Pope Leo XIV visits Equatorial Guinea

“ಆಫ್ರಿಕಾದಲ್ಲಿ ಒಂಬತ್ತನೇ ದಿನ: ಅಂಗೋಲಾದಿಂದ ಇಕ್ವೇಟೋರಿಯಲ್ ಗಿನಿಯಾದತ್ತ”

ಜಗದ್ಗುರು XIVನೇ ಲಿಯೋರವರು ಅಂಗೋಲಾವನ್ನು ತೊರೆದು ಇಕ್ವೇಟೋರಿಯಲ್ ಗಿನಿಯಾಗೆ ಆಗಮಿಸಿ, ನಾಲ್ಕು ಆಫ್ರಿಕಾ ದೇಶಗಳಲ್ಲಿ ನಡೆದ ಅವರ ತೀವ್ರ ಪ್ರೇಷಿತರ ಪ್ರಯಾಣದ ಅಂತಿಮ ಹಂತವನ್ನು ಆರಂಭಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಆಫ್ರಿಕಾದಲ್ಲಿನ ತಮ್ಮ ಪ್ರೇಷಿತರ ಪ್ರಯಾಣದ ನಾಲ್ಕನೇ ಮತ್ತು ಅಂತಿಮ ಹಂತವನ್ನು ಆರಂಭಿಸಿದ್ದಾರೆ. ಅವರು ಏಪ್ರಿಲ್ 21ರ ಮಂಗಳವಾರ ಬೆಳಿಗ್ಗೆ ಲುವಾಂಡಾದ 4 ಡೆ ಫೆವೆರೈರೊ ವಿಮಾನ ನಿಲ್ದಾಣದಲ್ಲಿ ನಡೆದ ವಿದಾಯ ಸಮಾರಂಭದ ಬಳಿಕ ಅಂಗೋಲಾವನ್ನು ತೊರೆದು, ಇಕ್ವೇಟೋರಿಯಲ್ ಗಿನಿಯಾದ ಹಳೆಯ ರಾಜಧಾನಿಯಾದ ಮಲಾಬೊ ನಗರದತ್ತ ಉತ್ತರ ದಿಕ್ಕಿಗೆ ಪ್ರಯಾಣಿಸಿದರು.

ಜಗದ್ಗುರು ಫ್ರಾನ್ಸಿಸ್ ರವರು ಧರ್ಮ ಸಭೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜಗದ್ಗುರುಗಳು ವಿಮಾನದಲ್ಲಿದ್ದ ಪತ್ರಕರ್ತರೊಂದಿಗೆ ಮಾತನಾಡುತ್ತಾ, ದಿವಂಗತ ಜಗದ್ಗುರುಗಳ ಜೀವನವು ಧರ್ಮ ಸಭೆಗೆ ನೀಡಿದ ಮಹಾನ್ ಕೊಡುಗೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬಡವರು, ರೋಗಿಗಳು, ಮಕ್ಕಳು ಮತ್ತು ವೃದ್ಧರತ್ತ ಅವರು ತೋರಿದ ಕಾಳಜಿ ಮತ್ತು ಸಮೀಪತೆಯ ಸಂಕೇತಗಳನ್ನು ಅವರು ಸ್ಮರಿಸಿದರು. 12 ವರ್ಷಗಳ ಅಧಿಕಾರ ಕಾಲದ ಪ್ರಮುಖ ವಿಷಯವಾಗಿದ್ದ ವಿಶ್ವವ್ಯಾಪಿ ಸಹೋದರತ್ವದ ಉತ್ತೇಜನದ ಕುರಿತು ಅವರು ಉಲ್ಲೇಖಿಸಿದರು. 2015ರಲ್ಲಿ ಅವರು ಘೋಷಿಸಿದ ಕರುಣೆಯ ವಿಶೇಷ ಜೂಬಿಲಿಯನ್ನು ಉಲ್ಲೇಖಿಸಿ, ಜಗದ್ಗುರು ಫ್ರಾನ್ಸಿಸ್ ರವರ ಕರುಣೆಯ ಸಂದೇಶವನ್ನೂ ಅವರು ನೆನಪಿಸಿದರು. ಅವರು ದೇವರ ಕರುಣೆಯ ಹೃದಯದಿಂದ ಮಾತನಾಡಿದರು, ಎಂದು ಜಗದ್ಗುರು ಲಿಯೋರವರು ಹೇಳಿದರು, “ಈ ಮಹಾನ್ ಪ್ರೀತಿ, ಕ್ಷಮೆ ಮತ್ತು ಪ್ರಭುವಿನ ಕರುಣೆಯ ಉದಾರ ಅಭಿವ್ಯಕ್ತಿ ಕುರಿತು ಮಾತನಾಡಿದರು.

