"ಅತ್ಯಂತ ದುರ್ಬಲರಿಗೆ ಸೇವೆ ಮಾಡುವ ಇಟಲಿಯ ಕಥೋಲಿಕ ಸೇವಾ ಉಪಕ್ರಮಗಳನ್ನು ಜಗದ್ಗುರುಗಳು ಶ್ಲಾಘಿಸಿದರು.”
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಶುಕ್ರವಾರ ವ್ಯಾಟಿಕನ್‌ನಲ್ಲಿ ಕ್ಯಾಥೋಲಿಕ್ ಫೌಂಡೇಶನ್ ಮತ್ತು ಕಥೋಲಿಕ ವಿಮೆ ಸಮಾಜದ ಸಂಸ್ಥೆಗಳ ಪ್ರತಿನಿಧಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಜಗದ್ಗರುಗಳು ತಮ್ಮ ಭಾಷಣವನ್ನು ಆರಂಭಿಸುತ್ತಾ, ಇಟಲಿಯ ಸಮಾಜದಲ್ಲಿ ಕಥೋಲಿಕರ ಸಕ್ರಿಯ ಹಾಜರಾತಿಯನ್ನು ಉತ್ತೇಜಿಸಲು ನೀವು ನಿರಂತರವಾಗಿ ತೋರಿಸುತ್ತಿರುವ ಬದ್ಧತೆಗೆ ಸಂಸ್ಥೆಗಳಿಗೂ ಕೃತಜ್ಞತೆ ವ್ಯಕ್ತಪಡಿಸಿದರು.
ಇಟಲಿಯ ಕಥೋಲಿಕ ಚಳುವಳಿಯ ಇತಿಹಾಸವನ್ನು ಅಧ್ಯಯನ ಮಾಡಿ ಅದನ್ನು ಮೌಲ್ಯಮಾಪನ ಮಾಡುವುದೇ ಇಂದಿನ ಕಾಲದಲ್ಲಿ ಎಷ್ಟು ಮುಖ್ಯವೆಂಬುದನ್ನು ಒತ್ತಿ ಹೇಳುವ ಅವಕಾಶವನ್ನು ನನಗೆ ನೀಡುತ್ತದೆ. ಆ ಇತಿಹಾಸದಿಂದ ಪ್ರೇರಣೆಯನ್ನು ಪಡೆದು, ತಮ್ಮ ಜೀವನದಲ್ಲಿ ನಂಬಿಕೆಯನ್ನು ನ್ಯಾಯದ ಬದ್ಧತೆಯೊಂದಿಗೆ ಜೋಡಿಸಿದ ಪುರುಷರು ಮತ್ತು ಮಹಿಳೆಯರ ಅನುಭವಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಬೇಕು ಎಂದು ಹೇಳಿದರು.
ದೃಢವಾದ ಬೇರುಗಳು
ಜಗದ್ಗರುಗಳು ಹೇಳುವ ಪ್ರಕಾರ ನೂರಾರು ಸಹಕಾರ ಸಂಘಗಳು, ಗ್ರಾಮೀಣ ಬ್ಯಾಂಕ್‌ಗಳು ಮತ್ತು ಪರಸ್ಪರ ಸಹಾಯ ಸಂಘಗಳು ಹುಟ್ಟಿಕೊಂಡದ್ದು ತಮ್ಮ ಎನ್‌ಸಿಕ್ಲಿಕಲ್ ರೆರುಮ್ ನೋವರುಮ್ ನಲ್ಲಿ ನೀಡಿದ ಆಹ್ವಾನಕ್ಕೆ ನೀಡಿದ ಸ್ಪಷ್ಟ ಪ್ರತಿಕ್ರಿಯೆಯಾಗಿದೆ. ಆ ಆಹ್ವಾನವು ಸಾಮಾಜಿಕ ಪ್ರಶ್ನೆಗಳನ್ನು ಎದುರಿಸಲು ಆರ್ಥಿಕ ಮಟ್ಟದಲ್ಲಿಯೂ ಸಂಘಟಿತವಾಗಬೇಕೆಂದು ಕರೆ ನೀಡಿತ್ತು ಎಂದು ಹೇಳಿದರು.
