ಈಕ್ವಟೋರಿಯಲ್ ಗಿನಿಯಾದಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ತಂತ್ರಜ್ಞಾನ ಶಾಲೆಗೆ ಜಗದ್ಗುರು XIVನೇ ಲಿಯೋರವರು ಭೇಟಿ ನೀಡಿದರು.
ವ್ಯಾಟಿಕನ್ ವರದಿ
ಬುಧವಾರ, ಈಕ್ವಟೋರಿಯಲ್ ಗಿನಿಯಾದಲ್ಲಿ ತನ್ನ ಸಂಪೂರ್ಣ ಕೊನೆಯ ದಿನದಂದು, ಜಗದ್ಗುರು XIVನೇ ಲಿಯೋರವರು ಪೂರ್ವ ಭಾಗದ ಮೊಂಗೊಮೊ ನಗರದಲ್ಲಿರುವ ಜಗದ್ಗುರು ಫ್ರಾನ್ಸಿಸ್ ರವರ ತಂತ್ರಜ್ಞಾನ ಶಾಲೆಗೆ ಭೇಟಿ ನೀಡಿದರು.
ತಮ್ಮ ಪೂರ್ವಾಧಿಕಾರಿಯ ಹೆಸರಿನಲ್ಲಿ ನಾಮಕರಣಗೊಂಡಿರುವ ಈ ಶಾಲೆಗೆ ಮಾಡಿದ ಈ ಭೇಟಿ, ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವದ ಒಂದು ದಿನದ ನಂತರ ನಡೆದಿದೆ.
ಈ ಶಿಕ್ಷಣ ಸಂಸ್ಥೆ ವಿಶೇಷವಾಗಿ ಯುವಕರಿಗಾಗಿ ತಂತ್ರಜ್ಞಾನ ಹಾಗೂ ವೃತ್ತಿಪರ ತರಬೇತಿಯನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತದೆ.
ಈ ಭೇಟಿಗೆ ಮುನ್ನ, ಜಗದ್ಗುರು ಲಿಯೋರವರು ಇದೇ ನಗರದಲ್ಲಿರುವ ಅಮಲೊಧ್ಭವ ಮಾತೆಯ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದರು.
ದಿನದ ನಂತರದ ವೇಳೆಯಲ್ಲಿ, ಅವರು ಕೈದಿಗಳು ಮತ್ತು ಯುವಕರನ್ನು ಭೇಟಿಯಾಗಲಿದ್ದಾರೆ.
ಗುರುವಾರ, ಈಕ್ವಟೋರಿಯಲ್ ಗಿನಿಯಾದಲ್ಲಿ ತಮ್ಮ ಅಂತಿಮ ಬಲಿ ಪೂಜೆಯನ್ನು ಆಚರಿಸಿದ ನಂತರ, ಜಗದ್ಗುರುಗಳು ಆಫ್ರಿಕಾದ ನಾಲ್ಕು ದೇಶಗಳ 11 ದಿನಗಳ ಪ್ರೇಷಿತರ ಯಾತ್ರೆಯನ್ನು ಸಮಾಪ್ತಿಗೊಳಿಸಿ, ರೋಮ್‌ಗೆ ಮರಳಲಿದ್ದಾರೆ.
