ಜಗದ್ಗುರುಗಳು ತ್ರಿಕಾಲ ಪ್ರಾರ್ಥನೆಯ ಭಾಷಣದಲ್ಲಿ: ಭಾನುವಾರದ ಬಲಿಪೂಜೆ ಕ್ರೈಸ್ತ ಜೀವನಕ್ಕೆ “ಅನಿವಾರ್ಯ”ವಾಗಿದೆ.
ವ್ಯಾಟಿಕನ್ ವರದಿ
ಭಾನುವಾರ ಏಪ್ರಿಲ್ 12ರಂದು, ಜಗದ್ಗುರು XIVನೇ ಲಿಯೋರವರು ಸೆಂಟ್ ಪೇತ್ರರ ಚೌಕದಲ್ಲಿ ರೆಜಿನಾ ಚೇಲಿ ಪ್ರಾರ್ಥನೆಗಾಗಿ ಕೂಡಿಕೊಂಡಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು. ಈ ವಾರ, ಜಗದ್ಗುರುಗಳು ಪಾಸ್ಖ ಹಬ್ಬದ ಎರಡನೇ ಭಾನುವಾರದ ಸುವಾರ್ತೆಯಾದ ದೈವಿಕ ಕರುಣೆಯ ಭಾನುವಾರದ ಕುರಿತು ಚಿಂತನೆ ನಡೆಸಿದರು ಇದು ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಬಲಿಪೂಜೆಯ ಕೇಂದ್ರಭೂಮಿಕೆಯನ್ನು ಒತ್ತಿ ಹೇಳುತ್ತದೆ.
ಅವರು ತೋಮಾಸನ ಸುವಾರ್ತಾ ಘಟನೆಯನ್ನು ನೆನಪಿಸಿಕೊಂಡರು. ಪಾಸ್ಖ ಹಬ್ಬವು ಎಂಟು ದಿನಗಳ ನಂತರ ಪುನರುತ್ಥಾನಗೊಂಡ ಕ್ರಿಸ್ತನನ್ನು ತೋಮಾಸನು ಭೇಟಿಯಾಗುವ ಘಟನೆ ಸಮುದಾಯದೊಳಗೆ ನಡೆಯುತ್ತದೆ ಎಂದು ಅವರು ಗಮನಿಸಿದರು ಇದು ಇಂದಿನ ದಿನಗಳಲ್ಲಿ ಭಕ್ತರು ಕ್ರಿಸ್ತನನ್ನು ಎಲ್ಲೆಲ್ಲಿ ಹುಡುಕಬೇಕೆಂಬುದನ್ನು ತೋರಿಸುತ್ತದೆ.
ಈ ದೃಶ್ಯವು ನಮಗೆ ಪುನರುತ್ಥಾನಗೊಂಡ ಯೇಸುವಿನೊಂದಿಗೆ ನಮ್ಮ ವೈಯಕ್ತಿಕ ಭೇಟಿಯ ಬಗ್ಗೆ ಚಿಂತಿಸಲು ಆಹ್ವಾನಿಸುತ್ತದೆ,ಎಂದು ಜಗದ್ಗುರುಗಳು ಹೇಳಿದರು. “ನಾವು ಅವರನ್ನು ಎಲ್ಲೆಲ್ಲಿ ಕಂಡುಕೊಳ್ಳಬಹುದು? ನಾವು ಅವರನ್ನು ಹೇಗೆ ಗುರುತಿಸಬಹುದು? ನಾವು ಹೇಗೆ ನಂಬಬಹುದು?” ಎಂದು ಭಕ್ತರು ತಮ್ಮನ್ನು ತಾವೇ ಕೇಳಿಕೊಳ್ಳುವಂತೆ ಅವರು ಆಹ್ವಾನಿಸಿದರು.ಜಗದ್ಗುರು XIVನೇ ಲಿಯೋರವರು ನಂಬಿಕೆ ಯಾವಾಗಲೂ ತಕ್ಷಣವಾಗಿಯೂ ಸುಲಭವೂ ಆಗಿರುವುದಿಲ್ಲ ಎಂದು ವಿವರಿಸಿದರು. ತೋಮಾಸನಿಗೆ ಇದು ಸುಲಭವಿರಲಿಲ್ಲ ನಮಗೂ ಸಹ ಸುಲಭವಲ್ಲ, ಎಂದು ಅವರು ಹೇಳಿದರು ಮತ್ತು ನಂಬಿಕೆಗೆ ಪೋಷಣೆ ಮತ್ತು ಬೆಂಬಲ ಅಗತ್ಯವಿದೆ ಎಂದು ಸೇರಿಸಿದರು.
ಈ ಕಾರಣಕ್ಕಾಗಿ, ಧರ್ಮ ಸಭೆ ಪ್ರತಿಯೊಂದು ಭಾನುವಾರ, “ಎಂಟನೇ ದಿನ”ದಂದು, ಬಲಿಪೂಜೆಯ ಆಚರಣೆಗೆ ಭಕ್ತರನ್ನು ಕೂಡಿಸಿಕೊಳ್ಳಲು ಆಹ್ವಾನಿಸುತ್ತದೆ ಎಂದು ಅವರು ಮುಂದುವರೆಸಿದರು. “ಪವಿತ್ರ ಬಲಿಪೂಜೆಯ ವೇಳೆ, ನಾವು ಯೇಸುವಿನ ವಾಕ್ಯಗಳನ್ನು ಕೇಳುತ್ತೇವೆ, ನಾವು ಪ್ರಾರ್ಥಿಸುತ್ತೇವೆ, ನಮ್ಮ ನಂಬಿಕೆಯನ್ನು ಪ್ರಕಟಿಸುತ್ತೇವೆ. ಅವರ ದೇಹ ಮತ್ತು ರಕ್ತವು ನಮ್ಮನ್ನು ಪೋಷಿಸುತ್ತದೆ, ಇದರಿಂದ ನಾವು ಸಹ ಅವರ ಪುನರುತ್ಥಾನದ ಸಾಕ್ಷಿಗಳಾಗುತ್ತೇವೆ” ಎಂದರು.
