Pope Leo XIV visits Algeria

ಪವಿತ್ರ ಆಗಸ್ಟಿನ್ ಬ್ಯಾಸಿಲಿಕಾದಲ್ಲಿ ಜಗದ್ಗುರುಗಳು: “ಕ್ರಿಸ್ತನು ನಮ್ಮ ಜೀವನವನ್ನು ಸಂಪೂರ್ಣವಾಗಿ ನವೀಕರಿಸಲು ನಮ್ಮನ್ನು ಆಹ್ವಾನಿಸುತ್ತಾರೆ”

ಮೊದಲ ಆಗಸ್ಟಿನಿಯನ್ ಜಗದ್ಗುರು ಆಗಿರುವ ವಿಶ್ವಗುರು XIVನೇ ಲಿಯೋರವರು ಅಲ್ಜೀರಿಯಾದ ಅನ್ನಾಬಾದಲ್ಲಿರುವ ಪವಿತ್ರ ಆಗಸ್ಟಿನ್ ಬ್ಯಾಸಿಲಿಕಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ, ಮಹಾನ್ ಸಂತರಾದ ಹಾಗೂ ಧರ್ಮ ಸಭೆಯ ಗುರುವಾಗಿರುವ ಪವಿತ್ರ ಆಗಸ್ಟಿನ್ ರವರಂತೆಯೇ, ನಮ್ಮ ಸಂಕಷ್ಟಗಳು ಮತ್ತು ಪರೀಕ್ಷೆಗಳ ಮಧ್ಯೆಯೂ ಪ್ಲಭುವಿನ ಆಹ್ವಾನವನ್ನು ಸ್ವೀಕರಿಸಲು ಎಂದಿಗೂ ತಡವಾಗುವುದಿಲ್ಲ ಎಂದು ಅವರು ಭಕ್ತರಿಗೆ ನೆನಪಿಸಿದರು. ಅವರ ಶಕ್ತಿಯ ಮೂಲಕ ನಮ್ಮ ಜೀವನವನ್ನು ನವೀಕರಿಸಿ ಪರಿವರ್ತಿಸಿಕೊಳ್ಳಬಹುದು ಎಂಬುದನ್ನೂ ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಅಲ್ಜೀರಿಯಾದ ಪ್ರಿಯ ಕ್ರೈಸ್ತರೇ, ಈ ಭೂಮಿಯಲ್ಲಿ ನೀವು ಕ್ರಿಸ್ತನ ಪ್ರೀತಿಯ ವಿನಮ್ರ ಮತ್ತು ನಿಷ್ಠಾವಂತ ಚಿಹ್ನೆಯಾಗಿ ಉಳಿದಿದ್ದೀರಿ. ಸರಳ ಕೃತಿಗಳ ಮೂಲಕ, ನಿಜವಾದ ಸಂಬಂಧಗಳ ಮೂಲಕ ಮತ್ತು ದಿನನಿತ್ಯ ಜೀವನದಲ್ಲಿ ಜೀವಂತವಾಗಿರುವ ಸಂವಾದದ ಮೂಲಕ ಸುವಾರ್ತೆಗೆ ಸಾಕ್ಷಿಯಾಗಿರಿ. ಈ ರೀತಿಯಲ್ಲಿ, ನೀವು ವಾಸಿಸುವ ಸ್ಥಳಗಳಿಗೆ ರುಚಿಯನ್ನೂ ಬೆಳಕನ್ನೂ ತರುತ್ತೀರಿ.”

ಅಲ್ಜೀರಿಯಾದಲ್ಲಿ ತನ್ನ ನಾಲ್ಕು ರಾಷ್ಟ್ರಗಳ ಪ್ರೇಷಿತರ ಪ್ರಯಾಣದ ಮೊದಲ ಹಂತದ ವೇಳೆ ಅನ್ನಾಬಾದ ಪವಿತ್ರ ಆಗಸ್ಟಿನ್ ಬ್ಯಾಸಿಲಿಕಾದಲ್ಲಿ ಆಚರಿಸಿದ ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರು XIVನೇ ಲಿಯೋರವರು ಈ ನೆನಪನ್ನು ನೀಡಿದರು.

