ಜಗದ್ಗುರುಗಳ ಕಥೊಲಿಕ ಧರ್ಮ ಸಭೆಯ ಅಧಿಕೃತ ಬೋಧನಾ ಅಧಿಕಾರ (ಮ್ಯಾಜಿಸ್ಟೀರಿಯಂ) ಮತ್ತು ಪರಮಾಣು ಶಸ್ತ್ರಾಸ್ತ್ರಗಳು
ವ್ಯಾಟಿಕನ್ ವರದಿ
1945ರ ಆಗಸ್ಟ್‌ನಲ್ಲಿ ಜಪಾನಿನಲ್ಲಿ ಸಂಭವಿಸಿದ ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಗಳ ದುರಂತದ ಬಳಿಕ, ಮಾನವಕುಲವು ತಾನೇ ತನ್ನನ್ನು ನಾಶಮಾಡಿಕೊಳ್ಳುವ ಅಪಾಯದ ಬಗ್ಗೆ ಧರ್ಮ ಸಭೆ ಆಳವಾಗಿ ಚಿಂತಿಸಿದೆ.
1955ರ ಕ್ರಿಸ್ಮಸ್ ರೇಡಿಯೋ ಸಂದೇಶದಲ್ಲಿ ಜಗದ್ಗುರು XIIನೇ ಪಯಸ್ ಅಣ್ವಸ್ತ್ರಗಳ ಭೀತಿಯ ಕುರಿತು ಮಾತನಾಡಿ, “ಇದು ಜಯದ ಘೋಷವಲ್ಲ ತನ್ನದೇ ಮೂರ್ಖತನದಿಂದ ಉಂಟಾದ ವಿಪತ್ತನ್ನು ದುರಂತವಾಗಿ ನೋಡುವ ಮಾನವಕುಲದ ಅಶಮನೀಯ ಅಳಲು ಮಾತ್ರ ಇರುತ್ತದೆ ಎಂದು ಹೇಳಿದರು. ಪೇಸೆಮ್ ಇನ್ ಟೆರಿಸ್ ಎಂಬ ವಲಯಪತ್ರಿಕೆಯಲ್ಲಿ, ಜಗದ್ಗುರು XXIIIನೇ ಜಾನ್ ರವರು, ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟು ನಂತರ ಪ್ರಕಟಿಸಿದಾಗ, ಅಣ್ವಸ್ತ್ರಗಳ ಕುರಿತು ಹೀಗೆ ಹೇಳಿದರು. “ಅದರ ಪರಿಣಾಮವಾಗಿ ಜನರು ನಿರಂತರ ಭೀತಿಯಲ್ಲಿ ಬದುಕುತ್ತಿದ್ದಾರೆ. ಯಾವ ಕ್ಷಣದಲ್ಲಾದರೂ ಭಯಾನಕ ಹಿಂಸಾಚಾರದಿಂದ ಆಪತ್ತು ಸಂಭವಿಸಬಹುದು ಎಂಬ ಭಯ ಅವರಿಗೆ ಇದೆ. ಅವರ ಈ ಭಯಕ್ಕೆ ಕಾರಣವೂ ಇದೆ, ಏಕೆಂದರೆ ಇಂತಹ ಆಯುಧಗಳ ಕೊರತೆಯೇ ಇಲ್ಲ. ಯುದ್ಧವು ಉಂಟುಮಾಡುವ ಭಯಾನಕ ಹತ್ಯಾಕಾಂಡ ಮತ್ತು ವಿನಾಶಕ್ಕೆ ಯಾರಾದರೂ ಹೊಣೆ ಹೊರುವ ಸಾಹಸ ಮಾಡುವರು ಎಂಬುದನ್ನು ನಂಬುವುದು ಕಷ್ಟವಾದರೂ, ಏನೋ ಒಂದು ಅಪ್ರತೀಕ್ಷಿತ ಸಂದರ್ಭದಿಂದ ಯುದ್ಧ ಪ್ರಾರಂಭವಾಗಬಹುದು ಎಂಬುದನ್ನು ನಿರಾಕರಿಸಲಾಗುವುದಿಲ್ಲ.”
