ಹುಡುಕಿ

ಜಗದ್ಗುರು XIVನೇ ಲಿಯೋರವರು ಇಟಲಿಯ ಮಿಲಿಟರಿ ಆರ್ಡಿನರಿಯೇಟ್ ಸದಸ್ಯರನ್ನು ಭೇಟಿಯಾದರು ಜಗದ್ಗುರು XIVನೇ ಲಿಯೋರವರು ಇಟಲಿಯ ಮಿಲಿಟರಿ ಆರ್ಡಿನರಿಯೇಟ್ ಸದಸ್ಯರನ್ನು ಭೇಟಿಯಾದರು  (ANSA)

ಜಗದ್ಗುರುಗಳು: ಪ್ರೀತಿಯಲ್ಲಿ ಏಕತೆಯಾದಾಗ ಮಾತ್ರ ಯುದ್ಧದ ನಿರಂತರ ಬೆದರಿಕೆಗಳನ್ನು ನಾವು ಜಯಿಸಬಹುದು

ಇಟಲಿಯ ಸೈನಿಕ ಆರ್ಡಿನರಿಯಟ್ ಸದಸ್ಯರಿಗೆ ನೀಡಿದ ಭಾಷಣದಲ್ಲಿ ಜಗದ್ಗುರು XIVನೇ ಲಿಯೋರವರು ಸ್ಮರಣೆಯ ಮಹತ್ವವನ್ನು ಹಾಗೂ ಅಗತ್ಯದಲ್ಲಿರುವವರಿಗೆ ಸೇವೆ ಸಲ್ಲಿಸುವ ಕರ್ತವ್ಯವನ್ನು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಮಾರ್ಚ್ 7 ರಂದು ಜಗದ್ಗುರು XIVನೇ ಲಿಯೋರವರು ಇಟಲಿಯ ಮಿಲಿಟರಿ ಆರ್ಡಿನರಿಯೇಟ್ ಸದಸ್ಯರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ಮರಣೆಯ ಮಹತ್ವ ಹಾಗೂ ಸೇವೆಯನ್ನು ಪ್ರೀತಿಯ ಕಾರ್ಯವಾಗಿ ಬದುಕುವ ಅಗತ್ಯವನ್ನು ಒತ್ತಿಹೇಳಿದರು. ಅವರು ಗೌದಿಯಂ ಎಟ್ ಸ್ಪೆಸ್ ಎಂಬ ಎರಡನೇ ವ್ಯಾಟಿಕನ್ ಕೌನ್ಸಿಲ್ ಧರ್ಮಾಧೀಕಾರಿಗಳ ಸಂವಿಧಾನವನ್ನು ಉಲ್ಲೇಖಿಸಿ, ಮಾನವರು ಪಾಪದಿಂದ ಮುಕ್ತರಾಗದವರೆಗೆ ಯುದ್ಧದ ಭೀತಿ ಮುಂದುವರಿಯುತ್ತದೆ ಆದರೆ ಪ್ರೀತಿಯ ಏಕತೆಯಿಂದ ಮಾನವರು ಪಾಪವನ್ನು ಜಯಿಸಿದರೆ ಹಿಂಸೆಯನ್ನು ಕೂಡ ಜಯಿಸಬಹುದು ಎಂದು ಹೇಳಿದರು.

ಜಗದ್ಗರುಗಳ ಪ್ರಕಾರ ಕ್ರೈಸ್ತ ಸೈನಿಕರ ಗುರಿ ದುರ್ಬಲರನ್ನು ರಕ್ಷಿಸುವುದು, ಶಾಂತಿಯುತ ಸಹಜೀವನವನ್ನು ಕಾಪಾಡುವುದು, ವಿಪತ್ತುಗಳಿಗೆ ಸ್ಪಂದಿಸುವುದು ಮತ್ತು ಅಂತರರಾಷ್ಟ್ರೀಯ ಶಾಂತಿ ಗುರಿಗಳಲ್ಲಿ ಭಾಗವಹಿಸುವುದಾಗಿದೆ. ಈ ಸೇವೆಯನ್ನು ಕೇವಲ ಉದ್ಯೋಗವೆಂದು ಕಾಣಲಾಗುವುದಿಲ್ಲ ಅದು ಮನಸ್ಸನ್ನು ಪ್ರಶ್ನಿಸುವ ಒಂದು ಕರೆಯಾಗಿದೆ ಎಂದು ಅವರು ಹೇಳಿದರು. ಉದಾರತೆ, ಸೇವಾಭಾವ ಮತ್ತು ತ್ಯಾಗದ ಮನೋಭಾವವು ಸೈನಿಕರ ಗುರುತನ್ನು ರೂಪಿಸುವ ಪ್ರಮುಖ ಮೌಲ್ಯಗಳಾಗಿವೆ.