ಇಲ್ಲಿಯೇ ಹುತಾತ್ಮರು ಪ್ರಾರ್ಥಿಸಿದರು ಮತ್ತು ಇಲ್ಲಿಯೇ ಪವಿತ್ರ ಆಗಸ್ಟಿನ್ ತನ್ನ ಹಿಂಡನ್ನು ಪ್ರೀತಿಸಿದರು ಎಂದು ಜಗದ್ಗುರುಗಳು ಸ್ಮರಿಸಿದರು. ಅವರು ಉತ್ಸಾಹಭರಿತ ನಂಬಿಕೆಯಿಂದ ಸತ್ಯವನ್ನು ಹುಡುಕುತ್ತಾ ಕ್ರಿಸ್ತನಿಗೆ ಸೇವೆ ಸಲ್ಲಿಸಿದರು. ಈ ಪರಂಪರೆಯ ವಾರಸುದಾರರಾಗುವಂತೆ, ಸಹೋದರ ಪ್ರೀತಿಯ ಮೂಲಕ ಸಾಕ್ಷಿಯಾಗುವಂತೆ ಮತ್ತು “ಮೇಲಿನಿಂದ ಜನಿಸಿದವರ ಸ್ವಾತಂತ್ರ್ಯದಲ್ಲಿ ಬದುಕುವಂತೆ, ಲೋಕಕ್ಕೆ ಆಶೆಯ ಚಿಹ್ನೆಯಾಗುವಂತೆ ಭಕ್ತರನ್ನು ಅವರು ಪ್ರೇರೇಪಿಸಿದರು.

ಶತಮಾನಗಳ ಕಾಲ ನಮ್ಮನ್ನು ಸ್ವಾಗತಿಸಿದ ಸ್ಥಳಗಳ ಹೆಸರುಗಳು ಬದಲಾಗಿದ್ದರೂ, ಸಂತರು ನಮ್ಮ ರಕ್ಷಕರಾಗಿಯೂ ನಿಷ್ಠಾವಂತ ಸಾಕ್ಷಿಗಳಾಗಿಯೂ ಉಳಿದಿದ್ದಾರೆ ಅವರು ಸ್ವರ್ಗದಿಂದ ಬರುವ ಭೂಮಿಯೊಂದಿಗಿನ ಸಂಬಂಧವನ್ನು ಕಾಪಾಡುತ್ತಾರೆ ಎಂದು ಜಗದ್ಗುರುಗಳು ತಮ್ಮ ಮಾತುಗಳನ್ನು ಪ್ರಾರಂಭಿಸಿದರು.

ಇತಿಹಾಸದೊಳಗೆ ಕ್ರಿಸ್ತನು ಸಂತರನ್ನು “ಮೇಲಿನಿಂದ ಜನಿಸಲು” ಹೊಸ ಜೀವನಕ್ಕೆ ಕರೆದಿರುವುದನ್ನು ಸ್ಮರಿಸಿ, ಇದೇ ಆಹ್ವಾನವು ರಕ್ಷಣೆಯನ್ನು ಹುಡುಕುವ ಪ್ರತಿಯೊಬ್ಬ ಪುರುಷನಿಗೂ ಮಹಿಳೆಯರಿಗೂ ನೀಡಲಾಗಿದೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಈ ಕರೆ ಸಂಪೂರ್ಣ ಧರ್ಮ ಸಭೆಯ ಧ್ಯೇಯಕ್ಕೆ, ಅಲ್ಜೀರಿಯಾದ ಕ್ರೈಸ್ತ ಸಮುದಾಯವನ್ನೂ ಒಳಗೊಂಡಂತೆ, ಜೀವ ತುಂಬುತ್ತದೆ ಎಂದರು.

ಈ ದೃಷ್ಟಿಕೋನದಿಂದ, ನಂಬಿಕೆ ಭೌತಿಕ ಸಂಕಷ್ಟಗಳನ್ನು ಮೀರಿ ಸಾಗುತ್ತದೆ ಮತ್ತು “ಪ್ರಭುವಿನ ಕೃಪೆ ಮರಳುಗಾಡನ್ನೂ ಅರಳಿಸುತ್ತದೆ” ಎಂದು ಜಗದ್ಗುರುಗಳು ವಿವರಿಸಿದರು.

ಕ್ರಿಸ್ತನು ನಮ್ಮ ಜೀವನವನ್ನು ನವೀಕರಿಸಲು ಆಹ್ವಾನಿಸುತ್ತಾರೆ

“ನೀವು ಮೇಲಿನಿಂದ ಮತ್ತೆ ಜನಿಸಬೇಕು” ಎಂಬ ಕ್ರಿಸ್ತನ ಮಾತುಗಳು ಕೆಲವೊಮ್ಮೆ ಅಸಾಧ್ಯವೆನಿಸುವ ಆದೇಶದಂತೆ ತೋರುತ್ತವೆ ಎಂದು ಜಗದ್ಗುರುಗಳು ಒಪ್ಪಿಕೊಂಡರು.