1968ರ ಜೂನ್‌ನಲ್ಲಿ ಜಗದ್ಗುರು VIನೇ ಪಾಲ್ ಸಂಪೂರ್ಣ ಮಾನವಕುಲದ ಹೆಸರಿನಲ್ಲಿ ಅಣ್ವಸ್ತ್ರಗಳ ಸಂಪೂರ್ಣ ನಿಷೇಧ ಮತ್ತು ಸಾಮಾನ್ಯ ಹಾಗೂ ಸಂಪೂರ್ಣ ನಿರಸ್ತ್ರೀಕರಣಕ್ಕಾಗಿ ಆಶಿಸಿ ಮನವಿ ಮಾಡಿದರು. ಇದೇ ವೇಳೆ, 1981ರ ಫೆಬ್ರವರಿಯಲ್ಲಿ ಹಿರೋಶಿಮಾದಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಹೀಗೆ ಹೇಳಿದರು ಅಣ್ವಸ್ತ್ರ ವಿನಾಶದ ಅಪಾಯಕ್ಕೆ ಒಳಗಾಗಿರುವ ನಮ್ಮ ಭೂಮಿಯ ಭವಿಷ್ಯ ಒಂದೇ ವಿಷಯದ ಮೇಲೆ ಅವಲಂಬಿತವಾಗಿದೆ. ಮಾನವಕುಲವು ನೈತಿಕ ಪರಿವರ್ತನೆಯನ್ನು ಅನುಭವಿಸಬೇಕು. ಇತಿಹಾಸದ ಈ ಘಟ್ಟದಲ್ಲಿ, ಸತ್ಸಂಕಲ್ಪದ ಎಲ್ಲಾ ಪುರುಷರು ಮತ್ತು ಮಹಿಳೆಯರ ಸಾಮೂಹಿಕ ಚಳವಳಿ ಅಗತ್ಯವಿದೆ. ಮಾನವಕುಲವು ಇನ್ನೊಂದು ಹೆಜ್ಜೆ ಮುಂದೆ ಹಾಕಬೇಕಾಗಿದೆ. ಸಂಸ್ಕೃತಿ ಮತ್ತು ಜ್ಞಾನದ ದಿಕ್ಕಿನಲ್ಲಿ. 2010ರ ಮೇ ತಿಂಗಳಲ್ಲಿ ಜಗದ್ಗುರು XVIನೇ ಬೆನೆಡಿಕ್ಟ್ ರವರು ಹೀಗೆ ಹೇಳಿದರು ಕ್ರಮೇಣ ನಿರಸ್ತ್ರೀಕರಣ ಹಾಗೂ ಅಣ್ವಸ್ತ್ರರಹಿತ ಪ್ರದೇಶಗಳ ಸೃಷ್ಟಿಗಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ನಾನು ಉತ್ತೇಜಿಸುತ್ತೇನೆ, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವ ದೃಷ್ಟಿಯಿಂದ 2019ರ ನವೆಂಬರ್‌ನಲ್ಲಿ ಹಿರೋಶಿಮಾದಿಂದ ಜಗದ್ಗುರು ಫ್ರಾನ್ಸಿಸ್ ರವರು ಹೀಗೆ ಸ್ಮರಿಸಿದರು ಯುದ್ಧ ಉದ್ದೇಶಕ್ಕಾಗಿ ಅಣುಶಕ್ತಿಯ ಬಳಕೆ ಇಂದು, ಹಿಂದಿನಿಗಿಂತಲೂ ಹೆಚ್ಚು, ಮಾನವ ಗೌರವದ ವಿರುದ್ಧದ ಅಪರಾಧ ಮಾತ್ರವಲ್ಲ, ನಮ್ಮ ಸಾಮಾನ್ಯ ಮನೆಯ ಭವಿಷ್ಯಕ್ಕೂ ವಿರುದ್ಧವಾಗಿದೆ. ಅವರು ಮತ್ತಷ್ಟು ಹೇಳಿದರು ಯುದ್ಧ ಉದ್ದೇಶಕ್ಕಾಗಿ ಅಣುಶಕ್ತಿಯ ಬಳಕೆ ಅನೈತಿಕ ಹಾಗೆಯೇ ಅಣ್ವಸ್ತ್ರಗಳನ್ನು ಹೊಂದಿರುವುದೂ ಅನೈತಿಕವೇ. ನಾವು ಇದಕ್ಕಾಗಿ ತೀರ್ಪುಗೊಳ್ಳುವೆವು. ನಾವು ಶಾಂತಿಯ ಬಗ್ಗೆ ಮಾತನಾಡಿ ಅದನ್ನು ಸಾಧಿಸಲು ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದ ಪೀಳಿಗೆಗಳು ನಮ್ಮನ್ನು ಖಂಡಿಸುವವು. ನಾವು ಭಯಾನಕ ಹೊಸ ಯುದ್ಧಾಸ್ತ್ರಗಳನ್ನು ನಿರ್ಮಿಸುತ್ತಾ ಶಾಂತಿಯ ಬಗ್ಗೆ ಹೇಗೆ ಮಾತನಾಡಬಹುದು? ದ್ವೇಷ ಮತ್ತು ಭೇದಭಾವದಿಂದ ಕೂಡಿದ ಮಾತುಗಳಿಂದ ಅನ್ಯಾಯಗಳನ್ನು ನ್ಯಾಯೀಕರಿಸುತ್ತಾ ಶಾಂತಿಯ ಬಗ್ಗೆ ಹೇಗೆ ಹೇಳಬಹುದು?” ಎಂದು ಹೇಳಿದರು.
