ಹುಡುಕಿ

EGUINEA-VATICAN-DIPLOMACY

ಇಕ್ವೇಟೋರಿಯಲ್ ಗಿನಿಯಾದಲ್ಲಿ ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರುಗಳು: “ನಮ್ಮ ಜೀವನದ ಕಥೆ ಸುವಾರ್ತೆಯಲ್ಲಿ ತನ್ನ ಅರ್ಥವನ್ನು ಕಂಡುಕೊಳ್ಳುತ್ತದೆ”

ಆಫ್ರಿಕಾದ ನಾಲ್ಕು ರಾಷ್ಟ್ರಗಳಿಗೆ ತನ್ನ ಪ್ರೇಷಿತರ ಪ್ರಯಾಣದ ಅಂತಿಮ ಪವಿತ್ರ ಬಲಿ ಪೂಜೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಧರ್ಮ ಸಭೆಯನ್ನು “ಯೇಸುವಿನ ಮೊದಲ ಶಿಷ್ಯರ ಗುರಿಯನ್ನು ಸಂತೋಷದಿಂದ ಮುಂದುವರಿಸಿರಿ” ಎಂದು ಪ್ರೋತ್ಸಾಹಿಸಿದರು ನಮ್ಮ ಜೀವನದ ಅರ್ಥವನ್ನು ಪ್ರಕಟಿಸಲು ಪವಿತ್ರ ಗ್ರಂಥಕ್ಕೆ ಅವಕಾಶ ನೀಡುವ ಮಹತ್ವವನ್ನು ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಮಾಲಾಬೊ ಕ್ರೀಡಾಂಗಣದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ, ಪವಿತ್ರ ಗ್ರಂಥಗಳ ಮೂಲಕ ದೇವರು ನಮ್ಮ ಜೀವನದ ಅರ್ಥವನ್ನು ತಿಳಿಸುತ್ತಾರೆ, ತನ್ನ ಪ್ರೀತಿಯನ್ನು ನಮಗೆ ತೋರಿಸುತ್ತಾರೆ ಮತ್ತು ಅದನ್ನು ಎಲ್ಲರಿಗೂ ಹಂಚಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತಾರೆ ಎಂದು ಹೇಳಿದರು. ಪ್ರಭುವಿನ ಸಾನ್ನಿಧ್ಯದಲ್ಲಿ ನಮ್ಮ ಸಮಸ್ಯೆಗಳು ಮಾಯವಾಗುವುದಿಲ್ಲ, ಆದರೆ ಅವು ಬೆಳಕಿನಲ್ಲಿ ಸ್ಪಷ್ಟವಾಗುತ್ತವೆ ಹೇಗೆ ಪ್ರತಿಯೊಂದು ಶಿಲುಬೆಯೂ ಯೇಸುವಿನಲ್ಲಿ ವಿಮೋಚನೆಯನ್ನು ಕಂಡುಕೊಳ್ಳುತ್ತದೆಯೋ, ಹಾಗೆಯೇ ನಮ್ಮ ಜೀವನದ ಕಥೆಯೂ ಸುವಾರ್ತೆಯಲ್ಲಿ ತನ್ನ ಅರ್ಥವನ್ನು ಕಂಡುಕೊಳ್ಳುತ್ತದೆ ಎಂದು ಅವರು ಒತ್ತಿಹೇಳಿದರು.

ಯೇಸುವಿನಲ್ಲಿ ದೇವರು ತನ್ನನ್ನೇ ನಮಗಾಗಿ ಕೊಟ್ಟಿದ್ದಾರೆ ಎಂಬ ಮಹತ್ತರ ಸತ್ಯವನ್ನು ಅವರು ನೆನಪಿಸಿದರು. ನಾವು ಅವರ ಪ್ರೀತಿ ನಮ್ಮ ಮರಣಕ್ಕಿಂತಲೂ ಬಲವಾದುದು ಎಂದು ನಂಬುವದೋ ಇಲ್ಲವೋ ಎಂಬುದು ನಮ್ಮ ಆಯ್ಕೆ ಎಂದು ಹೇಳಿದರು. ಅವನಲ್ಲಿ ನಂಬಿಕೆ ಇಡುವುದರಿಂದ ನಿರಾಶೆ ಮತ್ತು ದೇವರು ನೀಡುವ ಭರವಸೆಯ ನಡುವೆ ನಾವು ನಿರ್ಧಾರ ಮಾಡುತ್ತೇವೆ. “ಲೋಕದ ಜೀವಕ್ಕಾಗಿ ನಾವು ಕೊಡುವ ಅನ್ನ ನನ್ನ ಮಾಂಸವೇ” ಎಂಬ ಯೇಸುವಿನ ಮಾತುಗಳು ನಮ್ಮ ಜೀವನ ಮತ್ತು ನ್ಯಾಯಕ್ಕಾಗಿ ಇರುವ ಹಸಿವನ್ನು ತೃಪ್ತಿಪಡಿಸುತ್ತವೆ ಎಂದು ಅವರು ವಿವರಿಸಿದರು.

