ಹುಡುಕಿ

ವಿಮಾನದಲ್ಲಿ ಜಗದ್ಗುರು XIVನೇ ಲಿಯೋರವರು ವಿಮಾನದಲ್ಲಿ ಜಗದ್ಗುರು XIVನೇ ಲಿಯೋರವರು 

ಜಗದ್ಗುರುಗಳು : ನಾನು ಆಫ್ರಿಕಾದಲ್ಲಿ ಕಥೊಲಿಕರನ್ನು ಪ್ರೋತ್ಸಾಹಿಸಲು ಬಂದಿದ್ದೇನೆ, ಟ್ರಂಪ್ ಜೊತೆ ಚರ್ಚೆ ಮಾಡಲು ಅಲ್ಲ.

ತನ್ನ ಪ್ರೇಷಿತರ ಪ್ರಯಾಣದ ಮೂರನೇ ಹಂತವಾಗಿ ಅಂಗೋಲಾದ ಲುವಾಂಡಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ, ಜಗದ್ಗುರು XIVನೇ ಲಿಯೋರವರು ಇತ್ತೀಚಿನ ದಿನಗಳಲ್ಲಿ ತನ್ನೊಂದಿಗೆ ಪ್ರಯಾಣಿಸಿದ ಪತ್ರಕರ್ತರನ್ನು ಅಭಿನಂದಿಸಿ, ಕ್ಯಾಮರೂನ್ ನೀಡಿದ ಅದ್ಭುತ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದರು.ತಮ್ಮ ಭಾಷಣಗಳು ಹಲವು ವಾರಗಳ ಹಿಂದೆಯೇ ಸಿದ್ಧಗೊಂಡಿದ್ದವು ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. “ನಾನು ಮತ್ತೆ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲು ಪ್ರಯತ್ನಿಸುತ್ತಿದ್ದೇನೆ ಎಂದು ಅವನ್ನು ಅರ್ಥೈಸಬಾರದು ಅದು ನನ್ನ ಆಸಕ್ತಿಯಲ್ಲ” ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಇತ್ತೀಚೆಗೆ ಕ್ಯಾಮರೂನ್‌ನಲ್ಲಿ ಕಳೆದ ಮೂರು ದಿನಗಳ ಬಗ್ಗೆ ಧನಾತ್ಮಕ ಮೌಲ್ಯಮಾಪನ ನೀಡಿದರು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷಾಭಿಮಾನಿಗಳನ್ನೂ, ಸುಮಾರು 250 ಸ್ಥಳೀಯ ಭಾಷೆಗಳನ್ನೂ ಹೊಂದಿರುವ ಈ ದೇಶವು ಹಲವು ರೀತಿಯಲ್ಲಿ ಆಫ್ರಿಕಾದ ಹೃದಯವನ್ನು ಪ್ರತಿನಿಧಿಸುತ್ತದೆ, ಎಂದು ಅವರು ಹೇಳಿದರು.

ಆಫ್ರಿಕಾದಾದ್ಯಂತ ನಡೆಯುತ್ತಿರುವ ತಮ್ಮ ಪ್ರೇಷಿತರ ಪ್ರಯಾಣದ ಮೂರನೇ ಹಂತವಾಗಿ ಅಂಗೋಲಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ, ಟೇಕ್‌ಆಫ್ ಆದ ಕೆಲವೇ ನಿಮಿಷಗಳ ನಂತರ ಜಗದ್ಗುರುಗಳು ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಪತ್ರಕರ್ತರನ್ನು ಅಭಿನಂದಿಸಿ, ಅವರ ಕೆಲಸಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ, ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳನ್ನು ಹೇಗೆ ಅರ್ಥೈಸಲಾಗಿದೆ ಎಂಬುದರ ಕುರಿತು ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದರು.

ಅಸಡ್ಡೆಯ ಕಥನ

ನನ್ನ ಬಗ್ಗೆ ಅಮೆರಿಕದ ಅಧ್ಯಕ್ಷರು ಈ ಪ್ರಯಾಣದ ಮೊದಲ ದಿನ ಕೆಲವು ಹೇಳಿಕೆಗಳನ್ನು ನೀಡಿದ ನಂತರ ನಿರ್ಮಾಣವಾದ ರಾಜಕೀಯ ಪರಿಸ್ಥಿತಿಯಿಂದ, ಕೆಲವು ಅಂಶಗಳಲ್ಲಿ ನಿಖರವಾಗಿರದ ಒಂದು ಕಥನ ರೂಪುಗೊಂಡಿದೆ, ಎಂದು ಜಗದ್ಗುರು ಲಿಯೋರವರು ಹೇಳಿದರು.

