ಮೋನಾಕೊದಲ್ಲಿ ಬಲಿಪೂಜೆಯಲ್ಲಿ ಜಗದ್ಗುರುಗಳು: ‘ನೀವು ಶಾಂತಿಯಲ್ಲಿ ಬದುಕುವುದಕ್ಕೆ ಸಾಕ್ಷಿಯಾಗಲು ಕರೆಯಲ್ಪಟ್ಟಿದ್ದೀರಿ’
ವ್ಯಾಟಿಕನ್ ವರದಿ
ಮೋನಾಕೊದ ವಿಶ್ವಾಸಿಗಳಿಗೆ “ನಾವು ಶಸ್ತ್ರಾಸ್ತ್ರಗಳ ಗದ್ದಲಕ್ಕೂ ಯುದ್ಧದ ದೃಶ್ಯಗಳಿಗೂ ಅಭ್ಯಾಸವಾಗಬಾರದು!” ಎಂದು ಜಗದ್ಗುರು XIVನೇ ಲಿಯೋರವರು ಶಕ್ತಿಯುತವಾಗಿ ನೆನಪಿಸಿದರು. ತಮ್ಮ ಒಂದು ದಿನದ ಪ್ರೇಷಿತರ ಭೇಟಿಯ ಸಂದರ್ಭದಲ್ಲಿ,II ನೇ ಲೂಯಿಸ್ ಕ್ರೀಡಾಂಗಣದಲ್ಲಿ ಅವರು ಆಚರಿಸಿದ ಬಲಿಪೂಜೆಯ ವೇಳೆ ಈ ಮಾತುಗಳನ್ನು ಹೇಳಿದರು.
ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು ಹೇಳಿದರು: “ಕತ್ತರಿಸಲ್ಪಟ್ಟ ಪ್ರತಿಯೊಂದು ಜೀವವೂ ಕ್ರಿಸ್ತನ ದೇಹವನ್ನು ಗಾಯಗೊಳಿಸುತ್ತದೆ,” ಮತ್ತು “ಶಾಂತಿ ಎಂದರೆ ಕೇವಲ ಶಕ್ತಿಯ ಸಮತೋಲನವಲ್ಲ; ಅದು ಶುದ್ಧೀಕರಿಸಲ್ಪಟ್ಟ ಹೃದಯಗಳ ಕಾರ್ಯವಾಗಿದ್ದು, ಇತರರನ್ನು ಸೋಲಿಸಬೇಕಾದ ಶತ್ರುಗಳಾಗಿ ಅಲ್ಲ, ರಕ್ಷಿಸಬೇಕಾದ ಸಹೋದರ ಸಹೋದರಿಯರಾಗಿ ನೋಡುವವರ ಕಾರ್ಯವಾಗಿದೆ” ಎಂದು ನೆನಪಿಸಿದರು.
ಜಗದ್ಗುರುಗಳು ತಮ್ಮ ಪ್ರಭೋಧನೆಯನ್ನು ಆರಂಭಿಸುತ್ತಾ, ಇಂದಿನ ಸುವಾರ್ತೆಯ ಪಾಠವು ಸಂತ ಯೋಹಾನನ ಪ್ರಕಾರ ಯೇಸುವಿನ ವಿರುದ್ಧ ನೀಡಲಾದ ಕ್ರೂರ ತೀರ್ಪನ್ನು, ಅಂದರೆ ಸನ್ಹೆಡ್ರಿನ್ ಸದಸ್ಯರು ಅವನನ್ನು ಕೊಲ್ಲಲು ಯೋಜಿಸಿದ ದಿನವನ್ನು ವಿವರಿಸುತ್ತದೆ ಎಂದು ಹೇಳಿದರು. ಈ ನಿರ್ಧಾರವು ಭಯದಿಂದ ಹುಟ್ಟಿದ ರಾಜಕೀಯ ಲೆಕ್ಕಾಚಾರವಾಗಿತ್ತು ಎಂದು ಜಗದ್ಗುರುಗಳು ವಿವರಿಸಿದರು. ಯೇಸು ಜನರಲ್ಲಿ ಭರವಸೆಯನ್ನು ಹುಟ್ಟಿಸುತ್ತಾ, ಅವರ ದುಃಖವನ್ನು ಸಂತೋಷವಾಗಿಸುತ್ತಾ ಮುಂದುವರಿದರೆ, ರೋಮನ್ನರು ಬಂದು ದೇಶವನ್ನು ನಾಶಮಾಡುತ್ತಾರೆ ಎಂದು ಅವರು ಭಾವಿಸಿದರು.
