ಸಿಂಗಾಪುರದ ರಾಷ್ಟ್ರಪತಿ ಥರ್ಮನ್ ಶಣ್ಮುಗಾರತ್ನಂ ರವರನ್ನು ಜಗದ್ಗುರು XIVನೇ ಲಿಯೋರವರು ಭೇಟಿಯಾದರು
ವ್ಯಾಟಿಕನ್ ವರದಿ
ಜಗದ್ಗುರು ಸಿವಿ ನೇ ಲಿಯೋರವರು ಗುರುವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಸಿಂಗಾಪುರ ಗಣರಾಜ್ಯದ ರಾಷ್ಟ್ರಪತಿ ಥರ್ಮನ್ ಶಣ್ಮುಗಾರತ್ನಂ ರವರನ್ನು ಭೇಟಿಯಾದರು.
ನಂತರ ರಾಷ್ಟ್ರಪತಿಯವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರು ಸಹ ಉಪಸ್ಥಿತರಿದ್ದರು.
ಈ ಭೇಟಿಯ ನಂತರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ನಡೆದ ಮಾತುಕತೆಗಳು ಹೃತ್ಪೂರ್ವಕ ಮತ್ತು ಸ್ನೇಹಪೂರ್ಣ ವಾತಾವರಣದಲ್ಲಿ ನಡೆದವು. ಜಗದ್ಗರುಗಳ ಅಧಿಕಾರ ಸ್ಥಳ ಮತ್ತು ಸಿಂಗಾಪುರದ ನಡುವಿನ ಉತ್ತಮ ಸಂಬಂಧಗಳನ್ನು ವಿಶೇಷವಾಗಿ ಉಲ್ಲೇಖಿಸಲಾಯಿತು.
ಇದಕ್ಕೂ ಜೊತೆಗೂಡಿ, ಆ ದೇಶದಲ್ಲಿ ಇರುವ ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ಸೌಹಾರ್ದಪೂರ್ಣ ಸಹಅಸ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಸಾಮಾನ್ಯ ಹಿತಾಸಕ್ತಿಗಾಗಿ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಕೊಡುಗೆಯನ್ನು ಕೂಡ ಪ್ರಶಂಸಿಸಲಾಯಿತು.
ಕೊನೆಯಲ್ಲಿ, ಚರ್ಚೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಪರಿಸ್ಥಿತಿಗಳ ಕುರಿತು ಅಭಿಪ್ರಾಯ ವಿನಿಮಯ ನಡೆಯಿತು. ಜೊತೆಗೆ, ಬಹುಪಕ್ಷೀಯ ವ್ಯವಸ್ಥೆಯಲ್ಲಿರುವ ಈಗಿನ ಯಾಂತ್ರಿಕತೆಗಳನ್ನು ಬೆಂಬಲಿಸುವುದು ಮತ್ತು ಅವುಗಳನ್ನು ಪುನರುಜ್ಜೀವನಗೊಳಿಸುವ ಮಹತ್ವವನ್ನೂ ಒತ್ತಿ ಹೇಳಲಾಯಿತು.
