ಜಗದ್ಗುರು ಲಿಯೋರವರು, ಧರ್ಮ ಸಭೆ ಮತ್ತು ಜಗತ್ತಿಗಾಗಿ ಫ್ರಾನ್ಸಿಸ್ ರವರ ಉದಾರತೆ ಮತ್ತು ಕರುಣೆಯ ಪರಂಪರೆಯನ್ನು ಸ್ಮರಿಸುತ್ತಾರೆ.
ವ್ಯಾಟಿಕನ್ ವರದಿ
ಅವರ ನಿಧನದ ಈ ಮೊದಲ ವಾರ್ಷಿಕೋತ್ಸವದಂದು, ನಾನು ಜಗದ್ಗುರು ಫ್ರಾನ್ಸಿಸ್ ರವರನ್ನು ಸ್ಮರಿಸಲು ಬಯಸುತ್ತೇನೆ ಅವರು ಬಹಳಷ್ಟು ಬಿಟ್ಟುಹೋಗಿದ್ದಾರೆ, ತಮ್ಮ ಜೀವನ, ಸಾಕ್ಷಿ, ಮಾತುಗಳು ಮತ್ತು ಕಾರ್ಯಗಳ ಮೂಲಕ ಧರ್ಮ ಸಭೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರು ಬಡವರತ್ತ, ಅಲ್ಪರತ್ತ, ರೋಗಿಗಳತ್ತ, ಮಕ್ಕಳತ್ತ ಮತ್ತು ವೃದ್ಧರತ್ತ ನಿಜವಾದ ಸಮೀಪತೆಯನ್ನು ಬದುಕುವ ಮೂಲಕ ಇದನ್ನು ನೆರವೇರಿಸಿದರು.
ಆಫ್ರಿಕಾ ಪ್ರೇಷಿತರ ಪ್ರವಾಸದ ಅಂತಿಮ ಹಂತವಾಗಿ ಅಂಗೋಲಾದಿಂದ ಈಕ್ವಟೋರಿಯಲ್ ಗಿನಿಯಾಗೆ ಪ್ರಯಾಣಿಸುತ್ತಿದ್ದ ವೇಳೆ, ಜಗದ್ಗುರು XIVನೇ ಲಿಯೋರವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಮ್ಮ ಪೂರ್ವಸ್ಥರಾದ ಜಗದ್ಗುರು ಫ್ರಾನ್ಸಿಸ್ ರವರ ಕುರಿತು ಈ ಮಾತುಗಳನ್ನು ಹೇಳಿದರು.
ಈ ವಿಮಾನ ಪ್ರಯಾಣವು 2025ರ ಏಪ್ರಿಲ್ 21ರ ಬೆಳಗಿನ ಜಾವ ನಿಧನರಾದ ಜಗದ್ಗುರು ಫ್ರಾನ್ಸಿಸ್ ರವರ ಮೊದಲ ವಾರ್ಷಿಕೋತ್ಸವದಂದು ನಡೆಯಿತು.
ಈ ವಾರ್ಷಿಕೋತ್ಸವವನ್ನು ಜಗತ್ತಿನಾದ್ಯಂತ ಧರ್ಮ ಸಭೆ ಆಚರಿಸುತ್ತಿದೆ.
ಸಹೋದರತ್ವದ ಪ್ರೋತ್ಸಾಹ
ಜಗದ್ಗುರು ಲಿಯೋರವರು ದಿವಂಗತ ಜಗದ್ಗುರು ಫ್ರಾನ್ಸಿಸ್ ರವರ ಕುರಿತು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದ ಮಾತುಗಳನ್ನು ವ್ಯಕ್ತಪಡಿಸಿದರು ಅವರು “ತಮ್ಮ ಸಾಕ್ಷಿ ಮತ್ತು ಮಾತುಗಳ ಮೂಲಕ ಧರ್ಮ ಸಭೆಗೆ ಬಹಳಷ್ಟು ಬಿಟ್ಟುಕೊಟ್ಟವರು ಎಂದು ಹೇಳಿದರು.
ಜಾರ್ಜ್ ಮಾರಿಯೋ ಬೆರ್ಗೊಗ್ಲಿಯೋ ರವರ ಅನೇಕ ವೈಶಿಷ್ಟ್ಯಗಳನ್ನು ಸ್ಮರಿಸುತ್ತಾ, ಜಗದ್ಗುರು XIVನೇ ಲಿಯೋರವರು ಮೊದಲಾಗಿ “ಸಾರ್ವತ್ರಿಕ ಸಹೋದರತ್ವ”ಕ್ಕಾಗಿ ಅವರ ನಿರಂತರ ಪ್ರೇರಣೆಯನ್ನು ಉಲ್ಲೇಖಿಸಿದರು.