ಹೀಗಾಗಿ, ಯೇಸುವನ್ನು ನಿರೀಕ್ಷಿತ ಮೆಸ್ಸಿಯಾನಾಗಿ ಗುರುತಿಸುವ ಬದಲು, ಧಾರ್ಮಿಕ ನಾಯಕರು ಅವನನ್ನು ಅಪಾಯವೆಂದು ಕಂಡರು ಎಂದು ಜಗದ್ಗುರುಗಳು ಹೇಳಿದರು.
ಒಂದೆಡೆ ಸರ್ವಶಕ್ತನಾದ ಪ್ರಭುವಾಗಿ ಮತ್ತು ರಕ್ಷಕರಾಗಿ ತಾನೇ ತಾನು ಪ್ರಕಟಿಸಿಕೊಳ್ಳುವ ದೇವರ ಪ್ರಕಟನೆ ಇದೆ ಮತ್ತೊಂದೆಡೆ ನಿರ್ದಯವಾಗಿ ಕೊಲ್ಲಲು ಸಿದ್ಧವಾಗಿರುವ ಶಕ್ತಿಶಾಲಿ ಅಧಿಕಾರಿಗಳ ಗುಪ್ತ ಸಂಚುಗಳಿವೆ. ನಮ್ಮ ಇಂದಿನ ಲೋಕವನ್ನು ನೋಡಿದಾಗ ಬಹಳ ಬದಲಾವಣೆ ಆಗಿಲ್ಲ ಎಂದು ಅವರು ಹೇಳಿದರು.
ನಿರಪರಾಧಿಗಳನ್ನು ಕೊಲ್ಲಲು ಎಷ್ಟು ಸಂಚುಗಳು!
“ಇಂದಿಗೂ ಜಗತ್ತಿನಾದ್ಯಂತ ಎಷ್ಟು ನಿರಪರಾಧಿಗಳನ್ನು ಕೊಲ್ಲಲು ಸಂಚುಗಳು ರೂಪಗೊಳ್ಳುತ್ತಿವೆ!” ಎಂದು ಜಗದ್ಗುರು ಲಿಯೋರವರು ಖಂಡಿಸಿದರು. “ಅವರ ನಾಶವನ್ನು ನ್ಯಾಯೀಕರಿಸಲು ಎಷ್ಟು ಕಾರಣಗಳನ್ನು ನೀಡಲಾಗುತ್ತಿದೆ!” ಎಂದು ಅವರು ವಿಷಾದಿಸಿದರು.
ಆದರೂ ಕೆಟ್ಟದಿನ ಶಾಶ್ವತತೆಯ ನಡುವೆಯೂ, “ದೇವರ ನಿತ್ಯ ನ್ಯಾಯವು ಯಾವಾಗಲೂ ನಮ್ಮನ್ನು ನಮ್ಮ ಸಮಾಧಿಗಳಿಂದ ರಕ್ಷಿಸುತ್ತದೆ. ಲಾಜರಸ್‌ನೊಂದಿಗೆ ಮಾಡಿದಂತೆ ನಮಗೆ ಹೊಸ ಜೀವವನ್ನು ನೀಡುತ್ತದೆ” ಎಂದು ಜಗದ್ಗುರುಗಳು ಭರವಸೆ ನೀಡಿದರು.