ಜಗದ್ಗುರಗಳು ನಂತರ ಭಾನುವಾರದ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸುವುದು ಅತ್ಯಾವಶ್ಯಕ ಎಂದು ಒತ್ತಿ ಹೇಳಿದರು, ಏಕೆಂದರೆ “ಭಾನುವಾರದ ಬಲಿ ಪೂಜೆಯು ಕ್ರೈಸ್ತ ಜೀವನಕ್ಕೆ ಅನಿವಾರ್ಯವಾಗಿದೆ.” ಎಂದರು
ಆದಿನ ಧರ್ಮ ಸಭೆಯ ಸಾಕ್ಷ್ಯದತ್ತ ಮುಖಮಾಡಿ, ಜಗದ್ಗುರುಗಳು ಬಲಿ ಪೂಜೆಯ ಆಚರಣೆಯನ್ನು ಬಿಟ್ಟುಬಿಡುವುದಕ್ಕಿಂತ ಮರಣವನ್ನು ಆಯ್ದುಕೊಂಡ ಅಬಿಟೆನೆ ಮಾರ್ತ್ಯರನ್ನು ಉದಾಹರಿಸಿದರು. ಅವರು ಪ್ರಭುವಿನ ದಿನವನ್ನು ಆಚರಿಸದೆ ಬದುಕಲು ಸಾಧ್ಯವಿಲ್ಲವೆಂದು ಉತ್ತರಿಸಿದರು,ಎಂದು ಹೇಳಿದರು.
ಬಲಿಪೂಜೆಯಲ್ಲಿ ನಂಬಿಕೆ ಬೆಳೆಯುತ್ತದೆ ಮತ್ತು ಬಲವಾಗುತ್ತದೆ, ಮತ್ತು ಅಲ್ಲಿ ಭಕ್ತರು ಒಂದೇ ದೇಹದ ಸದಸ್ಯರಾಗಿ ಏಕೀಕರಿಸಲ್ಪಡುತ್ತಾರೆ. “ಅಲ್ಲಿಯೇ ನಮ್ಮ ಪ್ರಯತ್ನಗಳು, ಸೀಮಿತವಾಗಿದ್ದರೂ, ದೇವರ ಕೃಪೆಯಿಂದ ಏಕೀಕರಿಸಲ್ಪಟ್ಟು, ಎಲ್ಲಾ ಮಾನವಕುಲವನ್ನು ಒಳಗೊಂಡಿರುವ ಮಹಾ ರಕ್ಷಣಾ ಯೋಜನೆಯ ನೆರವೇರಿಕೆಗೆ ಸಹಕಾರಿಯಾಗುತ್ತವೆ ಜಗದ್ಗುರುಗಳು ವಿವರಿಸಿದರು.
ಅವರು ಪವಿತ್ರ ಬಲಿಪೂಜೆಯ ಮಿಷನರಿ ಆಯಾಮವನ್ನೂ ಒತ್ತಿ ಹೇಳಿದರು, ಏಕೆಂದರೆ “ಮಾಸ್” ಎಂಬ ಪದವೇ “ಕಳುಹಿಸುವುದು” ಎಂಬ ಅರ್ಥವನ್ನು ಸೂಚಿಸುತ್ತದೆ. ಕ್ರೈಸ್ತರು ತಮ್ಮ ದಿನನಿತ್ಯದ ಜೀವನದಲ್ಲಿ ಪಡೆದದ್ದನ್ನು ಹಂಚಿಕೊಳ್ಳಲು, “ಪ್ರೀತಿಯ ಸಾಕ್ಷಿಗಳಾಗಿಯೂ ಮತ್ತು ಸಮಾಧಾನದ ಸಂದೇಶವಾಹಕರಾಗಿಯೂ” ಬದುಕಲು ಕರೆಯಲ್ಪಟ್ಟಿದ್ದಾರೆ.
“ಶಾಂತಿಯ ಅಗತ್ಯತೆಯು ಅತ್ಯಂತ ಹೆಚ್ಚಿರುವ ಈ ಲೋಕದಲ್ಲಿ, ಪುನರುತ್ಥಾನಗೊಂಡ ಪ್ರಭುವಿನೊಂದಿಗೆ ನಮ್ಮ ಬಲಿಪೂಜೆಯ ಭೇಟಿಯಲ್ಲಿ ಸ್ಥಿರವಾಗಿಯೂ ನಿಷ್ಠಾವಂತರಾಗಿಯೂ ಇರಲು ಇದು ನಮ್ಮನ್ನು ಇನ್ನಷ್ಟು ಕರೆಯುತ್ತದೆ.” ಎಂದು ತಮ್ಮ ಭಾಷಣದ ಕೊನೆಯಲ್ಲಿ, ಜಗದ್ಗುರು ಲಿಯೋರವರು ಹೇಳಿದರು.
