ಹುಡುಕಿ

SCATTIDELGIORNO: Pope Leo XIV visits Algeria

ಅಲ್ಜೀರಿಯಾದಲ್ಲಿ ಜಗದ್ಗುರುಗಳು: “ಭವಿಷ್ಯವು ಶಾಂತಿಯ ಪುರುಷರು ಮತ್ತು ಮಹಿಳೆಯರದ್ದಾಗಿದೆ.”

ಅಲ್ಜೀರಿಯಾದಲ್ಲಿ ತನ್ನ ಮೊದಲ ಭಾಷಣದಲ್ಲಿ, ಜಗದ್ಗುರು XIVನೇ ಲಿಯೋರವರು ದೇವರು ಎಲ್ಲಾ ರಾಷ್ಟ್ರಗಳಿಗೆ ಶಾಂತಿಯನ್ನು ಬಯಸುತ್ತಾನರೆ ಎಂದು ಪುನರುಚ್ಚರಿಸಿ ಆ ಶಾಂತಿ ನ್ಯಾಯ ಮತ್ತು ಗೌರವದ ಅಭಿವ್ಯಕ್ತಿ ಎಂದು ಹೇಳಿ ಅಲ್ಜೀರಿಯಾದ ಜನರು ತಮ್ಮ ಪರಂಪರೆಯಲ್ಲಿ ದೇವರನ್ನು ಕೇಂದ್ರ ಸ್ಥಾನದಲ್ಲೇ ಇರಿಸಿಕೊಳ್ಳುವುದನ್ನು ಮುಂದುವರಿಸಬೇಕು ಎಂದು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಅಲ್ಜೀರಿಯಾದಲ್ಲಿ ನಡೆದ ತಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಜಗದ್ಗುರು XIVನೇ ಲಿಯೋರವರು 1954–1962ರ ಅಲ್ಜೀರಿಯಾದ ಸ್ವಾತಂತ್ರ್ಯ ಸಮರದಲ್ಲಿ ಜೀವ ಕಳೆದುಕೊಂಡವರನ್ನು ಸ್ಮರಿಸುವ “ಮಾಕಾಂ ಎಶಾಹೀದ್” (ಶಹೀದರ ಸ್ಮಾರಕ) ವನ್ನು ಭೇಟಿ ನೀಡಿದರು।

ಸ್ಮಾರಕದ ಬಳಿ ಹೂವಿನ ಹಾರವನ್ನು ಅರ್ಪಿಸಿದ ನಂತರ, ಜಗದ್ಗುರುಗಳು ಮೊದಲ ಮಾತುಗಳು ಧನ್ಯವಾದಗಳಾಗಿದ್ದು, ಸಂತ ಅಗಸ್ಟಿನ್ ರವರ ಆಧ್ಯಾತ್ಮಿಕ ಮಗನಾಗಿ ಈಗಾಗಲೇ ಎರಡು ಬಾರಿ ಭೇಟಿ ನೀಡಿದ ನಂತರ, ಮತ್ತೊಮ್ಮೆ ಅಲ್ಜೀರಿಯಾಕ್ಕೆ ಬರಲು ಅವಕಾಶ ದೊರೆತಿದೆ ಎಂದು ಹೇಳಿದರು.

ಜಗದ್ಗುರುಗಳು “ಈ ಭೇಟಿಯ ಮೂಲಕ ನಮ್ಮ ಹೃದಯಗಳನ್ನು ಇನ್ನಷ್ಟು ಸಮೀಪಕ್ಕೆ ತರುವ ಸ್ನೇಹದ ಬಂಧಗಳನ್ನು ನವೀಕರಿಸಲು ಸಾಧ್ಯವಾಗಿರುವುದಕ್ಕೆ ಸಂತೋಷಪಡುವ ಸಹೋದರನಾಗಿ ನಾನು ನಿಮ್ಮ ನಡುವೆ ನಿಂತಿದ್ದೇನೆ” ಎಂದು ಒತ್ತಿಹೇಳಿದರು.

ಸ್ಮಾರಕದ ಮುಂದೆ ಇದ್ದ ಸುಮಾರು 2,000 ಜನರನ್ನು ನೋಡುತ್ತಾ, “ಬಲಿಷ್ಠ ಮತ್ತು ಯುವ ಜನಾಂಗದ ಮುಖವನ್ನು ನಾನು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು. ಅಲ್ಜೀರಿಯಾದ ಜನರ ಹೃದಯದಲ್ಲಿ ಸ್ನೇಹ, ನಂಬಿಕೆ ಮತ್ತು ಐಕ್ಯತೆ ಇವೆ, ಮತ್ತು ಅವು ಕೇವಲ ಪದಗಳು ಅಲ್ಲ, ನಿಮ್ಮ ಒಟ್ಟಿನ ಜೀವನಕ್ಕೆ ಉಷ್ಣತೆ ಮತ್ತು ಶಕ್ತಿಯನ್ನು ನೀಡುವ ಮೌಲ್ಯಗಳು ಎಂದು ಅವರು ಹೇಳಿದರು।

