ಲುವಾಂಡಾದ ಡಾಸ್ ಕೊಕ್ವಿರೋಸ್ ಕ್ರೀಡಾಂಗಣದಲ್ಲಿ ನಡೆದ ಯುವ ರ್ಯಾಲಿಯಲ್ಲಿ ಜಗದ್ಗುರು XVIನೇ ಬೆನೆಡಿಕ್ಟ್ ರವರಿಗೆ ನಿಷ್ಠಾವಂತರೊಬ್ಬರು ಶಿಲುಬೆಗೇರಿಸುವಿಕೆಯನ್ನು ಹಿಡಿದಿದ್ದಾರೆ. ಲುವಾಂಡಾದ ಡಾಸ್ ಕೊಕ್ವಿರೋಸ್ ಕ್ರೀಡಾಂಗಣದಲ್ಲಿ ನಡೆದ ಯುವ ರ್ಯಾಲಿಯಲ್ಲಿ ಜಗದ್ಗುರು XVIನೇ ಬೆನೆಡಿಕ್ಟ್ ರವರಿಗೆ ನಿಷ್ಠಾವಂತರೊಬ್ಬರು ಶಿಲುಬೆಗೇರಿಸುವಿಕೆಯನ್ನು ಹಿಡಿದಿದ್ದಾರೆ. 

“ಜಗದ್ಗುರು XIVನೇ ಲಿಯೋರವರು: ಆಫ್ರಿಕಾದ ಯಾತ್ರಿಕ”

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು ಜಗದ್ಗುರು XIVನೇ ಲಿಯೋರವರ ಮುಂದಿನ ಪ್ರೇಷಿತರ ಯಾತ್ರೆಯನ್ನು ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾಗೆ ಪರಿಚಯಿಸುತ್ತಿದ್ದಾರೆ. ಇತಿಹಾಸಗಳು, ಸಂಸ್ಕೃತಿಗಳು ಮತ್ತು ಪರಂಪರೆಗಳ ವೈವಿಧ್ಯ ಮತ್ತು ಸಮೃದ್ಧಿಯಿಂದ ಗುರುತಿಸಲ್ಪಟ್ಟ ಒಂದು ಯಾತ್ರಾಪಥ.

ವ್ಯಾಟಿಕನ್ ವರದಿ

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮ್ಯಾಟಿಯೊ ಬ್ರೂನಿರವರು, ಜಗದ್ಗುರು XIVನೇ ಲಿಯೋರವರು ಏಪ್ರಿಲ್ 13ರಿಂದ 23ರವರೆಗೆ ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾಗೆ ಕೈಗೊಳ್ಳಲಿರುವ ಪ್ರೇಷಿತರ ಯಾತ್ರೆಯ ವಿವರಗಳನ್ನು ವಿವರಿಸಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಹನ್ನೊಂದು ದಿನಗಳ ಅವಧಿಯಲ್ಲಿ ನಾಲ್ಕು ದೇಶಗಳನ್ನು ಒಳಗೊಂಡಿರುವ ಈ ಭೇಟಿ ಕುರಿತು ವಿವರಿಸಿದರು. ಈ ಯಾತ್ರೆಯಲ್ಲಿ ಇಂಗ್ಲಿಷ್, ಫ್ರೆಂಚ್, ಪೋಚು೯ಗೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಭಾಷಣಗಳು ನಡೆಯಲಿವೆ. ಶಾಂತಿ, ವಲಸೆ, ಪರಿಸರ, ಯುವಜನತೆ ಮತ್ತು ಕುಟುಂಬ ಎಂಬಂತಹ ವಿಷಯಗಳು ಪ್ರಮುಖವಾಗಿ ಗಮನಕ್ಕೆ ಬರಲಿವೆ. ವಿಶೇಷ ಭದ್ರತಾ ಕ್ರಮಗಳನ್ನು ಯೋಜಿಸಲಾಗಿಲ್ಲ ಎಂಬುದನ್ನೂ ಬ್ರೂನಿ ಉಲ್ಲೇಖಿಸಿದರು.

ಇದು ಜಗದ್ಗುರುಗಳ ಇದುವರೆಗೆ ನಡೆದ ದೀರ್ಘತಮ ಯಾತ್ರೆಯಾಗಿದ್ದು, ಅಲ್ಜೀರಿಯಾಗೆ ಅವರ ಮೊದಲ ಭೇಟಿ ಆಗಿದೆ. ಜೊತೆಗೆ, ಉಳಿದ ಮೂರು ದೇಶಗಳಿಗೆ ದಶಕಗಳ ಬಳಿಕ ನಡೆಯುತ್ತಿರುವ ಮೊದಲ ಜಗದ್ಗುರುಗಳ ಭೇಟಿ ಇದಾಗಿದೆ. ಈ ಯಾತ್ರೆಯ ಮಾರ್ಗವು ಸಂಸ್ಕೃತಿಯ ಮತ್ತು ಭಾಷೆಯ ವೈವಿಧ್ಯತೆಯ ಜೊತೆಗೆ, ಸಂಘರ್ಷ, ವಲಸೆ ಮತ್ತು ಧರ್ಮಾಂತರ ಸಹವಾಸದಂತಹ ಸಾಮಾಜಿಕ ಮತ್ತು ರಾಜಕೀಯ ಸವಾಲುಗಳಿಂದ ಗುರುತಿಸಲ್ಪಟ್ಟ ವಿವಿಧ ಪ್ರದೇಶಗಳನ್ನು ಒಳಗೊಂಡಿದೆ.