ಜಗದ್ಗುರು ಫ್ರಾನ್ಸಿಸ್ ನಿಜವಾಗಿ ಎಲ್ಲಾ ಪುರುಷರು ಮತ್ತು ಮಹಿಳೆಯರತ್ತ ನಿಜವಾದ ಗೌರವವನ್ನು ಉತ್ತೇಜಿಸಲು, ನಾವು ಎಲ್ಲರೂ ಸಹೋದರರು ಮತ್ತು ಸಹೋದರಿಯರಾಗಿ ಬದುಕುವ ಸಹೋದರತ್ವದ ಆತ್ಮವನ್ನು ಬೆಳೆಸಲು, ಮತ್ತು ಸುವಾರ್ತೆಯಲ್ಲಿ ಕಂಡುಬರುವ ಸಂದೇಶವನ್ನು ಹೇಗೆ ಬದುಕಬೇಕು ಎಂಬುದನ್ನು ಹುಡುಕಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಕರುಣೆಯ ಸಂದೇಶ
ಅವರು ಜಗದ್ಗುರು ಫ್ರಾನ್ಸಿಸ್ ರವರ ಕರುಣೆಯ ಸಂದೇಶವನ್ನೂ ಸ್ಮರಿಸಿದರು. 2013ರ ಮಾರ್ಚ್ 13ರಂದು ಆಯ್ಕೆಯಾದ ನಂತರದ ಭಾನುವಾರದ ಮೊದಲ ತ್ರಿಕಾಲ ಪ್ರಾರ್ಥನೆಯಿಂದಲೇ ಈ ಸಂದೇಶವನ್ನು ಅರ್ಜೆಂಟೀನಾದ ಜಗದ್ಗುರುಗಳು ವ್ಯಕ್ತಪಡಿಸಿದ್ದರು.
“ಅವರು ಮೊದಲ ತ್ರಿಕಾಲ ಪ್ರಾರ್ಥನೆಯ ಕರುಣೆಯ ಬಗ್ಗೆ ಮಾತನಾಡಿದರು ಜೊತೆಗೆ 2013ರ ಮಾರ್ಚ್ 17ರಂದು ತಮ್ಮ ಜಗದ್ಗುರುಗಳ ಅಧಿಕಾರದ ಉದ್ಘಾಟನೆಯ ಮೊದಲು ಆಚರಿಸಿದ ಪವಿತ್ರ ಬಲಿಪೂಜೆಯಲ್ಲಿಯೂ ಅದನ್ನು ಒತ್ತಿಹೇಳಿದರು.”
ವ್ಯಾಟಿಕನ್‌ನ ಸಂತ ಆನ್ನೆ ಧರ್ಮ ಕೇಂದ್ರದಲ್ಲಿ ಜಗದ್ಗುರು ಫ್ರಾನ್ಸಿಸ್ ರವರು “ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಮಹಿಳೆಯ ಕುರಿತು ಉಪದೇಶಿಸಿ,” “ದೇವರ ಕರುಣೆಯ ಹೃದಯದಿಂದ ಈ ಮಹತ್ತರ ಪ್ರೀತಿ, ಕ್ಷಮೆ ಮತ್ತು ಪ್ರಭುವಿನ ಉದಾರ ಕರುಣೆಯ ಅಭಿವ್ಯಕ್ತಿಯಿಂದ ಮಾತನಾಡಿದರು ಎಂದು ಜಗದ್ಗುರು ಲಿಯೋರವರು ನೆನಪಿಸಿದರು.
ಈ ಆತ್ಮವನ್ನು ಸಂಪೂರ್ಣ ಧರ್ಮ ಸಭೆಯೊಂದಿಗೆ ಹಂಚಿಕೊಳ್ಳಲು” ಜಗದ್ಗುರು ಫ್ರಾನ್ಸಿಸ್ ರವರು ಬಯಸಿದರು ಎಂದು ಜಗದ್ಗುರು ಲಿಯೋರವರು ಮುಂದುವರಿಸಿದರು ಅಸಾಧಾರಣ ಕರುಣೆಯ ಜೂಬಿಲಿಯ ಸುಂದರ ಆಚರಣೆಯನ್ನೂ ಅವರು ಸ್ಮರಿಸಿದರು.
ಎಲ್ಲರಿಗೂ ಒಂದು ವರ
ಅವರು ಈಗಾಗಲೇ ಪ್ರಭುವಿನ ಕರುಣೆಯನ್ನು ಅನುಭವಿಸುತ್ತಿರಲಿ ಎಂದು ನಾವು ಪ್ರಾರ್ಥಿಸೋಣ, ಎಂದು ಜಗದ್ಗುರು ಲಿಯೋರವರು ಅಂತಿಮವಾಗಿ ಹೇಳಿದರು. “ಫ್ರಾನ್ಸಿಸ್ ರವರ ಜೀವನವು ಸಂಪೂರ್ಣ ಧರ್ಮ ಸಭೆ ಮತ್ತು ಜಗತ್ತಿಗೆ ನೀಡಿದ ಮಹಾನ್ ವರಕ್ಕಾಗಿ ನಾವು ಪ್ರಭುವಿಗೆ ಕೃತಜ್ಞತೆ ಸಲ್ಲಿಸೋಣ ಎಂದು ಹೇಳಿದರು.