ನಿಜವಾದ ಸ್ವಾತಂತ್ರ್ಯ ಕ್ಷಮೆಯಿಂದ ಬರುತ್ತದೆ

ದೇಶದ ದೀರ್ಘ ಇತಿಹಾಸವನ್ನು ನೆನೆದು, ಜಗದ್ಗುರು ಲಿಯೋರವರು ಅದನ್ನು ಪರಂಪರೆಯಲ್ಲಿ ಸಮೃದ್ಧವಾಗಿದ್ದರೂ, ಹಿಂಸಾಚಾರದ ಅವಧಿಗಳಿಂದ ಗುರುತಿಸಲ್ಪಟ್ಟ ನೋವಿನ ಇತಿಹಾಸವೆಂದು ವಿವರಿಸಿದರು.ನಿಮ್ಮಲ್ಲಿ ಕಾಣುವ ಉನ್ನತ ಮನೋಭಾವದ ಕಾರಣದಿಂದಲೇ, ಅವರು ಹೇಳಿದರು, “ನೀವು ಧೈರ್ಯ ಮತ್ತು ನಿಷ್ಠೆಯೊಂದಿಗೆ ಈ ಸಂಕಷ್ಟಗಳನ್ನು ಜಯಿಸಿದ್ದೀರಿ”ಎಂದು.

ಈ ಸ್ಮಾರಕಕ್ಕೆ ಭೇಟಿ ನೀಡುವುದು ಅಲ್ಜೀರಿಯಾದ ಇತಿಹಾಸಕ್ಕೆ ಮತ್ತು ಸ್ವಾತಂತ್ರ್ಯ, ಗೌರವ ಮತ್ತು ಸ್ವಾಯತ್ತತೆಗಾಗಿ ಹೋರಾಡಿದವರ ಆತ್ಮಸ್ಫೂರ್ತಿಗೆ ಗೌರವ ಸಲ್ಲಿಸುವ ಕ್ಷಣವಾಗಿದೆ ಈ ಹಿನ್ನೆಲೆಯಲ್ಲಿ, ಜಗದ್ಗುರುಗಳು ಎಲ್ಲರನ್ನು “ಪ್ರತಿ ರಾಷ್ಟ್ರಕ್ಕೂ ದೇವರು ಶಾಂತಿಯನ್ನು ಬಯಸುತ್ತಾನೆ ಎಂಬುದನ್ನು ನೆನಪಿಡಿ” ಎಂದು ಪ್ರೋತ್ಸಾಹಿಸಿದರು ಅದು ಕೇವಲ ಸಂಘರ್ಷಗಳಿಲ್ಲದ ಶಾಂತಿ ಮಾತ್ರವಲ್ಲ, ನ್ಯಾಯ ಮತ್ತು ಗೌರವದ ಅಭಿವ್ಯಕ್ತಿ ಆಗಿರಬೇಕು.

ಈ ರೀತಿಯ ಶಾಂತಿ ಕ್ಷಮೆಯ ಮೂಲಕವೇ ಸಾಧ್ಯವಾಗುತ್ತದೆ, ಅದು ಎಲ್ಲರಿಗೂ ಸಮಾಧಾನಗೊಂಡ ಮನಸ್ಸಿನಿಂದ ಭವಿಷ್ಯವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ನಿಜವಾದ ಮುಕ್ತಿಯ ಹೋರಾಟವು ನಮ್ಮ ಹೃದಯಗಳಲ್ಲಿ ಶಾಂತಿ ಸಂಪೂರ್ಣವಾಗಿ ನೆಲೆಗೊಂಡಾಗ ಮಾತ್ರ ಅಂತಿಮವಾಗಿ ಗೆಲ್ಲುತ್ತದೆ ಎಂದು ಅವರು ಹೇಳಿದರು.

ಜಗದ್ಗುರುಗಳು ಕ್ಷಮೆ ಎಷ್ಟು ಕಷ್ಟವಾಗಬಹುದು ಎಂಬುದನ್ನು ಒಪ್ಪಿಕೊಂಡರು. ಆದರೂ, ಜಗತ್ತಿನಲ್ಲಿ ಹೆಚ್ಚುತ್ತಿರುವ ಸಂಘರ್ಷಗಳ ನಡುವೆ, ನಾವು ತಲೆಮಾರಿನಿಂದ ತಲೆಮಾರಿಗೆ ದ್ವೇಷದ ಮೇಲೆ ಮತ್ತಷ್ಟು ದ್ವೇಷವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿಹೇಳಿದರು.