ಪ್ರಭು ನಮಗೆ ಭರವಸೆಯನ್ನು ತುಂಬುವ ಮೂಲಕ ನೋವಿನಿಂದ ಬಿಡುಗಡೆ ನೀಡುತ್ತಾರೆ ಮತ್ತು ನಮ್ಮ ಕಠಿಣ ಹೃದಯಗಳನ್ನು ಪರಿವರ್ತಿಸುತ್ತಾರೆ ಎಂದು ಅವರು ಹೇಳಿದರು. ಅವರ ಕರುಣೆ ಪ್ರಪಂಚವನ್ನು ರಕ್ಷಿಸುತ್ತದೆ ಮತ್ತು ಗರ್ಭದಲ್ಲೇ ಆರಂಭವಾಗುವ ಮಾನವ ಜೀವದಿಂದ ಹಿಡಿದು ಅದರ ಕೊನೆಯವರೆಗೂ ಪ್ರತಿಯೊಂದು ಜೀವವನ್ನು ಪೋಷಿಸುತ್ತದೆ.
ಮೊದಲ ಪಾಠದಲ್ಲಿನ ಪ್ರವಾದಿ ಏಜಕಿಯೇಲ್ ದೇವರ ರಕ್ಷಣಾ ಯೋಜನೆ ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಸಾಕ್ಷ್ಯಪಡಿಸುತ್ತಾನೆ ಎಂದು ಜಗದ್ಗುರುಗಳು ನೆನಪಿಸಿದರು. ಅದು ಮುಕ್ತಿಯಿಂದ ಆರಂಭವಾಗಿ, ಜನರ ಪರಿಶುದ್ಧೀಕರಣದ ಮೂಲಕ ಪೂರ್ಣಗೊಳ್ಳುತ್ತದೆ ಇದು ನಮ್ಮ ತಪಸ್ಸು ಕಾಲದ ಪ್ರಯಾಣದಂತೆಯೇ ಪರಿವರ್ತನೆಯ ಪಯಣವಾಗಿದೆ.
ಅದೇ ರೀತಿ, ನಾವು ವೈಯಕ್ತಿಕ ಮಟ್ಟದಲ್ಲೇ ಉಳಿಯದೇ, ದೇವರೊಂದಿಗೆ ಹಾಗೂ ನಮ್ಮ ನೆರೆಯವರೊಂದಿಗೆ ಇರುವ ಸಂಬಂಧಗಳನ್ನು ಪರಿವರ್ತಿಸುವ ರೀತಿಯಲ್ಲಿ ಭಾಗಿಯಾಗಲು ಆಹ್ವಾನಿತರಾಗಿದ್ದೇವೆ ಎಂದು ಜಗದ್ಗುರುಗಳು ಹೇಳಿದರು.
ಮುಕ್ತಿ ಎಂದರೆ ಜನರನ್ನು ಕಲ್ಮಶಗೊಳಿಸಿದ “ಮೂರ್ತಿಪೂಜೆ”ಗಳಿಂದ ಶುದ್ಧೀಕರಣವಾಗುವುದಾಗಿದೆ ಅಂದರೆ ನಮ್ಮ ಹೃದಯಗಳನ್ನು ಬಂಧಿಸುವ, ಮೋಸಗೊಳಿಸುವ ಮತ್ತು ಭ್ರಷ್ಟಗೊಳಿಸುವ ಎಲ್ಲವೂ. “ಪ್ರಭು ನಮ್ಮನ್ನು ಮೂರ್ತಿಪೂಜೆಯಿಂದ ನಿಜವಾದ ನಂಬಿಕೆಗೆ, ಮರಣದಿಂದ ಜೀವಕ್ಕೆ ಕರೆದು ಇತಿಹಾಸದ ದಿಕ್ಕನ್ನು ಬದಲಿಸಿದನು ಎಂದು ಅವರು ಒತ್ತಿ ಹೇಳಿದರು.
