ALGERIA-VATICAN-DIPLOMACY

ಅಲ್ಜೀರಿಯಾಗೆ ವಿದಾಯ ಹೇಳಿದ ಜಗದ್ಗುರುಗಳು, ಕ್ಯಾಮರೂನ್‌ಗೆ ಪ್ರಯಾಣಕ್ಕೆ ಹೊರಟರು.

ಅಲ್ಜಿರಿಯಾದಲ್ಲಿರುವ ಧರ್ಮ ಸಭೆ ನಡೆಸುವ ಅನಾಥಾಶ್ರಮಕ್ಕೆ ಸ್ವಲ್ಪ ಸಮಯದ ಭೇಟಿಯ ನಂತರ, ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾಗೆ ಮಾಡಿದ ತಮ್ಮ ಪ್ರೇಷಿತರ ಪ್ರವಾಸವನ್ನು ಮುಗಿಸಿ ಜಗದ್ಗುರುಗಳು ವಿಮಾನವನ್ನು ಹತ್ತಿ, ನಾಲ್ಕು ಆಫ್ರಿಕಾ ರಾಷ್ಟ್ರಗಳ ಪ್ರವಾಸದ ಎರಡನೇ ಹಂತಕ್ಕಾಗಿ ಕ್ಯಾಮರೂನ್‌ಗೆ ಪ್ರಯಾಣಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಬುಧವಾರ ಬೆಳಿಗ್ಗೆ ಸ್ಥಳೀಯ ಸಮಯದಂತೆ ಸುಮಾರು 10:15ಕ್ಕೆ ಅಲ್ಜೀರಿಯಾದ “ಹುವಾರಿ ಬುಮೇಡಿಯೆನ್” ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ವಿದೇಶಗಳಲ್ಲಿ ನಡೆಯುತ್ತಿರುವ ತಮ್ಮ ನಾಲ್ಕು ರಾಷ್ಟ್ರಗಳ ಪ್ರೇಷಿತರ ಪ್ರವಾಸದ ಮೊದಲ ಹಂತವನ್ನು ಮುಕ್ತಾಯಗೊಳಿಸಿದರು.

ಜಗದ್ಗುರುಗಹ ವಿಮಾನವು 11 ದಿನಗಳ ಈ ಪ್ರವಾಸದ ಎರಡನೇ ಹಂತಕ್ಕಾಗಿ ಮಧ್ಯಾಹ್ನ ಸುಮಾರು 3:20ಕ್ಕೆ ಕ್ಯಾಮರೂನ್‌ನ ಯೌಂಡೆ-ನ್ಸಿಮಾಲೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಂತೆ ಯೋಜಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು, ಅವರು ಅಲ್ಜೀರಿಯಾದ ಪ್ರೇಷಿತರ ರಾಯಭಾರಿಗೆ ವಿದಾಯ ಹೇಳಿ, ಮಿಷನರಿ ಸಿಸ್ಟರ್ಸ್ ಆಫ್ ಚಾರಿಟಿ ನಡೆಸುವ “ಅವರ್ ಲೇಡಿ ಆಫ್ ಆಫ್ರಿಕಾ” ನರ್ಸರಿಗೆ ಸ್ವಲ್ಪ ಸಮಯದ ಭೇಟಿ ನೀಡಿದರು.

ಮಕ್ಕಳು ಜಗದ್ಗುರುಳಿಗಾಗಿ ಚಿಕ್ಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು ನಂತರ ಅವರು ಮಕ್ಕಳನ್ನೂ ಕನ್ಯಾಸ್ತ್ರೀಯರನ್ನೂ ಭೇಟಿ ಮಾಡಿ ಶುಭಾಶಯಗಳನ್ನು ತಿಳಿಸಿದರು.

