Pope Leo XIV presides over a Prayer Vigil and Rosary for Peace, in Saint Peter's Basilica at the Vatican

ಶಾಂತಿಗಾಗಿ ಪ್ರಾರ್ಥನಾ ಜಾಗರಣೆಯಲ್ಲಿ ಜಗದ್ಗುರು ಲಿಯೋರವರು: ಆಯುಧಗಳು ಮತ್ತು ಮರಣದ ಯೋಜನೆಗಳನ್ನು ನಿಲ್ಲಿಸಿ

ಲೋಕದಲ್ಲಿ ಶಾಂತಿಗಾಗಿ ಜಗದ್ಗುರುಗಳ ಪ್ರಾರ್ಥನಾ ಜಾಗರಣೆಯ ಸಂದರ್ಭದಲ್ಲಿ, ರಾಷ್ಟ್ರಗಳ ನಾಯಕರಿಗೆ ಜಗದ್ಗುರುಗಳು ಮನವಿ ಮಾಡುತ್ತಾ, ಮತ್ತೆ ಶಸ್ತ್ರೀಕರಣವನ್ನು ಯೋಜಿಸುವ ಮತ್ತು ಮಾರಕ ಕ್ರಮಗಳನ್ನು ನಿರ್ಧರಿಸುವ ಮೇಜಿನ ಬಳಿ ಅಲ್ಲ, ಸಂವಾದ ಮತ್ತು ಮಧ್ಯಸ್ಥಿಕೆಯ ಮೇಜಿನ ಬಳಿ ಕುಳಿತುಕೊಳ್ಳಿರಿ” ಎಂದು ಹೇಳಿದರು. ಯುದ್ಧದ ತರ್ಕವನ್ನು ತಿರಸ್ಕರಿಸುವುದು ಕೆಲವೊಮ್ಮೆ ತಪ್ಪು ಅರ್ಥೈಸಿಕೊಳ್ಳುವಿಕೆ ಮತ್ತು ಹಾಸ್ಯಕ್ಕೆ ಕಾರಣವಾಗಿದ್ದರೂ ಸಹ, ಧರ್ಮ ಸಭೆ ಯಾವಾಗಲೂ ಶಾಂತಿಯನ್ನು ಕೋರಲು ಮುಂದುವರಿಯುತ್ತದೆ ಎಂದು ಅವರು ಒತ್ತಿಹೇಳಿದರು. ಮತ್ತು ಧರ್ಮ ಸಭೆಯು ಸದಾ ಯಾವುದೇ ಮಾನವ ಅಧಿಕಾರಕ್ಕಿಂತ ದೇವರಿಗೆ ವಿಧೇಯತೆಯನ್ನು ಬೋಧಿಸುತ್

ವ್ಯಾಟಿಕನ್ ವರದಿ

ಲೋಕದಲ್ಲಿ ಶಾಂತಿಗಾಗಿ ವ್ಯಾಟಿಕನ್‌ನಲ್ಲಿ ನಡೆದ ಪ್ರಾರ್ಥನಾ ಜಾಗರಣೆಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು, ಯುದ್ಧಪೀಡಿತ ಪ್ರದೇಶಗಳಿಂದ ಮಕ್ಕಳಿಂದ ಬಂದಿರುವ ಅನೇಕ ಪತ್ರಗಳನ್ನು ಉಲ್ಲೇಖಿಸಿ, ಅವುಗಳಲ್ಲಿರುವ ನೋವು, ಭಯ ಮತ್ತು ಮಾನವೀಯತೆಯ ಕೊರತೆಯನ್ನು ಮನಕಲಕುವಂತೆ ವಿವರಿಸಿದರು. “ಮಕ್ಕಳ ಧ್ವನಿಯನ್ನು ಕೇಳೋಣ!” ಎಂದು ಅವರು ಕರೆ ನೀಡಿದರು. ಯುದ್ಧವು ವಿಭಜಿಸುತ್ತದೆ, ಆದರೆ ಭರವಸೆಯು ಒಗ್ಗೂಡಿಸುತ್ತದೆ ಅಹಂಕಾರ ಇತರರನ್ನು ಕುಗ್ಗಿಸುತ್ತದೆ, ಆದರೆ ಪ್ರೀತಿ ಎತ್ತುತ್ತದೆ ಸುಳ್ಳು ಆರಾಧನೆ ಕಣ್ಣು ಮುಚ್ಚಿಸುತ್ತದೆ, ಆದರೆ ಜೀವಂತ ದೇವರು ಬೆಳಕು ನೀಡುತ್ತಾನೆ ಎಂದು ಜಗದ್ಗುರುಗಳು ಹೇಳಿದರು.

