ಕಿಲಾಂಬಾದಲ್ಲಿ ನಡೆದ ಬಲಿ ಪೂಜೆಯಲ್ಲಿ ಜಗದ್ಗುರುಗಳು: ಆಂಗೋಲಾದಲ್ಲಿ ಧರ್ಮ ಸಭೆಯೊಂದಿಗೆ ಯೇಸು ನಡೆಯುತ್ತಾರೆ..
ವ್ಯಾಟಿಕನ್ ವರದಿ
ಧಮ೯ಸಭೆ ಬೋಧಿಸುವುದಕ್ಕೆ ನಿಷ್ಠರಾಗಿರಿ, ನಿಮ್ಮ ಧರ್ಮ ಗುರುಗಳನ್ನು ವಿಶ್ವಾಸಿಸಿರಿ, ಮತ್ತು ವಾಕ್ಯದಲ್ಲಿಯೂ ಬಲಿಪೂಜೆಯಲ್ಲಿಯೂ ವಿಶಿಷ್ಟವಾಗಿ ತನ್ನನ್ನು ಪ್ರಕಟಿಸುವ ಯೇಸುವಿನ ಮೇಲೆ ನಿಮ್ಮ ದೃಷ್ಟಿಯನ್ನು ನೆಟ್ಟಗಿರಿಸಿ.
ಜಗದ್ಗುರು XIVನೇ ಲಿಯೋರವರು 2026ರ ಏಪ್ರಿಲ್ 19ರಂದು, ಭಾನುವಾರ, ಅಂಗೋಲಾದ ಕಿಲಾಂಬಾದಲ್ಲಿ ನಡೆದ ಬಲಿಪೂಜೆಯ ಸಂದರ್ಭದಲ್ಲಿ—ತಮ್ಮ ಆಫ್ರಿಕಾ ಪ್ರವಾಸದ ಮೊದಲ ಪೂರ್ಣ ದಿನದಲ್ಲಿ ಈ ವಿಷಯವನ್ನು ದೃಢವಾಗಿ ಒತ್ತಿಹೇಳಿದರು.
ಜಗದ್ಗುರು XIVನೇ ಲಿಯೋರವರು ಸಂಪೂರ್ಣ ಪ್ರಭೋಧನೆಯನ್ನು ಓದಿ
ತಮ್ಮ ಪ್ರಭೋಧನೆಯಲ್ಲಿ, ಕೃತಜ್ಞತೆಯಿಂದ ತುಂಬಿದ ಹೃದಯದೊಂದಿಗೆ ಅವರು ಅವರ ಮಧ್ಯ ಬಲಿಪೂಜೆಯನ್ನು ಆಚರಿಸುತ್ತಿರುವುದಾಗಿ ಹೇಳಿ, ಈ ವರಕ್ಕಾಗಿ ದೇವರಿಗೆ ಧನ್ಯವಾದ ಸಲ್ಲಿಸಿದರು ಮತ್ತು ಸಂತೋಷಭರಿತ ಸ್ವಾಗತಕ್ಕಾಗಿ ಜನರಿಗೆ ಕೃತಜ್ಞತೆ ಹೇಳಿದರು.
ಸುಂದರವಾದರೂ ಗಾಯಗೊಂಡ ಅಂಗೋಲಾ ದೇಶ
ಪಾಸ್ಖ ಹಬ್ಬದ ಮೂರನೇ ಭಾನುವಾರದಂದು, ಜಗದ್ಗುರುಗಳು ಸಂತ ಲೂಕನ ಸುವಾರ್ತೆಯಲ್ಲಿರುವ ಎಮ್ಮಾವಸ್ ಮಾರ್ಗದ ಘಟನೆಯನ್ನು ಸ್ಮರಿಸಿದರು. ತಮ್ಮ ವಿಶ್ವಾಸವನ್ನಿಟ್ಟಿದ್ದ ಮತ್ತು ಅನುಸರಿಸಿದ್ದ ಯೇಸುವಿನ ಮರಣವನ್ನು ಕಂಡ ನಂತರ, ಹೃದಯದಲ್ಲಿ ದುಃಖ ಮತ್ತು ನೋವಿನಿಂದ ಕೂಡಿದ ಇಬ್ಬರು ಶಿಷ್ಯರು ಜೆರೂಸಲೇಮಿನಿಂದ ತಮ್ಮ ಊರಾದ ಎಮ್ಮಾವಸ್ ಕಡೆ ಹೊರಟರು. ಆರಂಭದಲ್ಲಿ ಅವರು ನಿರಾಶರಾಗಿದ್ದರು ಆದರೆ ನಂತರ, ಕ್ರಿಸ್ತನು ಅವರ ಮಧ್ಯದಲ್ಲಿದ್ದಾನರೆ ಮತ್ತು ಯೇಸು ಅವರೊಂದಿಗೆ ನಡೆದುಕೊಳ್ಳುತ್ತಿದ್ದಾನರೆ ಎಂಬುದನ್ನು ಅರಿತಾಗ ಎಲ್ಲವೂ ಬದಲಾಗುತ್ತದೆ.
