ಹುಡುಕಿ

ಧಮಾ೯ದ್ಯಕ್ಷರಾದ ಗ್ಯಾಬ್ರಿಯೆಲೆ ಕಚ್ಚಿಯಾ ಧಮಾ೯ದ್ಯಕ್ಷರಾದ ಗ್ಯಾಬ್ರಿಯೆಲೆ ಕಚ್ಚಿಯಾ 

ಜಗದ್ಗರುಗಳು ಗ್ಯಾಬ್ರಿಯೆಲೆ ಕಚ್ಚಿಯಾರವರನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರೇಷಿತರ ರಾಯಭಾರಿ ಆಗಿ ನೇಮಿಸಿದರು

ಜಗದ್ಗುರು ಲಿಯೋರವರು 2019ರಿಂದ ವಿಶ್ವಸಂಸ್ಥೆಯಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗ್ಯಾಬ್ರಿಯೆಲೆ ಕಚ್ಚಿಯಾರವರನ್ನು ಯುನೈಟೆಡ್ ಸ್ಟೇಟ್ಸ್ ದೇಶಕ್ಕೆ ಪ್ರೇಷಿತರ ರಾಯಭಾರಿಯಾಗಿ ನೇಮಿಸಿದ್ದಾರೆ. ಈ ಹೊಸ ನೇಮಕಾತಿಯ ಬಗ್ಗೆ ಪ್ರಕಟಣೆ ನೀಡಿದ ಆರ್ಚ್‌ಬಿಷಪ್ ಕಚ್ಚಿಯಾ, ಈ ಜವಾಬ್ದಾರಿಯನ್ನು ಐಕ್ಯತೆ ಮತ್ತು ಶಾಂತಿಯ ಸೇವೆಗೆ ಸಮರ್ಪಿತವಾದ ಒಂದು ಮಿಷನ್ ಎಂದು ವಿವರಿಸಿದರು.

ವ್ಯಾಟಿಕನ್ ವರದಿ

ಮಾರ್ಚ್ 7, 2026 ರಂದು, ಜಗದ್ಗುರು XIVನೇ ಲಿಯೋರವರು ಧರ್ಮಾಧ್ಯಕ್ಷರಾದ ಗ್ಯಾಬ್ರಿಯೆಲೆ ಕಚ್ಚಿಯಾರವರನ್ನು ಯುನೈಟೆಡ್ ಸ್ಟೇಟ್ಸ್ ದೇಶಕ್ಕೆ ಪ್ರೇಷಿತರ ರಾಯಭಾರಿಯಾಗಿ ನೇಮಿಸಿದರು. 2019ರಿಂದ ಅವರು ಜಗದ್ಗುರುಗಳ ಅಧಿಕಾರ ಸ್ಥಳವನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರತಿನಿಧಿಸುವ ಶಾಶ್ವತ ವೀಕ್ಷಕರಾಗಿ ನ್ಯೂಯಾರ್ಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹುದ್ದೆಯಲ್ಲಿ ಅವರು ಕಾರ್ಡಿನಲ್ ಕ್ರಿಸ್ಟೋಫ್ ಪಿಯರೆರವರನ್ನು ಉತ್ತರಾಧಿಕಾರಿಯಾಗಿ ಸೇರುತ್ತಿದ್ದಾರೆ. ಜನವರಿ 30 ರಂದು 80 ವರ್ಷ ಪೂರೈಸಿದ ಕಾರಣ, ವಯೋಮಿತಿಯ ಹಿನ್ನೆಲೆಯಲ್ಲಿ ಜಗದ್ಗುರುಗಳ ರಾಜೀನಾಮೆಯನ್ನು ಅಂಗೀಕರಿಸಿದ್ದರು.

ಈ ನೇಮಕಾತಿಯ ಕುರಿತು ಮಾತನಾಡಿದ ಆರ್ಚ್‌ಬಿಷಪ್ ಕಚ್ಚಿಯಾ, “ಜಗದ್ಗುರುಗಳು  ತೆಗೆದುಕೊಂಡ ಈ ನಿರ್ಧಾರದಿಂದ ನಾನು ಗೌರವಾನ್ವಿತನಾಗಿದ್ದೇನೆ ಮತ್ತು ಆಳವಾಗಿ ವಿನಮ್ರನಾಗಿದ್ದೇನೆ” ಎಂದು ಹೇಳಿದರು. ಜಗದ್ಗರುಗಳು ಜನಿಸಿ ಬೆಳೆದ ದೇಶ ಮತ್ತು ಅಲ್ಲಿನ ಧರ್ಮ ಸಭೆಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತನಗೆ ಮಹತ್ವದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

“ಈ ಗುರಿಯನ್ನು ಸಂತೋಷದೊಂದಿಗೆ, ಜೊತೆಗೆ ಒಂದು ರೀತಿಯ ಭಯಭಕ್ತಿಯ ಭಾವನೆಯೊಂದಿಗೆ ಸ್ವೀಕರಿಸುತ್ತೇನೆ, ಎಂದು ಅವರು ಹೇಳಿದರು. ಈ ಸೇವೆ “ಐಕ್ಯತೆ ಮತ್ತು ಶಾಂತಿಯ ಸೇವೆಗೆ ಸಮರ್ಪಿತವಾದ ಮಿಷನ್” ಎಂದು ಅವರು ವಿವರಿಸಿದರು. ಜೊತೆಗೆ ಈ ಜವಾಬ್ದಾರಿ ಆರಂಭವಾಗುತ್ತಿರುವ ವರ್ಷದಲ್ಲಿ ಅಮೆರಿಕ ದೇಶವು ತನ್ನ ಸ್ಥಾಪನೆಯ 250ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದನ್ನೂ ಅವರು ಉಲ್ಲೇಖಿಸಿದರು.