ಆದರೆ ನಾವು ಗಮನದಿಂದ ಕೇಳಿದಾಗ, ಇದು ಕಠಿಣ ಹೇರಿಕೆಯೂ ಅಲ್ಲ, ನಿರ್ಬಂಧವೂ ಅಲ್ಲ, ವಿಫಲತೆಯ ಶಿಕ್ಷೆಯೂ ಅಲ್ಲ ಎಂದು ಜಗದ್ಗುರು ಲಿಯೋರವರು ವಿವರಿಸಿದರು. ಬದಲಾಗಿ, ಯೇಸುವಿನ ಈ ಬೋಧನೆ “ಸ್ವಾತಂತ್ರ್ಯದ ಉಡುಗೊರೆ,” ಏಕೆಂದರೆ ದೇವರ ಕೃಪೆಯಿಂದ ನಾವು ಹೊಸದಾಗಿ ಜನಿಸಬಹುದು ಎಂಬುದನ್ನು ಇದು ತೋರಿಸುತ್ತದೆ.

ನಂಬಿಕೆಯಿಂದ ಆರಂಭವಾಗುವ ಜೀವಸಂಬಂಧದ ಏಕತೆಯೊಳಗೆ ನಮ್ಮನ್ನು ಸೆಳೆಯುವ ದೇವರ ಪ್ರೀತಿಯ ಇಚ್ಛೆಯಂತೆ, ಮಾನವಕುಲವನ್ನು ನವೀಕರಿಸಲು ನಾವು ಈ ಕರೆಯನ್ನು ಸ್ವೀಕರಿಸಬೇಕು.

ಕ್ರಿಸ್ತನು ನಮ್ಮ ಜೀವನವನ್ನು ಸಂಪೂರ್ಣವಾಗಿ ನವೀಕರಿಸಲು ಆಹ್ವಾನಿಸುತ್ತಿದ್ದರೂ, ಅದನ್ನು ನೆರವೇರಿಸಲು ಬೇಕಾದ ಶಕ್ತಿಯನ್ನೂ ಆತನೇ ನಮಗೆ ನೀಡುತ್ತಾನೆ ಎಂದು ಜಗದ್ಗುರುಗಳು ನೆನಪಿಸಿದರು.

ನಮ್ಮ ಮುಂದೆ ಇದ್ದವರಂತೆ, ನಮ್ಮ ಕಥೆ ನಿಜವಾಗಿಯೂ ಬದಲಾಗಬಹುದೇ ಎಂದು ನಾವು ಪ್ರಭುವನ್ನು ಕೇಳುತ್ತೇವೆ, ವಿಶೇಷವಾಗಿ ಸಮಸ್ಯೆಗಳು, ಸಂಕಷ್ಟಗಳು ಮತ್ತು ಪರೀಕ್ಷೆಗಳು ನಮ್ಮ ಮೇಲೆ ಭಾರವಾಗಿರುವಾಗ.

ಉತ್ತರ “ಹೌದು” ಎಂದು ಜಗದ್ಗುರುಗಳು ಸಂತೋಷದಿಂದ ಹೇಳಿದರು, ತನ್ನ ಅಪಾರ ಪ್ರೀತಿಯಿಂದ ಪ್ರಭು ಇದನ್ನು ಸಾಧ್ಯವಾಗಿಸುತ್ತಾನೆ ಎಂದು ಅವರು ನೆನಪಿಸಿದರು.

ಯೇಸು ನಮ್ಮ ಭಾರಗಳನ್ನು ನಮ್ಮೊಂದಿಗೆ ಮತ್ತು ನಮಗಾಗಿ ಹೊರುತ್ತಾನೆ

ನಮ್ಮ ನೋವು ಅಥವಾ ಪಾಪ ಎಷ್ಟು ಭಾರವಾಗಿದ್ದರೂ, ಪ್ರಭು ಅವರನ್ನು ನಮ್ಮೊಂದಿಗೆ ಮತ್ತು ನಮಗಾಗಿ ಹೊರುತ್ತಾನೆ ಎಂದು ಜಗದ್ಗುರುಗಳು ಹೇಳಿದರು.