ಅನ್ಯಾಯಗಳು ಮತ್ತು ಯುದ್ಧಗಳ ನಡುವಿನಲ್ಲಿ
ಜನಾಂಗಗಳನ್ನು ಕಾಡುವ ಅನ್ಯಾಯಗಳ ನಡುವೆ ಮತ್ತು ರಾಷ್ಟ್ರಗಳನ್ನು ಚೂರುಮಾಡುವ ಯುದ್ಧಗಳ ನಡುವೆ, ಪ್ರವಾದಿ ಯೆರೆಮೀಯನ ಮಾತುಗಳು—“ನಾನು ಅವರ ದುಃಖವನ್ನು ಸಂತೋಷವನ್ನಾಗಿ ಮಾಡುತ್ತೇನೆ; ಅವರ ನೋವಿನ ನಂತರ ಅವರಿಗೆ ಸಂತೋಷ ನೀಡುತ್ತೇನೆ”—ಎಂದು ಶಕ್ತಿಯಾಗಿ ಕೇಳಿಸುತ್ತವೆ ಎಂದು ಜಗದ್ಗುರುಗಳು ಹೇಳಿದರು.
ಮೂರ್ತಿಪೂಜೆ ಜನರನ್ನು ಪರಸ್ಪರ ದಾಸರನ್ನಾಗಿ ಮಾಡುತ್ತದೆ, ಆದರೆ ಅದರಿಂದ ಶುದ್ಧೀಕರಣವು ಅವರನ್ನು ಪರಿಶುದ್ಧರನ್ನಾಗಿಸುತ್ತದೆ. “ಇದು ದೇವರ ಕೃಪೆಯ ವರವಾಗಿದೆ, ಇದು ಜನರನ್ನು ದೇವರ ಮಕ್ಕಳನ್ನಾಗಿ ಮತ್ತು ಒಬ್ಬರಿಗೊಬ್ಬರು ಸಹೋದರ ಸಹೋದರಿಯರನ್ನಾಗಿಸುತ್ತದೆ.”
ಈ ವರವು ನಮ್ಮ ಇಂದಿನ ಕಾಲಕ್ಕೂ ಬೆಳಕು ನೀಡುತ್ತದೆ, ಏಕೆಂದರೆ ರಕ್ತಪಾತದಿಂದ ಕಲ್ಮಶವಾಗಿರುವ ಯುದ್ಧಗಳು ಶಕ್ತಿ ಮತ್ತು ಹಣದ ಮೂರ್ತಿಪೂಜೆಯ ಫಲವೆಂದು ಅವರು ಹೇಳಿದರು.
ಕತ್ತರಿಸಲ್ಪಟ್ಟ ಪ್ರತಿಯೊಂದು ಜೀವವೂ ಕ್ರಿಸ್ತನ ದೇಹವನ್ನು ಗಾಯಗೊಳಿಸುತ್ತದೆ, ಎಂದು ಜಗದ್ಗುರುಗಳು ಮತ್ತೊಮ್ಮೆ ಹೇಳಿದರು ಮತ್ತು ಮನವಿ ಮಾಡಿದರು “ನಾವು ಶಸ್ತ್ರಾಸ್ತ್ರಗಳ ಗದ್ದಲಕ್ಕೂ ಯುದ್ಧದ ದೃಶ್ಯಗಳಿಗೂ ಅಭ್ಯಾಸವಾಗಬಾರದು!”ಎಂದರು.
ಹೀಗಾಗಿ, ಶಾಂತಿ ಎಂದರೆ ಕೇವಲ ಶಕ್ತಿಯ ಸಮತೋಲನ ಅಲ್ಲ, ಅದು ಶುದ್ಧೀಕರಿಸಲ್ಪಟ್ಟ ಹೃದಯಗಳ ಕಾರ್ಯ ಇತರರನ್ನು ಸೋಲಿಸಬೇಕಾದ ಶತ್ರುಗಳಾಗಿ ಅಲ್ಲ, ರಕ್ಷಿಸಬೇಕಾದ ಸಹೋದರ ಸಹೋದರಿಯರಾಗಿ ನೋಡುವವರ ಕಾರ್ಯ ಎಂದು ಅವರು ಒತ್ತಿ ಹೇಳಿದರು.
ನಿಮ್ಮ ನಂಬಿಕೆಯ ಮೂಲಕ ಇತರರಿಗೆ ಸಂತೋಷ ತರುವುದು.
