ಇಟಲಿಯ ಟ್ರೆವಿಸೊದಲ್ಲಿ ನಡೆದ ಗ್ರೀನ್‌ಅಕಾರ್ಡ್ ಪರಿಸರ ವಿಜ್ಞಾನ ಸಭೆಯಲ್ಲಿ ಭಾಗವಹಿಸುವವರಿಗೆ ಜಗದ್ಗುರು ಲಿಯೋರವರು ಸಂದೇಶ ಕಳುಹಿಸುತ್ತಾರೆ ಇಟಲಿಯ ಟ್ರೆವಿಸೊದಲ್ಲಿ ನಡೆದ ಗ್ರೀನ್‌ಅಕಾರ್ಡ್ ಪರಿಸರ ವಿಜ್ಞಾನ ಸಭೆಯಲ್ಲಿ ಭಾಗವಹಿಸುವವರಿಗೆ ಜಗದ್ಗುರು ಲಿಯೋರವರು ಸಂದೇಶ ಕಳುಹಿಸುತ್ತಾರೆ 

ಜಗದ್ಗುರು XIVನೇ ಲಿಯೋರವರು: ಇಂದಿನ ಸಂಕಷ್ಟಗಳನ್ನು ಒಟ್ಟಾಗಿ ಎದುರಿಸಿ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಿ.

ಜಗದ್ಗುರು XIV ನೇ ಲಿಯೋರವರು 17ನೇ ಅಂತರರಾಷ್ಟ್ರೀಯ ಪ್ರಕೃತಿಯ ರಕ್ಷಣೆಗಾಗಿ ಮಾಹಿತಿ ವೇದಿಕೆಗೆ ಸಂದೇಶವನ್ನು ಕಳುಹಿಸಿ, ಗ್ರೀನ್ ಅಕಾರ್ಡ್ ಪ್ರೋತ್ಸಾಹಿಸಿದ ಈ ವೇದಿಕೆಯಲ್ಲಿ ಭಾಗವಹಿಸುವವರನ್ನು ಸ್ಥಿರ ಅಭಿವೃದ್ಧಿಯ ಸಂಶೋಧನಾ ಯೋಜನೆಗಳ ಮೂಲಕ ಸೃಷ್ಟಿಯನ್ನು ಕಾಪಾಡಲು ಒಟ್ಟಾಗಿ ಕೆಲಸ ಮಾಡಲು ಉತ್ತೇಜಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗ್ರೀನ್ ಅಕಾರ್ಡ್ ಪ್ರೋತ್ಸಾಹಿಸಿದ ಪ್ರಕೃತಿಯ ರಕ್ಷಣೆಗಾಗಿ 17ನೇ ಅಂತರರಾಷ್ಟ್ರೀಯ ಮಾಹಿತಿ ವೇದಿಕೆವನ್ನು ಗುರುತಿಸಲು, ಮಾರ್ಚ್ 18ರಂದು ಟ್ರೆವಿಸೊದಲ್ಲಿ ನಡೆಯಲಿದ್ದ ಕಾರ್ಯಕ್ರಮದ ಅಂಗವಾಗಿ, ಟ್ರೆವಿಸೊ ಧರ್ಮಕ್ಷೇತ್ರದ ಬಿಷಪ್ ಮಿಚೆಲ್ ತೋಮಸಿ ರವರಿಗೆ ಸಂದೇಶ ಕಳುಹಿಸಿದರು.

ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆಟ್ರೋ ಪರೋಲಿನ್ ರವರ ಸಹಿಯಿಂದ ಹೊರಬಂದ ಈ ಸಂದೇಶದಲ್ಲಿ, ಜಗದ್ಗುರುಗಳು ತಮ್ಮ ಶುಭಾಶಯಗಳನ್ನು ತಿಳಿಸಿ, ಎಲ್ಲಾ ಭಾಗವಹಿಸುವವರಿಗೂ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು.

ಈ ವರ್ಷದ ವಿಷಯವಾದ ಒಟ್ಟಾಗಿ ಭವಿಷ್ಯವನ್ನು ನಿರ್ಮಿಸುವುದು ಭವಿಷ್ಯಕ್ಕಾಗಿ ದಾಹವಾಗಿರುವ ಹೊಸ ಮಾನವಕುಲ ಎಂಬ ಶೀರ್ಷಿಕೆಯಡಿ, 40ಕ್ಕೂ ಹೆಚ್ಚು ದೇಶಗಳಿಂದ ಜನರು ಇಟಲಿಯ ಈ ಉತ್ತರ-ಪೂರ್ವ ನಗರಕ್ಕೆ ಸೇರಿ ಪರಿಸರ ಮತ್ತು ಸಾಮಾನ್ಯ ಮನೆ (ಭೂಮಿ) ರಕ್ಷಣೆಯ ಕುರಿತು ಚರ್ಚಿಸಿದರು.

