ಜಗದ್ಗುರು XIVನೇ ಲಿಯೋರವರು: ಸಾಮಾಜಿಕ ಸ್ನೇಹವನ್ನು ಉತ್ತೇಜಿಸುವ ವೃತ್ತಿಯನ್ನು ಮೋನಾಕೋ ಹೊಂದಿದೆ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ತಮ್ಮ ಏಕದಿನದ ಪ್ರೆಷಿತರ ಯಾತ್ರೆಯ ಆರಂಭದಲ್ಲಿ ಶನಿವಾರ ಬೆಳಿಗ್ಗೆ ಮೋನಾಕೋ ಪ್ರಿನ್ಸಿಪಾಲಿಟಿಯ ಹೆಲಿಪೋರ್ಟ್ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು.
ಮೋನಾಕೋದ ಪ್ರಿನ್ಸ್ ದ್ವಿತೀಯ ಅಲ್ಬರ್ಟ್ ರವರು ಜಗದ್ಗುರುಗಳನ್ನು ಸ್ವಾಗತಿಸಿ, ನಂತರ ಪ್ರಿನ್ಸ್ ಅರಮನೆಯಲ್ಲಿ ಅಧಿಕೃತ ಸ್ವಾಗತವನ್ನು ನೀಡಿದರು. ಅಲ್ಲಿ ಇಬ್ಬರೂ ಮಾತುಕತೆ ನಡೆಸಿದ ನಂತರ, ಅರಮನೆಯ ಮುಂದೆ ಇರುವ ಮೈದಾನದಲ್ಲಿ ಕೂಡಿದ್ದ ಸಾವಿರಾರು ಜನರನ್ನು ಅವರು ಅಭಿನಂದಿಸಿದರು.
ತಮ್ಮ ಭಾಷಣದಲ್ಲಿ, ಜಗದ್ಗುರು XIVನೇ ಲಿಯೋರವರು ಆಧುನಿಕ ಯುಗದಲ್ಲಿ ಮೋನಾಕೋಗೆ ಭೇಟಿ ನೀಡುತ್ತಿರುವ ಮೊದಲ ಜಗದ್ಗುರು ತಾನೇ ಎಂಬುದನ್ನು ನೆನಪಿಸಿದರು. ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಒಂದಾದ ಮೋನಾಕೋದಲ್ಲಿ ಕಥೋಲಿಕ ಧರ್ಮವು ರಾಜ್ಯ ಧರ್ಮವಾಗಿದ್ದರೂ, ಪೂಜೆ ಸ್ವಾತಂತ್ರ್ಯವನ್ನು ಖಚಿತಪಡಿಸಲಾಗಿದೆ.
ರೋಮಿನ ಧರ್ಮ ಸಭೆ ಮತ್ತು ಮೋನಾಕೋ ನಡುವಿನ ಈ ಗಾಢ ಸಂಬಂಧವನ್ನು ಗಮನಿಸಿ, ಜಗದ್ಗುರುಗಳು ಪ್ರಿನ್ಸಿಪಾಲಿಟಿಯು ಧರ್ಮ ಸಭೆಯ ಸಾಮಾಜಿಕ ಉಪದೇಶಗಳತ್ತ ತನ್ನ ಬದ್ಧತೆಯನ್ನು ಗಾಢಗೊಳಿಸಿ, ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಅನುಷ್ಠಾನಗೊಳಿಸಲು ಒಪ್ಪಿಸಿದರು.
ಹೆಚ್ಚಾಗಿ ಧಾರ್ಮಿಕವಾಗಿಲ್ಲದ ಮತ್ತು ಹೆಚ್ಚು ಲೌಕಿಕೀಕೃತವಾದ ಸಂಸ್ಕೃತಿಗಳಲ್ಲಿಯೂ ಸಹ, ಅವರು ಹೇಳಿದರು, ಈ ಸಾಮಾಜಿಕ ಉಪದೇಶಗಳ ವೈಶಿಷ್ಟ್ಯಪೂರ್ಣ ದೃಷ್ಟಿಕೋನವು ನಮ್ಮ ಕಾಲಕ್ಕೆ ಸುವಾರ್ತೆಯು ತರುತ್ತಿರುವ ಮಹಾನ್ ಬೆಳಕನ್ನು ತೋರಿಸಬಲ್ಲದು ಅನೇಕರಿಗೆ ಆಶಿಸುವುದೇ ಕಷ್ಟವಾಗಿರುವ ಕಾಲ ಇದು ಎಂದರು.
ಜಗದ್ಗುರು XIVನೇ ಲಿಯೋರವರು ಮೋನಾಕೋ ಮಧ್ಯಧರಾ ಸಮುದ್ರವನ್ನು ಅಂಚಿನಲ್ಲಿಟ್ಟುಕೊಂಡಿದೆ ಎಂಬುದನ್ನು ನೆನಪಿಸಿ, ಭೇಟಿ-ಸಂವಾದವನ್ನು ಉತ್ತೇಜಿಸುವ ಮತ್ತು ಸಾಮಾಜಿಕ ಸ್ನೇಹವನ್ನು ಬೆಳೆಸುವ ತನ್ನ ಕರೆಯನ್ನು ಈ ಸಣ್ಣ ರಾಷ್ಟ್ರವು ಅಳವಡಿಸಿಕೊಳ್ಳಬೇಕೆಂದು ಪ್ರೋತ್ಸಾಹಿಸಿದರು.
