ಹುಡುಕಿ

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ನ್ಯಾಯಮಂಡಳಿಯ ನ್ಯಾಯಾಂಗ ವರ್ಷವನ್ನು ಉದ್ಘಾಟಿಸುತ್ತಾರೆ ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ನ್ಯಾಯಮಂಡಳಿಯ ನ್ಯಾಯಾಂಗ ವರ್ಷವನ್ನು ಉದ್ಘಾಟಿಸುತ್ತಾರೆ  (ANSA)

“ಜಗದ್ಗುರುಗಳು : ಧರ್ಮ ಸಭೆಯಲ್ಲಿನ ನ್ಯಾಯವು ದೇವರ ಜನರ ಸೇವೆಯಲ್ಲಿರುವ ಒಂದು ಸೇವಾಕಾರ್ಯವಾಗಿದೆ.”

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ನ್ಯಾಯಮಂಡಳಿಯ ನ್ಯಾಯಾಂಗ ವರ್ಷದ ಉದ್ಘಾಟನೆ ಮಾಡಿ, ನ್ಯಾಯ, ಪ್ರೀತಿ (ದಾನಧರ್ಮ) ಮತ್ತು ಸಮಾಜದ ಸ್ಥಿರತೆಗಳ ನಡುವಿನ ಆಳವಾದ ಸಂಬಂಧವನ್ನು ನೆನಪಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ನಗರ ರಾಜ್ಯದ ನ್ಯಾಯಾಂಗ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನ್ಯಾಯ, ಪ್ರೀತಿ ಮತ್ತು ಸಮಾಜದ ಸ್ಥಿರತೆಗಳ ನಡುವಿನ ಆಳವಾದ ಸಂಬಂಧವನ್ನು ಒತ್ತಿ ಹೇಳಿದರು. ವ್ಯಾಟಿಕನ್ ನ್ಯಾಯಾಂಗ ವ್ಯವಸ್ಥೆಯವರು ಮಾಡುವ ನಿಶ್ಶಬ್ದ ಮತ್ತು ವಿನಮ್ರ ಸೇವೆಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ನ್ಯಾಯವು ಕೇವಲ ಕಾನೂನು ನಿಯಮಗಳ ಆಧಾರದಲ್ಲೇ ನಿಲ್ಲಬಾರದು ಅದು ಸರಿಯಾದ ಕ್ರಮದಲ್ಲಿ ಅಭಿವ್ಯಕ್ತಿಯಾಗುವ ಪ್ರೀತಿಯ ಅಭ್ಯಾಸವಾಗಿರಬೇಕು ಎಂದು ಜಗದ್ಗುರುಗಳು ಹೇಳಿದರು.

ಜಗದ್ಗರುಗಳು ತಮ್ಮ ಭಾಷಣದಲ್ಲಿ ವಿಶೇಷವಾಗಿ ಸಂತ ಆಗಸ್ಟೀನ್ ರವರ ಬೋಧನೆಗಳನ್ನು ಉಲ್ಲೇಖಿಸಿ, ನ್ಯಾಯವು ವ್ಯಕ್ತಿಗತ ಮತ್ತು ಸಮುದಾಯ ಜೀವನದ ಹೃದಯಭಾಗದಲ್ಲಿರುವ ಪ್ರಮುಖ ಸದುಪದೇಶ  ಎಂದು ಹೇಳಿದರು. ದೇವರನ್ನು ಜೀವನದ ಕೇಂದ್ರದಲ್ಲಿ ಇಟ್ಟುಕೊಂಡು, ನೆರೆಯವರ ಗೌರವವನ್ನು ಒಪ್ಪಿಕೊಂಡಾಗ, ವ್ಯಕ್ತಿಯ ಮತ್ತು ಸಮಾಜದ ಜೀವನವು ಸರಿಯಾದ ದಿಕ್ಕನ್ನು ಪಡೆಯುತ್ತದೆ ಎಂದು ಅವರು ವಿವರಿಸಿದರು.