“ಭವಿಷ್ಯವು ಶಾಂತಿಯ ಪುರುಷರು ಮತ್ತು ಮಹಿಳೆಯರದ್ದಾಗಿದೆ,” ಎಂದು ಅವರು ಹೇಳಿದರು. ಕೊನೆಗೆ ನ್ಯಾಯವು ಅನ್ಯಾಯವನ್ನು ಜಯಿಸುತ್ತದೆ, ಮತ್ತು ಹಿಂಸಾಚಾರವು ಅಂತಿಮ ಮಾತಾಗುವುದಿಲ್ಲ ಎಂದು ಹೇಳಿದರು.

ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಧಿಗಳ ಭೂಮಿ

ವಿಭಿನ್ನ ಸಂಸ್ಕೃತಿಗಳು, ಧರ್ಮಗಳು ಮತ್ತು ಜೀವನ ಶೈಲಿಗಳು ಇರುವ ದೇಶದಲ್ಲಿ, ಪರಸ್ಪರ ಗೌರವದ ಮಹತ್ವವನ್ನು ಜಗದ್ಗುರು ಲಿಯೋರವರು ಒತ್ತಿಹೇಳಿದರು. ಅಲ್ಜೀರಿಯಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರತೆ ಮತ್ತು ಸಂವಾದಕ್ಕೆ ತನ್ನ ಕೊಡುಗೆಯನ್ನು ಮುಂದುವರಿಸಲಿ ಎಂದು ಅವರು ಆಶಿಸಿದರು.

ಪ್ರತಿ ದೇಶದಂತೆಯೇ, ಅಲ್ಜೀರಿಯಾದಿಗೂ ತನ್ನದೇ ಆದ ಇತಿಹಾಸ, ಸಂಸ್ಕೃತಿ ಮತ್ತು ನಂಬಿಕೆ ಇದೆ. “ದೇವರ ಮೇಲಿನ ನಂಬಿಕೆ ನಿಮ್ಮ ಪರಂಪರೆಯಲ್ಲಿ ಕೇಂದ್ರ ಸ್ಥಾನ ಹೊಂದಿದೆ,” ಎಂದು ಜಗದ್ಗುರುಗಳು ಹೇಳಿದರು, ಅದು ಪ್ರತಿ ವ್ಯಕ್ತಿಯ ಜೀವನವನ್ನು ಪ್ರಕಾಶಮಾನಗೊಳಿಸುತ್ತದೆ, ಕುಟುಂಬಗಳನ್ನು ಬಲಪಡಿಸುತ್ತದೆ ಮತ್ತು ಸಹೋದರತ್ವದ ಭಾವನೆಯನ್ನು ಉತ್ತೇಜಿಸುತ್ತದೆ.

ದೇವರ ಮೇಲಿನ ಪ್ರೀತಿ ಇರುವ ದೇಶವೇ ನಿಜವಾದ ಸಂಪತ್ತು ಹೊಂದಿದ ದೇಶವಾಗಿದ್ದು, ಇದು ಅಲ್ಜೀರಿಯಾದ ಜನರು ತಮ್ಮ ಅಮೂಲ್ಯ ಸಂಪತ್ತಾಗಿ ನೋಡುತ್ತಾರೆ ಎಂದು ಜಗದ್ಗುರುಗಳು ಹೇಳಿದರು.

ನಮ್ಮ ಜಗತ್ತಿಗೆ ಇಂತಹ ವಿಶ್ವಾಸಿಗಳು ಅಗತ್ಯವಿದೆ—ನ್ಯಾಯ ಮತ್ತು ಏಕತೆಗೆ ಹಾತೊರೆಯುವ ವಿಶ್ವಾಸದ ಪುರುಷರು ಮತ್ತು ಮಹಿಳೆಯರು, ಎಂದು ಅವರು ಹೇಳಿದರು. ಮಾನವಕುಲವು ಸಹೋದರತ್ವ ಮತ್ತು ಸೌಹಾರ್ದತೆಯನ್ನು ಹುಡುಕುತ್ತಿರುವ ಈ ಸಂದರ್ಭದಲ್ಲಿ, ನಾವು ಸದಾ ಸಹೋದರರು ಮತ್ತು ಸಹೋದರಿಯರಾಗಿ, ಒಂದೇ ದೇವರ ಮಕ್ಕಳೆಂದು ದೃಢವಾಗಿ ಘೋಷಿಸುವುದು ನಮಗೆ ಮಹಾನ್ ವರ ಮತ್ತು ಪವಿತ್ರ ಕರ್ತವ್ಯ ಎಂದು ಅವರು ಹೇಳಿದರು।