ತಮ್ಮ ಸಂದೇಶದಲ್ಲಿ, ಜಗದ್ಗುರುಗಳು ಸ್ಥಿರ ಅಭಿವೃದ್ಧಿಯ ಸಂಶೋಧನಾ ಯೋಜನೆಗಳ ಮೂಲಕ ಸೃಷ್ಟಿಯ ಆರೈಕೆಯ ಬಗ್ಗೆ ಜಾಗೃತಿ ಮತ್ತು ಐಕ್ಯತೆಯನ್ನು ಮುಂದುವರಿಸಲು ಪ್ರೇರೇಪಿಸಿದರು. ಪರಿಸರ ಜವಾಬ್ದಾರಿ ಕೇವಲ ತಾಂತ್ರಿಕ ಮಾಹಿತಿಯಿಂದ ಮಾತ್ರ ಪೂರ್ಣಗೊಳ್ಳುವುದಿಲ್ಲ,ಎಂದು ಅವರು ಹೇಳಿದರು. ಆ ಮಾಹಿತಿಗಳು ಅಗತ್ಯವಾದರೂ ಸಾಕಾಗುವುದಿಲ್ಲ. ಮನಸ್ಸು, ಹೃದಯ ಮತ್ತು ಕೈಗಳನ್ನು ಸ್ಪರ್ಶಿಸುವ ಶಿಕ್ಷಣ, ಹೊಸ ಅಭ್ಯಾಸಗಳು, ಸಮುದಾಯದ ಜೀವನಶೈಲಿ ಮತ್ತು ಸತ್ಸಂಸ್ಕಾರಗಳ ಅವಶ್ಯಕತೆ ಇದೆ ಎಂದರು.

ಇಂದಿನ ಸಂಕಷ್ಟಗಳನ್ನು ಒಟ್ಟಾಗಿ ಎದುರಿಸಿದರೆ, ಹೊಸ ತಲೆಮಾರಿಗೆ ಉತ್ತಮ ಭವಿಷ್ಯವನ್ನು ಖಚಿತಪಡಿಸುವ, ಗೌರವಯುತ ಮತ್ತು ಎಲ್ಲರನ್ನು ಒಳಗೊಂಡ ಸಮಾಜವನ್ನು ನಿರ್ಮಿಸಬಹುದು ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.

ಸೃಷ್ಟಿಯ ಆರೈಕೆಗೆ ಹೊಸ ದೃಷ್ಟಿಕೋನ

ಟ್ರೆವಿಸೊದಲ್ಲಿ ನಡೆದ ಸಭೆಯಲ್ಲಿ, ಕಾರ್ಡಿನಲ್ ಬೆನಿಯಾಮಿನೊ ಸ್ಟೆಲ್ಲಾ ರವರು, ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಾರೋಲಿನ್ ರವರ ಪರವಾಗಿ ಸಂದೇಶವೊಂದನ್ನು ಓದಿದರು. ಇದು ಅಸಿಸಿಯ ಸಂತ ಫ್ರಾನ್ಸಿಸ್ ರವರ ನಿಧನದ 800ನೇ ವರ್ಷದ ಸ್ಮರಣೆ ಮತ್ತು ಜೀವಿಗಳ ಕ್ಯಾಂಟಿಕಲ್ ಕಾವ್ಯದ ವಾರ್ಷಿಕೋತ್ಸವದ ಅಂಗವಾಗಿತ್ತು.

ಕಾರ್ಡಿನಲ್ ಪಾರೋಲಿನ್ ರವರು, ನಾವು ಒಟ್ಟಾಗಿ ಭವಿಷ್ಯ ನಿರ್ಮಿಸಲು ಬಯಸಿದರೆ, ಮೊದಲು ಒಂದು ಗಡಿಯನ್ನೂ ದಾಟಿ ಹೊಸ ಮನೆಯಲ್ಲಿ ಪ್ರವೇಶಿಸಬೇಕು ಎಂದು ಹೇಳಿದರು. ಇದಿಲ್ಲದಿದ್ದರೆ, ಸೃಷ್ಟಿಯ ಆರೈಕೆ ತತ್ವಶಾಸ್ತ್ರ ಮತ್ತು ತಾಂತ್ರಿಕತೆಯ ನಡುವಿನ ಅತಿರೇಕಗಳಲ್ಲಿ ಸಿಲುಕುವ ಅಪಾಯವಿದೆ ಎಂದು ಎಚ್ಚರಿಸಿದರು.

