ಅಂಗೋಲದಲ್ಲಿ ಜಗದ್ಗುರು XIVನೇ ಲಿಯೋರವರು ಅಂಗೋಲದಲ್ಲಿ ಜಗದ್ಗುರು XIVನೇ ಲಿಯೋರವರು  (AFP or licensors)

“ಜಗದ್ಗುರುಗಳ ಪದವಿಯ ಅರ್ಥವನ್ನು ಅನಾವರಣಗೊಳಿಸುವ ಪ್ರಯಾಣ”

ಆಫ್ರಿಕಾಗೆ ಭೇಟಿ ನೀಡುವ ಆಕಾಂಕ್ಷೆಯು ಪ್ರಥಮವಾಗಿ ಜಗದ್ಗುರುಗಳ ಮಿಷನರಿ ಹೃದಯವನ್ನು ಸೂಚಿಸುತ್ತದೆ

ವ್ಯಾಟಿಕನ್ ವರದಿ

ಆಫ್ರಿಕಾಕ್ಕೆ ಜಗದ್ಗುರು ಲಿಯೋರವರ ಪ್ರಯಾಣದ ಮೊದಲ ದಿನವೂ, ಅದರ ನಂತರ ಬಂದ ಎರಡು ದಿನಗಳೂ ಕನಿಷ್ಠ ಮಾಧ್ಯಮದ ದೃಷ್ಟಿಯಿಂದ—ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳ ಕುರಿತ ಟಿಪ್ಪಣಿಗಳಿಂದ ಗುರುತಿಸಲ್ಪಟ್ಟವು. ಈ ವಿವಾದವನ್ನು ಸ್ವತಃ ಜಗದ್ಗುರುಗಳು ತಗ್ಗಿಸಲು ಪ್ರಯತ್ನಿಸಿದರು, ಏಕೆಂದರೆ ಈ ಪ್ರವಾಸದ ಅವಧಿಯಲ್ಲಿ ಅವರು ಮಾತನಾಡಿದ ಪ್ರತಿಯೊಂದು ಮಾತನ್ನೂ ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ವೈಟ್ ಹೌಸ್ ನಡುವಿನ ಸಂಬಂಧಗಳ ದೃಷ್ಟಿಯಿಂದ ಅರ್ಥೈಸುವ ಅಪಾಯವಿತ್ತು.

ಈ ಹಿನ್ನೆಲೆಯಲ್ಲಿ, ಏಪ್ರಿಲ್ 13 ಸೋಮವಾರ ಬೆಳಿಗ್ಗೆ ಅಲ್ಜಿಯರ್ಸ್ ಕಡೆಗೆ ಹೊರಟ ವಿಮಾನದಲ್ಲಿ ಪತ್ರಕರ್ತರಿಗೆ ನೀಡಿದ ಮೊದಲ ಶುಭಾಶಯದ ವೇಳೆ ಪೀಟರ್‌ನ ಉತ್ತರಾಧಿಕಾರಿಯೊಬ್ಬರು ಮಾಡಿದ ಅತ್ಯಂತ ಮಹತ್ವದ ಹೇಳಿಕೆ ಗಮನಕ್ಕೆ ಬಾರದೆ ಹೋಯಿತು. ಅವರು ಹೇಳಿದರು: “ಆಫ್ರಿಕಾ ನನ್ನ ಅಧಿಕಾರ ಕಾಲದ ಮೊದಲ ಗುರಿಯಾಗಿರಬೇಕಾಗಿತ್ತು.” “ಹಿಂದಿನ ಮೇ ತಿಂಗಳಲ್ಲೇ, ನನ್ನ ಮೊದಲ ಪ್ರಯಾಣದಲ್ಲಿ ಆಫ್ರಿಕಾಕ್ಕೆ ಹೋಗಲು ನಾನು ಬಯಸಿದ್ದೆ ಎಂದು ಹೇಳಿದ್ದೆ.”

