ಹುಡುಕಿ

Pope Leo XIV visits Angola

ಆಫ್ರಿಕಾದ ಆರನೇ ದಿನ: ಕ್ಯಾಮರೂನ್‌ನಿಂದ ಅಂಗೋಲಾಕ್ಕೆ

ಜಗದ್ಗುರು XIVನೇ ಲಿಯೋರವರು ತಮ್ಮ ಪ್ಲೇಷಿತರ ಯಾತ್ರೆಯ ಎರಡನೇ ಹಂತವನ್ನು ಪೂರ್ಣಗೊಳಿಸಿ ಕ್ಯಾಮರೂನ್‌ಗೆ ವಿದಾಯ ಹೇಳಿ, ಅಂಗೋಲಾಕ್ಕೆ ಆಗಮಿಸುತ್ತಾರೆ. ಅಲ್ಲಿ ಅವರು ಅಧಿಕಾರಿಗಳಿಗೆ “ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಾಮೂಹಿಕ ಹಿತವನ್ನು ಮೊದಲಿಗೆ ಇರಿಸಿ” ಎಂದು ಮನವಿ ಮಾಡುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಏಪ್ರಿಲ್ 13ರಿಂದ 23ರವರೆಗೆ ನಾಲ್ಕು ದೇಶಗಳ ಮೂಲಕ ಸಾಗುತ್ತಿರುವ ಆಫ್ರಿಕಾ ಪ್ರೇಷಿತರ ಯಾತ್ರೆಯ ಎರಡನೇ ಹಂತವನ್ನು ಪೂರ್ಣಗೊಳಿಸಿದ್ದಾರೆ.

ಸ್ನೇಹಪೂರ್ಣ ವಿದಾಯ

ಏಪ್ರಿಲ್ 18ರ ಶನಿವಾರ ಬೆಳಿಗ್ಗೆ ಕ್ಯಾಮರೂನ್ ತೊರೆಯುವ ಮೊದಲು, ಅವರು ಯೌಂಡೆ-ವಿಲ್ಲೆ ವಿಮಾನ ನಿಲ್ದಾಣದಲ್ಲಿ ಕೂಡಿದ್ದ ಸುಮಾರು 2 ಲಕ್ಷ ಜನರೊಂದಿಗೆ ಪವಿತ್ರ ಬಲಿಪೂಜೆಯನ್ನು ಆಚರಿಸಿದರು. ಕೆಲವರು ಜಗದ್ಗುರುಗಳ ಆಗಮನದವರೆಗೆ ಉಳಿಯಲು ಹಾಸಿಗೆ ಮತ್ತು ಆಹಾರವನ್ನು ತೆಗೆದುಕೊಂಡು ಹಿಂದಿನ ಸಂಜೆಲೇ ಪ್ರಾರ್ಥನಾ ಜಾಗರಣೆಗೆ ಆಗಮಿಸಿದ್ದರು.

ಈ ಬಲಿಪೂಜೆ ದೇಶದಲ್ಲಿ ಜಗದ್ಗುರುಗಳು ಸಾರ್ವಜನಿಕ ಕಾರ್ಯಕ್ರಮಗಳಿಗೆ ಉತ್ಸವಮಯ ಅಂತ್ಯವಾಯಿತು. ಸಂಗೀತದಿಂದ ಹಿಡಿದು ವಿಶ್ವಾಸಿಗಳ ಪ್ರಾರ್ಥನೆಗಳವರೆಗೆ, ಅವುಗಳನ್ನು ಫ್ರೆಂಚ್, ಇಂಗ್ಲಿಷ್, ಎವೊಂಡೊ, ನ್ನಾಂಗಾ ಮತ್ತು ಫುಲ್ಫುಲ್ಡೆ ಭಾಷೆಗಳಲ್ಲಿ ಓದುವ ಮೂಲಕ ಕ್ಯಾಮರೂನ್‌ನ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಒಗ್ಗೂಡಿಸಿತು.