ಅವರು, ಈ ಸ್ಮರಣೆಯನ್ನು ಕೇವಲ ನೆನಪಿಗಾಗಿ ಮಾತ್ರವಲ್ಲ, ಸಹಭಾಗಿತ್ವ ಮತ್ತು ಏಕತೆಯನ್ನು ಬೆಳೆಸುವ ಹೊಸ ದೃಷ್ಟಿಕೋನವನ್ನು ಪುನಃ ಕಂಡುಹಿಡಿಯುವ ಅವಕಾಶವೆಂದು ವಿವರಿಸಿದರು. ಪ್ರಕೃತಿಯನ್ನು ಸಹೋದರ ಮತ್ತು ಸಹೋದರಿ ಎಂದು ಕರೆಯುವುದು, ಅದನ್ನು ಸ್ವಾಮ್ಯವಾಗಿ ನೋಡದೆ, ದೇವರ ವರವೆಂದು ಅರಿಯುವ ಗಂಭೀರ ಮನೋಭಾವವಾಗಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆಯ ವಿಷಯವನ್ನೂ ಅವರು ಸ್ಪರ್ಶಿಸಿ, ಅದನ್ನು ಮಾನವೀಯ ಪರಿಪಕ್ವತೆಯ ಪರೀಕ್ಷೆಯೆಂದು ವಿವರಿಸಿದರು. ಆರಂಭದಿಂದಲೇ ಸರಿಯಾದ ಮಾರ್ಗದರ್ಶನ ನೀಡುವ ಸಮಗ್ರ ಬುದ್ಧಿವಂತಿಕೆ ಅಗತ್ಯವಿದೆ, ಎಂದು ಅವರು ಹೇಳಿದರು.

ಒಟ್ಟಾಗಿ ಕೆಲಸ ಮಾಡುವುದು, ಕೆಲವರಿಗೆ ಮಾತ್ರ ಇರುವ ದಾನವಲ್ಲ ಅದು ಪರಸ್ಪರ ಅವಲಂಬನೆಗೆ ಒಪ್ಪಿಗೆಯಾಗಿದೆ  ಏಕೆಂದರೆ ಯಾರೂ ಒಬ್ಬರೇ ರಕ್ಷಿಸಲ್ಪಡುವುದಿಲ್ಲ ಎಂದು ಅವರು ಒತ್ತಿಹೇಳಿದರು.

ಕೊನೆಯಲ್ಲಿ, ಅಸಿಸಿಯ ಸಂತ ಫ್ರಾನ್ಸಿಸ್ ರವರ  ಜೀವನ ಮತ್ತು ಕ್ಯಾಂಟಿಕಲ್ ನಮಗೆ ಭೂಮಿಯೊಂದಿಗೆ ಶಾಂತಿ ಮತ್ತು ಮಾನವರ ನಡುವಿನ ಶಾಂತಿ ಅಳಿಯದ ಸಂಬಂಧ ಹೊಂದಿವೆ ಎಂದು ನೆನಪಿಸುತ್ತದೆ. ಭೂಮಿಗೆ ಗಾಯವಾದಾಗ ಸಮಾಜವೂ ಒಡೆಯುತ್ತದೆ ಮಾನವ ಗೌರವ ಕುಗ್ಗಿದಾಗ ಪ್ರಕೃತಿ ಶೋಷಣೆಗೆ ಒಳಗಾಗುತ್ತದೆ ಸಂಬಂಧಗಳು ಮುರಿದಾಗ ತಂತ್ರಜ್ಞಾನ ವಿಭಜನೆಯ ಸಾಧನವಾಗುತ್ತದೆ.

ಆದ್ದರಿಂದ, ಒಟ್ಟಾಗಿ ಭವಿಷ್ಯ ನಿರ್ಮಿಸುವುದು ಕೇವಲ ಕಾರ್ಯವಲ್ಲ ಅದು ಜೀವನದ ಮಾರ್ಗವಾಗಬೇಕು, ಎಂದು ಕಾರ್ಡಿನಲ್ ಪಾರೋಲಿನ್ ರವರು ತಮ್ಮ ಸಂದೇಶವನ್ನು ಸಮಾಪಿಸಿದರು.

20 ಮಾರ್ಚ್ 2026, 19:43