ಹೀಗಾಗಿ, ತನ್ನ ಆಯ್ಕೆಯಾದ ತಕ್ಷಣವೇ ಜಗದ್ಗುರು XIVನೇ ಲಿಯೋರವರು ತಮ್ಮ ಸಹಕಾರಿಗಳಿಗೆ ಈ ವಿಶೇಷ ಆಸೆಯನ್ನು ವ್ಯಕ್ತಪಡಿಸಿದ್ದರು ಲಾಜಿಸ್ಟಿಕ್ ಕಾರಣಗಳಿಂದ ಆಗ ಸಾಧ್ಯವಾಗದಿದ್ದರೂ, ಇದು ಅಮೆರಿಕದಲ್ಲಿ ಜನಿಸಿದ ಮೊದಲ ಜಗದ್ಗುರುಗಳು ತನ್ನ ಗುರಿಯನ್ನು ಹೇಗೆ ಅರ್ಥೈಸುತ್ತಾರೆ ಎಂಬುದನ್ನು ಬಹಳ ಸ್ಪಷ್ಟಪಡಿಸುತ್ತದೆ. ರಾಬರ್ಟ್ ಫ್ರಾನ್ಸಿಸ್ ಪ್ರೇವೋಸ್ಟ್ ರವರ ಜೀವನಚರಿತ್ರೆಯ ಒಂದು ಮೂಲಭೂತ ಅಂಶವನ್ನು ಮರೆಯಬಾರದು ಅವರು ಒಬ್ಬ ಮಿಷನರಿ ಧಾರ್ಮಿಕರು ಇತ್ತೀಚಿನ ಶತಮಾನಗಳ ಅಧಿಕಾರವಧಿಯ ಇತಿಹಾಸದಲ್ಲಿ ಅಪರೂಪದ ಲಕ್ಷಣ.

ಜಗದ್ಗುರು ಲಿಯೋರವರು ಪೆರುವಿನಲ್ಲಿ ಅನೇಕ ವರ್ಷಗಳನ್ನು ಮಿಷನರಿಯಾಗಿ ಮತ್ತು ಧರ್ಮ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದರು, ನಂತರ ಜಗದ್ಗುರು ಫ್ರಾನ್ಸಿಸ್ ರವರ ವಿನಂತಿಯ ಮೇರೆಗೆ ಅಲ್ಲಿ ಬಿಷಪ್ ಆಗಿ ಮರಳಿ ಹೋದರು. ಈ ಕರೆಯ ಬೆಳಕಿನಲ್ಲಿ ನಾವು ಆಫ್ರಿಕಾಕ್ಕೆ ಮೊದಲ ಪ್ರಯಾಣದ ಅವರ ಆಸೆಯನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವುದನ್ನು ಅರ್ಥಮಾಡಿಕೊಳ್ಳಬಹುದು ದೈವಾರಾಧನೆ ಆಚರಣೆಗಳ ಸಂದರ್ಭದಲ್ಲಿ ಸಂಗೀತ ಮತ್ತು ಸಾಂಪ್ರದಾಯಿಕ ನೃತ್ಯಗಳೊಂದಿಗೆ ಹರ್ಷದಿಂದ ಮತ್ತು ನೆಮ್ಮದಿಯಿಂದ ಇರುವ ಜಗದ್ಗುರುಗಳು ಮಕ್ಕಳನ್ನು ಭೇಟಿ ಮಾಡಿ ಅಪ್ಪಿಕೊಳ್ಳುವಲ್ಲಿ ತೊಡಗಿರುವವರು, ಜನರೊಂದಿಗೆ ದೀರ್ಘ ಸಮಯ ಕೈಕುಲುಕಿ ಶುಭಾಶಯ ಕೋರುವವರು. ವಿಶೇಷವಾಗಿ, ಸುವಾರ್ತೆಯ ಹೊಸತನವು ವಿವಿಧ ಸಂಸ್ಕೃತಿಗಳ ಮತ್ತು ಜನಾಂಗಗಳೊಂದಿಗೆ ಭೇಟಿಯಾಗಿ, ಶಾಂತಿ ಮತ್ತು ಪರಿವರ್ತನೆಯ ಶಕ್ತಿಯಾಗಿ ಪರಿಣಮಿಸುವ ಬಗ್ಗೆ ಅವರು ಮಾತನಾಡುವಾಗ ಇದು ಸ್ಪಷ್ಟವಾಗುತ್ತದೆ.

