ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಜಗದ್ಗುರು ಲಿಯೋರವರ ನೇಪಲ್ಸ್ ಮತ್ತು ಪೊಂಪೈ ಭೇಟಿಗಾಗಿ ಕಾರ್ಯಕ್ರಮಗಳು ಪ್ರಕಟಿಸಲ್ಪಟ್ಟಿವೆ.

ಜಗದ್ಗುರು XIVನೇ ಲಿಯೋರವರ 2026 ಮೇ 8ರಂದು ಅವರ ಆಯ್ಕೆಯ ಮೊದಲ ವಾರ್ಷಿಕೋತ್ಸವದಂದು ನೇಪಲ್ಸ್ ಮತ್ತು ಪೊಂಪೈ ನಗರಗಳಿಗೆ ನಡೆಯುವ ಭೇಟಿಗಾಗಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಅವರು ಪೊಂಪೈಯ ಪಿಯಾಝಾ ಬಾರ್ತೋಲೊ ಲೋಂಗೊದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲು, ಮಧ್ಯಾಹ್ನದ ಸಾಂಪ್ರದಾಯಿಕ ಪೊಂಪೈ ಕನ್ಯಾ ಮರಿಯಮ್ಮನವರಿಗೆ ಸಮರ್ಪಿತ ಪ್ರಾರ್ಥನೆಯಲ್ಲಿ ಭಾಗವಹಿಸಲು, ಮತ್ತು ನೇಪಲ್ಸ್‌ನಲ್ಲಿ ಸಾನ್ ಜೆನ್ನಾರೋರವರ ಪವಿತ್ರ ಅವಶೇಷಗಳಿಗೆ ವಂದನೆ ಸಲ್ಲಿಸಲು ಯೋಜಿಸಲಾಗಿದೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರ 2026ರ ಮೇ 8, ಶುಕ್ರವಾರ ಅವರ ಆಯ್ಕೆಯ ಮೊದಲ ವಾರ್ಷಿಕೋತ್ಸವದಂದು ಪೊಂಪೈ ಮತ್ತು ನೇಪಲ್ಸ್ ನಗರಗಳಿಗೆ ನಡೆಯುವ ಧರ್ಮಾಧ್ಯಕ್ಷೀಯ ಭೇಟಿಗಾಗಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ.

ಪೊಂಪೈ ಕಾರ್ಯಕ್ರಮದ ಪ್ರಕಾರ, ಜಗದ್ಗುರುಗಳು ಬೆಳಿಗ್ಗೆ 8:50ಕ್ಕೆ ಪೊಂಪೈ ಜಪಮಾಲೆ ಕನ್ಯಾ ಮರಿಯಮ್ಮನವರ ದೇವಾಲಯದ ಸಭಾ ಪ್ರದೇಶಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಅವರನ್ನು ಧರ್ಮ ಸಭೆಯ ಪ್ರತಿನಿಧಿಗಳು ಮತ್ತು ನಾಗರಿಕ ಅಧಿಕಾರಿಗಳು ಸ್ವಾಗತಿಸಲಿದ್ದಾರೆ.

ತಕ್ಷಣವೇ, ಬೆಳಿಗ್ಗೆ 8:55ಕ್ಕೆ, ಅವರು ಲೂಯಿಸಾ ಟ್ರಪಾನಿ ಸಭಾಂಗಣದಲ್ಲಿ “ಟೆಂಪಲ್ ಆಫ್ ಚಾರಿಟಿ” ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ. ದೇವಾಲಯದ ದಾನಧರ್ಮ ಕಾರ್ಯಕ್ರಮಗಳಿಗೆ ಸಹಾಯ ಮಾಡುವವರನ್ನೂ, ಅದರ ವಿವಿಧ ಕೇಂದ್ರಗಳಿಂದ ಸೇವೆ ಪಡೆಯುವವರನ್ನೂ ಅವರು ಭೇಟಿಯಾಗಲಿದ್ದಾರೆ.

ಬೆಳಿಗ್ಗೆ 9:30ಕ್ಕೆ, ಜಗದ್ಗುರುಗಳು ಜಗದ್ಗುರುಗಳು ಸಂಚರಿಸುವ ವಾಹನದಲ್ಲಿ ನಗರವನ್ನು ಸಂಚರಿಸಿ, 9:45ಕ್ಕೆ ಪಿಯಾಝಾ ಬಾರ್ತೋಲೊ ಲೋಂಗೊಗೆ ತಲುಪಲಿದ್ದಾರೆ. ನಂತರ ಅವರು ದೇವಾಲಯದೊಳಗೆ ಪ್ರವೇಶಿಸಿ ಪವಿತ್ರ ಪರಮಪ್ರಸಾದದ ಮುಂದೆ ಆರಾಧನೆಗೆ ಸಮಯ ಕಳೆಯಲಿದ್ದಾರೆ ಮತ್ತು ಅನಾರೋಗ್ಯದಲ್ಲಿರುವವರು, ವೃದ್ಧರು ಹಾಗೂ ಅಂಗವಿಕಲರನ್ನು ಭೇಟಿಯಾಗಲಿದ್ದಾರೆ.

