ಕೆನಡಾದ  ಗವರ್ನರ್ ಜನರಲ್ ಮೇರಿ ಸೈಮನ್ ರವರನ್ನು ಜಗದ್ಗುರು XIVನೇ ಲಿಯೋರವರು ಬರಮಾಡಿಕೊಂಡರು. ಕೆನಡಾದ ಗವರ್ನರ್ ಜನರಲ್ ಮೇರಿ ಸೈಮನ್ ರವರನ್ನು ಜಗದ್ಗುರು XIVನೇ ಲಿಯೋರವರು ಬರಮಾಡಿಕೊಂಡರು. 

ಕೆನಡಾದ ಗವರ್ನರ್ ಜನರಲ್ ಮೇರಿ ಸೈಮನ್ ರವರನ್ನು ಜಗದ್ಗುರು XIVನೇ ಲಿಯೋರವರು ಭೇಟಿಯಾದರು

ವ್ಯಾಟಿಕನ್‌ನಲ್ಲಿ ಕೆನಡಾದ ಗವರ್ನರ್ ಜನರಲ್ ಮೇರಿ ಜೆನ್ನಿ ಮೇ ಸೈಮನ್ ರವರನ್ನು ಜಗದ್ಗುರು XIVನೇ ಲಿಯೋರವರು ಸ್ವಾಗತಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಗುರುವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಕೆನಡಾದ ಗವರ್ನರ್ ಜನರಲ್ ಮೇರಿ ಸೈಮನ್ ರವರನ್ನು ಭೇಟಿಯಾದರು.

ನಂತರ ಗವರ್ನರ್ ಜನರಲ್ ರವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಡಿ೯ನಲ್ ಪಿಯಾತ್ರೊ ಪಾರೋಲಿನ್ ರವರನ್ನು ಭೇಟಿಯಾದರು. ಈ ಭೇಟಿಯಲ್ಲಿ ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರು ಸಹ ಉಪಸ್ಥಿತರಿದ್ದರು.

ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯದರ್ಶಿಗಳ ಕಚೇರಿಯಲ್ಲಿ ನಡೆದ ಚರ್ಚೆಗಳು ಹೃತ್ಪೂರ್ವಕ ಹಾಗೂ ಸ್ನೇಹಪೂರ್ಣ ವಾತಾವರಣದಲ್ಲಿ ನಡೆದವು. ಜಗದ್ಗರುಗಳ ಅಧಿಕಾರ ಸ್ಥಳ ಮತ್ತು ಕೆನಡಾ ದೇಶಗಳ ನಡುವೆ ಈಗಿರುವ ಉತ್ತಮ ಸಂಬಂಧಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ವಿಶೇಷವಾಗಿ ಜಗದ್ಗುರು ಫ್ರಾನ್ಸಿಸ್ ರವರು ಆರಂಭಿಸಿದ ಪರಸ್ಪರ ಸಮಜಾಯಿಷಿಯ ಮಾರ್ಗದಿಂದ ಬಂದ ಫಲಿತಾಂಶಗಳ ಬಗ್ಗೆ ಸಂತೋಷ ವ್ಯಕ್ತಪಡಿಸಲಾಯಿತು.

ಪ್ರಕಟಣೆಯ ಪ್ರಕಾರ, ಸಂಭಾಷಣೆ ನಂತರ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಮಾನ್ಯ ಹಿತಾಸಕ್ತಿಯ ವಿಷಯಗಳತ್ತ ಮುಂದುವರಿಯಿತು. ಜನಾಂಗಗಳ ನಡುವೆ ಶಾಂತಿ ಸಾಧನೆಗೆ ಇರುವ ಬದ್ಧತೆಯ ಬಗ್ಗೆ ವಿಶೇಷ ಗಮನ ನೀಡಲಾಯಿತು.

06 ಮಾರ್ಚ್ 2026, 16:00