“ವ್ಯಾಟಿಕನ್‌ನಲ್ಲಿ ಲಿಥುವೇನಿಯಾದ ಪ್ರಧಾನಮಂತ್ರಿಯನ್ನು ಜಗದ್ಗುರುಗಳು ಭೇಟಿಯ
ವ್ಯಾಟಿಕನ್ ವರದಿ
ಮಾರ್ಚ್ 7ರ ಈ ಬೆಳಿಗ್ಗೆ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ ಲಿಥುವೇನಿಯಾ ಗಣರಾಜ್ಯದ ಪ್ರಧಾನಮಂತ್ರಿ ಇಂಗಾ ರುಗಿನಿಯೆನೆ ರವರನ್ನು ಖಾಸಗಿ ಭೇಟಿಯಲ್ಲಿ ಸ್ವಾಗತಿಸಿದರು. ಈ ಭೇಟಿಯ ನಂತರ ಅವರು ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರನ್ನು ಭೇಟಿಯಾದರು.
ರಾಜ್ಯ ಕಾರ್ಯಾಲಯದಲ್ಲಿ ನಡೆದ ಚರ್ಚೆಗಳು
ಪವಿತ್ರ ಸಭೆಯ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ, “ರಾಜ್ಯ ಕಾರ್ಯಾಲಯದಲ್ಲಿ ನಡೆದ ಸ್ನೇಹಪೂರ್ಣ ಭೇಟಿಯಲ್ಲಿ ಪವಿತ್ರ ಸಭೆ (ಹೋಲಿ ಸೀ) ಮತ್ತು ಲಿಥುವೇನಿಯಾ ದೇಶಗಳ ನಡುವಿನ ಬಲವಾದ ಸಂಬಂಧಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಮಾನವ ವ್ಯಕ್ತಿಯ ಗೌರವ ಹಾಗೂ ಸಮಾಜದ ಸಾಮೂಹಿಕ ಹಿತಕ್ಕಾಗಿ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಸಕಾರಾತ್ಮಕ ಕೊಡುಗೆಯನ್ನು ವಿಶೇಷವಾಗಿ ಉಲ್ಲೇಖಿಸಲಾಯಿತು.
ನಂತರ ನಡೆದ ಮಾತುಕತೆಯಲ್ಲಿ ಹಲವು ಅಂತರರಾಷ್ಟ್ರೀಯ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಾಯಿತು, ಎಂದು ಪ್ರಕಟಣೆ ಮುಂದುವರಿಸುತ್ತದೆ. ವಿಶೇಷವಾಗಿ ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಸಂಘರ್ಷಗಳ ಕುರಿತು ಚರ್ಚೆ ನಡೆಯಿತು. ಈ ಯುದ್ಧಗಳಿಗೆ ಅಂತ್ಯ ತರಲು ಎಲ್ಲಾ ಮಟ್ಟಗಳಲ್ಲಿಯೂ ರಾಜತಾಂತ್ರಿಕ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯಲಿ ಎಂಬ ಆಶೆಯನ್ನು ವ್ಯಕ್ತಪಡಿಸಲಾಯಿತು.
