ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಜಗದ್ಗುರು XIVನೇ ಲಿಯೋರವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಉತ್ತೇಜಿಸಿದಕ್ಕಾಗಿ ಸ್ವಾತಂತ್ರ್ಯ ಪದಕ ಪ್ರದಾನವಾಗಲಿದೆ.

ಅಮೆರಿಕದ ರಾಷ್ಟ್ರೀಯ ಸಂವಿಧಾನ ಕೇಂದ್ರವು 2026 ಜುಲೈ 3 ರಂದು ಫಿಲಡೆಲ್ಫಿಯಾದ ಇಂಡಿಪೆಂಡೆನ್ಸ್ ಮಾಲ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 38ನೇ ವಾರ್ಷಿಕ ಸ್ವಾತಂತ್ರ್ಯ ಪದಕ(ಲಿಬರ್ಟಿ ಮೆಡಲ್) ವನ್ನು ಜಗದ್ಗುರು XIVನೇ ಲಿಯೋರವರಿಗೆ ಪ್ರದಾನ ಮಾಡಲಾಗುವುದಾಗಿ ಘೋಷಿಸಿದೆ.

ವ್ಯಾಟಿಕನ್ ವರದಿ

2026ರ ಜುಲೈ 3ರಂದು, ಅಮೆರಿಕದ ಸ್ಥಾಪನೆಯ 250ನೇ ವಾರ್ಷಿಕೋತ್ಸವದ ಮುನ್ನಾ ದಿನದಲ್ಲಿ, ಜಗದ್ಗುರು XIVನೇ ಲಿಯೋರವರು ರಾಷ್ಟ್ರೀಯ ಸಂವಿಧಾನ ಕೇಂದ್ರದಿಂದ 38ನೇ ವಾರ್ಷಿಕ ಸ್ವಾತಂತ್ರ್ಯ ಪದಕವನ್ನು ಸ್ವೀಕರಿಸಲಿದ್ದಾರೆ.

ಈ ಪ್ರಶಸ್ತಿ ವಿಶ್ವದಾದ್ಯಂತ ಧಾರ್ಮಿಕ ಸ್ವಾತಂತ್ರ್ಯ, ಮನಸ್ಸಿನ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಉತ್ತೇಜಿಸಲು ಜಗದ್ಗುರುಗಳು ಜೀವನಪೂರ್ಣವಾಗಿ ಮಾಡಿದ ಸೇವೆಯನ್ನು ಗುರುತಿಸುತ್ತದೆ. ಈ ಆದರ್ಶಗಳನ್ನು ಅಮೆರಿಕದ ಸ್ಥಾಪಕರು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯಲ್ಲಿ ಸ್ಥಾಪಿಸಿದ್ದಾರೆ, ಎಂದು ರಾಷ್ಟ್ರೀಯ ಸಂವಿಧಾನ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಮಾರಂಭವು ಫಿಲಡೆಲ್ಫಿಯಾದ ಇಂಡಿಪೆಂಡೆನ್ಸ್ ಮಾಲ್‌ನಲ್ಲಿರುವ ಕೇಂದ್ರದ ಹೊರಾಂಗಣದಲ್ಲಿ ನಡೆಯಲಿದೆ. ಜಗದ್ಗರುಗಳು ವ್ಯಾಟಿಕನ್‌ನಿಂದ ನೇರ ಪ್ರಸಾರ (ಲೈವ್‌ಸ್ಟ್ರೀಮ್) ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಸ್ವೀಕಾರ ಭಾಷಣವನ್ನು ನೀಡುವ ಉದ್ದೇಶ ಹೊಂದಿದ್ದಾರೆ.

ಜಗದ್ಗರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕ ಮಾತ್ತಿಯೋ ಬ್ರೂನಿರವರು, “ಈ ಗೌರವಾನ್ವಿತ ಪ್ರಶಸ್ತಿಗಾಗಿ ರಾಷ್ಟ್ರೀಯ ಸಂವಿಧಾನ ಕೇಂದ್ರಕ್ಕೆ ಜಗದ್ಗುರುಗಳು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕ ಜನರು ತಮ್ಮ 250 ವರ್ಷಗಳ ಇತಿಹಾಸವನ್ನು ಸ್ಮರಿಸುವ ಈ ಅರ್ಥಪೂರ್ಣ ಸಂದರ್ಭದಲ್ಲಿಯೂ, ಅವರು ಸ್ವಾತಂತ್ರ್ಯ ಘೋಷಣೆ , ಅಮೆರಿಕ ಸಂವಿಧಾನ, ಮತ್ತು ಸ್ವಾತಂತ್ರ್ಯವನ್ನು ಭವಿಷ್ಯದ ಪೀಳಿಗೆಗಳಿಗೆ ತಮ್ಮ ಪರಂಪರೆಯ ಗುರುತುಗಳಾಗಿ ಕಾಪಾಡಿಕೊಂಡಿದ್ದಾರೆ, ಎಂದು ಹೇಳಿದರು.