ಈ ಹಿನ್ನೆಲೆಯಲ್ಲೇ, ಇಕ್ವೇಟೋರಿಯಲ್ ಗಿನಿಯಾದ ಧರ್ಮ ಸಭೆ ಯೇಸುವಿನ ಮೊದಲ ಶಿಷ್ಯರ ಗುರಿಯನ್ನು ಸಂತೋಷದಿಂದ ಮುಂದುವರಿಸಬೇಕು ಎಂದು ಜಗದ್ಗುರುಗಳು ಪ್ರೋತ್ಸಾಹಿಸಿದರು. ಸುವಾರ್ತೆಯನ್ನು ಒಟ್ಟಾಗಿ ಓದಿ, ಉತ್ಸಾಹದಿಂದ ಘೋಷಿಸಬೇಕು ಮತ್ತು ಬಲಿ ಪೂಜೆಯನ್ನು ಆಚರಿಸುವಾಗ ತಮ್ಮ ಜೀವನದ ಮೂಲಕ ವಿಶ್ವಾಸಕ್ಕೆ ಸಾಕ್ಷಿಯಾಗಬೇಕು ಎಂದು ಹೇಳಿದರು, ಹೀಗೆ ದೇವರ ವಾಕ್ಯವು ಎಲ್ಲರಿಗೂ ಒಳ್ಳೆಯ ಪ್ರಭಾವ ಬೀರುವಂತೆ ಆಗುತ್ತದೆ.

ತಮ್ಮ ಪ್ರಭೊಧನೆಯ ಆರಂಭದಲ್ಲಿ, ಮಾಲಾಬೊ ಮಹಾಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ.ಸ್ವಾಮಿ ಫಾರ್ಚುನಾಟೊ ನ್ಸುವೆ ಈಸೋನೋ ರವರ ಅಕಾಲಿಕ ನಿಧನಕ್ಕೆ ಜಗದ್ಗುರುಗಳು ಹೃದಯಪೂರ್ವಕ ಸಂತಾಪ ಸೂಚಿಸಿದರು. ಸುಮಾರು 30,000 ಜನರ ಸಮ್ಮುಖದಲ್ಲಿ ನಡೆದ ಈ ಬಲಿಪೂಜೆ, ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾದಲ್ಲಿ ನಡೆದ 11 ದಿನಗಳ ಪ್ರೇಷಿತರ ಪ್ರಯಾಣದ ಅಂತಿಮ ಬಲಿಪೂಜೆಯಾಗಿತ್ತು.

ಜಗದ್ಗುರುಗಳು ದೇವರ ವಾಕ್ಯವು ನಮ್ಮ ಜೀವನದಲ್ಲಿ ಫಲ ನೀಡುತ್ತದೆ ಮತ್ತು ನಮಗೆ ಸ್ವಾತಂತ್ರ್ಯವನ್ನು ಕೊಡುತ್ತದೆ ಎಂದು ಹೇಳಿದರು. ಪ್ರೇಷಿತರ ಕೃತಿಗಳಲ್ಲಿ ಫಿಲಿಪ್ಪನು ಎಥಿಯೋಪಿಯಾದ ಅಧಿಕಾರಿಗೆ ಸುವಾರ್ತೆಯನ್ನು ವಿವರಿಸಿದ ಘಟನೆಯನ್ನು ಉಲ್ಲೇಖಿಸಿ, ದೇವರ ವಾಕ್ಯವು ವ್ಯಕ್ತಿಯ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ವಿವರಿಸಿದರು. ದೀಕ್ಷಾಸ್ನಾನದ ಮೂಲಕ ನಾವು ಸಹ ಹೊಸ ಜೀವನವನ್ನು ಪಡೆದು ದೇವರ ಮಕ್ಕಳಾಗುತ್ತೇವೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರುಗಳು “ಕ್ರಿಸ್ತನು ನಮ್ಮೆಲ್ಲವೂ ಆಗಿದ್ದಾರೆ” ಎಂದು ಒತ್ತಿಹೇಳಿದರು. ದೇವರು ಸದಾ ಮೊದಲು ನಮ್ಮನ್ನು ಪ್ರೀತಿಸುತ್ತಾರೆ ಎಂಬ ಈ ಸುವಾರ್ತೆಯನ್ನು ಜಗತ್ತಿಗೆ ಘೋಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ನಮ್ಮ ಸಾಕ್ಷಿಯ ಮೂಲಕ ಪ್ರೀತಿ, ಸೇವೆ ಮತ್ತು ಕ್ಷಮೆಯ ಮೂಲಕ ಸುವಾರ್ತೆಯನ್ನು ಜೀವಂತಗೊಳಿಸಬೇಕು. ಜೊತೆಗೆ, ಸ್ವಾರ್ಥದಲ್ಲಿ ಮುಳುಗದೇ, ಇತರರಿಗೆ ಸ್ಥಳ ನೀಡಬೇಕು ನ್ಯಾಯ ಮತ್ತು ಏಕತೆಯ ಸೇವೆಯಲ್ಲಿ ಪ್ರಭುವಿನ ಪ್ರೀತಿಯೇ ನಮ್ಮನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

23 ಏಪ್ರಿಲ್ 2026, 18:42