ಪ್ರೀತಿಯ ಸರಿಯಾದ ಕ್ರಮವೇ ನ್ಯಾಯದ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು. ನಿಜವಾದ ಪ್ರೀತಿ ಎಂದಿಗೂ ಅಸ್ತವ್ಯಸ್ತವಾಗಿರುವುದಿಲ್ಲ ಅದು ಸಂಬಂಧಗಳ ಸತ್ಯತೆಯನ್ನು ಮತ್ತು ಪ್ರತಿಯೊಬ್ಬರ ಗೌರವವನ್ನು ಗುರುತಿಸುತ್ತದೆ. ಈ ಸಂಬಂಧವನ್ನು ವಿವರಿಸುವಂತೆ ಪೂರ್ಣ ಪ್ರೀತಿ ಎಂದರೆ ಪೂರ್ಣ ನ್ಯಾಯ ಎಂಬ ತತ್ವವನ್ನು ತತ್ವಶಾಸ್ತ್ರದಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದರು.

ನ್ಯಾಯವು ಪ್ರತಿಯೊಬ್ಬರ ಹಕ್ಕುಗಳನ್ನು ಗೌರವಿಸುವುದನ್ನು ಮತ್ತು ಸಂಬಂಧಗಳಲ್ಲಿ ಸರಿಯಾದ ಸಮತೋಲನವನ್ನು ಕಾಪಾಡುವುದನ್ನು ಬೇಡಿಕೊಳ್ಳುತ್ತದೆ. ಸತ್ಯಕ್ಕೆ ನಿಷ್ಠೆಯಿಂದ ಮತ್ತು ಸಮತೋಲನದಿಂದ ಕಾರ್ಯನಿರ್ವಹಿಸುವ ನ್ಯಾಯವು ಸಮುದಾಯದ ಏಕತೆಯನ್ನು ಬಲಪಡಿಸುವ ಪ್ರಮುಖ ಅಂಶವಾಗಿದೆ. ಅದು ಜನರನ್ನು ವಿಭಜಿಸುವುದಿಲ್ಲ ಬದಲಾಗಿ ಪರಸ್ಪರ ವಿಶ್ವಾಸವನ್ನು ಹೆಚ್ಚಿಸಿ, ಸಮನ್ವಯದ ಜೀವನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಜಗದ್ಗುರುಗಳು ಹೇಳಿದರು.

ವ್ಯಾಟಿಕನ್ ನಗರ ರಾಜ್ಯದಲ್ಲಿ ನ್ಯಾಯ ಮತ್ತು ಕಾನೂನಿನ ಪಾತ್ರವನ್ನು ವಿವರಿಸುತ್ತಾ, ನ್ಯಾಯಾಂಗ ಪ್ರಕ್ರಿಯೆ ಕೇವಲ ವಿವಾದಗಳನ್ನು ಪರಿಹರಿಸುವುದಲ್ಲದೆ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ನ್ಯಾಯಾಂಗ ಕಾರ್ಯವು ಸರಿಯಾಗಿ ನಡೆಯಲು ಪ್ರಕ್ರಿಯಾತ್ಮಕ ಭದ್ರತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ, ರಕ್ಷಣೆಯ ಹಕ್ಕು ಮತ್ತು ಸಮಂಜಸವಾದ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳ್ಳುವುದು ಅತ್ಯಂತ ಅಗತ್ಯವೆಂದು ಅವರು ಒತ್ತಿಹೇಳಿದರು.

ಕೊನೆಯಲ್ಲಿ ಜಗದ್ಗುರುಗಳು ಹೇಳಿದರು: ನಿಜವಾದ ನ್ಯಾಯವು ಸಮಾಜದಲ್ಲಿ ಸ್ಥಿರತೆ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ. ಸತ್ಯದಿಂದ ಬೆಳಗಲ್ಪಟ್ಟು ಕರುಣೆಯಿಂದ ಜೊತೆಯಾಗಿರುವ ನ್ಯಾಯವೇ ಕ್ರಿಸ್ತನಲ್ಲಿ ತನ್ನ ಪೂರ್ಣತೆಯನ್ನು ಕಂಡುಕೊಳ್ಳುತ್ತದೆ. ಈ ರೀತಿ ಸತ್ಯತೆ ಮತ್ತು ಧರ್ಮ ಸಭೆಯ ಆತ್ಮದೊಂದಿಗೆ ಅನುಸರಿಸಲ್ಪಡುವ ಕಾನೂನು, ದೇವರ ಜನರ ಏಕತೆ ಮತ್ತು ಸಮುದಾಯವನ್ನು ಬಲಪಡಿಸುವ ಅಮೂಲ್ಯ ಸಾಧನವಾಗುತ್ತದೆ.

14 ಮಾರ್ಚ್ 2026, 14:19