ಸಣ್ಣತನದ ವರ ಮತ್ತು ಜೀವಂತ ಆಧ್ಯಾತ್ಮಿಕ ಪರಂಪರೆ,ಎಂದು ಅವರು ಹೇಳಿದರು, ನಿಮ್ಮ ಸಮೃದ್ಧಿಯನ್ನು ಕಾನೂನು ಮತ್ತು ನ್ಯಾಯದ ಸೇವೆಗೆ ಬಳಸಲು ನಿಮಗೆ ಆಹ್ವಾನಿಸುತ್ತದೆ ವಿಶೇಷವಾಗಿ ಅಧಿಕಾರದ ಪ್ರದರ್ಶನ ಮತ್ತು ಹಿಂಸಾತ್ಮಕ ತರ್ಕವು ಜಗತ್ತಿಗೆ ಹಾನಿ ಮಾಡುತ್ತಾ ಶಾಂತಿಯನ್ನು ಅಪಾಯಕ್ಕೊಳಪಡಿಸುತ್ತಿರುವ ಈ ಇತಿಹಾಸಾತ್ಮಕ ಕ್ಷಣದಲ್ಲಿ.ಜಗದ್ಗುರುಗಳು ಮೋನಾಕೋದ ನಿವಾಸಿಗಳಿಗೆ, ಅಶಕ್ತತೆಯ ಭಾವನೆಗೆ ಒಳಗಾಗದೆ, ಇತಿಹಾಸಾತ್ಮಕ ಸವಾಲುಗಳು ಮತ್ತು ಹೊಣೆಗಾರಿಕೆಗಳ ಮಧ್ಯೆ ತಮ್ಮ ನಂಬಿಕೆಯನ್ನು ಬಲವಾಗಿ ಅಳವಡಿಸಿಕೊಳ್ಳಲು ಆಹ್ವಾನಿಸಿದರು.
ಮೋನಾಕೋದ ಬಹುಮುಖ ಸಮುದಾಯದ ಸ್ವಭಾವವು ಅದನ್ನು ಒಂದು ಸಣ್ಣ ಪ್ರಪಂಚದಂತಾಗಿಸಿದೆ ಎಂದು ಅವರು ಹೇಳಿದರು, ಅಲ್ಲಿ ಸ್ಥಳೀಯ ಜನರ ಚೈತನ್ಯಮಯ ಅಲ್ಪಸಂಖ್ಯಾತರು ಮತ್ತು ವಿದೇಶಿ ನಾಗರಿಕರ ಬಹುಸಂಖ್ಯಾತರು ಪ್ರಿನ್ಸಿಪಾಲಿಟಿಯ ಸುಖಸಮೃದ್ಧಿಗೆ ಸಹಕರಿಸುತ್ತಿದ್ದಾರೆ.
ನಿಮ್ಮ ಸಮುದಾಯದಲ್ಲಿ ಅನೇಕರು ಆರ್ಥಿಕ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಮಹತ್ತರ ಪ್ರಭಾವವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. “ಅನೇಕರು ವಿವಿಧ ರೀತಿಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಮತ್ತು ಅನೇಕ ಸಂದರ್ಶಕರು ಹಾಗೂ ಪ್ರವಾಸಿಗರೂ ಇಲ್ಲಿದ್ದಾರೆ ಎಂದರು.
ದೇವರ ರಾಜ್ಯವು “ಅನ್ಯಾಯಕರವಾದ ಅಧಿಕಾರ ವ್ಯವಸ್ಥೆಗಳನ್ನು ಮತ್ತು ಪಾಪದ ರಚನೆಗಳನ್ನು ಅಲುಗಾಡಿಸುತ್ತದೆ, ಅವು ದರಿದ್ರರು ಮತ್ತು ಶ್ರೀಮಂತರ ನಡುವೆ, ವಿಶೇಷಾಧಿಕಾರ ಹೊಂದಿದವರು ಮತ್ತು ತಳ್ಳಿಹಾಕಲ್ಪಟ್ಟವರ ನಡುವೆ, ಸ್ನೇಹಿತರು ಮತ್ತು ಶತ್ರುಗಳ ನಡುವೆ ಅಂತರಗಳನ್ನು ಸೃಷ್ಟಿಸುತ್ತವೆ” ಎಂದು ಜಗದ್ಗುರು ಲಿಯೋ ರವರು ಹೇಳಿದರು.
ಮೋನಾಕೋದ ಕಥೋಲಿಕ ಪರಂಪರೆಯನ್ನು ನೆನಪಿಸಿ, ಯೇಸುವಿನ ಪ್ರಭುತ್ವವು ಎಲ್ಲರನ್ನು ಮೇಲಕ್ಕೆತ್ತಿ, ನಮ್ಮನ್ನು ಒಗ್ಗೂಡಿಸುತ್ತದೆ ಆದ್ದರಿಂದ ಪ್ರತಿಯೊಬ್ಬ ಮಾನವ ಜೀವವನ್ನು ಪ್ರೀತಿಯಿಂದ ರಕ್ಷಿಸಲು ಎಲ್ಲರೂ ಕರೆಯಲ್ಪಟ್ಟಿದ್ದಾರೆ ಮತ್ತು ಯಾರೂ ಹೊರತಾಗುವುದಿಲ್ಲ ಎಂದು ಅವರು ಹೇಳಿದರು.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಮೋನಾಕೋವನ್ನು, ಸಾಮಾಜಿಕ ಪ್ರಗತಿಯನ್ನು ಉತ್ತೇಜಿಸಲು ಮತ್ತು ಮಾನವಕುಲದ ಜೀವನವನ್ನು ಮಾರ್ಗದರ್ಶನ ಮಾಡಲು, ಕಥೋಲಿಕ ಸಾಮಾಜಿಕ ಬೋಧನೆಯ ಆಳವನ್ನು ಜಗತ್ತಿಗೆ ತೋರಿಸಲು ಪ್ರೋತ್ಸಾಹಿಸಿದರು.