ತಮ್ಮ ಪ್ರಭೋಧನೆಯಲ್ಲಿ, ಜಗದ್ಗುರುಗಳು ವಿಶ್ವಾಸಿಗಳಿಗೆ  ಸಮಸ್ಯೆಗಳು ಮತ್ತು ಸವಾಲುಗಳನ್ನು — ವಿಶೇಷವಾಗಿ ದಾರಿದ್ರ್ಯ ಮತ್ತು ನ್ಯಾಯಕ್ಕೆ ಸಂಬಂಧಿಸಿದವುಗಳನ್ನು  ಎದುರಿಸಲು ಹೆದರಬೇಡಿ ಎಂದು ಪ್ರೇರೇಪಿಸಿದರು. ಕೆಲವೊಮ್ಮೆ ಕುಟುಂಬ ಮತ್ತು ಸಮಾಜ ಜೀವನದಲ್ಲಿ ಮಾನಸಿಕತೆ ಮತ್ತು ರಚನೆಗಳನ್ನು ಬದಲಾಯಿಸುವ ಧೈರ್ಯ ಅಗತ್ಯವಾಗುತ್ತದೆ, ಇದರಿಂದ ಮಾನವ ವ್ಯಕ್ತಿಯ ಗೌರವವು ಸದಾ ಮುಖ್ಯವಾಗಿರುತ್ತದೆ ಮತ್ತು ಅಸಮಾನತೆ ಹಾಗೂ ಹಕ್ಕುಗಳಿಂದ ವಂಚಿತರಾದವರನ್ನು ನಿವಾರಿಸಬಹುದು ಎಂದು ಅವರು ಹೇಳಿದರು.

 ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸಹಾಯ ನೀಡಬಹುದು ಮತ್ತು ಸ್ವೀಕರಿಸಬಹುದು ಎಂದು ಅವರು ಒತ್ತಿ ಹೇಳಿದರು. ಕ್ಯಾಮರೂನ್‌ನ ಧರ್ಮ ಸಭೆಯು “ಜೀವಂತವಾಗಿದೆ, ಯುವತೆಯೊಂದಿಗೆ ತುಂಬಿದೆ, ವರಗಳಿಂದ ಆಶೀರ್ವದಿತವಾಗಿದೆ, ತನ್ನ ವೈವಿಧ್ಯತೆಯಲ್ಲಿ ಶಕ್ತಿಯುತವಾಗಿದೆ ಮತ್ತು ಅದರ ಸೌಹಾರ್ದತೆಯಲ್ಲಿ ಅದ್ಭುತವಾಗಿದೆ” ಎಂದು ಅವರು ಹೇಳಿದರು.

ದೈವಾರಾಧನೆ ವಿಧಿಯ ನಂತರ, ಜಗದ್ಗುರುಗಳು ಯೌಂಡೆ-ನ್ಸಿಮಾಲೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಚಿಕ್ಕ ವಿದಾಯ ಸಮಾರಂಭದಲ್ಲಿ ಪಾಲ್ಗೊಂಡರು, ನಂತರ ಎರಡು ಅರೆ ಗಂಟೆಗಳ ವಿಮಾನ ಪ್ರಯಾಣದ ಮೂಲಕ ಅಂಗೋಲಾಕ್ಕೆ ತೆರಳಿದರು.

ಜಗದ್ಗುರಗಳು ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾವು ಮುಖ್ಯವಾಗಿ ಧರ್ಮ ಗುರುವಾಗಿ, ಕಥೋಲಿಕ ಧರ್ಮ ಸಭೆಯ ಮುಖ್ಯಸ್ಥನಾಗಿ, ಆಫ್ರಿಕಾದಾದ್ಯಂತ ಎಲ್ಲಾ ಕಥೋಲಿಕರೊಂದಿಗೆ ಇರಲು, ಅವರೊಂದಿಗೆ ನಡೆಯಲು, ಉತ್ತೇಜಿಸಲು ಮತ್ತು ಜೊತೆಗಿರುವುದಕ್ಕಾಗಿ ಬಂದಿರುವುದಾಗಿ ಹೇಳಿದರು. ಕ್ಯಾಮರೂನ್ ಜನರ “ಅದ್ಭುತ ಸ್ವಾಗತ, ಮಹತ್ತರ ಉತ್ಸಾಹ” ಮತ್ತು ಸಂತೋಷಕ್ಕಾಗಿ ಅವರು ಕೃತಜ್ಞತೆ ವ್ಯಕ್ತಪಡಿಸಿದರು.