ಅಂಗೊಲದಲ್ಲಿ ಸಹಕಾರದ ಬದ್ಧತೆ

ಅಂಗೋಲಾ ಕುರಿತು ಮಾತನಾಡಿದಾಗ, ಆ ದೇಶದ ಅಧ್ಯಕ್ಷರೊಂದಿಗೆ ನಡೆದ ಮಾತುಕತೆಯನ್ನು ಅವರು ಉಲ್ಲೇಖಿಸಿದರು. ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳನ್ನು ಸುಧಾರಿಸಲು ಧರ್ಮ ಸಭೆ ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆ ಹೊಸ ಆಸ್ಪತ್ರೆಗಳು ಮತ್ತು ಇತರೆ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ ಚರ್ಚಿಸಿದ್ದೇವೆ ಎಂದು ಹೇಳಿದರು. ಅಂಗೋಲಾದಲ್ಲಿ ಹೊಸ ಸುವಾರ್ತಾ ಪ್ರಚಾರವನ್ನು ಮುಂದುವರಿಸುವ ಮಹತ್ವವನ್ನೂ ಅವರು ಒತ್ತಿ ಹೇಳಿದರು ಜನರನ್ನು ಬಲವಂತವಾಗಿ ಮತಾಂತರಗೊಳಿಸುವುದರಿಂದ ಅಲ್ಲ, ಆದರೆ ನಂಬಿಕೆಯ ಸೌಂದರ್ಯವನ್ನು ಸಾಕ್ಷಿಯಾಗಿ ತೋರಿಸುವ ಮೂಲಕ. ನಂಬಿಕಸ್ಥರ ಸಂತೋಷವೇ ನಂಬಿಕೆಯ ಅತ್ಯುತ್ತಮ ಘೋಷಣೆಗಳಲ್ಲಿ ಒಂದಾಗಿದೆ, ಎಂದು ಅವರು ಹೇಳಿದರು.

ಸುಮಾರು ಎರಡುವರೆ ಗಂಟೆಗಳ ಬಳಿಕ, ಅವರು ಬಿಯೋಕೊ ದ್ವೀಪದಲ್ಲಿರುವ ಇಕ್ವೇಟೋರಿಯಲ್ ಗಿನಿಯಾದ ಹಳೆಯ ರಾಜಧಾನಿ ಮಲಾಬೊದಲ್ಲಿ ಇಳಿದರು. ಆಫ್ರಿಕಾದ ಏಕೈಕ ಸ್ಪ್ಯಾನಿಷ್ ಭಾಷೆ ಮಾತನಾಡುವ ಈ ದೇಶದಲ್ಲಿ ಜಗದ್ಗುರುಗಳನ್ನು ಸ್ವಾಗತಿಸಲು ಜನರು ರಸ್ತೆಗಳ ಅಂಚಿನಲ್ಲಿ ನಿಂತು ಹರ್ಷೋದ್ಗಾರ ಮಾಡುತ್ತಾ ಧ್ವಜಗಳನ್ನು ಬೀಸಿದರು.

ಇಕ್ವೇಟೋರಿಯಲ್ ಗಿನಿಯಾದ ಅಧಿಕಾರಿಗಳೊಂದಿಗೆ ಭೇಟಿ

ವಿಮಾನ ನಿಲ್ದಾಣದಲ್ಲಿ ಸಂಪ್ರದಾಯಬದ್ಧ ಸ್ವಾಗತದ ಬಳಿಕ, ಜಗದ್ಗುರುಗಳು ಕಾರಿನಲ್ಲಿ ರಾಷ್ಟ್ರಪತಿ ಭವನಕ್ಕೆ ತೆರಳಿ, 1979ರಿಂದ ಅಧಿಕಾರದಲ್ಲಿರುವ ಆಫ್ರಿಕಾದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿರುವ ಅಧ್ಯಕ್ಷ ತಿಯೋಡೋರೊ ಓಬಿಯಾಂಗ್ ಎನ್‌ಗುಯೆಮಾ ಮ್ಬಾಸೋಗೊ ರವರೊಂದಿಗೆ ಖಾಸಗಿ ಭೇಟಿಯನ್ನು ನಡೆಸಿದರು.

