ಜಗದ್ಗುರು ಲಿಯೋರವರು: ಅಮೆಜೋನಿಯಾದಲ್ಲಿ ಧರ್ಮ ಸಭೆ ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿರಬೇಕು
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಮಂಗಳವಾರ, ಕೊಲಂಬಿಯಾದ ಬೊಗೋಟಾದಲ್ಲಿ ನಡೆಯುತ್ತಿರುವ ಅಮೆಜಾನಿನ ಧರ್ಮಸಭೆಯ ಸಭೆ (ಸಿಇಎಎಂಎಂ)ಯ 6ನೇ ಮಹಾಸಭೆಗೆ ವಿಡಿಯೋ ಸಂದೇಶವನ್ನು ಕಳುಹಿಸಿದರು.
ಅವರು ಈ ಪವಿತ್ರಾತ್ಮನನ್ನು ಆಲಿಸುವ ವಿಶೇಷ ಕಾಲದಲ್ಲಿ, ಆ ಪ್ರದೇಶದಲ್ಲಿ ನೆಲೆಗೊಂಡಿರುವ ಸಮುದಾಯಗಳ ಮಾರ್ಗವನ್ನು ವಿವೇಚಿಸಲು ಸೇರಿರುವ ಬಿಷಪ್‌ಗಳು, ಗುರುಗಳು, ಧಾರ್ಮಿಕರು ಮತ್ತು ಸಾಮಾನ್ಯ ವಿಶ್ವಾಸಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.ಅಮೆಜಾನಿನ ಜನರ ಭೌತಿಕ ಮತ್ತು ಆತ್ಮೀಯ ಸಂಕಷ್ಟಗಳನ್ನು ಸ್ಮರಿಸಿಕೊಂಡು, ಧರ್ಮ ಸಭೆಯ ಜೊತೆಯಾಗಿರುವ ಎಲ್ಲರಿಗೂ ತಮ್ಮ ಸಮೀಪತೆಯನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.
ಸ್ಥಳೀಯ ಧರ್ಮ ಸಭೆಗಳನ್ನು ಮುಂದಕ್ಕೆ ದಾರಿ ತೋರಿಸುವ “ಸಿನೋಡಲ್ ಪಾಸ್ಟರಲ್ ದಿಕ್ಕುಗಳನ್ನು” ರೂಪಿಸುವ ಗುರಿಯಲ್ಲಿ ಈ ಸಭೆಯನ್ನು ಅವರು ಉತ್ತೇಜಿಸಿದರು.ಜಗದ್ಗುರು ಲಿಯೋರವರು ನಿಧಾನವಾಗಿ ಬೆಳೆಯುವ, ಆದರೆ ದಶಕಗಳಷ್ಟು ಎತ್ತರಕ್ಕೆ ಏರುವ, ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಬದುಕುವ ಮತ್ತು ಅನೇಕ ಪ್ರಾಣಿಗಳಿಗೆ ಪರಿಸರವನ್ನು ಸೃಷ್ಟಿಸುವ ಶಿಹುವಾಹುವಾಕೋ ಮರದ ಉದಾಹರಣೆಯನ್ನು ನೀಡಿದರು.
ಇದು ನಮಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಎಂದು ಅವರು ಹೇಳಿದರು, ಧಮ೯ ಸಭೆ ಏನಾಗಿರಬೇಕೆಂದು ಬಯಸುತ್ತದೆ ಎಂಬುದನ್ನು ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿರುವುದು ಮತ್ತು ಜೀವವನ್ನು ಹುಟ್ಟುಹಾಕಿ ರಕ್ಷಿಸುವ ಸುರಕ್ಷಿತ ಆಶ್ರಯವಾಗಿರುವುದು.
ಅಮೆಜೋನಿಯಾದ ಧರ್ಮ ಸಭೆ ತನ್ನ ವಿಶ್ವಾಸವನ್ನು ಕ್ರಿಸ್ತನಲ್ಲಿ ಮತ್ತು ಅವರ ಪ್ರೀತಿಯಲ್ಲಿ ಬೇರುಬಿಟ್ಟಿರಬೇಕು ಎಂದು ಜಗದ್ಗುರುಗಳು ಆಹ್ವಾನಿಸಿದರು ಆ ಪ್ರೀತಿಯನ್ನು ವಿಶ್ವಾಸಿಗಳು ಸದಾ ಪ್ರಾರ್ಥನೆಯಲ್ಲಿ ಧ್ಯಾನಿಸಬೇಕು ಎಂದು ಹೇಳಿದರು.
