ಹುಡುಕಿ

ಜಗದ್ಗುರು ಲಿಯೋರವರು ವಿಮಾನದಿಂದ ಕೈ ಬೀಸುತ್ತಿರುವುದು ಜಗದ್ಗುರು ಲಿಯೋರವರು ವಿಮಾನದಿಂದ ಕೈ ಬೀಸುತ್ತಿರುವುದು  (ANSA)

ಜಗದ್ಗುರು XIVನೇ ಲಿಯೋರವರು ಈಕ್ವಟೋರಿಯಲ್ ಗಿನಿಯಾಗೆ ಪ್ರೇಷಿತರ ಪ್ರವಾಸವನ್ನು ಆರಂಭಿಸುತ್ತಾರೆ

ಜಗದ್ಗುರು XIVನೇ ಲಿಯೋರವರು ಈಕ್ವಟೋರಿಯಲ್ ಗಿನಿಯಾಗೆ ಆಗಮಿಸಿ, ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ಹೊಂದಿರುವ ತಮ್ಮ ಪ್ರೇಷಿತರ ಪ್ರವಾಸದ ನಾಲ್ಕನೇ ಮತ್ತು ಅಂತಿಮ ಹಂತವನ್ನು ಗುರುತಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಆಫ್ರಿಕಾದ ಏಕೈಕ ಸ್ಪ್ಯಾನಿಷ್ ಭಾಷೆಯ ದೇಶವಾದ ಈಕ್ವಟೋರಿಯಲ್ ಗಿನಿಯಾದ ಮಲಾಬೊ ನಗರಕ್ಕೆ ಸ್ಥಳೀಯ ಸಮಯ ಬೆಳಿಗ್ಗೆ 11:31ಕ್ಕೆ ಆಗಮಿಸಿದರು. ಅವರು ಅಲ್ಲಿ ಗುರುವಾರ, ಏಪ್ರಿಲ್ 23ರವರೆಗೆ ಉಳಿಯಲಿದ್ದು, ಇದು ಅವರ 11 ದಿನಗಳ ಪ್ರೇಷಿತರ ಪ್ರವಾಸದ ಅಂತಿಮ ಹಂತವಾಗಿದೆ.

ಜಗದ್ಗುರಗಳು ಸ್ಥಳೀಯ ಸಮಯ ಬೆಳಿಗ್ಗೆ 9:19ಕ್ಕೆ ಅಂಗೋಲಾದ ಲುವಾಂಡಾದಿಂದ ಹೊರಟು, ತಮ್ಮ ಅಂಗೋಲಾ ಪ್ರೇಷಿತರ ಪ್ರವಾಸವನ್ನು ಸಮಾಪ್ತಿಗೊಳಿಸಿದ್ದರು.

ಜಗದ್ಗುರಗಳು ಮಧ್ಯ ಆಫ್ರಿಕಾದ ಈ ರಾಷ್ಟ್ರದಲ್ಲಿ ಮೂರು ದಿನಗಳನ್ನು ಕಳೆದಿದ್ದು, ಈ ಅವಧಿಯಲ್ಲಿ ಲುವಾಂಡಾ, ಮುಕ್ಸಿಮಾ ಮತ್ತು ಸೌರಿಮೊ ಎಂಬ ಮೂರು ನಗರಗಳಿಗೆ ಭೇಟಿ ನೀಡಿದರು.

ಈಕ್ವಟೋರಿಯಲ್ ಗಿನಿಯಾದಲ್ಲಿ, ಜಗದ್ಗುರುಗಳು ರಾಷ್ಟ್ರಪತಿಯವರನ್ನು ರಾಷ್ಟ್ರಪತಿ ಭವನದಲ್ಲಿ ಸೌಜನ್ಯ  ಭೇಟಿಯಾಗಲಿದ್ದಾರೆ. ಅಲ್ಲದೆ ಅವರು ಅಧಿಕಾರಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳನ್ನು ಕೂಡ ಭೇಟಿಯಾಗಲಿದ್ದಾರೆ.

ನಂತರ ಅವರು ರಾಷ್ಟ್ರೀಯ ವಿಶ್ವವಿದ್ಯಾಲಯದ XIVನೇ ಲಿಯೋನ್  ಕ್ಯಾಂಪಸ್‌ನಲ್ಲಿ ಸಂಸ್ಕೃತಿ ಕ್ಷೇತ್ರದ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ ಜೀನ್ ಪಿಯರ್ ಒಲಿ ಮಾನಸಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ರೋಗಿಗಳನ್ನು ಭೇಟಿ ಮಾಡುವರು ಮತ್ತು ದೇಶದ ಬಿಷಪ್‌ಗಳೊಂದಿಗೆ ಖಾಸಗಿ ಸಭೆ ನಡೆಸಲಿದ್ದಾರೆ.

ಬುಧವಾರ, ಜಗದ್ಗುರು ಲಿಯೋರವರು ಮಲಾಬೊದಿಂದ ಮೊಂಗೊಮೋಗೆ ಪ್ರಯಾಣಿಸುವರು. ಅಲ್ಲಿ ಅವರು  ಅಮಲೋದ್ಭವ ಮಾತೆ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿ, ಜಗದ್ಗುರು ಫ್ರಾನ್ಸಿಸ್ ರವರು ತಂತ್ರಜ್ಞಾನ ಶಾಲೆಗೆ ಭೇಟಿ ನೀಡುವರು.

ನಂತರ ಅವರು ಬಾಟಾ ನಗರಕ್ಕೆ ತೆರಳಿ, ಸ್ಥಳೀಯ ಕಾರಾಗೃಹಕ್ಕೆ ಭೇಟಿ ನೀಡುವರು 2021 ಮಾರ್ಚ್ 7ರಂದು ಸಂಭವಿಸಿದ ಸ್ಫೋಟದ ಬಲಿಯಾದವರ ಸ್ಮಾರಕದಲ್ಲಿ ಪ್ರಾರ್ಥನೆ ಸಲ್ಲಿಸುವರು ಮತ್ತು ನಗರದ ಕ್ರೀಡಾಂಗಣದಲ್ಲಿ ಯುವಕರು ಹಾಗೂ ಕುಟುಂಬಗಳೊಂದಿಗೆ ಭೇಟಿಯಾಗಲಿದ್ದಾರೆ. ದಿನದ ಕಾರ್ಯಕ್ರಮವು ಮಲಾಬೊಗೆ ಅವರ ಮರಳುವಿಕೆಯಿಂದ ಮುಕ್ತಾಯಗೊಳ್ಳುತ್ತದೆ.

ಕೊನೆಗೆ, ಗುರುವಾರ, ಏಪ್ರಿಲ್ 23ರಂದು ಜಗದ್ಗುರುಗಳ ಪ್ರೇಷಿತರ ಪ್ರವಾಸದ ಅಂತಿಮ ದಿನ—ಜಗದ್ಗುರುಗಳು  ಮಲಾಬೊ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿ, ನಂತರ ವಿಮಾನ ನಿಲ್ದಾಣದಲ್ಲಿ ವಿದಾಯ ಸಮಾರಂಭದಲ್ಲಿ ಭಾಗವಹಿಸುವರು.

ಅದಾದ ನಂತರ ಜಗದ್ಗುರು ಲಿಯೋರವರು ರೋಮಿಗೆ ಪ್ರಯಾಣಿಸಲಿದ್ದು, ಅದೇ ದಿನದ ನಂತರ ಅವರು ಅಲ್ಲಿ ತಲುಪುವ ನಿರೀಕ್ಷೆಯಿದೆ.

21 ಏಪ್ರಿಲ್ 2026, 18:04