ಅಲ್ಜೀರಿಯಾದಲ್ಲಿ, ಈ ಭೇಟಿ ಖಂಡಿತವಾಗಿಯೂ ಸಂತ ಆಗಸ್ಟಿನ್ ರವರ ಪರಂಪರೆಯನ್ನೂ, ಉತ್ತರ ಆಫ್ರಿಕಾದಲ್ಲಿ ಕ್ರೈಸ್ತರ ಹಾಜರಾತಿಯನ್ನೂ ಉಲ್ಲೇಖಿಸುತ್ತದೆ. ಜೊತೆಗೆ ಮುಸ್ಲಿಂ ಜಗತ್ತಿನೊಂದಿಗೆ ಸಂವಾದ ಮತ್ತು ವಲಸೆ ಸಮಸ್ಯೆಗಳತ್ತ ಗಮನ ಹರಿಸಲಾಗುತ್ತದೆ.

ಕ್ಯಾಮರೂನ್‌ನಲ್ಲಿ, ಅದರ ಭೂಪ್ರದೇಶ, ಸಂಪನ್ಮೂಲಗಳು ಮತ್ತು ಪರಂಪರೆಗಳ ವೈವಿಧ್ಯ ಮತ್ತು ಸಮೃದ್ಧಿಯಿಂದ “ಸಣ್ಣ ಆಫ್ರಿಕಾ” ಎಂದು ಕರೆಯಲ್ಪಡುವ ಈ ದೇಶದಲ್ಲಿ, ಭಾಷಾ ವೈವಿಧ್ಯತೆಯನ್ನೂ ಒಳಗೊಂಡಂತೆ, ಶಾಂತಿ, ಸಹವಾಸ, ಯುವಜನತೆ ಮತ್ತು ಸಮಗ್ರ ಮಾನವ ಅಭಿವೃದ್ಧಿ ಕುರಿತ ವಿಷಯಗಳನ್ನು ಜಗದ್ಗುರುಗಳು ಉಲ್ಲೇಖಿಸುವ ನಿರೀಕ್ಷೆಯಿದೆ.

ಅಂಗೋಲಾದಲ್ಲಿ, ಯುವಜನರ ಪಾತ್ರ, ಪ್ರಕೃತಿ ಮತ್ತು ಮಾನವ ಸಂಪನ್ಮೂಲಗಳು, ಹಾಗೆಯೇ ಭ್ರಷ್ಟಾಚಾರ ಮತ್ತು ವಸಾಹತುಶಾಹಿಯ ಇತಿಹಾಸದ ಪರಿಣಾಮಗಳ ಮೇಲೆ ಗಮನ ಕೇಂದ್ರಿತವಾಗಿರುತ್ತದೆ.

ಇಕ್ವೇಟೋರಿಯಲ್ ಗಿನಿಯಾದಲ್ಲಿ, ಸಂಸ್ಕೃತಿ ಮತ್ತು ಶಿಕ್ಷಣದ ಸಂದರ್ಭಗಳ ಜೊತೆಗೆ, ಸಂಪನ್ಮೂಲ ಸಮೃದ್ಧ ಪ್ರದೇಶದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಧರ್ಮ ಸಭೆಯ ಪಾತ್ರಕ್ಕೂ ಗಮನ ನೀಡಲಾಗುತ್ತದೆ.

ಜಗದ್ಗುರುಗಳ ಪ್ರತಿನಿಧಿ ಮಂಡಳಿಯಲ್ಲಿ ವಿವಿಧ ಡಿಕಾಸ್ಟರಿಗಳ ಪ್ರತಿನಿಧಿಗಳು ಮತ್ತು ಆಫ್ರಿಕಾದ ಹಲವು ಕಾರ್ಡಿನಲ್‌ಗಳು ಸೇರಿರುತ್ತಾರೆ. ಸಂಪ್ರದಾಯದಂತೆ, ಯಾತ್ರೆಯ ಅಂತ್ಯದಲ್ಲಿ ಕೊನೆಯ ವಿಮಾನಯಾನದಲ್ಲಿ ಜಗದ್ಗುರುಗಳು ವಿಮಾನದಲ್ಲೇ ಪತ್ರಿಕಾಗೋಷ್ಠಿಯನ್ನು ನಡೆಸುವ ನಿರೀಕ್ಷೆಯಿದೆ.

09 ಏಪ್ರಿಲ್ 2026, 14:39