ಹುಡುಕಿ

ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಆಸ್ಟ್ರಿಯಾ ಗಣರಾಜ್ಯದ ರಾಷ್ಟ್ರಪತಿ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ರವರನ್ನು ಸ್ವಾಗತಿಸಿದರು. ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಆಸ್ಟ್ರಿಯಾ ಗಣರಾಜ್ಯದ ರಾಷ್ಟ್ರಪತಿ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ರವರನ್ನು ಸ್ವಾಗತಿಸಿದರು.  (ANSA)

ಆಸ್ಟ್ರಿಯಾದ ರಾಷ್ಟ್ರಪತಿಯನ್ನು ಜಗದ್ಗುರು XIVನೇ ಲಿಯೋರವರು ಭೇಟಿಯಾದರು.

ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ಆಸ್ಟ್ರಿಯಾ ಗಣರಾಜ್ಯದ ರಾಷ್ಟ್ರಪತಿ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ರವರನ್ನು ಸ್ವಾಗತಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು ಸಿವಿ ನೇ ಲಿಯೋರವರು ಗುರುವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಆಸ್ಟ್ರಿಯಾ ಗಣರಾಜ್ಯದ ರಾಷ್ಟ್ರಪತಿ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ರವರನ್ನು ಸ್ವಾಗತಿಸಿದರು.

ನಂತರ ಆಸ್ಟ್ರಿಯಾದ ರಾಷ್ಟ್ರಪತಿಯವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರು ಸಹ ಉಪಸ್ಥಿತರಿದ್ದರು.

ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ನಡೆದ ಚರ್ಚೆಗಳು ಸ್ನೇಹಪೂರ್ಣ ಹಾಗೂ ಹೃತ್ಪೂರ್ವಕ ವಾತಾವರಣದಲ್ಲಿ ನಡೆದವು. ಜಗದ್ಗರುಗಳ ಅಧಿಕಾರ ಸ್ಥಳ ಮತ್ತು ಆಸ್ಟ್ರಿಯಾ ನಡುವಿನ ಉತ್ತಮ ಸಂಬಂಧಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ವಿಶೇಷವಾಗಿ, ಸಮಾಜದ ಸಾಮಾನ್ಯ ಹಿತಾಸಕ್ತಿಯನ್ನು ಉತ್ತೇಜಿಸುವಲ್ಲಿ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಸಕಾರಾತ್ಮಕ ಕೊಡುಗೆಯನ್ನು ಒತ್ತಿ ಹೇಳಲಾಯಿತು. ಜೊತೆಗೆ, ವಲಸೆ  ಮತ್ತು ಅಂತರ್ ಧರ್ಮೀಯ ಸಂಬಂಧಗಳು ಸೇರಿದಂತೆ ಕೆಲವು ಸಮಕಾಲೀನ ಮಹತ್ವದ ವಿಷಯಗಳನ್ನೂ ಪ್ರಸ್ತಾಪಿಸಲಾಯಿತು.

ಕೊನೆಯಲ್ಲಿ, ಪ್ರಕಟಣೆಯ ಪ್ರಕಾರ, ಸಂಭಾಷಣೆ ಪ್ರಸ್ತುತ ಅಂತರರಾಷ್ಟ್ರೀಯ ವಿಷಯಗಳತ್ತ ಮುಂದುವರಿಯಿತು, ವಿಶೇಷವಾಗಿ ಸಂಘರ್ಷದ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಾಯಿತು. ಶಾಂತಿಯುತ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಅಂತರರಾಷ್ಟ್ರೀಯ ಸಮುದಾಯವು ಇನ್ನಷ್ಟು ಮಹತ್ವದ ಪಾತ್ರವಹಿಸಲಿ ಎಂಬ ಭರವಸೆಯನ್ನು ವ್ಯಕ್ತಪಡಿಸಲಾಯಿತು.

06 ಮಾರ್ಚ್ 2026, 16:06