ಜಗದ್ಗುರು XIVನೇ ಲಿಯೋರವರು  ಮೊನಾಕೊಗೆ ಕರೆದೊಯ್ಯುವ ಹೆಲಿಕಾಪ್ಟರ್‌. ಜಗದ್ಗುರು XIVನೇ ಲಿಯೋರವರು ಮೊನಾಕೊಗೆ ಕರೆದೊಯ್ಯುವ ಹೆಲಿಕಾಪ್ಟರ್‌.  (AFP or licensors)

ಜಗದ್ಗುರು XIVನೇ ಲಿಯೋರವರು ಮೋನಾಕೋ ಪ್ರಿನ್ಸಿಪಾಲಿಟಿಗೆ ತಮ್ಮ ಭೇಟಿಯನ್ನು ಪ್ರಾರಂಭಿಸುತ್ತಾರೆ.

ಜಗದ್ಗುರುಗಳು ತಮ್ಮ ಎರಡನೇ ಪ್ರೇಷಿತರ ಯಾತ್ರೆಯ ಗುರಿಯಾದ ಸಣ್ಣ ನಗರ-ರಾಜ್ಯಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುತ್ತಿದ್ದಾರೆ. ವಿಮಾನದ ಪ್ರಯಾಣದ ವೇಳೆ ಇಟಲಿಯ ರಾಷ್ಟ್ರಪತಿಗೆ ಕಳುಹಿಸಿದ ಟೆಲಿಗ್ರಾಂನಲ್ಲಿ, ಅವರು “ಕ್ರೈಸ್ತ ನಂಬಿಕೆಯ ಸಾಕ್ಷಿಯನ್ನು ಉತ್ತೇಜಿಸಲು” ಮತ್ತು “ಸಾಮೂಹಿಕ ಹಿತದ ನಿರ್ಮಾಣವನ್ನು ಬೆಳೆಸಲು” ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ವರದಿ

ಶನಿವಾರ, ಮಾರ್ಚ್ 28ರಂದು ರೋಮಿನ ಸಮಯ ಬೆಳಿಗ್ಗೆ 7.20 ನಂತರ ಸ್ವಲ್ಪ ಸಮಯದಲ್ಲಿ, ಜಗದ್ಗುರು XIVನೇ ಲಿಯೋರವರನ್ನು ಹೊತ್ತಿದ್ದ ಹೆಲಿಕಾಪ್ಟರ್ ವ್ಯಾಟಿಕನ್ ಹೆಲಿಪೋರ್ಟ್‌ನಿಂದ ಹಾರಾಟ ಆರಂಭಿಸಿತು. ಇದರಿಂದ ಮೋನಾಕೋ ಪ್ರಿನ್ಸಿಪಾಲಿಟಿಗೆ ಅವರ ಪ್ರೇಷಿತರ ಯಾತ್ರೆಯ ಆರಂಭವನ್ನು ಸೂಚಿಸಲಾಯಿತು.

ಈ ಭೇಟಿ ಜಗದ್ಗುರುಗಳ ಎರಡನೇ ಅಂತರರಾಷ್ಟ್ರೀಯ ಪ್ರೇಷಿತರ ಯಾತ್ರೆಯಾಗಿದ್ದು, ಆಧುನಿಕ ಕಾಲದಲ್ಲಿ ಸಣ್ಣ ನಗರ-ರಾಜ್ಯಕ್ಕೆ ಜಗದ್ಗುರು ಒಬ್ಬರು ಕೈಗೊಂಡಿರುವ ಮೊದಲ ಭೇಟಿಯಾಗಿದೆ. ಕಥೋಲಿಕ ಧರ್ಮವು ರಾಜ್ಯ ಧರ್ಮವಾಗಿರುವ ಈ ದೇಶಕ್ಕೆ ಅವರ ಆಗಮನ ಬೆಳಿಗ್ಗೆ 9 ಗಂಟೆಗೆ ನಿಗದಿಯಾಗಿದೆ.