ಅವರು ಉಲ್ಲೇಖಿಸಿದದ್ದು, ವಾರದ ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಮಾಡಿದ ಆರೋಪಗಳ ಬಗ್ಗೆ ಅದಕ್ಕೆ ಜಗದ್ಗುರುಗಳು ಈಗಾಗಲೇ ರೋಮಿನಿಂದ ಹೊರಟ ವಿಮಾನ ಪ್ರಯಾಣದ ವೇಳೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಮುಂದಿನ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಜೆಡಿ ವ್ಯಾನ್ಸ್—ಜಗದ್ಗುರುಗಳ ವಿರುದ್ಧ ಟೀಕಾತ್ಮಕ ಹೇಳಿಕೆಗಳನ್ನು ಮುಂದುವರಿಸಿದ್ದರೂ, ಜಗದ್ಗುರು ಲಿಯೋರವರ ದೃಷ್ಟಿಯಲ್ಲಿ ಆ ವಿಷಯ ಮೊದಲ ದಿನವೇ ಮುಗಿದಂತಾಗಿತ್ತು. ಆದ್ದರಿಂದಲೇ ಅವರು ಪತ್ರಕರ್ತರಿಗೆ ಈ ಬಗ್ಗೆ ಹೇಳಿದರು.

ಅದಾದ ನಂತರ ಬರೆಯಲ್ಪಟ್ಟಿರುವ ಹೆಚ್ಚಿನ ವಿಷಯಗಳು, ಹೇಳಿಕೆಗಳ ಬಗ್ಗೆ ಹೇಳಿಕೆಗಳಾಗಿದ್ದು, ಹೇಳಿದ್ದನ್ನು ಹೇಗೆ ಅರ್ಥೈಸಬೇಕು ಎಂಬುದನ್ನು ವಿವರಿಸಲು ಮಾಡಿದ ಪ್ರಯತ್ನಗಳಾಗಿವೆ, ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು.

ಇದಕ್ಕೆ ಉದಾಹರಣೆಯಾಗಿ, ಏಪ್ರಿಲ್ 16ರಂದು ನಡೆದ ಶಾಂತಿಯ ಪ್ರಾರ್ಥನಾ ಸಭೆಯಲ್ಲಿ ನೀಡಿದ ಮಹತ್ವದ ಭಾಷಣವನ್ನು ಅವರು ಉಲ್ಲೇಖಿಸಿದರು. ಆ ಭಾಷಣವನ್ನು ಎರಡು ವಾರಗಳ ಹಿಂದೆಲೇ ಸಿದ್ಧಪಡಿಸಲಾಗಿತ್ತು ನನ್ನ ಬಗ್ಗೆ ಅಥವಾ ನಾನು ಪ್ರಚಾರ ಮಾಡುತ್ತಿರುವ ಶಾಂತಿಯ ಸಂದೇಶದ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡುವ ಮುಂಚೆಯೇ ಆದರೂ, ಅದು ನಾನು ಮತ್ತೆ ಅಧ್ಯಕ್ಷರೊಂದಿಗೆ ಚರ್ಚೆಗೆ ಇಳಿಯಲು ಯತ್ನಿಸುತ್ತಿದ್ದೇನೆ ಎಂಬಂತೆ ಅರ್ಥೈಸಲಾಯಿತು ಆದರೆ ಅದು ನನ್ನ ಆಸಕ್ತಿಯಲ್ಲ, ಎಂದು ಅವರು ಹೇಳಿದರು.

ಧರ್ಮಗಳ ನಡುವೆ ಶಾಂತಿ ಮತ್ತು ಸಂವಾದ ನಿರ್ಮಾಣ

ಹೋಗುವ ಮಾರ್ಗದ ಪ್ರಯಾಣದ ವೇಳೆ ಹೇಳಿದಂತೆ, ಜಗದ್ಗುರು ಲಿಯೋರವರು ತಮ್ಮ ಧ್ಯೇಯವನ್ನು ಪುನಃ ದೃಢಪಡಿಸಿದರು “ನಾನು ಮುಖ್ಯವಾಗಿ ಆಫ್ರಿಕಾಗೆ ಧರ್ಮ ಗುರು ಆಗಿ, ಕಥೊಲಿಕ ಧರ್ಮ ಸಭೆಯ ಮುಖ್ಯಸ್ಥನಾಗಿ ಬರುತ್ತಿದ್ದೇನೆ ಆಫ್ರಿಕಾದಾದ್ಯಂತ ಇರುವ ಎಲ್ಲ ಕಥೊಲಿಕರೊಂದಿಗೆ ಇರಲು, ಅವರೊಂದಿಗೆ ಆಚರಿಸಲು, ಅವರನ್ನು ಉತ್ತೇಜಿಸಲು ಮತ್ತು ಜೊತೆಗಿರುವುದಕ್ಕೆ ನಾನು ಪ್ರಯಾಣಿಸುತ್ತಿದ್ದೇನೆ.

