ಜಗದ್ಗುರು ಫ್ರಾನ್ಸಿಸ್ ರವರ ನಿಧನ ವಾರ್ಷಿಕೋತ್ಸವದಂದು ಕಾಸಾ ಸಾಂತಾ ಮಾರ್ತಾದಲ್ಲಿ ಪವಿತ್ರ ಬಲಿಪೂಜೆ.
ವ್ಯಾಟಿಕನ್ ವರದಿ
ಇದೀಗ ಅವರ ದೈನಂದಿನ ಜೀವನದ ಕ್ರಮವನ್ನು ಇಲ್ಲಿ ಕೆಲಸ, ಸಭೆಗಳು ಮತ್ತು ಎರಡನೇ ಮಹಡಿಯ ಸಣ್ಣ ಪ್ರಾರ್ಥನಾ ಮಂದಿರದಲ್ಲಿನ ಪ್ರಾರ್ಥನೆಗಳಿಂದ ರೂಪುಗೊಂಡದ್ದನ್ನು ವಿಸ್ತಾರವಾಗಿ ಚರ್ಚಿಸುವ ಸಮಯವಲ್ಲ. ಜಗದ್ಗುರು ಫ್ರಾನ್ಸಿಸ್ ರವರು ಈ ಮನೆಯನ್ನು ಪ್ರೀತಿಯಿಂದ ಕಾಣಲು ಆರಂಭಿಸಿದ್ದರು ಎಂಬುದು ನನಗೆ ಖಚಿತ ಹಾಗೆಯೇ ನಾವು ಸಹ ಅವರನ್ನು ಪ್ರೀತಿಯಿಂದ ಕಾಣಲು ಆರಂಭಿಸಿದ್ದೇವೆ. ಅವರ ನಿಧನದ ಈ ಮೊದಲ ವರ್ಷದ ಸ್ಮರಣೆಯಲ್ಲಿ ನಮ್ಮ ಪ್ರಾರ್ಥನೆಯ ಆತ್ಮವೂ ಇದೇ ಆಗಿದೆ. ಅವರು ಇನ್ನೂ ನಮ್ಮ ಹತ್ತಿರವೇ ಇದ್ದಾರೆ ಎಂಬ ಭಾವನೆ ನಮಗೆ ಇದೆ.”
ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವದಂದು ಕಾಸಾ ಸಾಂತಾ ಮಾರ್ತಾದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಅಧ್ಯಕ್ಷತೆ ವಹಿಸಿದ ಆರ್ಚ್‌ಬಿಷಪ್ ಲೂಯಿಜಿ ಟ್ರವಾಲಿನೊ ರವರು ಓದಿದ ಉಪದೇಶದಲ್ಲಿ ಕಾರ್ಡಿನಲ್ ಆಂಜೆಲೊ ಅಚೆರ್ಬಿರವರು ಈ ಮಾತುಗಳನ್ನು ವ್ಯಕ್ತಪಡಿಸಿದರು.
ತಮ್ಮ ಉಪದೇಶದ ಪಠ್ಯದಲ್ಲಿ, ದೈಹಿಕ ಸವಾಲುಗಳಿದ್ದರೂ ಸಹ ಜಗದ್ಗುರು ಫ್ರಾನ್ಸಿಸ್ ರವರು ಪೇತ್ರನ ಉತ್ತರಾಧಿಕಾರಿಯಾಗಿ ಅಪಾರ ಉತ್ಸಾಹ ಮತ್ತು ಚೈತನ್ಯವನ್ನು ಕಾಯ್ದುಕೊಂಡಿದ್ದರು ಎಂದು ಕಾರ್ಡಿನಲ್ ಅಚೆರ್ಬಿ ನೆನಪಿಸಿದರು.
ಅವರ ಜಗದ್ಗುರು ಪದವಿಯ ವರ್ಷಗಳಲ್ಲಿ ಅವರು ತೋರಿದ ಪ್ರೇಷಿತರ ಧೈರ್ಯವನ್ನು ಮಾತ್ರ ನಾನು ಸ್ಮರಿಸಬೇಕೆಂದು ಬಯಸುತ್ತೇನೆ ದೈಹಿಕ ಮಿತಿಗಳಿದ್ದರೂ ಸಹ, ತಮ್ಮ ಪ್ರೇಷಿತರ ಕಾರ್ಯವನ್ನು ಭೂಮಿಯ ಅತಿ ದೂರದ ಕೊನೆಯವರೆಗೆ ಸಾಗಿಸಲು ಅವರು ಸದಾ ಬಯಸಿದರು.
ನಾವು ನಮ್ಮ ಚಿಂತನೆಗಳನ್ನು ಸಂತ ಮೇರಿ ಮೇಜರ್ ಬಸಿಲಿಕಾಕ್ಕೆ ಕೂಡ ತಿರುಗಿಸೋಣ ಅಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ‘ಸಾಲುಸ್ ಪೊಪೂಲಿ ರೋಮಾನಿ’ ಎಂಬ ಮೇರಿಯ ಚಾಪೆಲ್ ಸಮೀಪದಲ್ಲಿ ಸಮಾಧಿಯಾಗಲು ಬಯಸಿದ್ದರು. ತಮ್ಮ ಪ್ರತಿಯೊಂದು ಪ್ರೇಷಿತರ ಪ್ರಯಾಣದ ಮೊದಲು ಮತ್ತು ನಂತರ ಅವರು ಅಲ್ಲಿ ತೆರಳುತ್ತಿದ್ದರು ಮತ್ತು ತಮ್ಮ ಜೀವನದ ಅಂತ್ಯದಲ್ಲಿ ಆ ಸ್ಥಳವು ಅವರನ್ನು ಖಂಡಿತವಾಗಿ ಸ್ವಾಗತಿಸಿತು,ಎಂದು ಆರ್ಚ್‌ಬಿಷಪ್ ಟ್ರವಾಲಿನೊ ಸೇರಿಸಿದರು.
ದಿವಂಗತ ಜಗದ್ಗುರು ಫ್ರಾನ್ಸಿಸ್ ರವರ ಸ್ಮರಣಾರ್ಥ ಕಾರ್ಯಕ್ರಮಗಳು ಮಂಗಳವಾರ, ಏಪ್ರಿಲ್ 21ರಂದು ದಿನಪೂರ್ತಿ ಮುಂದುವರಿಯುತ್ತಿವೆ.
ಸಂತ ಮೇರಿ ಮೇಜರ್ ಬಾಸಿಲಿಕಾದಲ್ಲಿ ಸಂಜೆ 5:00ಕ್ಕೆ ಜಪಸರ ಪ್ರಾರ್ಥನೆ ನಡೆಯಲಿದೆ ಅದರ ನಂತರ ಕಾರ್ಡಿನಲ್ ಜಿಯೋವಾನಿ ಬತ್ತಿಸ್ತ ರೆ, ಕಾರ್ಡಿನಲ್ ಮಂಡಳಿಯ ಡೀನ್, ಅವರ ಅಧ್ಯಕ್ಷತೆಯಲ್ಲಿ ಸ್ಮಾರಕ ಪವಿತ್ರ ಬಲಿಪೂಜೆ ನಡೆಯಲಿದೆ.
