ಹುಡುಕಿ

ಸಂತ ಪೇತ್ರರ ಚೌಕ ಸಂತ ಪೇತ್ರರ ಚೌಕ  (© - Ruddi Hansen 2015)

ಜಗದ್ಗುರು XIVನೇ ಲಿಯೋರವರು ದೂರವಾಣಿ ಮೂಲಕ ಮಹಮೂದ್ ಅಬ್ಬಾಸ್ ರವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು.

ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪತ್ರಕರ್ತರಿಗೆ ತಿಳಿಸಿದಂತೆ, ಜಗದ್ಗುರು XIVನೇ ಲಿಯೋರವರಿಗೆ ಮಹಮೂದ್ ಅಬ್ಬಾಸ್, ಪ್ಯಾಲೆಸ್ತೀನಿನ ರಾಜ್ಯದ ಅಧ್ಯಕ್ಷರು, ಇತ್ತೀಚಿನ ಮಧ್ಯಪೂರ್ವ ಸಂಘರ್ಷದ ಬೆಳವಣಿಗೆಗಳ ಕುರಿತು ದೂರವಾಣಿ ಕರೆ ಮಾಡಿ ಮಾತನಾಡಿದರು.

ವ್ಯಾಟಿಕನ್ ವರದಿ

ಸೋಮವಾರ ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರಿಗೆ ಮಹಮೂದ್ ಅಬ್ಬಾಸ್,ಪ್ಯಾಲೆಸ್ತೀನಿನ ರಾಜ್ಯದ ಅಧ್ಯಕ್ಷರು, ದೂರವಾಣಿ ಮೂಲಕ ಸಂಪರ್ಕಿಸಿದರೆಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತಿಳಿಸಿದೆ.

ಪತ್ರಕರ್ತರಿಗೆ ನೀಡಿದ ಪ್ರಕಟಣೆಯಲ್ಲಿ, ಈ ದೂರವಾಣಿ ಮಾತುಕತೆ ಮಧ್ಯಪೂರ್ವದ ಸಂಘರ್ಷದಲ್ಲಿ ಉಂಟಾಗುತ್ತಿರುವ ಆತಂಕಕಾರಿ ಬೆಳವಣಿಗೆಗಳು ಮತ್ತು ಪ್ಯಾಲೆಸ್ತೀನಿನ ಜನರ ಜೀವನ ಪರಿಸ್ಥಿತಿಗಳ ಕುರಿತು ನಡೆದಿತ್ತೆಂದು ತಿಳಿಸಲಾಗಿದೆ.

ಮಾತುಕತೆಯ ಸಂದರ್ಭದಲ್ಲಿ ಜಗದ್ಗುರುಗಳು, ರಾಜಕೀಯ ಮತ್ತು ರಾಜತಾಂತ್ರಿಕ ಸಂವಾದದ ಮೂಲಕ ಶಾಂತಿಯನ್ನು ಸಾಧಿಸುವಲ್ಲಿ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಸಂಪೂರ್ಣ ಗೌರವ ನೀಡುವ ಮೂಲಕ ಶಾಂತಿಯನ್ನು ಸ್ಥಾಪಿಸುವಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದರು ಎಂದು ಪ್ರಕಟಣೆ ತಿಳಿಸಿದೆ.

16 ಮಾರ್ಚ್ 2026, 09:15