ಜಗದ್ಗುರು XIVನೇ ಲಿಯೋರವರು ತಮ್ಮ ಪೂರ್ವಜರ ಕಥೊಲಿಕ ಧರ್ಮ ಸಭೆಯ ಅಧಿಕೃತ ಬೋಧನಾ ಅಧಿಕಾರ (ಮ್ಯಾಜಿಸ್ಟೀರಿಯಂ) ಗುರುತಿಸಿದ ಮಾರ್ಗದಲ್ಲೇ ಮುಂದುವರಿದರು. 2025ರ ಜೂನ್ 14ರಂದು ಜುಬಿಲಿ ಸಭೆಯ ಅಂತ್ಯದಲ್ಲಿ ಅವರು ಹೀಗೆ ಹೇಳಿದರು: ಇರಾನ್ ಮತ್ತು ಇಸ್ರೇಲ್ ನಡುವಿನ ಪರಿಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ. ಇಂತಹ ಸೂಕ್ಷ್ಮ ಕ್ಷಣದಲ್ಲಿ, ಜವಾಬ್ದಾರಿ ಮತ್ತು ವಿವೇಕಕ್ಕೆ ನಾನು ಬಲವಾಗಿ ಮನವಿ ಮಾಡುತ್ತೇನೆ. ಅಣ್ವಸ್ತ್ರ ಭೀತಿಯಿಂದ ಮುಕ್ತವಾದ ಸುರಕ್ಷಿತ ಜಗತ್ತನ್ನು ನಿರ್ಮಿಸುವ ಬದ್ಧತೆಯನ್ನು ಪರಸ್ಪರ ಗೌರವದ ಸಂಭಾಷಣೆ ಮತ್ತು ನಿಷ್ಠಾವಂತ ಸಂವಾದದ ಮೂಲಕ ಮುಂದುವರಿಸಬೇಕು. ನ್ಯಾಯ, ಸಹೋದರತ್ವ ಮತ್ತು ಸಾಮೂಹಿಕ ಹಿತದ ಮೇಲೆ ಆಧಾರಿತ ಶಾಶ್ವತ ಶಾಂತಿಯನ್ನು ನಿರ್ಮಿಸಬೇಕು. ಯಾರೂ ಮತ್ತೊಬ್ಬರ ಅಸ್ತಿತ್ವವನ್ನು ಬೆದರಿಸಬಾರದು ಎಂದರು.
ಒಂದು ತಿಂಗಳ ನಂತರ, ಹಿರೋಶಿಮಾ ಮತ್ತು ನಾಗಾಸಾಕಿ ಅಣುಬಾಂಬ್ ದಾಳಿಗಳ 80ನೇ ವಾರ್ಷಿಕೋತ್ಸವದ ಸಂದೇಶದಲ್ಲಿ ಅವರು ಹೀಗೆ ಬರೆದರು ನಿಜವಾದ ಶಾಂತಿಗೆ ಧೈರ್ಯವಾಗಿ ಆಯುಧಗಳನ್ನು ತ್ಯಜಿಸುವುದು ಅಗತ್ಯ ವಿಶೇಷವಾಗಿ ಅಕಲ್ಪನೀಯ ವಿಪತ್ತನ್ನು ಉಂಟುಮಾಡುವ ಶಕ್ತಿಯುಳ್ಳವುಗಳನ್ನು. ಅಣ್ವಸ್ತ್ರಗಳು ನಮ್ಮ ಸಾಮಾನ್ಯ ಮಾನವೀಯತೆಯನ್ನು ಹಾನಿಗೊಳಿಸುತ್ತವೆ ಮತ್ತು ಸೃಷ್ಟಿಯ ಗೌರವಕ್ಕೂ ವಿರುದ್ಧವಾಗಿವೆ.ಆಗಸ್ಟ್ 6ರಂದು ಸಾಮಾನ್ಯ ಸಭೆಯಲ್ಲಿ ಅವರು ಹೀಗೆ ಮನವಿ ಮಾಡಿದರು ವರ್ಷಗಳು ಕಳೆದರೂ, ಆ ದುರಂತ ಘಟನೆಗಳು ಯುದ್ಧಗಳಿಂದ, ವಿಶೇಷವಾಗಿ ಅಣ್ವಸ್ತ್ರಗಳಿಂದ ಉಂಟಾಗುವ ವಿನಾಶದ ವಿರುದ್ಧ ವಿಶ್ವಕ್ಕೆ ಎಚ್ಚರಿಕೆ ಆಗಿವೆ. ಇಂದಿನ ಉದ್ವಿಗ್ನತೆಗಳಿಂದ ಕೂಡಿದ ಜಗತ್ತಿನಲ್ಲಿ, ಪರಸ್ಪರ ವಿನಾಶದ ಬೆದರಿಕೆಯ ಮೇಲೆ ಆಧಾರಿತ ಭ್ರಮಾತ್ಮಕ ಭದ್ರತೆ ನ್ಯಾಯ, ಸಂವಾದ ಮತ್ತು ಸಹೋದರತ್ವದ ವಿಶ್ವಾಸಕ್ಕೆ ಮಾರ್ಗ ಬಿಡಲಿ ಎಂದು ಹೇಳಿದರು.