ಈ ಸಭೆ ಇಟಲಿಯ ಸೈನಿಕ ಆರ್ಡಿನರಿಯಟ್ ಸ್ಥಾಪನೆಯ 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದಿದ್ದು, ಜಗದ್ಗುರುಗಳ ಸ್ಮರಣೆಯ ಮಹತ್ವವನ್ನು ವಿಶೇಷವಾಗಿ ವಿವರಿಸಿದರು. ಇಂದಿನ ಸಮಾಜದಲ್ಲಿ ಮಾಹಿತಿಯನ್ನು ಹರಡುವ ಸಾಮರ್ಥ್ಯ ಹೆಚ್ಚಾದರೂ ಅದನ್ನು ಆಳವಾಗಿ ಅಳವಡಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು. ಆದರೆ ಧರ್ಮ ಸಭೆಗಾಗಿ ಸ್ಮರಣೆ ಎಂದರೆ ಕೇವಲ ಮಾಹಿತಿಯ ಸಂಗ್ರಹವಲ್ಲ ಅದು ಜವಾಬ್ದಾರಿಯತ್ತ ನಿರಂತರವಾಗಿ ಕರೆಯುವ ಜೀವಂತ ಮನಸ್ಸು ಎಂದು ಅವರು ತಿಳಿಸಿದರು.

ಕ್ರೈಸ್ತರಿಗೆ ಸ್ಮರಣೆ ವಿಶೇಷ ಅರ್ಥವನ್ನು ಹೊಂದಿದೆ ಎಂದು ಜಗದ್ಗುರುಗಳು ಹೇಳಿದರು. ಏಕೆಂದರೆ ಕ್ರೈಸ್ತ ನಂಬಿಕೆ ಇತಿಹಾಸದಲ್ಲಿ ದೇವರು ಪ್ರವೇಶಿಸಿದ ಘಟನೆ ಮೇಲೆ ಆಧಾರಿತವಾಗಿದೆ. ರಕ್ಷಣೆಯು ಕೇವಲ ಒಂದು ಕಲ್ಪನೆಯಲ್ಲ ಅದು ಜೀವಂತ ವ್ಯಕ್ತಿಯಾದ ಯೇಸು ಕ್ರಿಸ್ತನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಅವರು ವಿವರಿಸಿದರು.

ಜಗದ್ಗರುಗಳ ಮಾತಿನಲ್ಲಿ, ಸೈನಿಕರ ಸೇವೆ ದೇಶದತ್ತ, ಪ್ರದೇಶಗಳತ್ತ ಮತ್ತು ವಿಶೇಷವಾಗಿ ಜನರತ್ತ ಇರುವ ಪ್ರೀತಿಯ ಕಾರ್ಯವಾಗಿದೆ. ಇದು ವಿಶೇಷವಾಗಿ ದುರ್ಬಲತೆ ಹೆಚ್ಚಿರುವ ಸ್ಥಳಗಳಲ್ಲಿ ಜನರೊಂದಿಗೆ ಸಮೀಪತೆಯನ್ನು ತೋರಿಸುವ ಸೇವೆಯಾಗಿದೆ. ಸೈನಿಕ ಯಾಜಕರು ವಿವಿಧ ಸಂದರ್ಭಗಳಲ್ಲಿ ಶಾಂತಿಯಲ್ಲೂ ಸಂಘರ್ಷದಲ್ಲೂ ಸುವಾರ್ತೆಯನ್ನು, ಸಕ್ರಾಮೆಂಟ್‌ಗಳನ್ನು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಜನರಿಗೆ ತಲುಪಿಸುತ್ತಾರೆ.

ಕೊನೆಯಲ್ಲಿ ಜಗದ್ಗುರುಗಳು, ಧರ್ಮ ಸಭೆಯ ಶಾಂತಿಯ ಸುವಾರ್ತೆಯನ್ನು ಘೋಷಿಸುತ್ತಾ ಎಲ್ಲರೊಂದಿಗೆ ಸೇರಿ ಸಾಮೂಹಿಕ ಹಿತವನ್ನು ಕಾಪಾಡಲು ಸಿದ್ಧವಾಗಿದೆ ಎಂದು ಹೇಳಿದರು. ನಿಜವಾದ ಶಾಂತಿ ಎಂದರೆ ಕೇವಲ ಸಂಘರ್ಷದ ಅಭಾವವಲ್ಲ ಅದು ನ್ಯಾಯ, ಸತ್ಯ ಮತ್ತು ಪ್ರೀತಿಯ ಪರಿಪೂರ್ಣತೆಯಾಗಿದೆ ಎಂದು ಅವರು ನೆನಪಿಸಿದರು.

07 ಮಾರ್ಚ್ 2026, 15:24