ತಮ್ಮ ಸೇವೆಯ ಅವಧಿಯಲ್ಲಿ ನ್ಯೂಯಾರ್ಕ್ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅಮೆರಿಕದ ಸ್ಥಳೀಯ ಧರ್ಮ ಸಭೆ, ಜನರು ಮತ್ತು ಸಂಸ್ಥೆಗಳಿಂದ ಪಡೆದ ಆತ್ಮೀಯತೆ ಮತ್ತು ಮುಕ್ತ ಮನಸ್ಸಿನಿಂದ ತಾನು ಪ್ರೋತ್ಸಾಹಗೊಂಡಿದ್ದೇನೆ ಎಂದು ಅವರು ಹೇಳಿದರು.

ಆರ್ಚ್‌ಬಿಷಪ್ ಕಚ್ಚಿಯಾರವರು 1958ರ ಫೆಬ್ರವರಿ 24 ರಂದು ಮಿಲನ್, ಇಟಲಿಯಲ್ಲಿ ಜನಿಸಿದರು. 1983ರಲ್ಲಿ ಕಾರ್ಡಿನಲ್ ಕಾರ್ಲೊ ಮಾರಿಯಾ ಮಾರ್ಟಿನಿ ರವರಿಂದ ಯಾಜಕರಾಗಿ ಅಭಿಷೇಕಗೊಂಡ ಅವರು 1986ರವರೆಗೆ ಮಿಲಾನ್‌ನ ಸ್ಯಾನ್ ಜಿಯೋವಾನಿ ಬಾಸ್ಕೊ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ನಂತರ ಅವರನ್ನು ಪಾಂಟಿಫಿಕಲ್ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿಗೆ ಕಳುಹಿಸಲಾಯಿತು. ಅವರು ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯ ಯಿಂದ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಮತ್ತು ಕ್ಯಾನನ್ ಕಾನೂನಿನಲ್ಲಿ ಲೈಸೆನ್ಷಿಯೇಟ್ ಪದವಿಯನ್ನು ಪಡೆದರು.

1991ರಲ್ಲಿ ಅವರು ಜಗದ್ಗುರುಗಳ ಅಧಿಕಾರ ಸ್ಥಳದ ರಾಜತಾಂತ್ರಿಕ ಸೇವೆಗೆ ಸೇರಿ  ತಾಂಜಾನಿಯಾದಲ್ಲಿನ ಜಗದ್ಗುರುಗಳ ಪ್ರತಿನಿಧಿತ್ವದಲ್ಲಿ ಸೇವೆ ಸಲ್ಲಿಸಿದರು. 1993ರಲ್ಲಿ ಅವರನ್ನು ರಾಜ್ಯ ಕಾರ್ಯದರ್ಶಿಯ ಕಚೇರಿಯ ಸಾಮಾನ್ಯ ವ್ಯವಹಾರ ವಿಭಾಗಕ್ಕೆ ಕರೆಯಲಾಯಿತು ಮತ್ತು 2002ರಲ್ಲಿ ಅದೇ ವಿಭಾಗದ ಅಸೆಸರ್ ಆಗಿ ನೇಮಕಗೊಂಡರು.

2009ರ ಜುಲೈನಲ್ಲಿ ಜಗದ್ಗುರು XVIನೇ ಬೆನೆಡಿಕ್ಟ್ ರವರು ಅವರನ್ನು ಲೆಬೆನಾನ್ ದೇಶಕ್ಕೆ ಪ್ರೇಷಿತರ ರಾಯಭಾರಿಯಾಗಿ ಹಾಗೂ ಸೆಪಿನೋ ಟೈಟ್ಯುಲರ್ ಆರ್ಚ್‌ಬಿಷಪ್ ಆಗಿ ನೇಮಿಸಿದರು. ಅದೇ ವರ್ಷದ ಸೆಪ್ಟೆಂಬರ್ 12 ರಂದು ಜಗದ್ಗುರು XVIನೇ ಬೆನೆಡಿಕ್ಟ್ ರವರಿಂದಲೇ ಅವರು ಬಿಷಪ್ ಅಭಿಷೇಕವನ್ನು ಸ್ವೀಕರಿಸಿದರು.

ನಂತರ 2017ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಅವರನ್ನು ಫಿಲಿಪೈನ್ಸ್ ದೇಶಕ್ಕೆ ಪ್ರೇಷಿತರ ರಾಯಭಾರಿ ಯಾಗಿ ನೇಮಿಸಿದರು. ಬಳಿಕ 2019ರಲ್ಲಿ ಅವರನ್ನು ಸಂಯುಕ್ತ ರಾಷ್ಟ್ರ ಸಂಘದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾಗಿ ನೇಮಕ ಮಾಡಲಾಯಿತು.

07 ಮಾರ್ಚ್ 2026, 15:18