ಪಿಯಾಝಾ ಬಾರ್ತೋಲೊ ಲೋಂಗೊದಲ್ಲಿ ಪವಿತ್ರ ಬಲಿಪೂಜೆ ಮತ್ತು ಪೊಂಪೈ ಕನ್ಯಾ ಮರಿಯಮ್ಮನವರಿಗೆ ಪ್ರಾರ್ಥನೆ

ಬೆಳಿಗ್ಗೆ 10ಕ್ಕೆ, ಜಗದ್ಗುರುಗಳು ಸಂತ ಬಾರ್ತೋಲೊ ಲೋಂಗೊರವರಿಗೆ ಗೌರವ ಸಲ್ಲಿಸಿ, ದೇವಾಲಯದ ಸ್ಥಾಪಕರಿಗೆ ಸಮರ್ಪಿತವಾದ ಚಾಪೆಲ್‌ಗೆ ಭೇಟಿ ನೀಡಿ, ಅವರ ದೇಹಾವಶೇಷಗಳ ಮುಂದೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ, ಈ ಸಂದರ್ಭಕ್ಕಾಗಿ ಸೇರಿರುವ ಬಿಷಪ್‌ಗಳು ಅವರನ್ನು ಸ್ವಾಗತಿಸಲಿದ್ದಾರೆ. ಪೊಂಪೈ ಪ್ರೀಲೇಟ್ಚರ್ ಮತ್ತು ದೇವಾಲಯದ ಗುರುಗಳು ಅವರನ್ನು ರಿಕನ್ಸಿಲಿಯೇಷನ್ ಚಾಪೆಲ್‌ನಲ್ಲಿ ಬರಮಾಡಿಕೊಳ್ಳಲಿದ್ದಾರೆ.

ಬೆಳಿಗ್ಗೆ 10:30ಕ್ಕೆ, ಜಗದ್ಗುರು XIVನೇ ಲಿಯೋರವರು ಪಿಯಾಝಾ ಬಾರ್ತೋಲೊ ಲೋಂಗೊದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲಿದ್ದಾರೆ.

ಸಾವಿರಾರು ಭಕ್ತರು ಚೌಕದಲ್ಲಿಯೂ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವೀಕ್ಷಣೆಗೆ ದೊಡ್ಡ ಪರದೆಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.

ಮಧ್ಯಾಹ್ನ 12ಕ್ಕೆ, ಪೊಂಪೈ ಪವಿತ್ರ ಜಪಮಾಲೆ ಕನ್ಯಾ ಮರಿಯಮ್ಮನವರಿಗೆ ಸಾಂಪ್ರದಾಯಿಕ ಪ್ರಾರ್ಥನೆ ನಡೆಯಲಿದೆ.

ನಂತರ ಜಗದ್ಗುರುಗಳು ಮಧ್ಯಾಹ್ನ ಊಟ ಮಾಡಿ, ಮಧ್ಯಾಹ್ನ 3ಕ್ಕೆ ಹೆಲಿಕಾಪ್ಟರ್ ಮೂಲಕ ನೇಪಲ್ಸ್‌ಗೆ ಪ್ರಯಾಣಿಸಲಿದ್ದಾರೆ. ಅವರು 3:15ಕ್ಕೆ ನೇಪಲ್ಸ್ ತಲುಪಲಿದ್ದು, ಅಲ್ಲಿ ನೇಪಲ್ಸ್ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಡೊಮೆನಿಕೊ ಬಟ್ಟಾಗ್ಲಿಯಾ ಹಾಗೂ ನಾಗರಿಕ ಅಧಿಕಾರಿಗಳು ಅವರನ್ನು ಸ್ವಾಗತಿಸಲಿದ್ದಾರೆ.

ನೇಪಲ್ಸ್ ಕಾರ್ಯಕ್ರಮ: ಸಂತ ಜನುವೇರಿಯಸ್‌ಗೆ ಕೇಂದ್ರಿತ

ನೇಪಲ್ಸ್‌ನಲ್ಲಿ, ಜಗದ್ಗುರು XIVನೇ ಲಿಯೋರವರು ಕ್ಯಾಥಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಗುರುಗಳು ಮತ್ತು ಸಮರ್ಪಿತ ಜೀವನದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ಕಾರ್ಯಕ್ರಮದ ಪ್ರಕಾರ, ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕ್ಯಾಥಡ್ರಲ್ ಹೊರಾಂಗಣದಲ್ಲಿ ಅವರನ್ನು ಸ್ವಾಗತಿಸಲು ಸೇರಲಿದ್ದಾರೆ.