ಇದು ಕ್ಯಾಮರೂನ್‌ನ ಬಮೆಂಡಾದಲ್ಲಿ ಸ್ಪಷ್ಟವಾಗಿ ಕಂಡುಬಂತು, ಅಲ್ಲಿ ರೋಮ್‌ನ ಬಿಷಪ್ ನಾಗರಿಕ ಯುದ್ಧದಿಂದ ದುಃಖಕರವಾಗಿ ಗುರುತಿಸಲ್ಪಟ್ಟ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ಸಹಬಾಳ್ವೆಯನ್ನು ಉತ್ತೇಜಿಸಲು ತೆರಳಿದರು. ಅಥವಾ ಯೌಂಡೆಯಲ್ಲಿ, ಶೈಕ್ಷಣಿಕ ವಲಯವನ್ನು ಉದ್ದೇಶಿಸಿ ಮಾತನಾಡುವಾಗ, ಅವರು “ಸ್ವತಂತ್ರವಾಗಿಯೂ ಪವಿತ್ರ ಅಶಾಂತಿಯುಳ್ಳ ಮನಸ್ಸುಗಳನ್ನು ರೂಪಿಸುವ” ಮಹತ್ವವನ್ನು ವಿವರಿಸಿದರು ಇದು “ಕ್ರೈಸ್ತ ನಂಬಿಕೆ ಸಂಪೂರ್ಣ ಮಾನವೀಯ ಪ್ರಸ್ತಾಪವಾಗಿ ಕಾಣಿಸಿಕೊಳ್ಳಲು ಅಗತ್ಯವಾದ ಪರಿಸ್ಥಿತಿ.” ಇಂತಹ ನಂಬಿಕೆ ವ್ಯಕ್ತಿಗಳ ಮತ್ತು ಸಮಾಜದ ಜೀವನವನ್ನು ಪರಿವರ್ತಿಸಲು, ನಮ್ಮ ಕಾಲದ ದುರಂತಗಳು ಮತ್ತು ಬಡತನದ ವಿವಿಧ ರೂಪಗಳ ಎದುರು ಭವಿಷ್ಯವಾಣಿಯ ಬದಲಾವಣೆಗೆ ಪ್ರೇರೇಪಿಸಲು ಸಮರ್ಥವಾಗಿದೆ.

ಇದೇ ಕಾರಣಕ್ಕೆ, ಮುಂದಿನ ಕಾನ್ಸಿಸ್ಟರಿಗಾಗಿ ಜಗದ್ಗುರು XIVನೇ ಲಿಯೋರವರು ದಿವಂಗತ ಜಗದ್ಗುರು ಫ್ರಾನ್ಸಿಸ್ ರವರ ಪ್ರೇಷಿತರ ಎಕ್ಸ್ಹೋರ್ಟೇಶನ್ ಇವಾಂಜೆಲಿ ಗಾಡಿಯಮ್ ಅನ್ನು ಪುನರುಜ್ಜೀವನಗೊಳಿಸುವುದು ಮತ್ತು ಆಳಗೊಳಿಸುವುದನ್ನು ಕಾರ್ಯಕ್ರಮವಾಗಿ ಸೂಚಿಸಿರುವುದು ಯಾದೃಚ್ಛಿಕವಲ್ಲ. ಇಂದು ಅವರ ನಿಧನದ ಮೊದಲ ವಾರ್ಷಿಕೋತ್ಸವವನ್ನು ನಾವು ಸ್ಮರಿಸುತ್ತಿರುವ ಈ ಮೂಲಭೂತ ದಾಖಲೆ, ಮಿಷನ್ ಎಂದರೇನು ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ ವಿಶ್ವಾಸ ಪ್ರಕಟಣೆ—ನಂಬಿಕೆಯ ಮೂಲಭೂತ ಸಾರದ ಘೋಷಣೆ ನೋವು ಅನುಭವಿಸುವವರೊಂದಿಗೆ ಹತ್ತಿರವಾಗಿರುವ ಧರ್ಮ ಸಭೆಯ ಮುಖ, ಮಾನವೀಯ ಮತ್ತು ನ್ಯಾಯಸಮ್ಮತ ದಿಕ್ಕಿನಲ್ಲಿ ಸಮಾಜವನ್ನು ಪರಿವರ್ತಿಸುವ ಬದ್ಧತೆ. ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಎಕ್ಸ್ಹೋರ್ಟೇಶನ್ ಡಿಲೆಕ್ಸಿ ತೇ ಯಲ್ಲಿ ಹೇಳಿರುವಂತೆ, ಬಡವರ ಮೇಲಿನ ಪ್ರೀತಿ ಕ್ರೈಸ್ತ ಘೋಷಣೆಯ ಅವಿಭಾಜ್ಯ ಅಂಗವಾಗಿದೆ, ಏಕೆಂದರೆ “ತಳಮಟ್ಟದಲ್ಲಿರುವವರೊಂದಿಗೆ ಮತ್ತು ಅಶಕ್ತರೊಂದಿಗೆ ಸಂಪರ್ಕ ಹೊಂದುವುದು ಇತಿಹಾಸದ ಪ್ರಭುವನ್ನು ಎದುರಿಸುವ ಮೂಲಭೂತ ಮಾರ್ಗವಾಗಿದೆ.