ಈ ಸುವಾರ್ತೆಯ ಆರಂಭಿಕ ದೃಶ್ಯದಲ್ಲಿ, ನಿಮ್ಮ ದೇಶದ ಇತಿಹಾಸದ ಪ್ರತಿಬಿಂಬವನ್ನು ನಾನು ಕಾಣುತ್ತೇನೆ, ಎಂದು ಜಗದ್ಗುರುಗಳು ಹೇಳಿದರು “ಈ ಸುಂದರವಾದರೂ ಗಾಯಗೊಂಡ ದೇಶವು ನಿರೀಕ್ಷೆ, ಶಾಂತಿ ಮತ್ತು ಸಹೋದರತ್ವಕ್ಕಾಗಿ ಹಂಬಲಿಸುತ್ತಿದೆ.”
ತಮ್ಮ ಗುರುಗೆ ಸಂಭವಿಸಿದ ವಿಷಯಗಳನ್ನು ನೆನೆದು ನಿರಾಶೆಯಿಂದ ಮಾತುಕತೆ ನಡೆಸಿದ ಆ ಇಬ್ಬರು ಶಿಷ್ಯರ ಸಂಭಾಷಣೆ, ಎಂದು ಅವರು ಮುಂದುವರಿಸಿದರು, ನಿಮ್ಮ ದೇಶವನ್ನು ಗುರುತಿಸಿದ ನೋವುಗಳನ್ನು ನೆನಪಿಸುತ್ತದೆ ದೀರ್ಘಕಾಲದ ಗೃಹಯುದ್ಧ, ಅದರ ಪರಿಣಾಮವಾಗಿ ಬಂದ ವೈಷಮ್ಯ ಮತ್ತು ವಿಭಜನೆ, ವ್ಯರ್ಥವಾದ ಸಂಪನ್ಮೂಲಗಳು ಮತ್ತು ದಾರಿದ್ರ್ಯಈ ಎಲ್ಲದರ ಎದುರು, ಇಂತಹ ನೋವಿನಿಂದ ತುಂಬಿದ ಇತಿಹಾಸದಲ್ಲಿ ದೀರ್ಘಕಾಲ ಮುಳುಗಿರುವವರು ಎಮ್ಮಾವಸ್ ಶಿಷ್ಯರಂತೆ ನಿರಾಶೆಯನ್ನು ಕಳೆದುಕೊಳ್ಳುವ ಮತ್ತು ನಿರುತ್ಸಾಹದಿಂದ ನಿಂತುಕೊಳ್ಳುವ ಅಪಾಯವಿದೆ ಎಂದು ಜಗದ್ಗುರುಗಳು ಒಪ್ಪಿಕೊಂಡರು. ಮತ್ತೆ ಹೇಗೆ ಆರಂಭಿಸಬೇಕು ಅಥವಾ ಸಾಧ್ಯವೇ ಎಂಬುದೇ ತಿಳಿಯದ ಸ್ಥಿತಿ ಉಂಟಾಗಬಹುದು.
ಆದರೆ ಪ್ರಭು ಆ ನಿರಾಶೆಯಲ್ಲಿದ್ದ ಶಿಷ್ಯರ ಬಳಿಗೆ ಬಂದು, ಅವರ ಪ್ರಯಾಣದ ಸಂಗಾತಿಯಾಗಿ, ಅವರ ಕಥೆಯನ್ನು ಮರುಸಂಯೋಜಿಸಲು, ನೋವನ್ನು ಮೀರಿ ನೋಡುವಂತೆ, ಅವರು ಒಬ್ಬರಲ್ಲ ಎಂಬುದನ್ನು ಅರಿಯುವಂತೆ, ಮತ್ತು ಪ್ರೀತಿಯ ದೇವರು ವಾಸಿಸುವ ಭವಿಷ್ಯವು ಅವರನ್ನು ಕಾಯುತ್ತಿದೆ ಎಂಬುದನ್ನು ತಿಳಿಯುವಂತೆ ನೆರವಾಗುತ್ತಾರೆ.
ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಾರೆ ಮತ್ತೆ ಆರಂಭಿಸಲು ಕೃಪೆ ನೀಡುತ್ತಾರೆ.
ಪ್ರಿಯ ಸಹೋದರ ಸಹೋದರಿಯರೇ, ಪ್ರಭು ಶುಭಸಂದೇಶವು ಇಂದಿಗೂ ನಮಗಾಗಿ ಇದೇ, ಎಂದು ಜಗದ್ಗುರುಗಳು ಒತ್ತಿಹೇಳಿದರು. “ಅವರು ಜೀವಂತರು, ಪುನರುತ್ಥಾನಗೊಂಡಿದ್ದಾರೆ, ಮತ್ತು ದುಃಖ ಮತ್ತು ಕಹಿತನದ ಮಾರ್ಗದಲ್ಲಿ ನಾವು ನಡೆಯುವಾಗ ನಮ್ಮೊಂದಿಗೆ ನಡೆದುಕೊಳ್ಳುತ್ತಾರೆ. ಅವರು ನಮ್ಮ ಕಣ್ಣುಗಳನ್ನು ತೆರೆಸಿ ತನ್ನ ಕಾರ್ಯವನ್ನು ಗುರುತಿಸಲು ಸಹಾಯಮಾಡುತ್ತಾರೆ ಮತ್ತು ಮತ್ತೆ ಆರಂಭಿಸಿ ಭವಿಷ್ಯವನ್ನು ನಿರ್ಮಿಸಲು ಕೃಪೆ ನೀಡುತ್ತಾರೆ.
ಇದು ನಮ್ಮ ಮುಂದೆ ಇಟ್ಟಿರುವ ದಾರಿ ಒಂದೆಡೆ ಪ್ರಭು ನಮ್ಮೊಂದಿಗೆ ಇರುವರು ಮತ್ತು ನಮ್ಮ ಮೇಲೆ ಕರುಣೆ ಹೊಂದಿರುವರು ಎಂಬ ನಿಶ್ಚಯ ಮತ್ತೊಂದೆಡೆ ಅವರು ನಮ್ಮಿಂದ ನಿರೀಕ್ಷಿಸುವ ಬದ್ಧತೆ ಜಗದ್ಗುರುಗಳು ವಿವರಿಸಿದಂತೆ, ಮೊದಲನೆಯದಾಗಿ ನಾವು ಪ್ರಭುವಿನ ಸಾನ್ನಿಧ್ಯವನ್ನು ಅವನೊಂದಿಗೆ ಇರುವ ಸಂಬಂಧದಲ್ಲಿ ಅನುಭವಿಸುತ್ತೇವೆ.
ಪ್ರಾರ್ಥನೆಯಲ್ಲಿ, ಅವನ ವಾಕ್ಯವನ್ನು ಕೇಳುವುದರಲ್ಲಿ—ಎಮ್ಮಾವಸ್ ಶಿಷ್ಯರಂತೆ ನಮ್ಮ ಹೃದಯಗಳನ್ನು ಹೊತ್ತಿ ಉರಿಯುವಂತೆ ಮಾಡುವುದರಲ್ಲಿ ಮತ್ತು ಮುಖ್ಯವಾಗಿ ಬಲಿ ಪೂಜೆಯ ಆಚರಣೆಯಲ್ಲಿ ನಾವು ದೇವರನ್ನು ಭೇಟಿಯಾಗುತ್ತೇವೆ.
ಆದ್ದರಿಂದ,ನಿಮ್ಮ ಸಂಸ್ಕೃತಿಯ ಬೇರುಗಳಲ್ಲಿ ಇರುವ ಕೆಲವು ಪರಂಪರೆಯ ಧಾರ್ಮಿಕ ರೂಪಗಳು ಕೆಲವೊಮ್ಮೆ ಮಾಂತ್ರಿಕ ಮತ್ತು ಅಂಧಶ್ರದ್ಧೆಯ ಅಂಶಗಳೊಂದಿಗೆ ಮಿಶ್ರಣವಾಗುವ ಅಪಾಯವಿದೆ ಇವು ಆಧ್ಯಾತ್ಮಿಕ ಪ್ರಯಾಣಕ್ಕೆ ಸಹಾಯ ಮಾಡುವುದಿಲ್ಲ.