ನಮ್ಮ ದುರ್ಬಲತೆಗಳಿಂದ ನಾವು ನಿರುತ್ಸಾಹಗೊಂಡಾಗಲೂ,ದೇವರು ತನ್ನ ಶಕ್ತಿಯನ್ನು ವಿಶೇಷವಾಗಿ ಅಂದೇ ಪ್ರಕಟಿಸುತ್ತಾನೆ ಎಂದು ಜಗದ್ಗುರುಗಳು ಹೇಳಿದರು.

ಲೋಕಕ್ಕೆ ಜೀವ ನೀಡಲು ದೇವರು ಕ್ರಿಸ್ತನನ್ನು ಮೃತರಿಂದ ಎಬ್ಬಿಸಿದನು ಎಂದು ಜಗದ್ಗುರುಗಳು ಹೇಳಿದರು. ರಕ್ಷಕನಲ್ಲಿ ನಂಬಿಕೆಯ ಮೂಲಕ ಬರುವ ಹೊಸ ಜೀವನದ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರೂ ಅನುಭವಿಸಬಹುದು ಎಂದು ಅವರು ನೆನಪಿಸಿದರು.

ಈ ರೀತಿಯಾಗಿ, ಕ್ರೈಸ್ತರು ನಿಜವಾಗಿಯೂ “ಮೇಲಿನಿಂದ ಜನಿಸಿದವರು” ಆಗುತ್ತಾರೆ ದೇವರಿಂದ ಪುನರುತ್ಪತ್ತಿಗೊಂಡು ಯೇಸುವಿನ ಸಹೋದರರು ಮತ್ತು ಸಹೋದರಿಯರಾಗುತ್ತಾರೆ, ಹಾಗೂ ಸಂಸ್ಕಾರಗಳ ಮೂಲಕ ಅವರನ್ನು ಪೋಷಿಸುವ ಧರ್ಮ ಸಭೆಯ ಸದಸ್ಯರಾಗುತ್ತಾರೆ.

ಪ್ರೀತಿ ಮತ್ತು ಸಾಕ್ಷಿಯ ಸಮುದಾಯ

ಭಕ್ತರ ಆತ್ಮಿಕ ಏಕತೆಯ ಸ್ಪಷ್ಟ ಫಲಿತಾಂಶಗಳನ್ನು ಪರಿಗಣಿಸಲು ಜಗದ್ಗುರುಗಳು ಭಕ್ತರನ್ನು ಆಹ್ವಾನಿಸಿದರು. ಒಂದೇ ದೇಹದ ಸದಸ್ಯರಂತೆ, ಎಲ್ಲರೂ ಪರಸ್ಪರ ತಮ್ಮ ಸಂಪತ್ತನ್ನು ಹಂಚಿಕೊಳ್ಳುತ್ತಾರೆ.

ಬಡತನ ಮತ್ತು ಹಿಂಸೆಯ ಎದುರಿನಲ್ಲಿ, ಕ್ರೈಸ್ತರಿಗೆ ಮಾರ್ಗದರ್ಶಕ ತತ್ವ ಪ್ರೀತಿ ಎಂದು ಜಗದ್ಗುರುಗಳು ಪುನರುಚ್ಚರಿಸಿದರು. ದೇವರು ನಮ್ಮ ಹೃದಯಗಳಲ್ಲಿ ಬರೆದಿರುವ ಈ ಧರ್ಮಶಾಸ್ತ್ರದಿಂದ ಪ್ರೇರಿತವಾಗಿ, ಧರ್ಮ ಸಭೆ ನಿರಂತರವಾಗಿ ಪುನರುತ್ಪತ್ತಿಗೊಳ್ಳುತ್ತದೆ—ಅತ್ಯಂತ ಅಗತ್ಯವಿರುವ ಸ್ಥಳಗಳಲ್ಲಿ ಭರವಸೆ, ಗೌರವ ಮತ್ತು ಸೌಹಾರ್ದತೆಯನ್ನು ನೀಡುತ್ತದೆ.

ಜಗದ್ಗುರು ಲಿಯೋರವರು ಧರ್ಮ ಸಭೆಯ ಎಲ್ಲಾ ಭಾಷೆಗಳ ಮತ್ತು ಸಂಸ್ಕೃತಿಗಳ ಜನರನ್ನು ಅಪ್ಪಿಕೊಳ್ಳುತ್ತದೆ ಎಂದು ಹೇಳಿದರು.