ನಂತರ  ದೇಶದ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕ ವಲಯದ ಸದಸ್ಯರನ್ನು ಭೇಟಿಯಾದರು. ಇಂದಿನ ಕಾಲದಲ್ಲಿ, ಹಿಂದಿನ ವರ್ಷಗಳಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಕಾಣುವುದು ಏನೆಂದರೆ, ಶಸ್ತ್ರಸಜ್ಜಿತ ಸಂಘರ್ಷಗಳ ಹೆಚ್ಚಳವು ತೈಲ ಮತ್ತು ಖನಿಜ ಸಂಪನ್ಮೂಲಗಳ ದುರುಪಯೋಗದಿಂದ ಉಂಟಾಗುತ್ತದೆ ಇದು ಅಂತರರಾಷ್ಟ್ರೀಯ ಕಾನೂನು ಅಥವಾ ಜನರ ಸ್ವಯಂ ನಿರ್ಧಾರ ಹಕ್ಕನ್ನು ಲೆಕ್ಕಿಸದೇ ನಡೆಯುತ್ತಿದೆ, ಎಂದು ಜಗದ್ಗುರುಗಳು ಹೇಳಿದರು.

“ನಾವು ಕಾಣುತ್ತಿರುವ ವೇಗವಾದ ತಂತ್ರಜ್ಞಾನ ಪ್ರಗತಿ ಕಚ್ಚಾ ವಸ್ತುಗಳ ಕುರಿತ ಊಹಾಪೋಹವನ್ನು ವೇಗಗೊಳಿಸಿದೆ,” ಮತ್ತು ಈ ಬದಲಾವಣೆ “ಸೃಷ್ಟಿಯ ಸಂರಕ್ಷಣೆ, ಸ್ಥಳೀಯ ಸಮುದಾಯಗಳ ಹಕ್ಕುಗಳು, ಕಾರ್ಮಿಕರ ಗೌರವ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆ” ಎಂಬ ಮೂಲಭೂತ ಕರ್ತವ್ಯಗಳನ್ನು ಮರೆಮಾಚುತ್ತಿರುವಂತೆ ಕಾಣುತ್ತದೆ. ಇದೇ ತಂತ್ರಜ್ಞಾನಗಳು ಬಹುಪಾಲು ಯುದ್ಧ ಉದ್ದೇಶಗಳಿಗೆ ರೂಪುಗೊಂಡಂತೆ ಮತ್ತು ಬಳಸಲ್ಪಡುವಂತೆ ಕಾಣುತ್ತವೆ, ಎಲ್ಲರಿಗೂ ಅವಕಾಶಗಳನ್ನು ವಿಸ್ತರಿಸಲು ವಿಫಲವಾಗುವ ಪರಿಸ್ಥಿತಿಗಳಲ್ಲಿ ಎಂದು ಅವರು ಹೇಳಿದರು. ದೇವರ ಹೆಸರನ್ನು ಅಧಿಪತ್ಯದ ಆಸೆ, ಅಹಂಕಾರ ಅಥವಾ ಭೇದಭಾವಕ್ಕಾಗಿ ಅವಮಾನಿಸಬಾರದು ವಿಶೇಷವಾಗಿ ಮರಣವನ್ನು ಸಮರ್ಥಿಸುವ ನಿರ್ಧಾರಗಳಿಗೆ ಅಥವಾ ಕ್ರಿಯೆಗಳಿಗೆ ಎಂದಿಗೂ ಬಳಸಬಾರದು ಎಂದು ಅವರು ಎಚ್ಚರಿಸಿದರು.

ಸಂಸ್ಕೃತಿ ಕ್ಷೇತ್ರದವರೊಂದಿಗೆ ಭೇಟಿ

ಅಧಿಕಾರಿಗಳೊಂದಿಗೆ ನಡೆದ ಭೇಟಿಯ ಬಳಿಕ, ಜಗದ್ಗುರುಗಳು ಮಲಾಬೊದಲ್ಲಿ ಸಂಸ್ಕೃತಿ ಕ್ಷೇತ್ರದವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ, ಅವರ ಗೌರವಾರ್ಥವಾಗಿ ಹೆಸರಿಸಲ್ಪಟ್ಟ ರಾಷ್ಟ್ರೀಯ ವಿಶ್ವವಿದ್ಯಾಲಯದ ಲಿಯೋನ್ XIV ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

