ಕ್ಯಾಮರೂನ್‌ನ ಫಾರ್ ನಾರ್ತ್ ಪ್ರದೇಶದ ಲೋಗೋನ್ ಮತ್ತು ಚಾರಿ ವಿಭಾಗದ ಕೌಸ್ಸೇರಿ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲೆಯ 1,000 ವಿದ್ಯಾರ್ಥಿಗಳಿಗೆ ಶಾಲಾ ಕಿಟ್‌ಗಳ ವಿತರಣೆ, “ಕ್ಯಾಮರೂನ್‌ನ ಫಾರ್ ನಾರ್ತ್ ಪ್ರದೇಶದ ಪ್ರವಾಹದಿಂದ ಪೀಡಿತ ಸಮುದಾಯಗಳಲ್ಲಿ ಶಿಕ್ಷಣವನ್ನು ಪುನರುಜ್ಜೀವನಗೊಳಿಸುವುದು ಮತ್ತು ಪರಿಸರ ಸಹನಶೀಲತೆಯನ್ನು ಉತ್ತೇಜಿಸುವುದು” ಎಂಬ ಯೋಜನೆಯಡಿ ನಡೆಸಲಾಗಿದೆ. ಕ್ಯಾಮರೂನ್‌ನ ಫಾರ್ ನಾರ್ತ್ ಪ್ರದೇಶದ ಲೋಗೋನ್ ಮತ್ತು ಚಾರಿ ವಿಭಾಗದ ಕೌಸ್ಸೇರಿ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲೆಯ 1,000 ವಿದ್ಯಾರ್ಥಿಗಳಿಗೆ ಶಾಲಾ ಕಿಟ್‌ಗಳ ವಿತರಣೆ, “ಕ್ಯಾಮರೂನ್‌ನ ಫಾರ್ ನಾರ್ತ್ ಪ್ರದೇಶದ ಪ್ರವಾಹದಿಂದ ಪೀಡಿತ ಸಮುದಾಯಗಳಲ್ಲಿ ಶಿಕ್ಷಣವನ್ನು ಪುನರುಜ್ಜೀವನಗೊಳಿಸುವುದು ಮತ್ತು ಪರಿಸರ ಸಹನಶೀಲತೆಯನ್ನು ಉತ್ತೇಜಿಸುವುದು” ಎಂಬ ಯೋಜನೆಯಡಿ ನಡೆಸಲಾಗಿದೆ. 

ಜೆಆರ್‌ಎಸ್ ಕ್ಯಾಮರೂನ್: ಅಂತರರಾಷ್ಟ್ರೀಯ ಸಮುದಾಯದಿಂದ ಮರೆತವರ ಸೇವೆಯಲ್ಲಿ

ಜೆಸುಯಿಟ್ ಶರಣಾರ್ಥಿ ಸೇವೆ ಕ್ಯಾಮರೂನ್‌ನಲ್ಲಿ ಬಲವಂತವಾಗಿ ಸ್ಥಳಾಂತರಗೊಂಡ ಜನರಿಗೆ ತುರ್ತು ನೆರವು ನೀಡುತ್ತಿರುವ ಮಾನವೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಸಶಸ್ತ್ರ ಸಂಘರ್ಷ, ಹವಾಮಾನ ಬದಲಾವಣೆ ಮತ್ತು ನೆರವು ಕಡಿತಗಳು ಲಕ್ಷಾಂತರ ಜನರ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿವೆ. ಜಗದ್ಗುರು XIVನೇ ಲಿಯೋರವರ ಪ್ರೇಷಿತರ ಪ್ರಯಾಣವು ಈ ಪ್ರದೇಶದತ್ತ ಹೊಸ ಗಮನವನ್ನು ಸೆಳೆಯುತ್ತಿರುವ ಸಂದರ್ಭದಲ್ಲಿ, ಜೆಆರ್‌ಎಸ್ ಕ್ಯಾಮರೂನ್‌ನ ಶರಣಾರ್ಥಿಗಳ ಸವಾಲುಗಳು ಮತ್ತು ಭರವಸೆಗಳ ಬಗ್ಗೆ ಪ್ರತಿಬಿಂಬಿಸುತ್ತದೆ.