ಇಂದಿನ ಪರಿಸ್ಥಿತಿಯು ಅಮೆಜೋನಿಯಾದಲ್ಲಿ ಮುಂದುವರಿಯುತ್ತಿರುವ ಅನೇಕ ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಮತ್ತು ಧರ್ಮ ಸಭೆಯ ಸಂಬಂಧಿತ ಸವಾಲುಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ಬೇಡಿಕೊಳ್ಳುತ್ತದೆ ಈ ಪ್ರದೇಶ ದುರ್ಬಳಕೆ ಮತ್ತು ಶೋಷಣೆಯಿಂದ ಬೆದರಿಕೆಯಲ್ಲಿದೆ, ಎಂದು ಅವರು ಹೇಳಿದರು.
ಈ ಸವಾಲುಗಳ ಮಧ್ಯೆ, ಧರ್ಮ ಸಭೆ ಸುವಾರ್ತೆಯ ಮೂಲ ಸಂದೇಶ ಮತ್ತು ಕ್ರಿಸ್ತನಲ್ಲಿ ಹೊಸ ಜೀವನವನ್ನು ಘೋಷಿಸಬೇಕು ನೋವು ಅನುಭವಿಸುವವರ ಜೊತೆಯಾಗಿರುವುದರೊಂದಿಗೆ, ಸೃಷ್ಟಿಯನ್ನು ಕಾಪಾಡಿ, ಎಲ್ಲ ರೂಪಗಳಲ್ಲಿಯೂ ವಿಶೇಷವಾಗಿ ಮಾನವ ಜೀವನವನ್ನು ಗೌರವಿಸಬೇಕು ಎಂದು ಹೇಳಿದರು.
ಸ್ಥಳೀಯ ಸಂಸ್ಕೃತಿಗಳಲ್ಲಿ ಸುವಾರ್ತೆಯನ್ನು ಸಂಸ್ಕೃತೀಕರಿಸುವ ಮಹತ್ವವನ್ನು ಜಗದ್ಗುರು ಲಿಯೋರವರು ಒತ್ತಿಹೇಳಿದರು, ಇದರಿಂದ ಕ್ರಿಸ್ತನ ರಹಸ್ಯವನ್ನು ಇನ್ನಷ್ಟು ಸಂಪೂರ್ಣವಾಗಿ ಪ್ರಕಟಿಸಿ ಆಚರಿಸಬಹುದು.ಸಂಸ್ಕೃತೀಕರಣವು ಕಠಿಣವಾದರೂ ಅಗತ್ಯವಾದ ಮಾರ್ಗವಾಗಿದೆ, ಎಂದು ಅವರು ಹೇಳಿದರು. ಯೇಸು ಕ್ರಿಸ್ತನ ಅಕ್ಷಯ ನಿಧಿಯಿಂದ ಹೊಸದನ್ನು ಸೃಷ್ಟಿಸಲು ಸದಾ ಸಮರ್ಥನಾಗಿರುವ ಆತ್ಮನ ನವೀನತೆಯನ್ನು ನಾವು ಧೈರ್ಯದಿಂದ ಸ್ವೀಕರಿಸಬೇಕು, ಎಂದು ಅವರು ಕ್ವೆರಿಡಾ ಅಮೆಜೋನಿಯಾವನ್ನು ಉಲ್ಲೇಖಿಸಿ ಹೇಳಿದರು.
ಕೊನೆಗೆ, ಜಗದ್ಗುರು XIVನೇ ಲಿಯೋರವರು ಅಮೆಜೋನಿಯಾ ಪ್ರದೇಶದ ಕಥೋಲಿಕರಿಗೆ ಕ್ರಿಸ್ತನ ಮಿಷನರಿ ಶಿಷ್ಯರಾಗಿ ತಮ್ಮ ಗುರುತನ್ನು ಬಲಪಡಿಸಿಕೊಳ್ಳಲು ಕರೆ ನೀಡಿದರು.“ನಿಮಗಿಂತ ಮೊದಲು ಬಂದ ಅನೇಕ ಪುರುಷರು ಮತ್ತು ಮಹಿಳೆಯರ ರಕ್ತದಿಂದಲೂ ನೀರಾವರಿಯಾಗಿರುವ ಆ ಹೊಲದಲ್ಲಿ ಬೀಜ ಬಿತ್ತುವುದನ್ನು ಮುಂದುವರಿಸಿ ಅವರು ಕ್ರಿಸ್ತನ ಪಾಡುಗಳೊಂದಿಗೆ ಏಕೀಕೃತವಾಗಿ, ಅಮೆಜೋನಿಯಾದಲ್ಲಿ ಬೆಳೆಯುತ್ತಿರುವ ಮಹಾ ಮರದ ಬೇರುಗಳಾಗಿದ್ದಾರೆ, ಎಂದು ಅವರು ಹೇಳಿದರು.