ಈ ಗೌರವಕ್ಕೆ ಧನ್ಯವಾದ ತಿಳಿಸಿದ ಅವರು, “ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನೆ ಕೇವಲ ಆಡಳಿತಾತ್ಮಕ ಕ್ರಮವಲ್ಲ ಇದು ಮೂಲಸೌಕರ್ಯ ಅಥವಾ ಅಧ್ಯಯನ ಸ್ಥಳಗಳ ವಿಸ್ತರಣೆಯನ್ನು ಮೀರುವುದಾಗಿದೆ ಎಂದು ಹೇಳಿದರು. ಇದು ಮಾನವನ ಮೇಲೆ ಇರುವ ನಂಬಿಕೆಯ ಸಂಕೇತ, ಹೊಸ ತಲೆಮಾರುಗಳ ರೂಪಿಕರಣದಲ್ಲಿ ಹೂಡಿಕೆ ಮಾಡುವುದಕ್ಕೆ ನೀಡುವ ದೃಢೀಕರಣ ಮತ್ತು ಸತ್ಯವನ್ನು ಹುಡುಕುವ ಹಾಗೂ ಜ್ಞಾನವನ್ನು ಸಾಮಾನ್ಯ ಹಿತಕ್ಕಾಗಿ ಬಳಸುವ ಕಠಿಣವಾದರೂ ಉನ್ನತವಾದ ಕಾರ್ಯಕ್ಕೆ ಬೆಂಬಲ” ಎಂದು ಅವರು ವಿವರಿಸಿದರು.

ಮಾನಸಿಕ ಆಸ್ಪತ್ರೆಗೆ ಭೇಟಿ

ನಂತರ ಅವರು ಮಲಾಬೊದಲ್ಲಿರುವ ಜಾನ್ ಪಿಯರ್ ಒಲೀ ಮಾನಸಿಕ ಆಸ್ಪತ್ರೆಗೆ ಭೇಟಿ ನೀಡಿ, ಇಕ್ವೇಟೋರಿಯಲ್ ಗಿನಿಯಾದ ಸಮಾಜದಲ್ಲಿ ಇರುವ ಅಂಗವೈಕಲ್ಯ ಕುರಿತ ಕಳಂಕವನ್ನು ಉಲ್ಲೇಖಿಸಿದರು. “ದೇವರು ನಮ್ಮನ್ನು ನಾವು ಹೇಗಿದ್ದೇವೋ ಹಾಗೆಯೇ ಪ್ರೀತಿಸುತ್ತಾರೆ,” ಎಂದು ಅವರು ಹೇಳಿದರು, “ಆದರೆ ನಾವು ಹಾಗೆಯೇ ಉಳಿಯಬೇಕೆಂದು ಆತನು ಬಯಸುವುದಿಲ್ಲ! ಇಲ್ಲ, ದೇವರು ನಾವು ಸದಾಕಾಲವೂ ರೋಗಿಗಳಾಗಿರಬೇಕೆಂದು ಬಯಸುವುದಿಲ್ಲ; ಆತನು ನಮ್ಮನ್ನು ಗುಣಪಡಿಸಲು ಬಯಸುತ್ತಾರೆ!”ಎಂದರು.

ಒಂದು ಆಸ್ಪತ್ರೆ—ವಿಶೇಷವಾಗಿ ಕ್ರೈಸ್ತ ಧ್ಯೇಯ ಹೊಂದಿರುವುದು ಪ್ರತಿಯೊಬ್ಬರನ್ನು ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ, ಅವರ ದುರ್ಬಲತೆಯಲ್ಲಿಯೂ ಗೌರವಿಸಿ, ಸಮಗ್ರ ದೃಷ್ಟಿಕೋನದ ಪ್ರಕಾರ ಅವರು ಉತ್ತಮವಾಗಲು ಸಹಾಯ ಮಾಡುವ ಸ್ಥಳವಾಗಿದೆ. ಅವರ ಸಂದೇಶವನ್ನು ಆಸ್ಪತ್ರೆಯ ರೋಗಿಗಳು ಉತ್ಸಾಹದಿಂದ ಸ್ವಾಗತಿಸಿದರು ಭೇಟಿಯ ವೇಳೆ ಅವರು ಹಲವಾರು ಬಾರಿ ಚಪ್ಪಾಳೆ ತಟ್ಟಿದರು ಮತ್ತು ಹಾಡು-ನೃತ್ಯಗಳಿಂದ ಕಾರ್ಯಕ್ರಮ ಇನ್ನಷ್ಟು ಉತ್ಸಾಹಭರಿತವಾಯಿತು ಅವರು ವಿವರಿಸಿದರು.

21 ಏಪ್ರಿಲ್ 2026, 21:16