ಅಂಗೋಲಾ ಜಗದ್ಗುರುಗಳನ್ನು ಸ್ವಾಗತಿಸುತ್ತದೆ

ಮಧ್ಯಾಹ್ನದಲ್ಲಿ ಜಗದ್ಗುರುಗಳು ಲುವಾಂಡಾದ 4 ದೆ ಫೆವೆರೆಯೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಜಗದ್ಗುರಗಳು ರಾಷ್ಟ್ರಪತಿ ಜೋವೊ ಲೊರೆನ್ಸೊ ರವರನ್ನು ಸೌಜನ್ಯ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳುವಾಗ, ಜನಸಮೂಹಗಳು ರಸ್ತೆಬದಿಯಲ್ಲಿ ನಿಂತು ಉತ್ಸಾಹದಿಂದ ಸ್ವಾಗತಿಸಿದರು.

ಸಂಭಾಷಣೆಯ ನಂತರ, ಜಗದ್ಗುರುಗಳು ಅಂಗೋಲಾದ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕ ವಲಯದ ಸದಸ್ಯರನ್ನು ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಬಳಸುವ ಸಮೀಪದ ಸಭಾಂಗಣದಲ್ಲಿ ಭೇಟಿಯಾದರು.

ತಮ್ಮ ಭಾಷಣದಲ್ಲಿ, ಅಂಗೋಲಾ ಮತ್ತು ಇತರ ಆಫ್ರಿಕಾ ದೇಶಗಳಲ್ಲಿ ಶಕ್ತಿಶಾಲಿ ಹಿತಾಸಕ್ತಿಗಳು ಹಕ್ಕು ಸಾಧಿಸಲು ಪ್ರಯತ್ನಿಸುವ ಭೌತಿಕ ಸಂಪತ್ತಿನ ಬಗ್ಗೆ ಜಗದ್ಗುರುಗಳು ಮಾತನಾಡಿದರು. ಈ ಶೋಷಣಾಧಾರಿತ ಆರ್ಥಿಕ ತರ್ಕದಿಂದ ಎಷ್ಟು ನೋವು, ಎಷ್ಟು ಸಾವುಗಳು, ಎಷ್ಟು ಸಾಮಾಜಿಕ ಮತ್ತು ಪರಿಸರ ವಿಪತ್ತುಗಳು ಉಂಟಾಗುತ್ತವೆ ಎಂದು ಅವರು ಹೇಳಿದರು. ಎಲ್ಲಾ ಮಟ್ಟಗಳಲ್ಲಿಯೂ, ಇದು ವಿಭೇದ ಮತ್ತು ಹೊರತಳ್ಳುವಿಕೆಯನ್ನು ಉತ್ತೇಜಿಸುವ ಅಭಿವೃದ್ಧಿ ಮಾದರಿಯನ್ನು ಬೆಂಬಲಿಸುತ್ತದೆ, ಆದರೆ ಅದನ್ನೇ ಏಕೈಕ ಸಾಧ್ಯ ಮಾರ್ಗವೆಂದು ಹೇರಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಅವರು ಗಮನಿಸಿದರು. ಆದ್ದರಿಂದ, ಹಾಜರಿದ್ದವರಿಗೆ ಅಂಗೋಲಾವನ್ನು ಭರವಸೆಯ ಯೋಜನೆಯಾಗಿ ರೂಪಿಸೋಣ ಎಂದು ಅವರು ಪ್ರೋತ್ಸಾಹಿಸಿದರು.

ಅವರೊಂದಿಗೆ ನಡೆದ ಭೇಟಿಯ ನಂತರ, ಜಗದ್ಗುರುಗಳು ಲುವಾಂಡಾದ ಅಪೋಸ್ತೋಲಿಕ್ ನುಂಶಿಯೇಟರ್‌ಗೆ ತೆರಳಿ, ಅಲ್ಲಿ ಅಂಗೋಲಾದ ಬಿಷಪ್‌ಗಳೊಂದಿಗೆ ಖಾಸಗಿ ಸಭೆ ನಡೆಸಿದರು.

18 ಏಪ್ರಿಲ್ 2026, 14:48