ವ್ಯಾಟಿಕನ್ ವರದಿ

ಕ್ಯಾಮರೂನ್‌ ದೇಶವು ಬಹುಮುಖ ಮಾನವೀಯ ಸಂಕಷ್ಟವನ್ನು ಎದುರಿಸುತ್ತಿದೆ. ಆಂತರಿಕ ಮತ್ತು ಪ್ರಾದೇಶಿಕ ಸಂಘರ್ಷಗಳು ಇದರ ಪ್ರಮುಖ ಕಾರಣಗಳಾಗಿದ್ದು, ಹವಾಮಾನ ಬದಲಾವಣೆ ಮತ್ತು ನೆರವು ಕಡಿತಗಳು ಈ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿವೆ. ಇಂಗ್ಲಿಷ್ ಭಾಷಾಭಾಗಗಳಲ್ಲಿ ಸರ್ಕಾರ ಮತ್ತು ವಿಭಜನೆಪರರ ನಡುವಿನ ಸಂಘರ್ಷ—ಅಂಗ್ಲೋಫೋನ್ ಸಂಕಷ್ಟ ವರ್ಷಗಳ ಕಾಲ ಜನರನ್ನು ದೇಶದೊಳಗೆ ಸ್ಥಳಾಂತರಗೊಳಿಸಿದೆ. ಜೊತೆಗೆ, ನೈಜೀರಿಯಾ ಮತ್ತು ಮಧ್ಯ ಆಫ್ರಿಕಾ ಗಣರಾಜ್ಯದಿಂದ ಹಿಂಸೆಯಿಂದ ತಪ್ಪಿಸಿಕೊಳ್ಳುವ ಶರಣಾರ್ಥಿಗಳು ಕ್ಯಾಮರೂನ್‌ನ ವಿವಿಧ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ಸಂಯುಕ್ತ ರಾಷ್ಟ್ರಗಳ ಶರಣಾರ್ಥಿ ಸಂಸ್ಥೆ ಯು ಎನ್ ಎಚ್ ಸಿ ಆರ್ ಪ್ರಕಾರ, 2025ರ ಜೂನ್ 30ರ ವೇಳೆಗೆ ಕ್ಯಾಮರೂನ್‌ನಲ್ಲಿ ಸ್ಥಳಾಂತರಗೊಂಡವರ ಸಂಖ್ಯೆ 2.1 ಮಿಲಿಯನ್‌ಗೆ ತಲುಪಿದೆ. ಇದರಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರು, ಮರಳಿದವರು ಮತ್ತು ಶರಣಾರ್ಥಿಗಳು ಸೇರಿದ್ದಾರೆ. ಈ ಅಂಕಿಅಂಶಗಳು ಸಂಕಷ್ಟದ ಗಂಭೀರತೆಯನ್ನು ತೋರಿಸುತ್ತವೆ.

ಈ ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಜೆಸುಯಿಟ್ ಶರಣಾರ್ಥಿ ಸೇವೆ (ಜೆಆರ್‌ಎಸ್) ಪ್ರಮುಖ ಪಾತ್ರವಹಿಸಿದೆ. ಮೊದಲು ಮಧ್ಯ ಆಫ್ರಿಕಾ ಗಣರಾಜ್ಯದಿಂದ ಬಂದ ಶರಣಾರ್ಥಿಗಳಿಗೆ ನೆರವು ನೀಡಿದ ಈ ಸಂಸ್ಥೆ, ನಂತರ ನೈಜೀರಿಯಾದ ಬೊಕೊ ಹರಾಮ್ ಹಿಂಸೆಯಿಂದ ಪಲಾಯನ ಮಾಡಿದವರಿಗೂ ಸಹಾಯವನ್ನು ವಿಸ್ತರಿಸಿದೆ. ಇಂದು ಜೆಆರ್‌ಎಸ್ ದೇಶದ ಅನೇಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜೆಆರ್‌ಎಸ್ ಈಗ ಕ್ಯಾಮರೂನ್‌ನ ಉತ್ತರ ಭಾಗದ ಮಿನಾವಾವೋ ಶರಣಾರ್ಥಿ ಶಿಬಿರದಲ್ಲಿ ಸುಮಾರು 70,000 ನೈಜೀರಿಯಾ ಶರಣಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಅವರು ಆದಾಯ ಸೃಷ್ಟಿಸುವ ಸ್ಥಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ, ತಮ್ಮ ಅಗತ್ಯಗಳನ್ನು ಸ್ವತಃ ನಿರ್ವಹಿಸಲು ನೆರವಾಗಲಾಗುತ್ತಿದೆ. ಇದರಿಂದ ಶರಣಾರ್ಥಿಗಳ ಸ್ವಾವಲಂಬನೆ ಹೆಚ್ಚುತ್ತಿದೆ.

