ಜಗದ್ಗುರು ಲಿಯೋರವರು ಡೌಲಾದಲ್ಲಿರುವ ಸಂತ ಪಾಲ್ ಕಥೋಲಿಕ ಆಸ್ಪತ್ರೆಗೆ ಖಾಸಗಿ ಭೇಟಿ ನೀಡಿದರು ಜಗದ್ಗುರು ಲಿಯೋರವರು ಡೌಲಾದಲ್ಲಿರುವ ಸಂತ ಪಾಲ್ ಕಥೋಲಿಕ ಆಸ್ಪತ್ರೆಗೆ ಖಾಸಗಿ ಭೇಟಿ ನೀಡಿದರು 

ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನ ಸಂತ ಪೌಲರ ಕಥೋಲಿಕ ಆಸ್ಪತ್ರೆಯನ್ನು ಭೇಟಿ ಮಾಡಿದರು.

ಜಗದ್ಗುರು XIVನೇ ಲಿಯೋರವರು ಸಂತ ಪಾಲ್ ಕಥೋಲಿಕ ಆಸ್ಪತ್ರೆಗೆ ಖಾಸಗಿ ಭೇಟಿ ನೀಡಿದರು. ಅಲ್ಲಿ ಅವರು ರೋಗಿಗಳು, ಅವರ ಕುಟುಂಬದವರು ಮತ್ತು ಆಸ್ಪತ್ರೆಯ ಸಿಬ್ಬಂದಿಯವರನ್ನು ಭೇಟಿಯಾಗಿ, ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.

 ವ್ಯಾಟಿಕನ್ ವರದಿ

ಜಗದ್ಗುರುಗಳ ಪ್ರೇಷಿತರ ಪ್ರವಾಸದ ಕಾರ್ಯಕ್ರಮದಲ್ಲಿ ಪೂರ್ವಾನುಮಾನಗೊಂಡಂತೆ, ಡೌಲಾದಲ್ಲಿ ನಡೆದ ಪವಿತ್ರ ಬಲಿಪೂಜೆಯ ಸಮಾರಂಭದ ಅಂತ್ಯದಲ್ಲಿ ಜಗದ್ಗುರು XIVನೇ ಲಿಯೋರವರು ಸಂತ ಪೌಲರ ಕಥೋಲಿಕ ಆಸ್ಪತ್ರೆಗೆ ಖಾಸಗಿ ಭೇಟಿ ನೀಡಿದರು.

ಆಸ್ಪತ್ರೆಯ ಚಾಪೆಲ್‌ನಲ್ಲಿ ಸ್ವಲ್ಪ ಸಮಯ ಧ್ಯಾನ ಮಾಡಿದ ನಂತರ, ಜಗದ್ಗುರುಗಳು ಆವರಣದಲ್ಲಿದ್ದ ಸಿಬ್ಬಂದಿ ಮತ್ತು ಕೆಲ ರೋಗಿಗಳೊಂದಿಗೆ ಸಂಕ್ಷಿಪ್ತವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.

ಆ ಸಮಯದಲ್ಲಿ, ಈ ಭೇಟಿ ಅವರ ಜೀವನದಲ್ಲಿ ಸಾಂತ್ವನದ ಸಂಕೇತವಾಗಿರಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು ಮತ್ತು ಅಲ್ಲಿದ್ದ ಎಲ್ಲರಿಗೂ ಹಾಗೂ ಅವರ ಪ್ರೀತಿಪಾತ್ರರಿಗೆ ತಮ್ಮ ಆಶೀರ್ವಾದವನ್ನು ನೀಡಿದರು.

‘ಸ್ವಗ೯ದಲ್ಲಿರುವ ನಮ್ಮ ತಂದೆ’ ಪ್ರಾರ್ಥನೆಯನ್ನು ಪಠಿಸಿದ ನಂತರ, ಜಗದ್ಗುರು ಲಿಯೋರವರು ರೋಗಿಗಳ ಕೊಠಡಿಗಳಿಗೆ ತೆರಳಿ, ವಿಶೇಷವಾಗಿ ಮಕ್ಕಳನ್ನೂ ಮತ್ತು ವೃದ್ಧರನ್ನೂ ಭೇಟಿ ಮಾಡಿದರು.

ಭೇಟಿಯ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ಯೌಂಡೆಗೆ ಹಿಂತಿರುಗಲು ವಿಮಾನ ನಿಲ್ದಾಣದತ್ತ ಪ್ರಯಾಣಿಸಿದರು, ಅಲ್ಲಿ ಇಂದು ಮಧ್ಯಾಹ್ನ ಅವರು ಸೆಂಟ್ರಲ್ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಭೇಟಿ ಮಾಡುವರು.

ಶನಿವಾರ, ಜಗದ್ಗುರು ಲಿಯೋರವರು ಯೌಂಡೆ-ವಿಲ್ಲೆ ವಿಮಾನ ನಿಲ್ದಾಣದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿ, ನಂತರ ತಮ್ಮ ಪ್ರೇಷಿತರ ಪ್ರವಾಸದ ಮೂರನೇ ಹಂತಕ್ಕಾಗಿ ಆಂಗೋಲಾಕ್ಕೆ ಪ್ರಯಾಣಿಸಲಿದ್ದಾರೆ.

17 ಏಪ್ರಿಲ್ 2026, 10:49