ಇಟಲಿಯ ಭೂಪ್ರದೇಶವನ್ನು ತೊರೆದಾಗ, ಜಗದ್ಗುರುಗಳು ಇಟಾಲಿಯನ್ ಗಣರಾಜ್ಯದ ರಾಷ್ಟ್ರಪತಿಗೆ ರೂಢಿಯಂತೆ ಟೆಲಿಗ್ರಾಂ ಕಳುಹಿಸಿದರು. ತಮ್ಮ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಕ್ರೈಸ್ತ ನಂಬಿಕೆಯ ಸಾಕ್ಷಿಯನ್ನು ಉತ್ತೇಜಿಸಲು ಮತ್ತು ಸಾಮೂಹಿಕ ಹಿತದ ನಿರ್ಮಾಣವನ್ನು ಬೆಳೆಸಲು ಮೋನಾಕೋಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದರು. ಜೊತೆಗೆ, ಇಟಲಿ ರಾಷ್ಟ್ರದ ಆತ್ಮೀಯ, ನಾಗರಿಕ ಮತ್ತು ಸಾಮಾಜಿಕ ಪ್ರಗತಿಗಾಗಿ ಹಾರೈಕೆಗಳನ್ನೂ ಮತ್ತು ಪ್ರಾರ್ಥನಾಪೂರ್ವಕ ಶುಭಾಶಯಗಳನ್ನೂ ಸಲ್ಲಿಸಿದರು.

ಜಗದ್ಗುರು ಲಿಯೋರವರ ಮೋನಾಕೋ ಭೇಟಿ ಸುಮಾರು ಒಂಬತ್ತು ಗಂಟೆಗಳಿಗಿಂತ ಕಡಿಮೆ ಅವಧಿಗೆ ನಿಗದಿಯಾಗಿದ್ದು, ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿದೆ: ಪ್ರಿನ್ಸ್ ಅರಮನೆದಲ್ಲಿ ಮೋನಾಕೋದ ಪ್ರಿನ್ಸ್ ದ್ವಿತೀಯ ಅಲ್ಬರ್ಟ್ ರನ್ನು ಭೇಟಿ ಮಾಡುವುದು ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಕ್ಯಾಥೀಡ್ರಲ್‌ನಲ್ಲಿ ಕಥೋಲಿಕ ಸಮುದಾಯದೊಂದಿಗೆ ಭೇಟಿಯಾಗುವುದು ಸೈಂಟ್ ಡೆವೋಟಾ ದೇವಾಲಯದ ಮುಂದೆ ಇರುವ ಮೈದಾನದಲ್ಲಿ ಯುವಜನರು ಮತ್ತು ಕ್ಯಾಟೆಕ್ಯೂಮೆನ್‌ಗಳೊಂದಿಗೆ ಸಂವಾದ ನಡೆಸುವುದು ಹಾಗೂ ದ್ವಿತೀಯ ಲೂಯಿಸ್  ಸ್ಟೇಡಿಯಂನಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸುವುದು ಇದಕ್ಕೂ ಮೊದಲು ಭಕ್ತರ ಮಧ್ಯೆ ಸ್ವಲ್ಪ ಸಮಯ ಸಂಚಾರ ಮಾಡಲಾಗುತ್ತದೆ.

ಸುಮಾರು ಸಂಜೆ 5.45ಕ್ಕೆ, ಅವರು ಹೆಲಿಕಾಪ್ಟರ್ ಮೂಲಕ ವ್ಯಾಟಿಕನ್‌ಗೆ ಮರಳುವ ಪ್ರಯಾಣವನ್ನು ಆರಂಭಿಸಲಿದ್ದಾರೆ.

ಈ ಭೇಟಿಗೆ ಮುನ್ನ ಮಾತನಾಡಿದ ಕಾರ್ಡಿನಲ್ ಪಿಯೆಟ್ರೋ ಪಾರೋಲಿನ್ ರವರು, ಈ ಯಾತ್ರೆಯು “ಸ್ಥಳೀಯ ಧರ್ಮ ಸಭೆಯ ಕಾರ್ಯಕ್ಕೆ ಹೊಸ ಚೈತನ್ಯವನ್ನು ನೀಡಲಿದೆ” ಎಂಬ ಆಶಯವನ್ನು ವ್ಯಕ್ತಪಡಿಸಿದರು. ಸೃಷ್ಟಿಯ ಸಂರಕ್ಷಣೆ, ಮಾನವ ಜೀವನದ ರಕ್ಷಣೆ ಮತ್ತು ಅಂತರರಾಷ್ಟ್ರೀಯ ಐಕ್ಯತೆಯ ಉತ್ತೇಜನದಂತಹ ತುರ್ತು ಆದ್ಯತೆಗಳತ್ತ, ವಿಶೇಷವಾಗಿ ಅತೀ ದುರ್ಬಲರ ಕಡೆ ಗಮನಹರಿಸುವ ಮೂಲಕ, ಸಂಯುಕ್ತ ಬದ್ಧತೆಯನ್ನು ಬಲಪಡಿಸುವುದಾಗಿ ಅವರು ಹೇಳಿದರು.

28 ಮಾರ್ಚ್ 2026, 20:43