ವಿಶ್ವದ ನಾನಾ ಭಾಗಗಳ ಭಕ್ತರು ಜಪಸರ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸಂತ ಆಗಸ್ಟಿನ್, ಸಂತ ಜಾನ್ ಕ್ರಿಸೋಸ್ಟಮ್, ಸಂತ ಅಂಬ್ರೋಸ್ ಮುಂತಾದ ಧರ್ಮ ಸಭೆಯ ಪಿತೃಗಳ ಚಿಂತನೆಗಳು ಓದಲ್ಪಟ್ಟವು. ಅಸ್ಸಿಸಿಯ ಶಾಂತಿಯ ದೀಪದಿಂದ ಬೆಳಗಿಸಿದ ದೀಪಗಳನ್ನು ವಿವಿಧ ಖಂಡಗಳ ಭಕ್ತರು ಹಂಚಿಕೊಂಡರು. ಪ್ರಾರ್ಥನೆ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಮಾರ್ಗವಲ್ಲ, ಅನ್ಯಾಯದಿಂದ ಉಂಟಾಗುವ ನೋವಿಗೆ ಮದ್ದೂ ಅಲ್ಲ ಅದು ಸಾವಿನ ವಿರುದ್ಧದ ಅತ್ಯಂತ ನಿಸ್ವಾರ್ಥ, ವಿಶ್ವವ್ಯಾಪಕ ಮತ್ತು ಪರಿವರ್ತನಕಾರಿ ಪ್ರತಿಕ್ರಿಯೆ ಎಂದು ಜಗದ್ಗುರುಗಳು ಒತ್ತಿ ಹೇಳಿದರು.

ನಮ್ಮ ಕಾಲದ ಸಂಕಟಗಳನ್ನು ಎದುರಿಸಲು “ಸಾಸಿವೆಯಷ್ಟು” ನಂಬಿಕೆ ಸಾಕು ಎಂದು ಅವರು ಹೇಳಿದರು. ಮಾನವ ಪ್ರಯತ್ನಗಳ ಸೀಮಿತತೆ ಪ್ರಾರ್ಥನೆಯ ಮೂಲಕ ದೇವರ ಅಸೀಮ ಶಕ್ತಿಗೆ ಸೇರುತ್ತದೆ. ಆಗ ದುಷ್ಟತನದ ಚಕ್ರ ಮುರಿದು, ಖಡ್ಗವಿಲ್ಲದ, ಪ್ರತೀಕಾರವಿಲ್ಲದ, ಅನ್ಯಾಯದ ಲಾಭವಿಲ್ಲದ, ಮಾನ ಗೌರವ, ಅರಿವು ಮತ್ತು ಕ್ಷಮೆಯಿಂದ ಕೂಡಿದ ದೇವರ ರಾಜ್ಯಕ್ಕೆ ದಾರಿ ತೆರೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಶಕ್ತಿ ಪ್ರದರ್ಶನವೇ ನಿಜವಾದ ಬಲವಲ್ಲ ನಿಜವಾದ ಬಲ ಜೀವನಕ್ಕೆ ಸೇವೆ ಮಾಡುವುದರಲ್ಲಿ ಇದೆ ಎಂದು ಜಗದ್ಗುರುಗಳು ಎಚ್ಚರಿಸಿದರು. ಯುದ್ಧದ ಹುಚ್ಚಾಟದಿಂದ ಉಂಟಾದ ಗಾಯಗಳನ್ನು ಗುಣಪಡಿಸಲು, ಹಾನಿಯನ್ನು ಸರಿಪಡಿಸಲು, ಶಾಂತಿಯಲ್ಲಿ ನಂಬಿಕೆ ಇಡುವ ಕೋಟ್ಯಂತರ ಜನರ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಒಗ್ಗೂಡಿಸೋಣ ಎಂದು ಅವರು ಮನವಿ ಮಾಡಿದರು. ವಿಶೇಷವಾಗಿ ಯುದ್ಧದ ಭಯವನ್ನು ಅನುಭವಿಸುವ ಮಕ್ಕಳ ಕಿರುಚಾಟವನ್ನು ಕೇಳಿ, ಅವರನ್ನು ರಕ್ಷಿಸೋಣ ಎಂದು ಅವರು ಕರೆ ನೀಡಿದರು.

ರಾಷ್ಟ್ರಗಳ ನಾಯಕರಿಗೆ ಜಗದ್ಗುರುಗಳು ಸ್ಪಷ್ಟ ಸಂದೇಶ ನೀಡಿದರು: ಸಾಕು! ಈಗ ಶಾಂತಿಯ ಸಮಯ. ಮರುಶಸ್ತ್ರೀಕರಣದ ಯೋಜನೆಗಳು ನಡೆಯುವ ಮೇಜಿನ ಬಳಿ ಅಲ್ಲ, ಸಂವಾದ ಮತ್ತು ಮಧ್ಯಸ್ಥಿಕೆಯ ಮೇಜಿನ ಬಳಿ ಕುಳಿತುಕೊಳ್ಳಿ!” ಯುದ್ಧವನ್ನು ಮಾತಿನಿಂದ ಮಾತ್ರವಲ್ಲ, ಕಾರ್ಯದಲ್ಲೂ ತಿರಸ್ಕರಿಸುವುದು ಎಲ್ಲರ ಜವಾಬ್ದಾರಿ ಎಂದು ಅವರು ನೆನಪಿಸಿದರು. ದ್ವೇಷ ಮತ್ತು ಹಿಂಸೆಯನ್ನು ಹೃದಯದಿಂದ ದೂರ ಮಾಡಿ, ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ದಿನನಿತ್ಯ ಶಾಂತಿಯ ರಾಜ್ಯವನ್ನು ಕಟ್ಟೋಣ ಎಂದರು.