ನಿಷ್ಠರಾಗಿರಿ, ಎಂದು ಅವರು ಹೇಳಿದರು, “ಧಮ೯ಸಭೆ ಬೋಧಿಸುವುದಕ್ಕೆ ನಿಮ್ಮ ಧರ್ಮ ಗುರುಗಳನ್ನು ವಿಶ್ವಾಸಿಸಿರಿ ಮತ್ತು ವಾಕ್ಯದಲ್ಲಿಯೂ ಬಲಿಪೂಜೆಯಲ್ಲಿಯೂ ವಿಶೇಷವಾಗಿ ತನ್ನನ್ನು ಪ್ರಕಟಿಸುವ ಯೇಸುವಿನ ಮೇಲೆ ನಿಮ್ಮ ದೃಷ್ಟಿಯನ್ನು ನೆಟ್ಟಗಿರಿಸಿ. ಈ ಎರಡರಲ್ಲಿಯೂ ನಾವು ಪುನರುತ್ಥಾನಗೊಂಡ ಪ್ರಭು ನಮ್ಮೊಂದಿಗೆ ನಡೆದುಕೊಳ್ಳುತ್ತಾನೆ ಎಂಬುದನ್ನು ಅನುಭವಿಸುತ್ತೇವೆ ಮತ್ತು ಅವನೊಂದಿಗೆ ಒಂದಾಗಿರುವಾಗ, ನಮ್ಮನ್ನು ಆವರಿಸುವ ಮರಣಗಳನ್ನು ಜಯಿಸಿ, ಪುನರುತ್ಥಾನಗೊಂಡವರಂತೆ ಬದುಕುತ್ತೇವೆ ಎಂದರು.
ಗಾಯಗಳನ್ನು ಗುಣಪಡಿಸಿ, ನಿರೀಕ್ಷೆಯನ್ನು ಪುನರುಜ್ಜೀವನಗೊಳಿಸುವುದು
ನಾವು ಒಬ್ಬರಲ್ಲ ಎಂಬ ಅರಿವು ನಮ್ಮನ್ನು ಗಾಯಗಳನ್ನು ಗುಣಪಡಿಸಲು ಮತ್ತು ನಿರೀಕ್ಷೆಯನ್ನು ಮತ್ತೆ ಜೀವಂತಗೊಳಿಸಲು ಪ್ರೇರೇಪಿಸಬೇಕು ಎಂದು ಜಗದ್ಗುರುಗಳು ಹೇಳಿದರು.
ನಿಮ್ಮ ದೇಶದ ಇತಿಹಾಸ, ಇನ್ನೂ ನೀವು ಅನುಭವಿಸುತ್ತಿರುವ ಕಠಿಣ ಪರಿಣಾಮಗಳು, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು, ಮತ್ತು ದಾರಿದ್ರ್ಯದ ವಿವಿಧ ರೂಪಗಳು, ಎಂದು ಅವರು ಹೇಳಿದರು, ತಮ್ಮ ಜನರೊಂದಿಗೆ ನಡೆದುಕೊಳ್ಳುವ ಮತ್ತು ಮಕ್ಕಳ ಅಳುವಿಕೆಯನ್ನು ಕೇಳಬಲ್ಲ ಧರ್ಮ ಸಭೆಯ ಸಾನ್ನಿಧ್ಯವನ್ನು ಬೇಡಿಕೊಳ್ಳುತ್ತವೆ. ವಾಕ್ಯದ ಬೆಳಕು ಮತ್ತು ಬಲಿಪೂಜೆಯ ಪೋಷಣೆಯ ಮೂಲಕ ಕಳೆದುಹೋದ ನಿರೀಕ್ಷೆಯನ್ನು ಪುನರುಜ್ಜೀವನಗೊಳಿಸಬಲ್ಲ ಧರ್ಮ ಸಭೆಯು ಅಗತ್ಯವಾಗಿದೆ.
ಎಮ್ಮಾವಸ್ ಶಿಷ್ಯರಿಗಾಗಿ ಯೇಸು ರೊಟ್ಟಿಯನ್ನು ಮುರಿದಂತೆ, ತಮ್ಮನ್ನು ಕೊಡುವ ಜನರು ಧರ್ಮ ಸಭೆಗೆ ಅಗತ್ಯವಿದ್ದಾರೆ ಎಂದು ಅವರು ಹೇಳಿದರು.
ಆಂಗೋಲಾಕ್ಕೆ ಬಿಷಪ್‌ಗಳು, ಯಾಜಕರು, ಮಿಷನರಿಗಳು, ಧಾರ್ಮಿಕ ಪುರುಷರು ಮತ್ತು ಮಹಿಳೆಯರು, ಹಾಗೂ ಸಾಮಾನ್ಯ ಭಕ್ತರು ಅಗತ್ಯ—ತಮ್ಮ ಜೀವನವನ್ನೇ ಮುರಿದು ಪರಸ್ಪರಕ್ಕೆ ನೀಡುವ ಮನಸ್ಸುಳ್ಳವರು.