ಮೋನಾಕೊದಲ್ಲಿನ ಧರ್ಮ ಸಭೆ ಶಾಂತಿಯಲ್ಲಿ ಬದುಕುವುದಕ್ಕೆ ಸಾಕ್ಷಿಯಾಗಲು ಕರೆಯಲ್ಪಟ್ಟಿದೆ. “ಆದುದರಿಂದ, ಪ್ರಿಯ ಸ್ನೇಹಿತರೇ, ನಿಮ್ಮ ನಂಬಿಕೆಯ ಮೂಲಕ ಇತರರಿಗೆ ಸಂತೋಷವನ್ನು ತಂದುಕೊಡಿ ಜೂಜಿನಿಂದ ಗೆಲ್ಲುವ ಸಂತೋಷವಲ್ಲ, ದಾನಧರ್ಮದ ಮೂಲಕ ಹಂಚಿಕೊಳ್ಳುವ ನಿಜವಾದ ಸಂತೋಷವನ್ನು ತೋರಿಸಿ ಎಂದು ಹೇಳಿದರು.
ಈ ಸಂತೋಷದ ಮೂಲ ದೇವರ ಪ್ರೀತಿಯೇ ಆಗಿದೆ ಎಂದು ಅವರು ಹೇಳಿದರು. ಹೊಸ ಮತ್ತು ದುರ್ಬಲ ಜೀವಿಗಳ ಮೇಲಿನ ಪ್ರೀತಿ ಯುವಕರು ಮತ್ತು ವೃದ್ಧರಿಗೆ ನೀಡುವ ಪ್ರೋತ್ಸಾಹ ಆರೋಗ್ಯವಂತರಿಗೂ ರೋಗಿಗಳಿಗೂ ವಿಶೇಷವಾಗಿ ಏಕಾಂಗಿಗಳಾಗಿರುವವರಿಗೆ ನೀಡುವ ಕಾಳಜಿ ಎಂದರು.
ಕೆಟ್ಟತನದ ನಡುವೆ ಪ್ರಭು ನಮ್ಮನ್ನು ಕಾಪಾಡುತ್ತಾರೆ
ಜಗದ್ಗುರುಗಳು ಕನ್ಯಾ ಮರಿಯಮ್ಮನರನ್ನು ಪ್ರಾರ್ಥಿಸಿದರು ಚಿಕ್ಕವರಿಗೂ ಬಡವರಿಗೂ ಆತಿಥ್ಯಪೂರ್ಣ ಮತ್ತು ಗೌರವಯುತ ಸ್ಥಳವನ್ನು ಒದಗಿಸಲು, ಸಮಗ್ರ ಮತ್ತು ಒಳಗೊಂಡ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡಲಿ ಎಂದು ಹೇಳಿದರು.
“ಜಗತ್ತಿನ ದೀರ್ಘ ತಪಸ್ಸು ಕಾಲದಲ್ಲಿ, ಕೆಟ್ಟತನ ಆರ್ಭಟಿಸುತ್ತಿರುವಾಗ ಮತ್ತು ಮೂರ್ತಿಪೂಜೆ ಹೃದಯಗಳನ್ನು ನಿರ್ಲಕ್ಷ್ಯವಾಗಿಸುತ್ತಿರುವಾಗ, ಪ್ರಭು ತನ್ನ ಪುನರುತ್ಥಾನವನ್ನು ಸಿದ್ಧಪಡಿಸುತ್ತಾರೆ,” ಎಂದು ಜಗದ್ಗುರು ಲಿಯೋರವರು ಹೇಳಿದರು. “ಪ್ರಭು ನಮ್ಮ ಯಾತ್ರೆಯನ್ನು ಮತ್ತು ಜಗತ್ತಿನಲ್ಲಿ ಧರ್ಮ ಸಭೆಯ ಗುರಿಯನ್ನು ಸದಾ ಬೆಂಬಲಿಸುತ್ತಾರೆ ಎಂದು ಅವರು ಭರವಸೆ ನೀಡಿದರು.