ಈ ಭೇಟಿಗೆ ಇತರೆ ಆಯಾಮಗಳೂ ಇದ್ದವು. ಯೌಂಡೆಯ ಅಪೋಸ್ತೋಲಿಕ್ ನುಂಸಿಯೇಚರ್‌ನಲ್ಲಿ ಇಮಾಮ್‌ಗಳ ಗುಂಪಿನೊಂದಿಗೆ ನಡೆದ ಅತ್ಯಂತ ಉತ್ತಮ ಸಭೆಯನ್ನು ಅವರು ಉಲ್ಲೇಖಿಸಿದರು. “ಇತರೆ ಸ್ಥಳಗಳಲ್ಲಿ ನಾವು ಮಾಡಿರುವಂತೆ, ಮತ್ತು ಜಗದ್ಗುರು ಫ್ರಾನ್ಸಿಸ್ ರವರು ತಮ್ಮಕಾಲವಧಿಯಲ್ಲಿ ಮಾಡಿದಂತೆ ಧರ್ಮಾಂತರ ಸಂವಾದ, ಸಹೋದರತ್ವದ ಪ್ರಚಾರ, ಪರಸ್ಪರ ಅರ್ಥೈಸುವಿಕೆ, ಸ್ವೀಕಾರ, ಹಾಗೂ ಎಲ್ಲಾ ಧರ್ಮದ ಜನರೊಂದಿಗೆ ಶಾಂತಿ ನಿರ್ಮಾಣವನ್ನು ಮುಂದುವರಿಸಬೇಕು, ಎಂದು ಅವರು ಹೇಳಿದರು.

ಜಗದ್ಗುರಗಳು ಕಥೊಲಿಕ ಯೂನಿವರ್ಸಿಟಿ ಆಫ್ ಸೆಂಟ್ರಲ್ ಆಫ್ರಿಕಾದಲ್ಲಿ ನಡೆದ ಸಭೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅಲ್ಲಿ ಅವರು ಆಫ್ರಿಕಾದ ನಕ್ಷೆಯನ್ನು ಹೊಂದಿದ, ಮಧ್ಯದಲ್ಲಿ ಸಂತ ಅಗಸ್ಟಿನ್ ಪ್ರತಿಮೆಯಿರುವ “ಸುಂದರ ಸ್ಮಾರಕ”ವನ್ನು ಆಶೀರ್ವದಿಸಿದ್ದರು. ಈ ಶಿಲ್ಪವು ಈ ಧರ್ಮ ಸಭೆಯ ಅರ್ಥದ ಒಂದು ಭಾಗವನ್ನು ವ್ಯಕ್ತಪಡಿಸುತ್ತದೆ, ಎಂದು ಅವರು ವಿವರಿಸಿದರು.

ಸುವಾರ್ತೆಯ ಘೋಷಣೆ

ತಮ್ಮ ಅಭಿನಂದನೆಯಲ್ಲಿ, ಜಗದ್ಗುರುಗಳು ಆಫ್ರಿಕಾ ಖಂಡದಾದ್ಯಂತ ಕಂಡುಬರುವ ಸಂಪತ್ತಿನ ಅಸಮಾನ ಹಂಚಿಕೆ ಎಂಬ ತುರ್ತು ಸಮಸ್ಯೆಯನ್ನು ಕೂಡ ಉಲ್ಲೇಖಿಸಿದರು. ವಿಶೇಷವಾಗಿ ಕ್ಯಾಮರೂನ್‌ ಬಹಳ ಅವಕಾಶಗಳಿರುವ ದೇಶವೆಂದು ಅವರು ಹೇಳಿದರು.