ನಿರೀಕ್ಷೆಯ ಭವಿಷ್ಯವನ್ನು ನಿರ್ಮಿಸುವುದು ಸಾಧ್ಯ
ಪುನರುತ್ಥಾನಗೊಂಡ ಕ್ರಿಸ್ತನ ಕೃಪೆಯಿಂದ, ನಾವೂ ಈ ಮುರಿದ ರೊಟ್ಟಿಯಾಗಬಹುದು ವಾಸ್ತವಿಕತೆಯನ್ನು ಪರಿವರ್ತಿಸುವ ರೊಟ್ಟಿ, ಎಂದು ಅವರು ಹೇಳಿದರು. ಬಲಿ ಪೂಜೆಯು ನಮಗೆ ನಾವು ಒಂದೇ ದೇಹ ಮತ್ತು ಒಂದೇ ಆತ್ಮ ಎಂದು ನೆನಪಿಸುವಂತೆ, ನಾವು ಕೂಡ ಹಳೆಯ ವಿಭಜನೆಗಳನ್ನು ಮೀರಿದ, ದ್ವೇಷ ಮತ್ತು ಹಿಂಸೆ ಇಲ್ಲದ, ಮತ್ತು ಭ್ರಷ್ಟಾಚಾರದ ಗಾಯವನ್ನು ನ್ಯಾಯ ಮತ್ತು ಹಂಚಿಕೆಯ ಹೊಸ ಸಂಸ್ಕೃತಿಯಿಂದ ಗುಣಪಡಿಸಿದ ದೇಶವನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು.
“ವಿಶೇಷವಾಗಿ ನಿರೀಕ್ಷೆಯನ್ನು ಕಳೆದುಕೊಂಡಿರುವ ಅನೇಕ ಯುವಕರಿಗಾಗಿ, ನಿರೀಕ್ಷೆಯ ಭವಿಷ್ಯ ಸಾಧ್ಯವಾಗುತ್ತದೆ.”
ತಮ್ಮ ಪ್ರಭೋಧನೆಯ ಅಂತ್ಯದಲ್ಲಿ, ಜಗದ್ಗುರು XIVನೇ ಲಿಯೋರವರು ದೇಶದ ಭಕ್ತರನ್ನು ಭವಿಷ್ಯವನ್ನು ನಿರೀಕ್ಷೆಯೊಂದಿಗೆ ನೋಡುವಂತೆ ಮತ್ತು ಆ ನಿರೀಕ್ಷೆಯನ್ನು ನಿರ್ಮಿಸುವಂತೆ ಪ್ರೋತ್ಸಾಹಿಸಿದರು. “ಇದನ್ನು ಮಾಡಲು ಭಯಪಡಬೇಡಿ! ನಿಮ್ಮೊಂದಿಗೆ ನಡೆಯುವ ಮತ್ತು ನಿಮಗಾಗಿ ತನ್ನನ್ನು ರೊಟ್ಟಿಯಾಗಿ ಮುರಿಯುವ ಪುನರುತ್ಥಾನಗೊಂಡ ಯೇಸು, ತನ್ನ ಪುನರುತ್ಥಾನದ ಸಾಕ್ಷಿಗಳಾಗಲು ಮತ್ತು ಹೊಸ ಮಾನವಕುಲ ಹಾಗೂ ಹೊಸ ಸಮಾಜದ ನಿರ್ಮಾಪಕರಾಗಲು ನಿಮ್ಮನ್ನು ಪ್ರೇರೇಪಿಸುತ್ತಾರೆ.”
ಅದೇ ವೇಳೆ, ಈ ಪ್ರಯಾಣದಲ್ಲಿ ದೇಶದ ಕಥೋಲಿಕರು ಜಗದ್ಗುರುಗಳ ಸಮೀಪತೆ ಮತ್ತು ಪ್ರಾರ್ಥನೆಗಳ ಮೇಲೆ ಭರವಸೆ ಇಡಬಹುದು ಎಂದು ಅವರು ಭರವಸೆ ನೀಡಿದರು. ಅವರನ್ನು ಪವಿತ್ರ ತಾಯಿಗೆ ಒಪ್ಪಿಸುತ್ತಾ, ತಾವು ಕೂಡ ಅವರ ಮೇಲೆ ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿದರು.
