ್ಲದೆ
ಪತ್ರಕರ್ತರಿಗೆ ವಿದಾಯ ಹೇಳುವ ಮೊದಲು, ಸುರಕ್ಷಿತ ಪ್ರಯಾಣ ಮತ್ತು ಶುಭಯಾತ್ರೆ ಎಂದು ಹಾರೈಸಿದ ಬಳಿಕ, ರೇಡಿಯೋ ಎಕ್ಲೆಸಿಯಾ ಪ್ರತಿನಿಧಿಯೊಬ್ಬರ ಅಂತಿಮ ಪ್ರಶ್ನೆಗೆ ಜಗದ್ಗುರುಗಳು ಉತ್ತರಿಸಿದರು.
ಜಗದ್ಗುರು ಲಿಯೋರವರು “ಧಮ೯ಸಭೆ ಬೆಳೆಯುತ್ತಿರುವ ಜಗತ್ತಿನ ಭಾಗಗಳನ್ನು ನೋಡಿದಾಗ ನನಗೆ ಸಂತೋಷವಾಗುತ್ತದೆ” ಎಂದು ಹೇಳಿದರು.
“ಜಗತ್ತಿನ ಕೆಲವು ಭಾಗಗಳಲ್ಲಿ ಇದರ ವಿರುದ್ಧದ ಪರಿಸ್ಥಿತಿಯೂ ಇದೆ. ಆದ್ದರಿಂದ ಇಲ್ಲಿ ಸುವಾರ್ತಾ ಪ್ರಸಾರಕ್ಕೆ ಒಂದು ಕರೆ ಇದೆ ಸುವಾರ್ತೆಯನ್ನು ಮುಂದುವರಿಸಿ ಪ್ರಕಟಿಸುವುದು ಮತ್ತು ಇತರರನ್ನು ಆಹ್ವಾನಿಸುವುದು, ಆದರೆ ಜಗದ್ಗುರು ಫ್ರಾನ್ಸಿಸ್ ರವರು ಅನೇಕ ಬಾರಿ ಹೇಳಿದಂತೆ ಮತಾಂತರ ಮೂಲಕ ಅಲ್ಲ,” ಎಂದು ಅವರು ಹೇಳಿದರು.
ಅವರು “ಸೌಂದರ್ಯ, ನಂಬಿಕೆಯ ಆಕರ್ಷಣೆ ಮತ್ತು ಭಕ್ತರ ಸಂತೋಷದ ಮೂಲಕ ಜನರನ್ನು ನಂಬಿಕೆಗೆ ಆಕರ್ಷಿಸಬೇಕು ಇದು ನಂಬಿಕೆಯ, ಸುವಾರ್ತೆಯ ಅತ್ಯುತ್ತಮ ಘೋಷಣೆಗಳಲ್ಲಿ ಒಂದಾಗಿದೆ ಎಂದು ಪ್ರೋತ್ಸಾಹಿಸಿದರು.
ಜನರ ಒಳಿತಿಗಾಗಿ ಇನ್ನಷ್ಟು ಧರ್ಮ ಗುರುಗಳು
ಅಂಗೋಲಾದಲ್ಲಿ “ಧಮ೯ಸಭೆ ಬೆಳೆಯುತ್ತಿದೆ” ಎಂದು ಜಗದ್ಗುರುಗಳು ಹೇಳಿದರು. ಇದು ಪ್ರೇಷಿತರ ರಾಯಭಾರಿಗಳ ಸಹಕಾರದೊಂದಿಗೆ ಬಿಷಪ್‌ಗಳ ಕಾರ್ಯದಿಂದ ಸಾಧ್ಯವಾಗಿದೆ ಎಂದು ಅವರು ಸೂಚಿಸಿದರು.
ಜನರ ಒಳಿತಿಗಾಗಿ ಹೊಸ ಧರ್ಮಪ್ರಾಂತ್ಯಗಳನ್ನು ಸ್ಥಾಪಿಸುವುದು ಎಲ್ಲಿ ಅಗತ್ಯವೋ ಅದನ್ನು ನಾವು ಸ್ಪಷ್ಟವಾಗಿ ನೋಡಬಹುದು ಜನರೊಂದಿಗೆ ಹೆಚ್ಚು ಸಮೀಪದಲ್ಲಿರುವ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಲು ಇನ್ನಷ್ಟು ಬಿಷಪ್‌ಗಳನ್ನು ಹೊಂದುವ ಅವಕಾಶವೂ ಇದರಿಂದ ಸಿಗುತ್ತದೆ, ಎಂದು ಅವರು ಹೇಳಿದರು.