ಪ್ರಾರ್ಥನೆ, ವಿಶೇಷವಾಗಿ ಜಪಸರ, ಪುನರಾವರ್ತನೆಯ ಮೃದು ಲಯದ ಮೂಲಕ ಮನಸ್ಸನ್ನು ರೂಪಿಸುತ್ತದೆ. ಹನಿ–ಹನಿಯಾಗಿ ಬಂಡೆ ಕರಗುವಂತೆ, ಹೊಲಿಗೆ–ಹೊಲಿಗೆಯಾಗಿ ಬಟ್ಟೆ ರೂಪುಗೊಳ್ಳುವಂತೆ, ಶಾಂತಿಯೂ ಪದ–ಪದವಾಗಿ, ಕಾರ್ಯ–ಕಾರ್ಯವಾಗಿ ಬೆಳೆದುಕೊಳ್ಳುತ್ತದೆ. ಅತಿವೇಗದ ಜಗತ್ತಿನ ಅಲೆಮಾರಿತನಕ್ಕೆ ಒಳಗಾಗದೆ, ಸೃಷ್ಟಿಯ ಸೌಂದರ್ಯವನ್ನು ಸಂರಕ್ಷಿಸುವ ಬದುಕಿನ ಲಯಕ್ಕೆ ಮರಳೋಣ ಎಂದು ಅವರು ಹೇಳಿದರು.

ಧರ್ಮ ಸಭೆ ಸಮಾಧಾನ ಮತ್ತು ಶಾಂತಿಯ ಸೇವೆಯಲ್ಲಿ ಅಚಲವಾಗಿದೆ. ಯುದ್ಧದ ತರ್ಕವನ್ನು ತಿರಸ್ಕರಿಸುವುದು ತಪ್ಪು ಅರ್ಥೈಸಿಕೊಳ್ಳುವಿಕೆಗೆ ಕಾರಣವಾದರೂ, ಧರ್ಮ ಸಭೆ ದೇವರಿಗೆ ವಿಧೇಯತೆಯನ್ನು ಬೋಧಿಸುತ್ತಲೇ ಇರುತ್ತದೆ. ಮಾನವ ಗೌರವಕ್ಕೆ ಧಕ್ಕೆಯಾಗುವಾಗ, ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗುವಾಗ, ಧರ್ಮ ಸಭೆ ಶಾಂತಿಯ ಸುವಾರ್ತೆಯನ್ನು ಧೈರ್ಯದಿಂದ ಸಾರುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಕೊನೆಗೆ, ಶಸ್ತ್ರಾಸ್ತ್ರವಿಲ್ಲದೆ, ಹಿಂಸೆಯಿಲ್ಲದೆ ಮರಣವನ್ನು ಜಯಿಸಿದ ಕ್ರಿಸ್ತನ ಶಾಂತಿ ಎಲ್ಲರ ಮೇಲಿರಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಶಾಂತಿಯ ಪ್ರಾರ್ಥನೆಯನ್ನು ಎಲ್ಲರೂ ಸೇರಿ ಪಠಿಸೋಣ ಎಂದು ಆಹ್ವಾನಿಸಿದರು. “ಶಾಂತಿ ನಮ್ಮ ಹೃದಯಗಳಲ್ಲಿ ಇದೆ ಅದನ್ನು ಲೋಕದಾದ್ಯಂತ ಹರಡುವವರಾಗೋಣ,” ಎಂದ ಅವರು, “ಯೇಸು ಪುನರುತ್ಥಾನವಾಗಿ ನಮ್ಮ ಮಧ್ಯೆ ಇದ್ದಾರೆ ಎಂಬ ನಂಬಿಕೆಯಿಂದ, ಎಲ್ಲಾ ಜನಾಂಗ–ಧರ್ಮ–ವರ್ಣದ ಜನರೊಂದಿಗೆ ಒಟ್ಟಾಗಿ ಶಾಂತಿಯನ್ನು ಕಟ್ಟಬಹುದು ಎಂದು ಆಶಯವನ್ನು ವ್ಯಕ್ತಪಡಿಸಿದರು.

11 ಏಪ್ರಿಲ್ 2026, 16:18