ಹುಡುಕಿ

ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ ಜಗದ್ಗುರು ಲಿಯೋರವರು ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿ ಜಗದ್ಗುರು ಲಿಯೋರವರು 

ಜಗದ್ಗುರುಗಳು: ಅಧಿಕಾರಿಗಳು ಯುದ್ಧ ವಿರಾಮವನ್ನು ಸಾಧಿಸಿ ಸಂವಾದದ ಮೂಲಕ ಶಾಂತಿಯನ್ನು ಸ್ಥಾಪಿಸಬೇಕು

ಜಗದ್ಗುರು XIVನೇ ಲಿಯೋರವರು ಕ್ಯಾಸ್ಟೆಲ್ ಗ್ಯಾಂಡೋಲ್ಫೋದಲ್ಲಿ ಪತ್ರಕರ್ತರಿಗೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ “ಆಯುಧಗಳ ಮೂಲಕವಲ್ಲ, ಶಾಂತಿಗಾಗಿ ಕೆಲಸ ಮಾಡಬೇಕು” ಎಂಬ ತಮ್ಮ ಮನವಿಯನ್ನು ಪುನರುಚ್ಚರಿಸಿ, ದ್ವೇಷ, ಹಿಂಸಾಚಾರ ಮತ್ತು ಮರಣದ ಏರಿಕೆಯನ್ನು ಖಂಡಿಸಿದರು.

ವ್ಯಾಟಿಕನ್ ವರದಿ

ಯುದ್ಧ ವಿರಾಮಕ್ಕಾಗಿ ನಾನು ಮತ್ತೆ ಮನವಿಯನ್ನು ಪುನರುಚ್ಚರಿಸಲು ಬಯಸುತ್ತೇನೆ ಶಾಂತಿಗಾಗಿ ಕೆಲಸ ಮಾಡಬೇಕು, ಆದರೆ ಆಯುಧಗಳ ಮೂಲಕವಲ್ಲ—ಸಂವಾದದ ಮೂಲಕ, ಎಲ್ಲರಿಗೂ ಸೂಕ್ತವಾದ ಪರಿಹಾರವನ್ನು ನಿಜವಾಗಿಯೂ ಹುಡುಕಬೇಕು.

ಜಗದ್ಗುರು ಲಿಯೋರವರು ಮಂಗಳವಾರ ಸಂಜೆ ಕ್ಯಾಸ್ಟೆಲ್ ಗ್ಯಾಂಡೋಲ್ಫೋದಲ್ಲಿರುವ ವಿಲ್ಲಾ ಬಾರ್ಬೆರಿನಿ ನಿವಾಸದ ಹೊರಗೆ ತಮ್ಮನ್ನು ಕಾಯುತ್ತಿದ್ದ ಪತ್ರಕರ್ತರ ಗುಂಪಿಗೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ಈ ಶಾಂತಿಯ ಮನವಿಯನ್ನು ಮತ್ತೆ ವ್ಯಕ್ತಪಡಿಸಿದರು.

ಅಂತರಾಷ್ಟ್ರೀಯ ಪರಿಸ್ಥಿತಿಯನ್ನು ನೆನಪಿಸಿಕೊಂಡು, ದ್ವೇಷ ಹೆಚ್ಚುತ್ತಿದೆ, ಹಿಂಸಾಚಾರ ಇನ್ನಷ್ಟು ತೀವ್ರಗೊಳ್ಳುತ್ತಿದೆ, ಒಂದು ಮಿಲಿಯನ್‌ಗಿಂತ ಹೆಚ್ಚು ಜನರು ಪ್ರತ್ಯೇಕಗೊಂಡಿದ್ದಾರೆ, ಮತ್ತು ಅನೇಕರು ಸಾವಿಗೀಡಾಗಿದ್ದಾರೆ ಎಂದು ಜಗದ್ಗುರುಗಳು ಹೇಳಿದರು.

ನಾವು ಶಾಂತಿಗಾಗಿ ಪ್ರಾರ್ಥಿಸಬೇಕು, ಆದರೆ ಎಲ್ಲಾ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಲು ನಿಜವಾಗಿ ಸಂವಾದದ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಿಹೇಳಿದರು.

ಇದರೊಂದಿಗೆ, ಭಾನುವಾರದ ತ್ರಿಕಾಲ ಪ್ರಾರ್ಥನೆಯ ಭಾಷಣದಲ್ಲಿ ಜಗದ್ಗುರು XIVನೇ ಲಿಯೋರವರು ಮಧ್ಯಪೂರ್ವ ಮತ್ತು ಇತರ ಯುದ್ಧ ಮತ್ತು ಹಿಂಸಾಚಾರದಿಂದ ತತ್ತರಿಸಿರುವ ಪ್ರದೇಶಗಳ ಪರಿಸ್ಥಿತಿಯ ಬಗ್ಗೆ ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದರು.

ಈ ಸಂಘರ್ಷಗಳ ಬಲಿಯಾದ ನಿರಪರಾಧಿಗಳ ನೋವಿನ ಮುಂದೆ ನಾವು ಮೌನವಾಗಿರಲು ಸಾಧ್ಯವಿಲ್ಲ. ಅವರಿಗೆ ಉಂಟಾಗುವ ನೋವು ಮಾನವಕುಲದ ಎಲ್ಲರಿಗೂ ನೋವಾಗಿದೆ. ಈ ಯುದ್ಧಗಳಿಂದ ಉಂಟಾಗುತ್ತಿರುವ ಮರಣ ಮತ್ತು ವೇದನೆ ಸಂಪೂರ್ಣ ಮಾನವ ಕುಟುಂಬಕ್ಕೆ ಒಂದು ದೊಡ್ಡ ಕಳಂಕವಾಗಿದ್ದು, ದೇವರ ಕಡೆಗೆ ಏರುವ ಕೂಗು ಆಗಿದೆ ಎಂದು ಅವರು ಹೇಳಿದರು.

ಮುಂದುವರೆದು, ವೈರತ್ವಗಳು ನಿಲ್ಲಲು ಮತ್ತು ನಿಜವಾದ ಸಂವಾದ ಮತ್ತು ಪ್ರತಿಯೊಬ್ಬರ ಮಾನವ ಗೌರವದ ಆಧಾರದ ಮೇಲೆ ಶಾಂತಿಯ ಮಾರ್ಗಗಳು ತೆರೆಯಲು ನಾವು ನಿರಂತರವಾಗಿ ಪ್ರಾರ್ಥನೆಯಲ್ಲಿ ಮುಂದುವರಿಯಬೇಕು ಎಂದು ಜಗದ್ಗುರುಗಳು ಬಲವಾಗಿ ಮನವಿ ಮಾಡಿದರು.

24 ಮಾರ್ಚ್ 2026, 09:16