ಇದೀಗ ಅಂಗೋಲಾಕ್ಕೆ ಪ್ರಯಾಣ ಮುಂದುವರಿಯುತ್ತಿದ್ದು, “ನಾವು ಸುವಾರ್ತೆಯ ಸಂದೇಶವನ್ನು ಮುಂದುವರಿಸುತ್ತೇವೆ,” ಎಂದು ಜಗದ್ಗುರುಗಳು ಹೇಳಿದರು. ಕ್ರೈಸ್ತರಾಗಿರುವ ಸೌಂದರ್ಯವನ್ನು ಅವರು ಒತ್ತಿಹೇಳಿದರು“ಕ್ರಿಸ್ತನನ್ನು ಅನುಸರಿಸುವುದೆಂದರೆ ಏನು, ಸಹೋದರತ್ವವನ್ನು ಉತ್ತೇಜಿಸುವುದೆಂದರೆ ಏನು, ಪ್ರಭುವಿನಲ್ಲಿ ನಂಬಿಕೆ ಇಡುವುದೆಂದರೆ ಏನು ಮತ್ತು ನಮ್ಮ ಲೋಕದಲ್ಲಿ ನ್ಯಾಯವನ್ನು ಉತ್ತೇಜಿಸುವ ಮಾರ್ಗಗಳನ್ನು ಹುಡುಕುವುದು, ಶಾಂತಿಯನ್ನು ಸ್ಥಾಪಿಸುವುದು.

ಕ್ಯಾಮರೂನ್‌ಗೆ ಧನ್ಯವಾದಗಳು

ಜಗದ್ಗುರಗಳು ವಿಮಾನದಲ್ಲಿ ಇದ್ದ ಏಕೈಕ ಕ್ಯಾಮರೂನ್ ಪತ್ರಕರ್ತರಾದ ಚಾರ್ಲ್ಸ್ ಎಬುನೇ (ಸಿಆರ್ ಟಿವಿ) ಅವರ ಮೂಲಕ, ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನ ಎಲ್ಲಾ ಜನರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಅದ್ಭುತ ಸ್ವಾಗತಕ್ಕಾಗಿ, ಅಪಾರ ಉತ್ಸಾಹಕ್ಕಾಗಿ, ಜನರ ಸಂತೋಷಕ್ಕಾಗಿ. ಇದು ನಿಜವಾಗಿಯೂ ಅದ್ಭುತವಾಗಿತ್ತು. ನಂಬಿಕೆಯ ಸಮುದಾಯದ ಜನರು ತಮ್ಮ ಸಂಯುಕ್ತ ಉತ್ಸಾಹದಲ್ಲಿ ಯೇಸು ಕ್ರಿಸ್ತನ ಅನುಯಾಯಿಗಳಾಗಿರುವುದೆಂದರೆ ಏನು, ನಮ್ಮ ನಂಬಿಕೆಯನ್ನು ಒಟ್ಟಾಗಿ ಆಚರಿಸುವುದೆಂದರೆ ಏನು ಎಂಬುದನ್ನು ಕಂಡುಕೊಂಡರು ಇದು ಅತ್ಯಂತ ಸುಂದರ ಅನುಭವ,” ಎಂದು ಅವರು ಹೇಳಿದರು.

ಈ ಅನುಭವವನ್ನು ಪಡೆದಿದ್ದಕ್ಕಾಗಿ ತಾವು “ಅತ್ಯಂತ ಸಂತೋಷದಲ್ಲಿದ್ದೇನೆ” ಎಂದು ಜಗದ್ಗುರುಗಳು ಹೇಳಿದರು.

“ಅಂಗೋಲಾದಲ್ಲಿ ಮತ್ತೆ ಭೇಟಿಯಾಗೋಣ”

ಕೊನೆಗೆ, ವಿಮಾನದಲ್ಲಿದ್ದ ಸುಮಾರು 70 ಪತ್ರಕರ್ತರಿಗೆ ಜಗದ್ಗುರುಗಳು ಮತ್ತೊಮ್ಮೆ ಧನ್ಯವಾದ ಹೇಳಿದರು.

“ನಿಮ್ಮೆಲ್ಲರನ್ನೂ ಅಭಿನಂದಿಸಲು ನನಗೆ ಬಹಳ ಸಂತೋಷವಾಗಿದೆ. ನೀವು ಮಾಡುತ್ತಿರುವ ಕೆಲಸಕ್ಕೆ ಧನ್ಯವಾದಗಳು. ಈ ಪ್ರಯಾಣದಲ್ಲಿ ದೇವರು ನಮ್ಮೆಲ್ಲರನ್ನೂ ಮುಂದುವರಿದು ಆಶೀರ್ವದಿಸಲಿ ಎಂದು ನಾನು ಆಶಿಸುತ್ತೇನೆ.ಇದನ್ನು ಹೇಳಿ, ಜಗದ್ಗುರುಗಳು ತಮ್ಮ ಮಾತುಗಳನ್ನು “ಅಂಗೋಲಾದಲ್ಲಿ ಮತ್ತೆ ಭೇಟಿಯಾಗೋಣ!” ಎಂದು ಮುಕ್ತಾಯಗೊಳಿಸಿದರು.

18 ಏಪ್ರಿಲ್ 2026, 14:23