2026ರ ವಿಶ್ವ ಶಾಂತಿ ದಿನದ ಸಂದೇಶದಲ್ಲಿ ಅವರು ಹೀಗೆ ಹೇಳಿದರು ನಾಗರಿಕರು ಮತ್ತು ಆಡಳಿತಗಾರರ ನಡುವಿನ ಸಂಬಂಧಗಳಲ್ಲಿ, ಯುದ್ಧಕ್ಕೆ ಸಿದ್ಧರಾಗದಿರುವುದು ತಪ್ಪೆಂದು ಕೂಡ ಪರಿಗಣಿಸಬಹುದು. ಆದರೆ ಈ ತರ್ಕವು ಈಗ ಜಾಗತಿಕ ರಾಜಕೀಯವನ್ನು ಆಳುತ್ತಿದೆ, ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸುತ್ತಿದೆ. ಸೈನಿಕ ಶಕ್ತಿಯ, ವಿಶೇಷವಾಗಿ ಅಣ್ವಸ್ತ್ರ ನಿರೋಧಕ ಶಕ್ತಿಯ ಕಲ್ಪನೆ ಭಯ ಮತ್ತು ಬಲಾಧಿಪತ್ಯದ ಮೇಲೆ ಆಧಾರಿತವಾಗಿದೆ.”
2026ರ ಫೆಬ್ರವರಿ 4ರಂದು, ಹೊಸ START ಒಪ್ಪಂದ ಅವಧಿ ಮುಗಿಯುವ ಸಂದರ್ಭದಲ್ಲಿ, ಅವರು ಹೀಗೆ ಹೇಳಿದರು ನಿರಸ್ತ್ರೀಕರಣ ಮತ್ತು ಪರಸ್ಪರ ವಿಶ್ವಾಸಕ್ಕಾಗಿ ನಡೆಯುವ ಪ್ರಯತ್ನಗಳನ್ನು ನಾನು ಉತ್ತೇಜಿಸುತ್ತೇನೆ. ಈ ಒಪ್ಪಂದವನ್ನು ತ್ಯಜಿಸದೆ, ಅದರ ಪರಿಣಾಮಕಾರಿ ಮುಂದುವರಿಕೆಯನ್ನು ಖಚಿತಪಡಿಸಬೇಕು. ಹೊಸ ಆಯುಧ ಸ್ಪರ್ಧೆಯನ್ನು ತಪ್ಪಿಸುವುದು ಅತ್ಯಾವಶ್ಯಕ.
2026ರ ಮಾರ್ಚ್ 5ರಂದು, ಅವರ ಅಧಿಕೃತ ಪಾಂಟಿಫೆಕ್ಸ್ ಖಾತೆಯಲ್ಲಿ ಅವರು ಹೀಗೆ ಬರೆದರು ನಾವು ಒಟ್ಟಿಗೆ ಪ್ರಾರ್ಥಿಸೋಣ ರಾಷ್ಟ್ರಗಳು ನಿರಸ್ತ್ರೀಕರಣದ ದಾರಿಗೆ, ವಿಶೇಷವಾಗಿ ಅಣ್ವಸ್ತ್ರ ನಿರಸ್ತ್ರೀಕರಣದತ್ತ ಸಾಗಲಿ ವಿಶ್ವ ನಾಯಕರು ಹಿಂಸೆಯ ಬದಲು ಸಂವಾದ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಆರಿಸಲಿ ಎಂದರು.
ಇವುಗಳೆಲ್ಲಾ ಮಾನವಕುಲವನ್ನು ಸಂಪೂರ್ಣವಾಗಿ ನಾಶಮಾಡಬಲ್ಲ ಅಣ್ವಸ್ತ್ರಗಳ ಸಂಪೂರ್ಣ ನಿರ್ಮೂಲನೆಗಾಗಿ ನಿರಂತರವಾಗಿ ಕರೆ ನೀಡುತ್ತಿರುವ ಜಗದ್ಗುರುಗಳ ಹೇಳಿಕೆಗಳಾಗಿವೆ.
