“ಜಗದ್ಗುರುಗಳು ಇಟಾಲಿಯನ್ ಟಿವಿಗೆ: ಸ್ವತಂತ್ರ ಮತ್ತು ಗೌರವಪೂರ್ಣ ಮಾಹಿತಿಯು ಶಾಂತಿಯ ಸಾಧನವಾಗಿದೆ”
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ನಿಜವಾದ ಮಾಹಿತಿ ಹೇಗಿರಬೇಕು ಎಂಬ ಮೂಲ ತತ್ವಗಳನ್ನು ಒಳಗೊಂಡ ಒಂದು ಸಂಕ್ಷಿಪ್ತ ಸಂದೇಶವನ್ನು, ಇಟಾಲಿಯನ್ ದೂರದರ್ಶನ ಜಾಲವಾದ Tgcom24 (ಮೀಡಿಯಾಸೆಟ್ ಕಂಪನಿಯ ಮೂಲಕ ನಿರ್ವಹಿಸಲ್ಪಡುವ) ನಿರ್ದೇಶಕರು ಮತ್ತು ಸಂಪಾದಕೀಯ ತಂಡಕ್ಕೆ, ಅದರ ಸ್ಥಾಪನೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಳುಹಿಸಿದರು.
ಸಂವಾದ ಮತ್ತು ಗೌರವ
ಈ ಸಂದೇಶದಲ್ಲಿ ಜಗದ್ಗುರುಗಳು ಇಂದಿನ ಕಾಲವನ್ನು ಗಣನೀಯ ಬದಲಾವಣೆಗಳು ಹಾಗೂ ಇಂಟರ್ನೆಟ್‌ನಲ್ಲಿ ಪದಗಳು ಹೆಚ್ಚಾಗಿ ಕೂಗಲ್ಪಡುವ ಕಾಲ ಎಂದು ವಿವರಿಸಿದರು. ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಮುಖ್ಯ ಗುರಿ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು ಅದು ಸಂವಾದದ ಸೇತುವೆಗಳನ್ನು ನಿರ್ಮಿಸುವುದು ಹಾಗೂ ಪರಸ್ಪರ ಅರಿವನ್ನು ಹೆಚ್ಚಿಸುವುದು.
ಜಗದ್ಗುರು XIVನೇ ಲಿಯೋರವರು ವಿವರಿಸಿದಂತೆ, ಇದು ಕೇವಲ ಮೇಲ್ಮೈ ಸುದ್ದಿಗಳಲ್ಲಿ ನಿಲ್ಲದೆ, ನೋವಿನ ಅಂಚಿನಲ್ಲಿರುವವರ ಕಡೆ ಗೌರವ, ಏಕಾತ್ಮತೆ ಮತ್ತು ಕರುಣೆಯಿಂದ ನೋಡುವ ಕಥನವನ್ನು ಒಳಗೊಂಡಿರಬೇಕು.
ಸತ್ಯ ಮತ್ತು ಹೊಣೆಗಾರಿಕೆ
ಜಗದ್ಗರುಗಳ ಸಂದೇಶದ ಕೇಂದ್ರದಲ್ಲಿ ಸತ್ಯ ಮತ್ತು ಆಳವಾದ ನೈತಿಕ ಹೊಣೆಗಾರಿಕೆಯ ಭಾವನೆ ಇದೆ. ಇದು ನಕಲಿ ಸುದ್ದಿಗಳ ಹರಡುವಿಕೆಗೆ ಪ್ರತಿರೋಧ ನೀಡಲು ಹಾಗೂ ಭೇಟಿಯ ಸಂಸ್ಕೃತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಸಮಾಜದ ವಿಭಿನ್ನ ಭಾಗಗಳನ್ನು ಒಂದಾಗಿಸುತ್ತದೆ.
ಶಸ್ತ್ರರಹಿತ ಮತ್ತು ಸ್ಥಿರ ಶಾಂತಿಗಾಗಿ
ಅವರ ಸಂದೇಶದಲ್ಲಿ ಮಾನವ ಗೌರವವನ್ನು ಕಾಪಾಡುವ ಸ್ವತಂತ್ರ ಮತ್ತು ಗೌರವಪೂರ್ಣ ಮಾಹಿತಿಯ ಅಗತ್ಯತೆಯ ಮೇಲೂ ಗಾಢ ಆಹ್ವಾನವಿದೆ. ಇಂತಹ ಮಾಹಿತಿ ಶಕ್ತಿಶಾಲಿ ಸಾಧನವಾಗಿದ್ದು, ಶಸ್ತ್ರರಹಿತ ಮತ್ತು ಸ್ಥಿರ ಶಾಂತಿಯತ್ತ ಸಾಗುವ ಪ್ರಯಾಣಕ್ಕೆ ದಾರಿ ತೋರಿಸುತ್ತದೆ.