ಶಾಂತಿಗೆ ನೀಡುವ ಒತ್ತಡ, ಮಾತುಕತೆಗೆ ಮರಳುವ ಅಗತ್ಯ, ಮತ್ತು ಅಂತರರಾಷ್ಟ್ರೀಯ ಕಾನೂನಿನ ಗೌರವ ಇತ್ತೀಚಿನ ದಿನಗಳಲ್ಲಿ ಪ್ರತಿಕ್ರಿಯೆಗಳನ್ನು ಹುಟ್ಟಿಸಿದ ಈ ಮಾತುಗಳು ಈ ಹಿನ್ನೆಲೆಯಲ್ಲಿ ಅರ್ಥವಾಗುತ್ತವೆ. ಇದು ಧರ್ಮ ಸಭೆಯ ಸೇವೆಯ ಸ್ವಭಾವವನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ, ವಿಶೇಷವಾಗಿ ಪೇತ್ರನ ಉತ್ತರಾಧಿಕಾರಿಯ ಸೇವೆಯನ್ನು, ಅವರು ರಾಜಕಾರಣಿಯಂತೆ ಅಲ್ಲ, ಧರ್ಮಾಧ್ಯಕ್ಷೀಯ ಸೇವಕನಂತೆ ಕಾರ್ಯನಿರ್ವಹಿಸುತ್ತಾರೆ. ಆದರೆ ಧರ್ಮಾಧ್ಯಕ್ಷೀಯ ಸೇವೆಯ ಅಂತರಂಗದಲ್ಲೇ ಶುದ್ಧ ಆತ್ಮಿಕ ಅಥವಾ ಸೈದ್ಧಾಂತಿಕ ಮಟ್ಟಕ್ಕೆ ಸೀಮಿತವಾಗದೆ ಶಾಂತಿ, ನ್ಯಾಯ, ಸಂವಾದ, ಭೇಟಿ, ಹೆಚ್ಚು ನ್ಯಾಯಸಮ್ಮತ ಸಮಾಜಗಳ ನಿರ್ಮಾಣ, ಹಿಂಸೆಗೊಳಗಾದವರ ಅಥವಾ ಭೇದಭಾವಕ್ಕೆ ಒಳಗಾದವರ ಸಮೀಪತೆ, ಯುದ್ಧದ ನಿರಪರಾಧ ಬಲಿಗಳೊಂದಿಗೆ ಐಕ್ಯತೆ, ಮತ್ತು ಈ ಇತಿಹಾಸದ ಗಂಭೀರ ಕ್ಷಣದಲ್ಲಿ ಮಾನವಕೋಟಿಯ ಭವಿಷ್ಯದ ಬಗ್ಗೆ ಭವಿಷ್ಯವಾಣಿಯ ಚಿಂತನೆ ಸೇರಿವೆ.

21 ಏಪ್ರಿಲ್ 2026, 20:28