ಈ ಕಾರ್ಯಕ್ರಮವು ನಾಗರಿಕ ಹಾಗೂ ಧಾರ್ಮಿಕ ನಾಯಕರು ಮತ್ತು ಸಾರ್ವಜನಿಕರನ್ನು ಒಟ್ಟಾಗಿ ಸೇರಿಸಿ, 250 ವರ್ಷಗಳ ಹಿಂದೆ ಪ್ರತಿಪಾದಿಸಲ್ಪಟ್ಟ ಅಮೆರಿಕದ ಮೂಲ ಆದರ್ಶಗಳು ಇಂದಿನ ಜಾಗತಿಕ ಸಂದರ್ಭದಲ್ಲಿ ಹೇಗೆ ಇನ್ನೂ ಪ್ರಭಾವ ಬೀರುತ್ತಿವೆ ಎಂಬುದನ್ನು ಪರಿಗಣಿಸಲು ಅವಕಾಶ ನೀಡಲಿದೆ.

ಜಗದ್ಗುರು ಲಿಯೋರವರ ಸಂವಾದದ ಬದ್ಧತೆ

ಪ್ರಕಟಣೆಯಲ್ಲಿ, ರಾಷ್ಟ್ರೀಯ ಸಂವಿಧಾನ ಕೇಂದ್ರವು 2025ರ ಮೇ ತಿಂಗಳಲ್ಲಿ ಆಯ್ಕೆಯಾದ ನಂತರದಿಂದ ಜಗದ್ಗುರುಗಳು ಧರ್ಮಾಂತರ ಮತ್ತು ಐಕ್ಯ ಸಂವಾದವನ್ನು ತಮ್ಮ ಪಾಲಯದ ಪ್ರಮುಖ ಆದ್ಯತೆಯಾಗಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ. ಅವರು ಯಹೂದಿ, ಮುಸ್ಲಿಂ, ಕ್ರೈಸ್ತ ಹಾಗೂ ಇತರ ಧಾರ್ಮಿಕ ಸಮುದಾಯಗಳ ನಾಯಕರೊಂದಿಗೆ ಸಂವಾದ ನಡೆಸಿ ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುತ್ತಿದ್ದಾರೆ.

ಅವರ ಸಂಪರ್ಕವು ಧಾರ್ಮಿಕ ಸ್ವಾತಂತ್ರ್ಯವನ್ನು ಕೇವಲ ತತ್ವದ ಹಕ್ಕು ಎಂದು ಮಾತ್ರವಲ್ಲ, ಮಾನವ ಗೌರವದ ಜೀವಂತ ಅಭಿವ್ಯಕ್ತಿಯಾಗಿ ಪರಿಗಣಿಸುವ ವಿಶಾಲ ನೈತಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಸಂಘರ್ಷದಿಂದ ಬಾಧಿತರಾದ ಜನರಿಗಾಗಿ, ಎಂದು ಪ್ರಕಟಣೆ ಮುಂದುವರಿಸಿದೆ.

ರಾಷ್ಟ್ರೀಯ ಸಂವಿಧಾನ ಕೇಂದ್ರದ ತಾತ್ಕಾಲಿಕ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನ್ಸ್ ಸ್ಟ್ಯಾಂಗೋ ರವರು, ಧಾರ್ಮಿಕ ಸ್ವಾತಂತ್ರ್ಯ, ಮನಸ್ಸಿನ ಸ್ವಾತಂತ್ರ್ಯ ಮತ್ತು ಮಾನವ ಗೌರವಕ್ಕಾಗಿ ನಿರಂತರವಾಗಿ ವಕಾಲತ್ತು ಮಾಡಿದ ತಮ್ಮ ಸೇವೆಗಾಗಿ ಜಗದ್ಗುರುಗಳಿಗೆ ಸ್ವಾತಂತ್ರ್ಯ ಪದಕ ಪ್ರದಾನ ಮಾಡುವುದಕ್ಕೆ ನಾವು ಗೌರವಾನ್ವಿತರಾಗಿದ್ದೇವೆ, ಎಂದು ಹೇಳಿದರು.