ಸೋಮವಾರ, ಅಲ್ಜೀರಿಯಾಗೆ ಆಗಮಿಸಿದ ನಂತರ ನಡೆದ ಸ್ವಾಗತ ಸಮಾರಂಭದ ಬಳಿಕ, ಜಗದ್ಗುರು XIVನೇ ಲಿಯೋರವರು ಗಣರಾಜ್ಯದ ರಾಷ್ಟ್ರಪತಿಗೆ ಶಿಷ್ಟಾಚಾರ ಭೇಟಿ ನೀಡಿದರು. ನಂತರ ಅವರು ಮಕಾಮ್ ಎಶಾಹಿದ್ ಶಹೀದ ಸ್ಮಾರಕಕ್ಕೆ ಭೇಟಿ ನೀಡಿ, ಅಧಿಕಾರಿಗಳು, ನಾಗರಿಕ ಸಮಾಜ ಮತ್ತು ರಾಜತಾಂತ್ರಿಕ ಪ್ರತಿನಿಧಿಗಳೊಂದಿಗೆ ಭೇಟಿ ನಡೆಸಿದರು, ಹಾಗು ಆಲ್ಜೀರಿಯಾದ ಗ್ರೇಟ್ ಮಸೀದಿಗೆ ಭೇಟಿ ನೀಡಿದರು.

ಅವರು ಬಾಬ್ ಎಲ್ ಓಯೆಡ್‌ನಲ್ಲಿರುವ ಆಗಸ್ಟಿನಿಯನ್ ಮಿಷನರಿ ಕನ್ಯಾ ಸ್ತ್ರೀಯರ ವೆಲ್ಕಮ್ ಅಂಡ್ ಫ್ರೆಂಡ್‌ಶಿಪ್ ಸೆಂಟರ್ ಗೆ ಖಾಸಗಿ ಭೇಟಿ ನೀಡಿದರು ಮತ್ತು “ಅವರ್ ಲೇಡಿ ಆಫ್ ಆಫ್ರಿಕಾ” ಬಾಸಿಲಿಕಾದಲ್ಲಿ ಅಲ್ಜೀರಿಯಾದ ಸಮುದಾಯದವರನ್ನು ಭೇಟಿ ಮಾಡಿದರು.

ಮಂಗಳವಾರ, ಅಲ್ಜೀರಿಯಾದ ಭೇಟಿಯ ಎರಡನೇ ದಿನ, ಜಗದ್ಗುರುಗಳು ಸಂತ ಆಗಸ್ಟಿನ್ ರವರ ಬಿಷಪ್ ಆಗಿ ಸೇವೆ ಸಲ್ಲಿಸಿದ್ದ ಪ್ರಾಚೀನ ಹಿಪ್ಪೋ ನಗರವಿರುವ ಅನ್ನಾಬಾಗೆ ಪ್ರಯಾಣಿಸಿದರು.

ಪುರಾತತ್ವ ತಾಣಕ್ಕೆ ಭೇಟಿ ನೀಡಿದ ನಂತರ, ಲಿಟಲ್ ಸಿಸ್ಟರ್ಸ್ ಆಫ್ ದ ಪುವರ್ ನಡೆಸುವ “ಮಾ ಮೈಸನ್” ವೃದ್ಧಾಶ್ರಮದಲ್ಲಿರುವ ಕೆಲವು ವೃದ್ಧರೊಂದಿಗೆ ಅವರು ಕೆಲ ಕ್ಷಣಗಳನ್ನು ಕಳೆದರು. ಮಧ್ಯಾಹ್ನ, ಜಗದ್ಗುರು XIVನೇ ಲಿಯೋರವರು ಸಂತ ಆಗಸ್ಟಿನ್ ಬಾಸಿಲಿಕಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದರು.

ಬುಧವಾರ ಬೆಳಿಗ್ಗೆ, ಜಗದ್ಗುರುಗಳ ಪ್ರಯಾಣಕ್ಕೆ ಮುನ್ನ ವಿಮಾನ ನಿಲ್ದಾಣದಲ್ಲಿ ಚಿಕ್ಕ ವಿದಾಯ ಸಮಾರಂಭ ನಡೆಯಿತು ಈ ವೇಳೆ ಅಲ್ಜೀರಿಯಾದ ರಾಷ್ಟ್ರಪತಿ ಅಬ್ದೆಲ್ಮಜೀದ್ ತೆಬ್ಬೂನ್ ಹಾಗೂ ನಾಗರಿಕ ಮತ್ತು ಧರ್ಮ ಸಭೆಯ ಪ್ರತಿನಿಧಿಗಳ ಪ್ರತಿನಿಧಿ ಮಂಡಳಿ ಉಪಸ್ಥಿತರಿದ್ದರು.

15 ಏಪ್ರಿಲ್ 2026, 14:09