ಪ್ರೇಷಿತರ ಮಹಾಶಕ್ತಿಯಿಂದ ಪ್ರಭು ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿ ನೀಡಿದರು, ಮತ್ತು ಮಹಾಕೃಪೆ ಅವರ ಎಲ್ಲರ ಮೇಲೂ ಇತ್ತು.ಅವರನ್ನು ಪ್ರೇರೇಪಿಸುವ ಪ್ರೀತಿ ಕೇವಲ ನೈತಿಕ ಬದ್ಧತೆ ಮಾತ್ರವಲ್ಲ ಅದು ರಕ್ಷಣೆಯ ಚಿಹ್ನೆ ಕ್ರಿಸ್ತನು ಮೃತರಿಂದ ಎದ್ದಿರುವುದರಿಂದ ನಮ್ಮ ಜೀವನ ಬದಲಾಗಬಹುದು ಎಂದು ಪ್ರೇಷಿತರ ಘೋಷಿಸುತ್ತಾರೆ.

ಮೇಲ್ವಿಚಾರಕರಿಗೆ ಧ್ಯೇಯವನ್ನು ನವೀಕರಿಸುವ ಕರೆ

ಬಿಷಪ್‌ಗಳು ಮತ್ತು ಯಾಜಕರನ್ನು ಉದ್ದೇಶಿಸಿ, ಅವರಿಗೆ ಒಪ್ಪಿಸಲಾದವರಿಗಾಗಿ ತಮ್ಮ ಧ್ಯೇಯವನ್ನು ನಿರಂತರವಾಗಿ ನವೀಕರಿಸಲು ಜಗದ್ಗುರುಗಳು ಪ್ರೇರೇಪಿಸಿದರು. ನಾವು ಭೇಟಿಯಾಗುವ ಪ್ರತಿಯೊಬ್ಬರಿಗೂ ಸಂಪೂರ್ಣ ಧರ್ಮ ಸಭೆ ಹೊಸ ಜೀವನದ ಸಂದೇಶವಾಗಿರಬೇಕು ಎಂದು ಅವರು ನೆನಪಿಸಿದರು.

ಭಯದಿಂದ ತಪ್ಪು ದಾರಿಯಲ್ಲಿ ಹೋಗಬಾರದು ಅಥವಾ ಸವಾಲುಗಳಿಂದ ತಮ್ಮ ಸಾಕ್ಷಿ ದುರ್ಬಲವಾಗದಂತೆ ಎಚ್ಚರಿಕೆಯಿಂದಿರಬೇಕು ಎಂದು ಜಗದ್ಗುರುಗಳಿಗೆ ತಿಳಿಸಿದರು.

ಕೊನೆಗೆ, ಪವಿತ್ರ ಆಗಸ್ಟಿನ್ ಮತ್ತು ಹುತಾತ್ಮರ ಹೆಜ್ಜೆಗುರುತುಗಳಲ್ಲಿ ನಡೆದು, ಅಲ್ಜೀರಿಯಾದ ಕ್ರೈಸ್ತರು ತಮ್ಮ ದೇಶದಲ್ಲಿ ಉಪ್ಪು ಮತ್ತು ಬೆಳಕಾಗಿರಲು ಜಗದ್ಗುರು XIVನೇ ಲಿಯೋರವರು ಆಹ್ವಾನಿಸಿದರು.

“ಅಲ್ಜೀರಿಯಾದ ಪ್ರಿಯ ಕ್ರೈಸ್ತರೇ, ಈ ಭೂಮಿಯಲ್ಲಿ ನೀವು ಕ್ರಿಸ್ತನ ಪ್ರೀತಿಯ ವಿನಮ್ರ ಮತ್ತು ನಿಷ್ಠಾವಂತ ಚಿಹ್ನೆಯಾಗಿ ಉಳಿದಿದ್ದೀರಿ,” ಎಂದು ಅವರು ಹೇಳಿದರು. “ಸರಳ ಕೃತಿಗಳ ಮೂಲಕ, ನಿಜವಾದ ಸಂಬಂಧಗಳ ಮೂಲಕ ಮತ್ತು ದಿನನಿತ್ಯ ಜೀವನದಲ್ಲಿ ಜೀವಂತವಾಗಿರುವ ಸಂವಾದದ ಮೂಲಕ ಸುವಾರ್ತೆಗೆ ಸಾಕ್ಷಿಯಾಗಿರಿ. ಈ ರೀತಿಯಲ್ಲಿ, ನೀವು ವಾಸಿಸುವ ಸ್ಥಳಗಳಿಗೆ ರುಚಿಯನ್ನೂ ಬೆಳಕನ್ನೂ ತರುತ್ತೀರಿ”ಎಂದರು.

14 ಏಪ್ರಿಲ್ 2026, 17:20