ಜಗದ್ಗುರು XIV ನೇ ಲಿಯೋ ರವರು ಮಾಲ್ಟಾ ಗಣರಾಜ್ಯದ ರಾಷ್ಟ್ರಪತಿಯನ್ನು ಸ್ವಾಗತಿಸಿ ಭೇಟಿಯಾದರು.
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಸೋಮವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಮಾಲ್ಟಾ ಗಣರಾಜ್ಯದ ರಾಷ್ಟ್ರಪತಿ ಮಹೋದಯೆ ಮಿರಿಯಮ್ ಸ್ಪಿಟೆರಿ ಡೆಬೊನೊರವರನ್ನು ಆತ್ಮೀಯವಾಗಿ ಭೇಟಿಯಾದರು.
ಅದಾದ ನಂತರ ರಾಷ್ಟ್ರಪತಿಯವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾಡಿ೯ನಲ್ ಪಿಯತ್ರೋ ಪಾರೊಲಿನ್ ರವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪಾಲ್ ಆರ್. ಗ್ಯಾಲಘರ್ ಉಪಸ್ಥಿತರಿದ್ದರು.
ಭೇಟಿಯ ನಂತರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಮಾತುಕತೆಗಳು ಸ್ನೇಹಪೂರ್ಣ ವಾತಾವರಣದಲ್ಲಿ ನಡೆದವು. ಪ್ರಸ್ತುತ ಅಂತರರಾಷ್ಟ್ರೀಯ ಪರಿಸ್ಥಿತಿಗಳ ಕುರಿತು, ವಿಶೇಷವಾಗಿ ಮಧ್ಯಪ್ರಾಚ್ಯ ಮತ್ತು ಉಕ್ರೇನ್ ವಿಷಯಗಳಿಗೆ ವಿಶೇಷ ಗಮನ ನೀಡಿ, ಪರಸ್ಪರ ಅಭಿಪ್ರಾಯ ವಿನಿಮಯ ನಡೆಯಿತು.
ಇದಲ್ಲದೆ, ಧರ್ಮ ಸಭೆ ಮತ್ತು ರಾಜ್ಯದ ನಡುವೆ ವಿವಿಧ ಕ್ಷೇತ್ರಗಳಲ್ಲಿ ಇರುವ ಉತ್ತಮ ದ್ವಿಪಕ್ಷೀಯ ಸಂಬಂಧಗಳು ಮತ್ತು ಫಲಪ್ರದ ಸಹಕಾರವನ್ನು ಉಲ್ಲೇಖಿಸಲಾಯಿತು. ವಲಸೆ ಸಮಸ್ಯೆ ಹಾಗೂ ಜನಸಂಖ್ಯಾ ಪರಿಸ್ಥಿತಿ ಸೇರಿದಂತೆ ಪರಸ್ಪರ ಆಸಕ್ತಿಯ ವಿಷಯಗಳನ್ನೂ ಚರ್ಚಿಸಲಾಯಿತು.