ಜಗದ್ಗುರುಗಳು 2,000 ವರ್ಷಗಳ ಹಿಂದೆ ಯೇಸು ಕೇಳಿದ “ಎಲ್ಲರಿಗೂ ಪ್ರಮುಖವಾದ ಪ್ರಶ್ನೆ”ಯನ್ನು ಮುಂದಿಟ್ಟರು: “ಒಬ್ಬನು ಇಡೀ ಲೋಕವನ್ನು ಗಳಿಸಿಕೊಂಡರೂ ತನ್ನ ಆತ್ಮವನ್ನು ಕಳೆದುಕೊಂಡರೆ ಅವನಿಗೆ ಏನು ಲಾಭ?” (ಮತ್ತಾಯ 16:26) ಎಂದು.

ಸ್ಮಾರಕದಲ್ಲಿ ಗೌರವಿಸಲ್ಪಟ್ಟವರು ಈ ಪ್ರಶ್ನೆಗೆ ಈಗಾಗಲೇ ಉತ್ತರ ನೀಡಿದ್ದಾರೆ ಎಂದು ಜಗದ್ಗುರುಗಳು ಹೇಳಿದರು. ಅವರು ತಮ್ಮ ಜೀವಗಳನ್ನು ಕಳೆದುಕೊಂಡರೂ, ತಮ್ಮ ಜನರ ಮೇಲಿನ ಪ್ರೀತಿಗಾಗಿ ಅದನ್ನು ಅರ್ಪಿಸಿದ್ದಾರೆ ಎಂದು ಹೇಳಿದರು.

ಅವರ ಉದಾಹರಣೆ ಅಲ್ಜೀರಿಯಾದ ಜನರಿಗೂ ಮತ್ತು ಎಲ್ಲರಿಗೂ ತಮ್ಮ ಜೀವನಯಾತ್ರೆಯಲ್ಲಿ ಶಕ್ತಿಯನ್ನು ನೀಡಲಿ ಎಂದು ಅವರು ಪ್ರಾರ್ಥಿಸಿದರು, ಏಕೆಂದರೆ ನಿಜವಾದ ಸ್ವಾತಂತ್ರ್ಯವನ್ನು ಕೇವಲ ಪರಂಪರೆಯಿಂದ ಪಡೆಯುವುದಲ್ಲ ಅದನ್ನು ಪ್ರತಿದಿನ ಹೊಸದಾಗಿ ಆಯ್ಕೆ ಮಾಡಬೇಕು ಎಂದು ಹೇಳಿದರು.

ಅವರು ಪರ್ವತದ ಮೇಲಿನ ಪ್ರಭೋಧನೆಯ ಮಾತುಗಳನ್ನು ಪುನರುಚ್ಚರಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

“ಆತ್ಮದಲ್ಲಿ ದರಿದ್ರರಾದವರು ಧನ್ಯರು, ಏಕೆಂದರೆ ಸ್ವರ್ಗರಾಜ್ಯವು ಅವರದ್ದಾಗಿದೆ. ಶೋಕಿಸುವವರು ಧನ್ಯರು, ಏಕೆಂದರೆ  ಅವರು ಸಾಂತ್ವನ ಪಡೆಯುವರು. ವಿನಯಿಗಳು ಧನ್ಯರು, ಏಕೆಂದರೆ  ಅವರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವರು. ನೀತಿಗಾಗಿ ಹಸಿವು ಮತ್ತು ದಾಹ ಹೊಂದಿರುವವರು ಧನ್ಯರು, ಏಕೆಂದರೆ  ಅವರು ತೃಪ್ತಿಗೊಳ್ಳುವರು. ಕರುಣಾಳುಗಳು ಧನ್ಯರು, ಏಕೆಂದರೆ  ಅವರಿಗೆ ಕರುಣೆ ದೊರೆಯುವುದು. ಹೃದಯದಲ್ಲಿ ಶುದ್ಧರಾದವರು ಧನ್ಯರು, ಏಕೆಂದರೆ ಅವರು ದೇವರನ್ನು ಕಾಣುವರು. ಶಾಂತಿಯನ್ನು ಸ್ಥಾಪಿಸುವವರು ಧನ್ಯರು, ಏಕೆಂದರೆ ಅವರು ದೇವರ ಮಕ್ಕಳಾಗುತ್ತಾರೆ। ನೀತಿಯ ನಿಮಿತ್ತ ಹಿಂಸೆ ಅನುಭವಿಸುವವರು ಧನ್ಯರು; ಏಕೆಂದರೆ ಸ್ವರ್ಗರಾಜ್ಯವು ಅವರದ್ದಾಗಿದೆ” (ಮತ್ತಾಯ 5:3–10).

13 ಏಪ್ರಿಲ್ 2026, 17:53