ವ್ಯಾಟಿಕನ್‌ನ ಅಧಿಕೃತ ಹೇಳಿಕೆಗಳು ಮತ್ತು ಸಾರ್ವಜನಿಕ ಭಾಷಣಗಳಲ್ಲಿ, ಅವರು ಮುಂದುವರಿಸಿದರು, ಶಾಂತಿ ಧಾರ್ಮಿಕ ಸ್ವಾತಂತ್ರ್ಯ, ಚಿಂತನೆಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವಿಲ್ಲದೆ ಸಾಧ್ಯವಿಲ್ಲ ಎಂಬುದನ್ನು ಅವರ ಪವಿತ್ರತೆ ದೃಢಪಡಿಸಿದ್ದಾರೆ. ಈ ತತ್ವಗಳು ಅಮೆರಿಕಾ ಸಂವಿಧಾನದ ಮೊದಲ ತಿದ್ದುಪಡಿ ನೀಡುವ ಸಂವಿಧಾನಿಕ ರಕ್ಷಣೆಯೊಂದಿಗೆ ಹತ್ತಿರವಾಗಿ ಹೊಂದಿಕೊಳ್ಳುತ್ತವೆ.

 ಸ್ವಾತಂತ್ರ್ಯ ಪದಕ ಮತ್ತು ರಾಷ್ಟ್ರೀಯ ಸಂವಿಧಾನ ಕೇಂದ್ರ

1988ರಲ್ಲಿ ಸ್ಥಾಪಿತವಾಗಿದ್ದು, 2006ರಿಂದ ರಾಷ್ಟ್ರೀಯ ಸಂವಿಧಾನ ಕೇಂದ್ರದ ಆಶ್ರಯದಲ್ಲಿ ನೀಡಲಾಗುತ್ತಿರುವ ಸ್ವಾತಂತ್ರ್ಯ ಪದಕ, ವಿಶ್ವದಾದ್ಯಂತ ಜನರಿಗೆ ಸ್ವಾತಂತ್ರ್ಯದ ಆಶೀರ್ವಾದವನ್ನು ಒದಗಿಸಲು ಶ್ರಮಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುತ್ತದೆ.

ಈ ವರ್ಷದ ಪ್ರಶಸ್ತಿ ಸಮಾರಂಭವು ರಾಷ್ಟ್ರದ 250ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿದ್ದು, ಫಿಲಡೆಲ್ಫಿಯಾ ನಗರ ಮತ್ತು “ವಾವಾ ವೆಲ್ಕಮ್ ಅಮೆರಿಕಾ” ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದೆ. ಇದು ಸ್ವಾತಂತ್ರ್ಯ ಘೋಷಣೆಯ ಸಹಿ ಮಾಡಲಾದ ಅರ್ಧಸಹಸ್ರೋತ್ಸವದ ಆಚರಣೆಗಳ ಭಾಗವಾಗಿದೆ.

ಜಗದ್ಗರುಗಳು ವಿದ್ಯಾಸಂಸ್ಥೆಯಾದ ವಿಲ್ಲಾನೋವಾ ವಿಶ್ವವಿದ್ಯಾಲಯವು ಕೂಡ ಈ ವರ್ಷದ ಲಿಬರ್ಟಿ ಮೆಡಲ್ ಕಾರ್ಯಕ್ರಮದ ರೂಪಿಕರಣದಲ್ಲಿ ಪಾತ್ರವಹಿಸಿದೆ.

ಫಿಲಡೆಲ್ಫಿಯಾದ ರಾಷ್ಟ್ರೀಯ ಸಂವಿಧಾನ ಕೇಂದ್ರವು, ತನ್ನ ವೆಬ್‌ಸೈಟ್ ಪ್ರಕಾರ, ಅಮೆರಿಕ ಹಾಗೂ ವಿಶ್ವದ ವಿವಿಧ ವಯಸ್ಸಿನ ಮತ್ತು ಭಿನ್ನ ಅಭಿಪ್ರಾಯಗಳ ಜನರನ್ನು ಒಗ್ಗೂಡಿಸಿ , ಮಾನವ ಸ್ವಾತಂತ್ರ್ಯದ ಮಹತ್ತರ ದೃಷ್ಟಿಕೋನವಾದ ಅಮೆರಿಕ ಸಂವಿಧಾನದ ಬಗ್ಗೆ ಕಲಿಯಲು, ಚರ್ಚಿಸಲು ಮತ್ತು ಆಚರಿಸಲು ಅವಕಾಶ ಒದಗಿಸುತ್ತದೆ.

16 ಮಾರ್ಚ್ 2026, 22:09