ಜಗದ್ಗುರು ಲಿಯೋರವರು ಮುಂದುವರಿಸಿ, ಈ ಮುಂಚೂಣಿಗಾರರಲ್ಲಿ ಕಥೋಲಿಕ ವಿಮೆ ಸಮಾಜದ ಸ್ಥಾಪಕರೂ ಇದ್ದರು ಎಂದು ಹೇಳಿದರು. “1896ರಲ್ಲಿ ವೆರೋನಾದಲ್ಲಿ ಕೆಲ ಯಾಜಕರು ಮತ್ತು ಕ್ರೈಸ್ತ ಪ್ರಜೆಗಳೂ ಸೇರಿ, ಜನಸಾಮಾನ್ಯರ ವಿಶಾಲ ಭಾಗವಹಿಸುವಿಕೆಯಿಂದ ಸಹಕಾರ ಸಂಘವನ್ನು ಸ್ಥಾಪಿಸಿದರು. ನಂತರ ಅದು ದೇಶದೊಂದಿಗೆ ಬೆಳೆದು, ಎರಡು ವಿಶ್ವಯುದ್ಧಗಳ ಗಾಯಗಳಿಂದ ಸಮುದಾಯಗಳು ಹೊರಬರಲು ಸಹಾಯ ಮಾಡಿತು.
ಸುಮಾರು 20 ವರ್ಷಗಳ ಹಿಂದೆ ಬದಲಾಗಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಕಥೋಲಿಕ ಫೌಂಡೇಶನ್ ಸ್ಥಾಪನೆಯಾಯಿತು ಅದು ಅದೇ ಬಲವಾದ ಬೇರುಗಳಿಂದ ಪ್ರೇರಣೆಯನ್ನು ಪಡೆದಿತ್ತು ಎಂದು ಜಗದ್ಗುರುಗಳು ಹೇಳಿದರು.
“ಹೆಚ್ಚು ದುರ್ಬಲತೆ ಮತ್ತು ಸಾಮಾಜಿಕ ಅಂಚಿನ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯಗಳು, ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಬೆಂಬಲ ನೀಡುವಲ್ಲಿ ಈ ಫೌಂಡೇಶನ್ ವಹಿಸುವ ಮೂಲಭೂತ ಪಾತ್ರವನ್ನು” ನೆನಪಿಸಿದರು.
ಸಾಮಾಜಿಕ ಏಕತೆ ಮತ್ತು ಅತ್ಯಂತ ದುರ್ಬಲರ ರಕ್ಷಣೆ
ಹಲವಾರು ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು, ಫೌಂಡೇಶನ್‌ಗಳು ಮತ್ತು ಧಾರ್ಮಿಕ ಸಂಸ್ಥೆಗಳ ಉಪಕ್ರಮಗಳನ್ನು ಉತ್ತೇಜಿಸುವ ಮೂಲಕ, ನೀವು ಸಮಾಜದ ಏಕತೆ ಬಲಪಡಿಸುವುದಕ್ಕೂ ಮತ್ತು ಅತ್ಯಂತ ದುರ್ಬಲ ವ್ಯಕ್ತಿಗಳ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಜಗದ್ಗರುಗಳು ಈ ಬದ್ಧತೆಯನ್ನು ಮುಂದುವರಿಸಬೇಕೆಂದು ಪ್ರೋತ್ಸಾಹಿಸಿ, ಶಿಕ್ಷಣ, ಸಂಸ್ಕೃತಿ ಮತ್ತು ಭಾಗವಹಿಸುವಿಕೆಯ ಉಪಕ್ರಮಗಳ ಮೂಲಕ ಯುವಜನರ ರೂಪುಗೊಳಿಸುವಿಕೆಯನ್ನು ಕೂಡ ಉತ್ತೇಜಿಸಬೇಕೆಂದು ಹೇಳಿದರು.
ನಿಮ್ಮ ಕಾರ್ಯವನ್ನು ನಾನು ಶ್ಲಾಘಿಸುತ್ತಿದ್ದರೂ, ಅದನ್ನು ಪ್ರೇರೇಪಿಸುವ ಆತ್ಮವನ್ನು ಮತ್ತು ಸುವಾರ್ತೆಯ ಶೈಲಿಯನ್ನು ಸದಾ ಬೆಳೆಸಿಕೊಳ್ಳಲು ನಾನು ನಿಮ್ಮನ್ನು ಪ್ರೇರೇಪಿಸುತ್ತೇನೆ. ಹೀಗೆ ಮಾಡಿದರೆ ನೀವು ನಿಗದಿಪಡಿಸುವ ಗುರಿಗಳಿಗೂ ಅವನ್ನು ಸಾಧಿಸಲು ಬಳಸುವ ಮಾರ್ಗಗಳಿಗೂ ಹೊಂದಾಣಿಕೆ ಇರುತ್ತದೆ ಎಂದರು.
ಕೊನೆಯಲ್ಲಿ, ಜಗದ್ಗುರುಗಳು ಗೈಸೆಪ್ಪೆ ಟೋನಿಯೊಲೊ ಅವರ ಪ್ರಭೋಧನೆಗಳು ಸದಾ ಅವರನ್ನು ಬೆಳಗಿಸಿ ಪ್ರೇರೇಪಿಸಲಿ ಎಂದು ಪ್ರಾರ್ಥಿಸಿದರು.