ಒಳಗೆ ಪ್ರವೇಶಿಸಿದ ನಂತರ, ಜಗದ್ಗುರುಗಳು ಮೊದಲು ಖಾಸಗಿಯಾಗಿ ಸಂತ ಜನುವೇರಿಯಸ್ (ಸಾನ್ ಜೆನ್ನಾರೋ) ಅವರ ಖಜಾನೆಯ ರಾಯಲ್ ಚಾಪೆಲ್‌ಗೆ ಹೋಗಿ ಪವಿತ್ರ ಪರಮಪ್ರಸಾದಕ್ಕೆ ಆರಾಧನೆ ಸಲ್ಲಿಸಲಿದ್ದಾರೆ. ನಂತರ ಅವರು ಮಧ್ಯ ನಾವ್ ಮೂಲಕ ಮುಖ್ಯ ವೇದಿಕೆಯ ಕಡೆಗೆ ಸಾಗಲಿದ್ದು, ಅಲ್ಲಿ ಸಂತ ಜನುವೇರಿಯಸ್ ರವರ ರಕ್ತದ ಅಮ್ಪುಲ್‌ಗಳನ್ನು ಹೊಂದಿರುವ ಬಸ್ಟ್ ಮತ್ತು ರೆಲಿಕ್ವರಿ ಪ್ರದರ್ಶಿಸಲ್ಪಡುತ್ತದೆ.

ಜಗದ್ಗುರು XIVನೇ ಲಿಯೋರವರು ಪ್ರಾರ್ಥನೆ ಪಠಿಸಿ ಭಾಷಣ ಮಾಡಲಿದ್ದಾರೆ.

ನಂತರ ಜಗದ್ಗುರುಗಳು ಕ್ಯಾಥಡ್ರಲ್‌ನಿಂದ ಹೊರಬಂದು, ನೇಪಲ್ಸ್‌ನ ಪ್ರಮುಖ ಕೇಂದ್ರ ಚೌಕವಾದ ಪಿಯಾಝಾ ದೆಲ್ ಪ್ಲೆಬಿಸ್ಚಿಟೋಗೆ ತೆರಳಲಿದ್ದಾರೆ. ಅವರು ಸಂಜೆ 5:15ಕ್ಕೆ ಅಲ್ಲಿ ತಲುಪಿ ಭಕ್ತರನ್ನು ಭೇಟಿಯಾಗಲಿದ್ದಾರೆ.

ತಕ್ಷಣವೇ, ಸಂಜೆ 5:20ಕ್ಕೆ, ಅವರು ಸಾನ್ ಫ್ರಾನ್ಚೆಸ್ಕೋ ದಿ ಪೌಲಾ ಬಸಿಲಿಕಾಗೆ ಭೇಟಿ ನೀಡಿ ಮಿನಿಮ್ಸ್ ಸಮುದಾಯದ ಸದಸ್ಯರನ್ನು, ಜೊತೆಗೆ ನಾಗರಿಕ ಹಾಗೂ ಧಾರ್ಮಿಕ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

ಪಿಯಾಝಾ ದೆಲ್ ಪ್ಲೆಬಿಸ್ಚಿಟೋದಲ್ಲಿ ನೇಪಲ್ಸ್ ನಗರಕ್ಕೆ ಸಂದೇಶ

ದಿನದ ಅಂತಿಮ ಪ್ರಮುಖ ಕಾರ್ಯಕ್ರಮ ಸಂಜೆ 5:30ಕ್ಕೆ ಆರಂಭವಾಗಲಿದೆ. ಆಗ ಜಗದ್ಗುರುಗಳು ಪಿಯಾಝಾ ದೆಲ್ ಪ್ಲೆಬಿಸ್ಚಿಟೋದಲ್ಲಿ ನೇಪಲ್ಸ್ ಜನರನ್ನು ಭೇಟಿ ಮಾಡಿ ನಗರಕ್ಕೆ ಸಂದೇಶ ನೀಡಲಿದ್ದಾರೆ.

ಸಭೆಯ ಅಂತ್ಯದಲ್ಲಿ, ಅಮಲೊಧ್ಭವ ಮಾತೆಯ ಗೌರವಾನ್ವಿತ ಚಿತ್ರವನ್ನು ಅದರ ಕಿರೀಟಾರೋಹಣದ ದ್ವಿಶತಮಾನೋತ್ಸವದ ಅಂಗವಾಗಿ ಚೌಕಕ್ಕೆ ತರಲಾಗುತ್ತದೆ ಮತ್ತು ಮುಂದಿಟ್ಟು ಕನ್ಯಾ ಮರಿಯಮ್ಮನವರಿಗೆ ಸಮರ್ಪಣೆಯ ಆಚರಣೆ ನಡೆಯಲಿದೆ. ಬಳಿಕ ಜಗದ್ಗುರುಗಳು ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಲಿದ್ದಾರೆ.

ಅನಂತರ ಜಗದ್ಗುರು XIVನೇ ಲಿಯೋರವರು ಪಿಯಾಝಾ ದೆಲ್ ಪ್ಲೆಬಿಸ್ಚಿಟೋವನ್ನು ತೊರೆದು ರೋಟೊಂಡಾ ಡಿಯಾಸ್‌ಗೆ ತೆರಳಿ, ಸಂಜೆ 6:45ಕ್ಕೆ ಹೆಲಿಕಾಪ್ಟರ್ ಮೂಲಕ ವ್ಯಾಟಿಕನ್‌ಗೆ ಹಿಂತಿರುಗಲಿದ್ದಾರೆ.

24 ಏಪ್ರಿಲ್ 2026, 17:48