ಇದಲ್ಲದೆ, ಜೆಆರ್‌ಎಸ್ ಯುವ ಶರಣಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡುವ ಯೋಜನೆಗಳನ್ನು ನಡೆಸುತ್ತಿದೆ. ಉದಾಹರಣೆಗೆ, ಹೊಲಿಗೆ ಮುಂತಾದ ಕೌಶಲ್ಯಗಳಲ್ಲಿ ತರಬೇತಿ ನೀಡುವುದರಿಂದ ಅವರು ಭವಿಷ್ಯದಲ್ಲಿ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ. ಮತ್ತೊಂದು ಯೋಜನೆಯ ಮೂಲಕ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಶಿಕ್ಷಣವನ್ನು ಪುನರುಜ್ಜೀವನಗೊಳಿಸಿ, ಪರಿಸರ ಸಂರಕ್ಷಣೆಯ ಅರಿವು ಮೂಡಿಸಲಾಗುತ್ತಿದೆ.

ಇದಕ್ಕೆ ಸೇರಿ, ಕ್ಯಾಮರೂನ್‌ನ ಉತ್ತರ-ಪಶ್ಚಿಮ ಮತ್ತು ದಕ್ಷಿಣ-ಪಶ್ಚಿಮ ಭಾಗಗಳಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಿವೆ. ಅನೇಕ ಜನರು ತಮ್ಮ ಮನೆಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಈಗಾಗಲೇ ಅಸ್ಥಿರತೆ ಇದ್ದುದರಿಂದ ಮಾನವೀಯ ಅಗತ್ಯಗಳು ಹೆಚ್ಚುತ್ತಿವೆ.

ಹವಾಮಾನ ಬದಲಾವಣೆ ಕೂಡ ಸ್ಥಳಾಂತರಕ್ಕೆ ಕಾರಣವಾಗುತ್ತಿದೆ. ಸಹೇಲ್ ಪ್ರದೇಶದಲ್ಲಿ ಪರಿಸರ ಸಂಬಂಧಿತ ಸಮಸ್ಯೆಗಳು ಜನರನ್ನು ಸ್ಥಳಾಂತರಗೊಳಿಸುತ್ತಿವೆ. ಆದ್ದರಿಂದ ಜೆಆರ್‌ಎಸ್ ಪರಿಸರ ಸ್ನೇಹಿ ವಿಧಾನಗಳನ್ನು ಉತ್ತೇಜಿಸಿ, ಹವಾಮಾನ ಬದಲಾವಣೆಯನ್ನು ಎದುರಿಸಲು ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ. ಆದರೆ 2025ರಲ್ಲಿ ಅಮೇರಿಕಾದ ನೆರವು ಕಡಿತವಾದ ಕಾರಣ ಹಣಕಾಸಿನ ಕೊರತೆ ಹೆಚ್ಚಾಗಿದೆ.

ಈ ಎಲ್ಲಾ ಸವಾಲುಗಳ ನಡುವೆಯೂ, ಜಗದ್ಗುರು ಫ್ರಾನ್ಸಿಸ್ ರವರ ದುರ್ಬಲರ ಮೇಲಿನ ಕಾಳಜಿ ಮತ್ತು ಅವರ ಪರಂಪರೆ ಜೆಆರ್‌ಎಸ್ ಕಾರ್ಯಗಳಲ್ಲಿ ಮುಂದುವರಿದಿದೆ. ಈಗ ಜಗದ್ಗುರು XIVನೇ ಲಿಯೋರವರ ಭೇಟಿ ಭರವಸೆ ಮತ್ತು ಶಾಂತಿಯ ಸಂದೇಶವನ್ನು ತರುತ್ತಿದೆ. ಈ ಭೇಟಿ ದೇಶದಲ್ಲಿ ಸಂವಾದವನ್ನು ಉತ್ತೇಜಿಸಿ, ಉದ್ವಿಗ್ನತೆಯನ್ನು ಕಡಿಮೆ ಮಾಡಿ, ಶಾಂತಿ ಸ್ಥಾಪನೆಗೆ ಸಹಾಯವಾಗಲಿದೆ ಎಂಬ ನಿರೀಕ್ಷೆಯಿದೆ.

18 ಏಪ್ರಿಲ್ 2026, 15:02