ಆರ್ಚ್‌ಬಿಷಪ್ ಆಂಥೋನಿ ರಾಂಡಾಝೊ ಆರ್ಚ್‌ಬಿಷಪ್ ಆಂಥೋನಿ ರಾಂಡಾಝೊ 

ಆಸ್ಟ್ರೇಲಿಯಾದ ಆರ್ಚ್‌ಬಿಷಪ್ ರಂಡಾಜ್ಜೊರವರನ್ನು ಶಾಸನ ಪಠ್ಯಗಳ ಡಿಕಾಸ್ಟ್ರಿಯ ಪ್ರಿಫೆಕ್ಟ್ ಆಗಿ ನೇಮಕ ಮಾಡಲಾಗಿದೆ

ಜಗದ್ಗುರು XIVನೇ ಲಿಯೋರವರು ಆರ್ಚ್‌ಬಿಷಪ್ ಆಂಥನಿ ರಂಡಾಜ್ಜೊ ರವರನ್ನು ಶಾಸನ ಪಠ್ಯಗಳ ಡಿಕಾಸ್ಟ್ರಿಯ ಪ್ರಿಫೆಕ್ಟ್ ಆಗಿ ನೇಮಕ ಮಾಡಿದರು. ಈ ಹುದ್ದೆಯನ್ನು ಮೊದಲು ವಹಿಸಿಕೊಂಡಿದ್ದ ಆರ್ಚ್‌ಬಿಷಪ್ ಫಿಲಿಪ್ಪೋ ಇಯನ್ನೋನೆರವರನ್ನು ಜಗದ್ಗುರುಗಳು ಬಿಷಪ್‌ಗಳ ಡಿಕಾಸ್ಟ್ರಿಯ ಪ್ರಿಫೆಕ್ಟ್ ಆಗಿ ನೇಮಕ ಮಾಡಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಆರ್ಚ್‌ಬಿಷಪ್ ಆಂಥನಿ ರಂಡಾಜ್ಜೊರವರನ್ನು ಶಾಸನ ಪಠ್ಯಗಳ ಡಿಕಾಸ್ಟ್ರಿಯ ಪ್ರಿಫೆಕ್ಟ್ ಆಗಿ ನೇಮಕ ಮಾಡಿದ್ದಾರೆ ಎಂದು ಬುಧವಾರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದುವರೆಗೆ ಆಸ್ಟ್ರೇಲಿಯಾದ ಬ್ರೋಕನ್ ಬೇ ಧರ್ಮಪ್ರಾಂತ್ಯದ ಬಿಷಪ್ ಆಗಿಯೂ, ಓಶಿಯಾನಿಯಾದ ಕಥೋಲಿಕ ಬಿಷಪ್‌ಗಳ ಸಭೆಗಳ ಮಹಾಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದ ಅವರನ್ನು ಜಗದ್ಗುರುಗಳು ವೈಯಕ್ತಿಕವಾಗಿ ಆರ್ಚ್‌ಬಿಷಪ್ ಪದವಿಯನ್ನು ಕೂಡ ನೀಡಿದ್ದಾರೆ.

ಅವರು ಈ ಹುದ್ದೆಯಲ್ಲಿ ಆರ್ಚ್‌ಬಿಷಪ್ ಫಿಲಿಪ್ಪೋ ಇಯನ್ನೋನೆರವರನ್ನು ಉತ್ತರಾಧಿಕಾರಿಯಾಗಿದ್ದು, ಜಗದ್ಗುರು XIVನೇ ಲಿಯೋರವರು ಸೆಪ್ಟೆಂಬರ್ 26ರಂದು ಅವರನ್ನು ಬಿಷಪ್‌ಗಳ ಡಿಕಾಸ್ಟ್ರಿಯ ಪ್ರಿಫೆಕ್ಟ್ ಆಗಿ ನೇಮಿಸಿದ್ದರು. ಇಯನ್ನೋನೆರವರು ಈ ಹುದ್ದೆಯನ್ನು 2023ರ ಜನವರಿಯಿಂದ 2025ರ ಮೇ ವರೆಗೆ ವಹಿಸಿಕೊಂಡಿದ್ದರು.

ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಆರ್ಚ್‌ಬಿಷಪ್ ರಂಡಾಜ್ಜೊರವರು, “ಜಗದ್ಗುರು ಲಿಯೋರವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಹೃತ್ಪೂರ್ವಕ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ಬ್ರೋಕನ್ ಬೇ ಧರ್ಮಪ್ರಾಂತ್ಯದ ಭಕ್ತರು ಮತ್ತು ಯಾಜಕರಿಗೆ ಸೇವೆ ಸಲ್ಲಿಸಿರುವುದು ನನಗೆ ನಿಜವಾದ ಸಂತೋಷವನ್ನು ನೀಡಿದೆ ಎಂದು ಅವರು ಹೇಳಿದರು. ಹೊಸ ಜವಾಬ್ದಾರಿಯನ್ನು ಸ್ವೀಕರಿಸುವ ಈ ಸಂದರ್ಭದಲ್ಲಿ ಎಲ್ಲರ ಪ್ರಾರ್ಥನೆಗಳನ್ನು ಕೇಳಿಕೊಂಡ ಅವರು, ದೇವರು ನನಗೆ ತನ್ನ ಕುರಿಗಳ ಕಾಳಜಿಯನ್ನು ಒಪ್ಪಿಸಿರುವುದಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಹೊಸ ಹುದ್ದೆಯನ್ನು ಸ್ವೀಕರಿಸಲು ರೋಮಿಗೆ ತೆರಳುವ ಮೊದಲು, ಮುಂದಿನ ಮೂರು ತಿಂಗಳು ಅವರು ಬ್ರೋಕನ್ ಬೇಯಲ್ಲಿ ಪ್ರೇಷಿತರ ಆಡಳಿತಕಾರರಾಗಿ ಸೇವೆ ಮುಂದುವರಿಸಲಿದ್ದಾರೆ.

25 ಮಾರ್ಚ್ 2026, 09:43